11 October 2020

ಮಕ್ಕಳ ಆಟ (ಶಿಶು ಗೀತೆ)


 *ಮಕ್ಕಳ ಆಟ*



ಕಿಟ್ಟು ಬಂದನು ಪುಟ್ಟನ ಮನೆಗೆ

ಆಟವನಾಡಲು

ಕಾಲಿಗೆ ಎರಗಿದನವನು ಪುಟ್ಟನ

ಅಜ್ಜಿಯ ನೋಡಲು



ಪೆನ್ಸಿಲ್ ಪೇಪರ್ ಹಿಡಿದು

ಪರಿಸರ ಚಿತ್ರವ ಬಿಡಿಸಿದರು

ಬಣ್ಣದ ಬ್ರಷ್ಷನು ಹಿಡಿದು

ಚಿತ್ರಕೆ ಬಣ್ಣವ ತುಂಬಿದರು.


ದಾರವ ಹಿಡಿದು ಸೂತ್ರವ ಕಟ್ಟಿ

ಪತಂಗ ಮಾಡಿದರು

ಬಯಲಿಗೆ ಬಂದು ಪತಂಗ

ಹಾರಿಸಿ ಕುಣಿದಾಡಿದರು.


ಚಾಟಿಯ ಹಿಡಿದು ಬುಗುರಿಗೆ 

ಸುತ್ತಿ ಆಟವನಾಡಿದರು

ಹಸಿವಾದಾಗ ಅಮ್ಮನು ಕರೆದು

ಊಟವ ನೀಡಿದರು.


ಸಂಜೆಯಾಗಿದ್ದು ತಿಳಿಯಲೆ ಇಲ್ಲ

ಆಡುತ ವಿವಿಧ ಆಟ

ಕಿಟ್ಟು ಹೊರಟನು ತನ್ನಯ ಮನೆಗೆ  ಮಾಡುತ ಗೆಳಯಗೆ ಟಾಟಾ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


No comments: