#ಸಿಹಿಜೀವಿಯ_ಚುಟುಕು
ಈಗಿನ ಕರೋನ
ಕಾಲದಲ್ಲಿ ಮಾಸ್ಕ್ ,ಗ್ಲಾಸ್,
ಸ್ಯಾನಿಟೈಸರ್ ಗಳೆ
ನಮ್ಮ ಆಯುಧಗಳು|
ಇವನ್ನು ಮರೆತರೆ
ನಮ್ಮ ಪೋಟೋಗೆ
ಹಾರ ಹಾಕುವರು
ನಮ್ಮ ಸಂಬಂದಿಗಳು||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಈಗಿನ ಕರೋನ
ಕಾಲದಲ್ಲಿ ಮಾಸ್ಕ್ ,ಗ್ಲಾಸ್,
ಸ್ಯಾನಿಟೈಸರ್ ಗಳೆ
ನಮ್ಮ ಆಯುಧಗಳು|
ಇವನ್ನು ಮರೆತರೆ
ನಮ್ಮ ಪೋಟೋಗೆ
ಹಾರ ಹಾಕುವರು
ನಮ್ಮ ಸಂಬಂದಿಗಳು||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಖಂಡಿತವಾಗಿಯೂ
ಅವನಿಗೆ ಕರೋನಾದ
ಭಯವಿಲ್ಲ ಮನೆಯ
ಒಳಗೂ ಮತ್ತು
ಹೊರಗು|
ಏಕೆಂದರೆ ಯಾವಾಗಲೂ
ಹಿಡಿದುಕೊಂಡಿರುವ
ಅವನ ಅರ್ಧಾಂಗಿಯ
ಸೆರಗು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಚಂಡ ಮುಂಡರ ಕೊಂದ ಅಮ್ಮನ
ಉತ್ಸವಕೆ ಬನ್ನಿ ನೀವೆಲ್ಲ
ಚಾಮುಂಡೇಶ್ವರಿಯ ಭಜಿಸುತ
ದಸರೆಯ ಮಾಡೊಣ ನಾವೆಲ್ಲ.
ಮಹಿಷನ ಕೊಂದು ಮಹಿಯನು
ಕಾಪಾಡಿದ ಅಮ್ಮನ ನೆನೆಯೋಣ
ಮೈಸೂರಿನ ವಿಶ್ವ ಪ್ರಸಿದ್ಧ ದಸರಾ
ಮಹೋತ್ಸವದಲ್ಲಿ ಪಾಲ್ಗೊಳ್ಳೋಣ.
ಅರಮನೆ ದೀಪಾಲಂಕಾರ
ಜಗಮಗಿಸತಿದೆ ನೋಡಿಲ್ಲಿ
ಕಣ್ಮನ ಸೆಳೆದಿದೆ ಸಂತಸ
ಉಕ್ಕಿದೆ ನಮ್ಮಯ ಮನದಲ್ಲಿ.
ವಿಜಯ ದಶಮಿಯ ದಿನ
ಅಮ್ಮ ಬಂದರು ಆನೆಯೇರಿ
ಸ್ತಬ್ದ ಚಿತ್ರಗಳೊಂದಿಗೆ ಸಾಗಿದೆ
ಅದುವೆ ಜಂಬೂ ಸವಾರಿ.
*ಸಿಹಿಜೀವಿ*
ಸಿ .ಜಿ .ವೆಂಕಟೇಶ್ವರ
ತುಮಕೂರು
ಸ್ಕಂದ ಮಾತೆಯೆ ನಮಿಪೆವು
ನಾವು ತಲೆಬಾಗಿ
ಅಭಯ ಹಸ್ತವ ನೀಡಮ್ಮ
ನಮಗೆ ತಾಯಾಗಿ
ಸಿಂಹದ ಮೇಲೆ ಕುಳಿತು
ಅಭಯವ ನೀಡುತಿರುವೆ
ಸ್ಕಂದನ ತೊಡೆಯ ಮೇಲೆ
ಕೂರಿಸಿಕೊಂಡು ಆಡಿಸುತಿರುವೆ.
ಕಮಲ ಗುಲಾಬಿ ಪುಷ್ಪಗಳ
ಪ್ರಿಯೆ ನೀನು ನನ್ನಮ್ಮ
ದುರಿತಗಳ ತರಿಯುತ
ಸರಿದಾರಿಯ ನಮಗೆ ತೋರಮ್ಮ.
ಹಣೆಯಲಿರುವ ಮುಕ್ಕಣ್ಣನ
ಕಣ್ಣಲಿ ನೀ ನೋಡು
ಪದ್ಮಾಸನ ಪ್ರಿಯೆ ಚತುರ್ಭುಜೆ
ನಮ್ಮನು ಹರಸಿ ಕಾಪಾಡು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸ್ವರ್ಗಕ್ಕೆ ಪಯಣ*
ಗಾಯನ ಲೋಕದ ಧೀಮಂತ
ನಟನಾ ಲೋಕದ ಶ್ರೀಮಂತ
ನೀನಗೆ ನೀನೆ ಸಾಟಿ ಬಾಲಣ್ಣ
ಮತ್ತೊಮ್ಮೆ ಹುಟ್ಟಿ ಬಾರಣ್ಣ.
ಕಂಠದಲ್ಲೆ ನವರಸ ತೋರಿದೆ
ಸರಿಗಮಗಳ ಕುಣಿದಾಡಿಸಿದೆ
ದಾಖಲೆಗಳನು ದೂಳೆಬ್ಬಿಸಿದೆ
ಭಾಷಾ ಸಾಮರಸ್ಯ ಬೆಳೆಸಿದೆ.
ನಾಯಕರಿಗೆ ನೀ ಶಾರೀರವಾದೆ
ಸತತವಾಗಿ ಹರಿಸಿದೆ ಗಾನಸುಧೆ
ಸಂಗೀತ ಲೋಕದ ದಿಗ್ಗಜ ನೀವು
ಎಂದಿಗೂ ಮರೆಯೊಲ್ಲ ನಾವು.
ತರ ತರ ಹಾಡನು ಹಾಡುತಲಿ
ಮೈಲಿಗಲ್ಲುಗಳ ದಾಟುತಲಿ
ಅಭಿಮಾನಿಗಳನು ಅಗಲಿದಿರಿ
ಸ್ವರ್ಗಕೆ ಪಯಣವ ಮಾಡಿದಿರಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
೧೦೧
ಅನ್ನದಾತನು
ದೇಶದ ಬೆನ್ನೆಲುಬು
ನೇಗಿಲ ಯೋಗಿ
೧೦೨
ಸ್ನೇಹಕ್ಕೆ ಅರ್ಥ
ನನ್ನ ಗೆಳೆಯ ಮುತ್ತು
ಪುರಾವೆಯೇಕೆ?
೧೦೩
ಅನ್ನದ ಬೆಲೆ
ಹಸಿದವಗೆ ಗೊತ್ತು
ಹಸಿದು ನೋಡು
೧೦೪
ಶ್ರೀದೇವಿ ಮಾತೆ
ಮಾತೆಯ ಮಾತುಗಳು
ಮನಕೆ ಇಂಪು
೧೦೫
ಇಳೆಗೆ ಮಳೆ
ಮಳೆಯ ಅವಾಂತರ
ರೈತ ಕಂಗಾಲು
೧೦೬
ಆರೋಗ್ಯಬೇಕೆ?
ಕೈತೊಳೆವುದ ಕಲಿ
ಸೋಂಕಿಂದ ಮುಕ್ತಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು.
ಹನಿ೧
*ನಿಲ್ಲಿಸು*
ವರುಣ ತೋರು ಕರುಣ
ಬರಲಿ ಬಿಡು ಅರುಣ
ನಿಲ್ಲಿಸು ನಿನ್ನಾರ್ಭಟವ
ಕೊಡದಿರು ಕಾಟವ
ಹನಿ೨
*ನೆಲೆ ಎಲ್ಲಿ?*
ವರುಣನ ಆಗಮನ
ಜೀವಸಂಕುಲದ ನಮನ
ವರಣಾರ್ಭಟವಾಗಲು
ಬದುಕು ಚೆಲ್ಲಾಪಿಲ್ಲಿ.
ಜೀವಿಗಳಿಗೆ ನೆಲೆ ಎಲ್ಲಿ?
ಹನಿ೩
*ನಿಶ್ಶೇಷ*
ತೂತು ಬಿದ್ದಿರಬಹುದು
ಆಕಾಶ
ರೈತರ ಮನದಿ ಕ್ಲೇಶ |
ಬೆಳೆ ಮತ್ತು ಬಾಳಾಗಬಹುದು
ನಿಶ್ಶೇಷ||
ಹನಿ೪
*ಮಳೆ*
ನಮಗೂ ಬೇಕೇ ಬೇಕು
ಮಳೆ |
ಅತಿಯಾದರೆ ?
ಹೊಡೆದುಬಿಡುವುದೇನೋ
ರೈತರ ಶವಪೆಟ್ಟಿಗೆಗೆ ಕೊನೆಯ
ಮಳೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು.
*ಜೀವನದಿ*
ಚಿಂತಿಪೆಯೇಕೆ ನಾಲ್ಕು ದಿನದ ಈ ಜೀವನದಿ
ಗಾಳಿ ಗೋಪುರ ಕಟ್ಟದಿರು ನೀನು ಗಗನದಿ
ನಿಲ್ಲದಿರು ಸಾಗುತಿರು ನೋಡಿ ಹರಿವ ನದಿ
ಅನಿವಾರ್ಯವಲ್ಲ ಯಾರೂ ನೀನೇ "ಜೀವನದಿ"
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಮನೆ ಮಗಳೆಂದರೆ
ಲಕ್ಷ್ಮಿ , ಸರಸ್ವತಿ, ಪಾರ್ವತಿ
ಈ ಮೂವರ ಪಡೆದ
ನಾನೇ ಭಾಗ್ಯಶಾಲಿ|
ಅವಳು ಕಣ್ಮರೆಯಾದರೆ
ನನ್ನ ಜೀವನವೇ ಖಾಲಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕಿಟ್ಟು ಬಂದನು ಪುಟ್ಟನ ಮನೆಗೆ
ಆಟವನಾಡಲು
ಕಾಲಿಗೆ ಎರಗಿದನವನು ಪುಟ್ಟನ
ಅಜ್ಜಿಯ ನೋಡಲು
ಪೆನ್ಸಿಲ್ ಪೇಪರ್ ಹಿಡಿದು
ಪರಿಸರ ಚಿತ್ರವ ಬಿಡಿಸಿದರು
ಬಣ್ಣದ ಬ್ರಷ್ಷನು ಹಿಡಿದು
ಚಿತ್ರಕೆ ಬಣ್ಣವ ತುಂಬಿದರು.
ದಾರವ ಹಿಡಿದು ಸೂತ್ರವ ಕಟ್ಟಿ
ಪತಂಗ ಮಾಡಿದರು
ಬಯಲಿಗೆ ಬಂದು ಪತಂಗ
ಹಾರಿಸಿ ಕುಣಿದಾಡಿದರು.
ಚಾಟಿಯ ಹಿಡಿದು ಬುಗುರಿಗೆ
ಸುತ್ತಿ ಆಟವನಾಡಿದರು
ಹಸಿವಾದಾಗ ಅಮ್ಮನು ಕರೆದು
ಊಟವ ನೀಡಿದರು.
ಸಂಜೆಯಾಗಿದ್ದು ತಿಳಿಯಲೆ ಇಲ್ಲ
ಆಡುತ ವಿವಿಧ ಆಟ
ಕಿಟ್ಟು ಹೊರಟನು ತನ್ನಯ ಮನೆಗೆ ಮಾಡುತ ಗೆಳಯಗೆ ಟಾಟಾ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಚುಟುಕು ೧
*ಮಾಸದ ಪ್ರೀತಿ*
ನವೆಂಬರ್ ತಿಂಗಳಲ್ಲಿ
ಕನ್ನಡ ಧ್ವಜ ಹಿಡಿದು
ಕೆಂಪು ಹಳದಿಯ ಬಟ್ಟೆಗಳನ್ನು
ತೊಟ್ಟು ಕೂಗಿದ್ದೇ ಕೂಗಿದ್ದು
ಕನ್ನಡ, ಕನ್ನಡ,ಕನ್ನಡ|
ಮುಂದಿನ ಹನ್ನೊಂದು ತಿಂಗಳು
ಅದೇ ಮಾಮೂಲು
ಎನ್ನಡ, ಎಕ್ಕಡ, ವಾಡ||
ಚುಟುಕು ೨
*ಅರ್ಹತೆ*
ರಾಜಕಾರಣಿಗಳಿಗೆ ನಮ್ಮ
ನಮ್ಮ ಸಂವಿಧಾನದಲ್ಲಿ
ನಿಗಧಿಪಡಿಸಿಲ್ಲ ಕನಿಷ್ಟ
ವಿದ್ಯಾರ್ಹತೆ|
ಮಂತ್ರಿಯ ಮಗನಿಗೆ ಅಮ್ಮನೆಂದರು
ಪೀಯೂಸಿ ಪೇಲಾದ್ರೇನಂತೆ, ನೀಂತ್ಕೋ
ಗ್ರಾಮ ಪಂಚಾಯಿತಿ ಚುನಾವಣೆ
ಮುಂದೈತೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
(ಇಂದು ವಿಶ್ವ ದೃಷ್ಟಿ ದಿನ)
೧
*ದಾನವ?*
ನಿನ್ನ ನೇತ್ರಗಳ
ಮಾಡಿದರೆ ದಾನವ|
ನೀನಲ್ಲವೇ ಅಲ್ಲ
ದಾನವ||
೨
*ಸ್ತೋತ್ರ*
ನೀ ಸತ್ತ ಮೇಲೆ
ದಾನವಾಗಿ ಕೊಟ್ಟರೆ
ನಿನ್ನ ನೇತ್ರ|
ಈ ಜಗವೇ ಜಪಿಸುವುದು
ನಿನ್ನ ಸ್ತೋತ್ರ||
೩
*ಒಳಗಣ್ಣು*
ಯಾರಾದರೂ ದಾನ
ಮಾಡಬಹುದು ಕಣ್ಣು|
ನೀನೇ ಪಡೆದುಕೊಳ್ಳಬೇಕು
ನಿನ್ನ ಒಳಗಣ್ಣು||
೪
*ಪಾವನ*
ದಾನ ಮಾಡಿದರೆ
ನಮ್ಮ ನಯನ|
ನಮ್ಮ ಜೀವನವಾಗುವುದು
ಪಾವನ||
೫
*ದೃಷ್ಟಿಹೀನರು*
ಇತ್ತೀಚಿಗೆ ಮಹಿಳೆಯರ
ಮಕ್ಕಳ, ಅಮಾಯಕರ
ಮೇಲಿನ ದೌರ್ಜನ್ಯಕ್ಕೆ
ಕಾರಣರಾಗಿದ್ದಾರೆ
ಹೀನರು|
ಅವರೇ ನಿಜವಾದ
ದೃಷ್ಟಿ ಹೀನರು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಕಷ್ಟ_ಸಂಕಷ್ಟ*
ಸ್ನೇಹ, ಮಾನ, ಧನ
ಈ ಮೂರನ್ನೂ ಗಳಿಸುವುದು ,ಉಳಿಸಿಕೊಳ್ಳುವುದು ಕಷ್ಟ|
ಇವಿಲ್ಲದಿರೆ ಮಾನವಗೆ
ತಪ್ಪಿದ್ದಲ್ಲ ಸಂಕಷ್ಟ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸ್ನೇಹ*
ಸಾವಿರಾರು ಸ್ನೇಹಿತರನ್ನು
ಸಂಪಾದನೆ ಮಾಡುವುದು
ದೊಡ್ಡದಲ್ಲ|
ಒಂದು ಸ್ನೇಹವನ್ನು ಸಾವಿರಾರು
ವರ್ಷಗಳ ಕಾಲ ಕಾಪಾಡುವುದು
ಸುಲಭವಲ್ಲ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಜ್ಜನರ ಸಂಗ*
ಕುಡಿಯಲು ಸಿಹಿನೀರೆ
ಬೇಕು ಎಷ್ಟಿದ್ದರೇನು
ಸುತ್ತ ಮುತ್ತ ಸಾಗರ|
ನಮ್ಮನ್ನು ಅರಿಯಲು
ವ್ಯಕ್ತಿತ್ವ ಬೆಳಗಲು
ಸಜ್ಜನರ ಸಂಗವೇ ಬೇಕು
ಎಷ್ಟಿದ್ದರೇನು ಜನಸಾಗರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು