30 June 2018

ಗುಟ್ಟೇನು (ಭಾವಗೀತೆ)

*ಗುಟ್ಟೇನು*

ಶ್ವೇತ ವಸ್ತ್ರ ದಾರಿ ನೀರೆ
ಹೇಳಿ ಬಿಡೆ ನೀನ್ಯಾರೆ

ಹಸಿರ ವನದಲಿ ಕುಳಿತಿರುವೆ
ಕರದಲಿ ಪುಸ್ತಕ ಹಿಡಿದಿರುವೆ
ಮಸ್ತಕಕೆ ಮೇವು ನೀಡಿರುವೆ
ಸಮಸ್ತದೊಳು ಒಂದಾಗುವ ಪರಿಯ ಹೇಳೆ

ಬಣ್ಣ ಬಣ್ಣದ ಮರದಡಿಯಲಿ
ಬಣ್ಣದ ಕನಸಹರಡಿ ಕುಳಿತ ಬಾಲೆ
ಲೋಕದ  ಜಂಜಡ ತೊರೆದು
ಸುಖವಾಗಿರುವ ರೀತಿ ನಮಗೂ ಹೇಳೆ

ನಿನ್ನೆಗಳ ಗೊಡವೆ ನಿನಗಿಲ್ಲ
ನಾಳೆಗಳ ಚಿಂತೆ ಸುಳಿದಿಲ್ಲ
ವರ್ತಮಾನದಿ ಬದುಕುತಿರುವ
ಮಂದಹಾಸದ  ಗುಟ್ಟೇನು ಹೇಳೆ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





28 June 2018

ಹನಿಗವನಗಳು



ಅವಳೆಂದಳು
ನನ್ನ ಜೊತೆಗಿರುವವರೆಗೆ
ಸುಖ ಕೊಡುವೆ ನಿನಗೆ
ನೀನೇ ಇಂದ್ರ ಚಂದ್ರ ನನಗೆ
ನಿನ್ನ ಹಣ ಮುಗಿದ ಮೇಲೆ
ಖಂಡಿತ ಕೈ ಕೊಡುವೆ ನಿನಗೆ



ಕೇವಲ ಸುಖವಲ್ಲದೆ
ಕಷ್ಟದಲ್ಲೂ ಜೊತೆಗಿರುವೆನೆಂದೆ
ಅವಳೊಲವ ಪಡೆಯಲು
ದೂರಮಾಡಿಕೊಂಡೆ ನನ್ನ ತಂದೆ
ನನ್ನೊಲವ ಲೆಕ್ಕಿಸದೆ ಅವಳೆಂದಳು‌
ನೀ ನನಗೇನು ತಂದೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 June 2018

ನಮ್ಮ ಜೀವನ‌ಶೈಲಿ ಹೇಗಿರಬೇಕು?( ಸಂಗ್ರಹ‌ಲೇಖನ)

*ಯಾವ ಸಮಯದಲ್ಲಿ ನಿದ್ದೆ ಹೋಗಬೇಕು?*

ಜೇಮ್ಸ್ ಪಾಂಗ್ ರವರ ವಿಚಾರಗಳು, ಸಲಹೆಗಳು.

ನಿದ್ರೆ ಮಾಡಲು ಅತ್ಯುತ್ತಮ ಸಮಯ ಎಂಬುದು ಇದೆಯೇ? *ನಮ್ಮಲ್ಲಿ ಒಂದು ಸಲಹೆಯ ಮಾತಿದೆ. ಬೇಗ ಮಲಗಿ ಬೇಗ ಎದ್ದೇಳಿ. ಅದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಷ್ಟು ಸಮಂಜಸ?* ಹಾಗಿದ್ದರೆ, ತಡವಾಗಿ ಮಲಗಿ ತಡವಾಗಿ ಏಳುವುದು ಸೂಕ್ತವೇ?

*ವಾಸ್ತವವಾಗಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿ ಅದ್ಭುತವಾದ ಜೈವಿಕ ಗಡಿಯಾರವೊಂದು ಚಾಲನೆಯಲ್ಲಿದೆ.* ಇದು ಅತ್ಯಂತ ನಿಖರವಾದುದು. ಅದು ನಿಮ್ಮ ನಿದ್ರೆಯ ಅವಧಿ ಸಹಿತವಾಗಿ, ನಿಮ್ಮ ದೇಹದ ವಿವಿಧ ಕಾರ್ಯವಿಧಾನಗಳನ್ನು ನಿಯಂತ್ರಣದಲ್ಲಿ ಇಡುತ್ತದೆ.

*ರಾತ್ರಿ ೧೧ಘಂಟೆಯಿಂದ ಬೆಳಗುಜಾವದ ೩ ಘಂಟೆಯವರೆಗೆ*, ಬಹುಪಾಲು ನಿಮ್ಮ ರಕ್ತಪರಿಚಲನೆಯು ನಿಮ್ಮ *ಯಕೃತ್ತಿ(ಲಿವರ್) ನಲ್ಲಿ* ಕೇಂದ್ರೀಕೃತವಾಗಿರುತ್ತದೆ. ನಿಮ್ಮ ಯಕೃತ್ತು ಹೆಚ್ಚಿನ ರಕ್ತಸಂಚಯನ ಹೊಂದಿದ್ದರಿಂದ  ಹೆಚ್ಚಿನ ಗಾತ್ರದ್ದಾಗುತ್ತದೆ. ಇದು ಅತ್ಯಂತ ಮಹತ್ವದ ಅವಧಿಯಾಗಿದ್ದು, ಈ ಸಮಯದಲ್ಲಿ ನಿಮ್ಮ ದೇಹವು ವಿಷಪೂರಿತ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ಮಾಡುತ್ತಿರುತ್ತದೆ. ಇಡೀ ದಿನದಲ್ಲಿ ಸಂಗ್ರಹವಾದ ದೈಹಿಕ ವಿಷಸಂಗ್ರಹವನ್ನು ನಿವಾರಿಸುವ ಹಾಗೂ ವಿಭಜಿಸುವ ಕಾರ್ಯವನ್ನು ನಿಮ್ಮ ಯಕೃತ್ತು ಮಾಡುತ್ತಿರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಗದಿತ ಸಮಯದಲ್ಲಿ ನಿದ್ರೆ ಮಾಡದೇ ಇದ್ದರೆ, ನಿಮ್ಮ ಯಕೃತ್ತು ವಿಷಕಾರಿ ತ್ಯಾಜ್ಯಗಳನ್ನು ನಿವಾರಿಸುವ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗದು.

*ನೀವು ರಾತ್ರಿ ೧೧ರೊಳಗೆ ನಿದ್ರೆಗೆ ಹೋದರೆ, ನಿಮ್ಮ ದೇಹದ ಶುದ್ಧೀಕರಣ ಕ್ರಿಯೆಗೆ ಪೂರ್ತಿ ನಾಲ್ಕು ತಾಸುಗಳ ಅವಧಿ ಸಿಗುತ್ತದೆ*

ನೀವು ರಾತ್ರಿ ೧೨ಕ್ಕೆ ನಿದ್ದೆ ಹೋದರೆ, ನಿಮಗೆ ಮೂರು ತಾಸುಗಳ ಅವಧಿ ಸಿಗುತ್ತದೆ.

ನೀವು ರಾತ್ರಿ ೧ಕ್ಕೆ ಮಲಗಿದರೆ, ನಿಮಗೆ ಎರಡು ತಾಸುಗಳ ಅವಧಿ ಲಭ್ಯವಾಗುತ್ತದೆ.

ಮತ್ತು, ನೀವು ರಾತ್ರಿ ಎರಡು ಗಂಟೆಗೆ ಮಲಗಿದರೆ ನಿಮಗೆ ವಿಷಕಾರಿ ವಸ್ತು ನಿವಾರಣೆಗೆ, ಕೇವಲ ಒಂದೇ ತಾಸಿನ ಅವಧಿ ಸಿಗುತ್ತದೆ.

*ಒಂದುವೇಳೆ, ನೀವು ಬೆಳಗಿನ ಜಾವ ಮೂರು ಘಂಟೆಗೆ ನಿದ್ದೆ ಹೋದರೆ?*
*ದುರ್ದೈವದ ಸಂಗತಿಯೆಂದರೆ, ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳ ನಿವಾರಣೆ ಮಾಡಲು ವಸ್ತುಶಃ ಏನೂ ಸಮಯವೇ ಸಿಗುವದಿಲ್ಲ.* ನೀವು ಇದೇ ರೀತಿ ನಿಮ್ಮ ನಿದ್ರೆಯ ಸಮಯ ಪದ್ಧತಿಯನ್ನು ಮುಂದುವರೆಸಿದ್ದಲ್ಲಿ, ಕಾಲಾಂತರದಲ್ಲಿ, ವಿಷಕಾರಿ ವಸ್ತುಗಳು ನಿಮ್ಮ ದೇಹದಲ್ಲಿ ಸಂಗ್ರಹವಾಗುತ್ತಲೇ ಇರುತ್ತವೆ. ಇದರ ನಂತರ ಏನು ಆಗುತ್ತದೆ ಎಂಬುದು ನಿಮಗೇ ಗೊತ್ತಲ್ಲವೇ?

*ನೀವು ತಡವಾಗಿ ಮಲಗಿ, ತಡವಾಗಿ ಎದ್ದರೆ ಆಗುವ ಪರಿಣಾಮವೇನು?*

ನೀವು ಎಂದಾದರೂ ರಾತ್ರಿ ತಡವಾಗಿ ನಿದ್ರೆ ಹೋಗಿದ್ದೀರಾ? ಮರುದಿನ ನೀವು ಎಷ್ಟೇ ತಡವಾಗಿ ಎದ್ದರೂ ಸಹ ನಿಮಗೆ ಬಹಳೇ ಆಯಾಸವಾಗುವ ಅನುಭವ ಆಗಿದೆಯೇ?

*ಖಂಡಿತವಾಗಿಯೂ ತಡವಾಗಿ ಮಲಗಿ ತಡವಾಗಿ ಏಳುವ ವಿಧಾನ ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕರ. ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳ ನಿವಾರಣೆಗೆ ಸಾಕಷ್ಟು ಸಮಯ ಸಿಗದಿರುವುದಷ್ಟೇ ಅಲ್ಲ, ನಿಮ್ಮ ದೇಹವು ಅದರ ಅತಿಮುಖ್ಯ ಕಾರ್ಯನಿರ್ವಹಣೆಯಿಂದಲೂ ಸಹ ವಂಚಿತವಾಗುತ್ತದೆ.*

*ಬೆಳಗಿನ ಜಾವದ ೩ಘಂಟೆಯಿಂದ ೫ಘಂಟೆಯವರೆಗೆ,* ಬಹುಪಾಲು ರಕ್ತಪರಿಚಲನೆಯು ನಿಮ್ಮ *ಪುಪ್ಫುಸ*(lung)ದಲ್ಲಿ ಕೇಂದ್ರೀಕೃತವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು? ಸರಿ, ಆವಾಗ ನೀವು ವ್ಯಾಯಾಮ ಮಾಡಬೇಕು ಹಾಗೂ ಶುದ್ಧ ಗಾಳಿಯಲ್ಲಿ ಉಸಿರಾಡಬೇಕು. ನಿಮ್ಮ ದೇಹದಲ್ಲಿ ಒಳ್ಳೆಯ ಶಕ್ತಿಯನ್ನು ಹೊಂದಬೇಕು, ಪ್ರಮುಖವಾಗಿ ಒಂದು ಹೂದೋಟದಲ್ಲಿ ಇರಬೇಕು. ಈ ಅವಧಿಯಲ್ಲಿ ವಾತಾವರಣವು ಬಹಳ ಶುದ್ಧವಾಗಿದ್ದು, ಸಾಕಷ್ಟು ಲಾಭದಾಯಕ ಋಣವಿದ್ಯುತ್ ಕಣಗಳನ್ನು ಒಳಗೊಂಡಿರುತ್ತದೆ.

*ಬೆಳಗಿನ ಜಾವದ ೫ಘಂಟೆಯಿಂದ ಮುಂಜಾನೆ ೭ ಘಂಟೆಯ ಅವಧಿಯಲ್ಲಿ* ರಕ್ತಪರಿಚಲನೆಯು ಹೆಚ್ಚಿನದಾಗಿ *ದೊಡ್ಡ ಕರುಳಿನಲ್ಲಿ* ಕೇಂದ್ರೀಕೃತವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು? ನೀವು ವಿಸರ್ಜನಾ ಕಾರ್ಯ ಮಾಡಬೇಕು! ನಿಮ್ಮ ದೊಡ್ಡ ಕರುಳಿನಲ್ಲಿ ಸಂಗ್ರಹಿತವಾದ ಎಲ್ಲ ಅನವಶ್ಯಕಗಳನ್ನು ಹೊರಹಾಕಬೇಕು. ನಿಮ್ಮ ದೇಹವು ಹೆಚ್ಚು ಪೌಷ್ಟಿಕಾಂಶಗಳನ್ನು ದಿನವಿಡೀ ಸ್ವೀಕರಿಸಲು ನಿಮ್ಮ ದೇಹವನ್ನು ಸಿದ್ಧಗೊಳಿಸಿಕೊಳ್ಳಬೇಕು.

*ಮುಂಜಾನೆ ೭ರಿಂದ ೯ಘಂಟೆಯವರೆಗೆ,* ಬಹುತೇಕ ರಕ್ತೊರಿಚಲನೆಯು ನಿಮ್ಮ *ಉದರದಲ್ಲಿ ಅಂದರೆ, ಹೊಟ್ಟೆಯಲ್ಲಿ* ಕೇಂದ್ರೀಕೃತವಾಗಿರುತ್ತದೆ. ಈ ಅವಧಿಯಲ್ಲಿ ನೀವು ಏನು ಮಾಡಬೇಕು? ನಿಮ್ಮ ಬೆಳಗಿನ ಉಪಾಹಾರವನ್ನು ಮಾಡಬೇಕು! ಇದು ನಮಗೆ ಆ ದಿನದ ಅತ್ಯಂತ ಪ್ರಮುಖವಾದ ಊಟವಾಗಿರುತ್ತದೆ. ಬೆಳಗಿನ ಉಪಾಹಾರದಲ್ಲಿ ಅವಶ್ಯಕವಾದ ಎಲ್ಲ ಪೌಷ್ಟಿಕಾಂಶಗಳು ಸಿಗುವಂತೆ ಖಚಿತಪಡಿಸಿಕೊಳ್ಳಿ. *ನಿಗದಿತ ಸಮಯದಲ್ಲಿ ಯೋಗ್ಯ ಉಪಾಹಾರವನ್ನು ಸೇವಿಸದೇ ಇರುವುದು ನಿಮಗೆ ಭವಿಷ್ಯದ ದಿನಗಳಲ್ಲಿ ಬಹಳಷ್ಟು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತರುತ್ತದೆ*.

ಇದು ನೀವು ನಿಮ್ಮ ದೈನಿಕವಾಗಿ ಅನುಸರಿಸಬೇಕಾದ ವಿಧಾನ.

*ಹಳ್ಳಿಗಳಲ್ಲಿ ಹಾಗೂ ಹೊಲಗದ್ದೆಗಳ ಪರಿಸರದಲ್ಲಿ ಜೀವಿಸುವ ಜನರು ಆರೋಗ್ಯಪೂರ್ಣರಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅವರು ಬೇಗನೇ ನಿದ್ದೆಹೋಗುತ್ತಾರೆ ಹಾಗೂ ಬೇಗ ಎದ್ದೇಳುತ್ತಾ ಅವರ ಜೈವಿಕ ಗಡಿಯಾರದ ಅನುಸಾರ ಜೀವಿಸುವುದರ ಕಾರಣ ಆರೋಗ್ಯವಂತರಾಗಿ ಇರುತ್ತಾರೆ*.

ಯಾರೇ ಒಬ್ಬರು ಈ ಮೇಲೆ ವಿವರಿಸಿದ ವಿಧಾನವನ್ನು ಅನುಸರಿಸುತ್ತಾರೋ, ಅವರು  ಖಂಡಿತವಾಗಿ ಆಲ್ಹಾದತೆಯ ಅನುಭವ ಪಡೆಯುತ್ತಾರೆ ಹಾಗೂ ದಿನವಿಡೀ ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ.

*ಈ ವಾಸ್ತವಗಳನ್ನು ನಮ್ಮ ಯುವಪೀಳಿಗೆಯು ಅರಿತುಕೊಳ್ಳುವ ಅಗತ್ಯ ಇರುವದರಿಂದ, ಇದನ್ನು ಸಾಧ್ಯವಾದಷ್ಟು ಹೆಚ್ಚು ಮುಂದುವರಿಕೆ ಮಾಡಿರಿ*

ಆಂಗ್ಲಭಾಷೆಯಲ್ಲಿ ನನ್ನ ಆತ್ಮೀಯರಿಂದ ನನಗೆ ಬಂದ ಅವತರಣಿಕೆಯನ್ನು ಅನುವಾದಿಸಿ ಕಳಿಸಿದ್ದೇನೆ. ಇದರಿಂದ ಕೆಲವರಿಗಾದರೂ, ವಿಶೇಷತಃ ಪ್ರಯೋಜನವಾದಲ್ಲಿ ನನ್ನ ಶ್ರಮ ಸಾರ್ಥಕ.

ಜೀವನದಲ್ಲಿ ಗೆಲ್ಲಬೇಕೆ?(ಸಂಗ್ರಹ ಲೇಖನ)

*ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೆ ಎಂಬ ಉಮೇದು ಇರುವವರು ದಯವಿಟ್ಟು ಕೆಳಗಿನ ವಾಕ್ಯಗಳನ್ನು ಗಮನಿಸಿರಿ.*

ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು.
ಒಂದು ಯುದ್ಧದಿಂದಾಗಿ  *ತಿಮ್ಮಪ್ಪ ನಾಯಕ ಕನಕದಾಸ* ರಾಗಿ ಬದಲಾದರು.

*ನಾರದ* ನ  ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ   *ವಾಲ್ಮೀಕಿ* ಯಾದರು.

ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ
 *ಬಸವಣ್ಣ ಜಗಜ್ಯೋತಿ* ಯಾದರು.

ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ *ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ* ಯಾದರು.

ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ *ನರೇಂದ್ರ ವಿವೇಕಾನಂದ* ರಾದರು.

ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ *ಸೂಪರ್ ಸ್ಟಾರ್ ಉಪೇಂದ್ರ* ರಾದರು.

ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ *ರವಿ ಡಿ ಚನ್ನಣ್ಣನವರ್* ಇಂದು ಐಪಿಎಸ್ ಅಧಿಕಾರಿಯಾದರು.

ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ *ಎಸ್.ಆರ್.ಕಂಠಿ* ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ *"ಭರತ"* ರಾದರು.

ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ,  ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ *ಅಣ್ಣಾ ಹಜಾರೆ ಆಧುನಿಕ ಗಾಂಧಿ* ಯಾದರು.

ಬೀದಿ ದೀಪದಲ್ಲಿ ಓದಿದ *ವಿಶ್ವೇಶ್ವರಯ್ಯ ಭಾರತ ರತ್ನ* ರಾದರು.

ಎಂಟನೇ ತರಗತಿ ಫೇಲ್ ಆದ *ಸಚಿನ್* ಇಂದು ಕ್ರಿಕೆಟ್ ಲೋಕದ ದೇವರಾದರು.

ಪೆಟ್ರೋಲ್ ಹಾಕುತ್ತಿದ್ದ *ಅಂಬಾನಿ* ಇಂದು ಭಾರತದ *ನಂಬರ್ ಒನ್* ಶ್ರೀಮಂತರಾದರು.

*ಗೋಪಾಲ್ ಕೃಷ್ಣ ರೋಲಂಕಿ* ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
 ಹಿಂದಿ ಬರದಿದ್ದರೂ *ಐಎಎಸ್* ಪರೀಕ್ಷೆಯಲ್ಲಿ ಮೂರನೇ Rank ಬಂದರು.

ಚಪ್ಪಲಿ ಹೊಲಿಯುತ್ತಿದ್ದ ಕುಟುಂಬದಿಂದ ಬಂದ *ಅಬ್ರಹಾಂ ಲಿಂಕನ್* ಸತತ ಸೋಲು ಕಂಡರು ಕೊನೆಗೆ *ಅಮೆರಿಕದ ಅಧ್ಯಕ್ಷ* ರಾದರು.

*ಎನ್. ಅಂಬಿಕಾ* ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ *ಐಪಿಎಸ್* ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆಯಾದರು. (ಈಕೆಯ ಬದುಕು ತುಂಬಾ ರೋಚಕವಾಗಿದೆ *ಮಿಸ್* ಮಾಡದೆ ತಿಳಿದುಕೊಳ್ಳಿ).

ನಮ್ಮ ಜಿಲ್ಲೆಯವನೊಬ್ಬ
*ಐಎಎಸ್* ಅಧಿಕಾರಿಯಾದ.
ನಮ್ಮ ತಾಲೂಕಿನವನೊಬ್ಬ
*ಕೆ.ಎ.ಎಸ್* ಅಧಿಕಾರಿಯಾದ.
ನಮ್ಮ ಊರಿನವನೊಬ್ಬ
*ಪಿ.ಎಸ್.ಐ.* ಆದ.
ನಮ್ಮ ಓಣಿಯವನೊಬ್ಬ
*ಎಫ್.ಡಿ.ಎ.* ಆದ.
ನಮ್ಮ ಮನೆಯ ಪಕ್ಕದವನೊಬ್ಬ
*ಎಸ್.ಡಿ.ಎ* ಆದ.

ಇದೆಲ್ಲವನ್ನು ನೋಡಿದರೂ ನಾವು ಏನೂ ಆಗಲಿಲ್ಲ...? ಏಕೆಂದರೆ ನಮ್ಮಲ್ಲಿ *ಸಾಧಿಸುವ ಛಲವೇ ಸತ್ತು* ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.

*ಕಷ್ಟ ಯಾರಿಗಿಲ್ಲಾ...?*
*ಅವಮಾನ ಯಾರಿಗಾಗಿಲ್ಲ...??*
*ಸೋಲನ್ನ ಯಾರು ನೋಡಿಲ್ಲ...??*

*ಕಷ್ಟ* ಗಳನ್ನ ಮನುಷ್ಯ *ಮೌನ* ವಾಗಿ ದಾಟಬೇಕು.
*ಪರಿಶ್ರಮ* ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ *ಯಶಸ್ಸಿನ ಫಲ* ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ *ಪುಸ್ತಕ* ಎಂದಿಗೂ ಮಾಡಲಾರದು.

*ಎದೆಗೆ ಬಿದ್ದ ಅಕ್ಷರ..*
*ಭೂಮಿಗೆ ಬಿದ್ದ ಬೀಜ..* ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.

*ಪುಸ್ತಕ* ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.

*ಕಠಿಣ ಪರಿಶ್ರಮ,ದೃಢ ಸಂಕಲ್ಪ, ತಾಳ್ಮೆ* ಯೊಂದಿದ್ದರೆ ಏನನ್ನಾದರೂ ಸಾಧಿಸಬಹುದು.

ಇಂತಹ *ಸಂದೇಶಗಳು* ಹಲವರಿಗೆ *ಸ್ಫೂರ್ತಿ* ಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ.
*ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.*

ಭವಿಷ್ಯದ ಬಗ್ಗೆ ಚಿಂತಿಸದಿದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು  *ಗಾರ್ಲ ವರ್ದಿ* ರವರು ಹೇಳುತ್ತಾರೆ.

ಯೋಚಿಸಿ ನಿರ್ಧರಿಸಿ.
ಯಾಕಂದ್ರೆ *ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ*.

ಓದಿದ ನಂತರ ಸರಿಯೆನಿಸಿದರೆ ಮುನ್ನಾಹಿಸಿ ಮತ್ತು ಇಂದಿನ ಯುವ ಜನತೆಗೆ ಓದಿ ಹೇಳಿರಿ.

26 June 2018

ಮರೆಯುವೆಯಾ ?( ಭಾವಗೀತೆ)

*ಮರೆಯುವೆಯಾ?*

ಹೆತ್ತವರೊಡಲುರಿಸಿ ಮೆರೆಯುವೆಯಾ?
ತುತ್ತನಿತ್ತವರ ಮಮತೆಯ ಮರೆಯುವೆಯಾ?

ಹೆತ್ತು ಹೊತ್ತು ಮುದ್ದು ಮಾಡಿ
ನೋವ ನುಂಗಿ ಪ್ರೀತಿ ನೀಡಿ
ಲಾಲಿ ಹಾಡಿ ತಟ್ಟಿ ಮಲಗಿಸಿ
ಹೊಟ್ಟೆ ಕಟ್ಟಿ ಬೆಳೆಸಿದವರ ಮರೆವೆಯಾ?

ಅಕ್ಕ ಪಕ್ಕ ಸರೀಕರಂತೆ
ಒಪ್ಪವಾಗಿ ಬೆಳೆಸಿ ನಲಿದು
ಚೊಕ್ಕವಾದ ಗುಣವ ಕಲಿಸಿ
ಸ್ವಾರ್ಥವಿರದ ಮುಗ್ದಜೀವಗಳನು ಮರೆವೆಯಾ?

ಉಡುಗೆ ತೊಡುಗೆ ಉಡಿಸಿ ನೋಡಿ
ಹರಿದ ಅರಿವೆ ತೊಟ್ಟು ಬಾಳಿ
ತಾನು ಅನ್ನವುಣದೆ ನಿನಗೆ
ಮೃಷ್ಟಾನ್ನವಿಟ್ಟು ತೃಪ್ತಿ ಕಂಡ ಕೈಗಳ ಮರೆವೆಯಾ ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 June 2018

ಕಲಿಯುಗ (ಸಂಗ್ರಹ ಲೇಖನ )

🍁☘🍁☘🍁☘🍁☘🍁☘🍁☘🍁☘  *ಕಲಿಯುಗ!*
       ಒಮ್ಮೆ ನಾಲ್ಕು ಜನ ಪಾಂಡವರು ಯುಧಿಷ್ಠಿರನನ್ನು ಹೊರತುಪಡಿಸಿ (ಅವನಾಗ ಅಲ್ಲಿರಲಿಲ್ಲ) ಕೃಷ್ಣನನ್ನು ಪ್ರಶ್ನಿಸಿದರು, " *ಕಲಿಯುಗವೆಂದರೇನು ಮತ್ತು ಕಲಿಯುಗದಲ್ಲಿ ಏನು ಜರುಗುತ್ತದೆ?"*

       ಕೃಷ್ಣನು ಮುಗುಳ್ನಕ್ಕು, "ನಾನು ನಿಮಗೆ ಕಲಿಯುಗದ ಪರಿಸ್ಥಿತಿ ಹೇಗಿರುತ್ತದೆಂದು ತೋರಿಸುತ್ತೇನೆ"  ಎಂದು  ಹೇಳಿದ. ಶ್ರೀ ಕೃಷ್ಣನು ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಾಲ್ಕು ಬಾಣಗಳನ್ನು ನಾಲ್ದೆಸೆಗಳಿಗೆ ಹೊಡೆದು ಆ ನಾಲ್ಕು ಜನ ಪಾಂಡವರಿಗೆ ಆ ಬಾಣಗಳನ್ನು ತೆಗೆದುಕೊಂಡು ಬರಲು ಹೇಳಿದ.
 ಆ ನಾಲ್ವರೂ ಬಾಣಗಳನ್ನು ಹುಡುಕಲು ತಲಾ ಒಂದೊಂದು ದಿಕ್ಕಿಗೆ ತೆರಳಿದರು.

       *ಅರ್ಜುನನು* ತನಗೆ ಸಿಕ್ಕ ಬಾಣವನ್ನು ಕೈಗೆತ್ತಿಕೊಳ್ಳುತ್ತಿದ್ದಾಗ ಅವನಿಗೆ ಒಂದು ಮಧುರವಾದ ಸ್ವರವು ಕೇಳಿಸಿತು. ಅವನು ತಿರುಗಿ ನೋಡಿದಾಗ ಒಂದು ಕೋಗಿಲೆಯು ಸಮ್ಮೋಹನಗೊಳಿಸುವ ಸ್ವರದಲ್ಲಿ ಹಾಡುತ್ತಿತ್ತು. ಅದರೊಂದಿಗೆ ಜೀವಂತವಿದ್ದ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದ ಒಂದು ಮೊಲದ ಮಾಂಸವನ್ನು ಆ ಕೋಗಿಲೆಯು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಅಂತಹ ದಿವ್ಯ ಪಕ್ಷಿಯು ಮಾಡುತ್ತಿದ್ದ *ಹೇಯವಾದ* ಕಾರ್ಯವನ್ನು ನೋಡಿ ಅದನ್ನು ಭರಿಸಲಾಗದೆ *ಅರ್ಜುನನು* ಜಿಗುಪ್ಸೆಗೊಂಡು ಅಲ್ಲಿಂದ ತಕ್ಷಣವೇ ಹೊರಟುಹೋದ.

      *ಭೀಮನು* ಐದು ಬಾವಿಗಳಿರುವಂತಹ ಒಂದು ಸ್ಥಳದಿಂದ ಬಾಣವನ್ನು ಎತ್ತಿಕೊಂಡ. ನಾಲ್ಕು ಬಾವಿಗಳು ಒಂದು ಬಾವಿಯ ಸುತ್ತಲೂ ಇದ್ದವು. ಆ ನಾಲ್ಕೂ ಬಾವಿಗಳು ಸಿಹಿಯಾದ ನೀರಿನಿಂದ ತುಂಬಿ ತುಳುಕುತ್ತಾ ತಮ್ಮಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಉಕ್ಕಿ ಹರಿಯುತ್ತಿದ್ದವು, ಆದರೆ ಆಶ್ಚರ್ಯಕರವಾಗಿ ಮಧ್ಯದಲ್ಲಿರುವ ಬಾವಿಯು ಸಂಪೂರ್ಣವಾಗಿ ಬರಿದಾಗಿತ್ತು. *ಭೀಮನೂ* ಸಹ ಆ ದೃಶ್ಯವನ್ನು ನೋಡಿ *ಸೋಜಿಗಗೊಂಡ* .

      *ನಕುಲನೂ* ಸಹ ತನಗೆ ಸಿಕ್ಕ ಬಾಣವನ್ನು ಎತ್ತಿಕೊಂಡು ಹಿಂದಿರುಗಿ ಬರುತ್ತಿದ್ದ. ಒಂದು ಸ್ಥಳದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡುತ್ತಿದ್ದ ಸ್ಥಳದಲ್ಲಿ ನಿಂತುಕೊಂಡ. ಕರು ಹಾಕಿದ ತಕ್ಷಣ ಆ ಹಸುವು ತನ್ನ ಕಂದನ ಮೈಯನ್ನು ನೆಕ್ಕತೊಡಗಿತು. ಹಾಗೆ ನೆಕ್ಕುವ ಮೂಲಕ ಕರುವಿನ ಶರೀರವು ಸ್ವಚ್ಛಗೊಂಡ ಬಳಿಕವೂ ಹಸುವು ಕರುವನ್ನು ನೆಕ್ಕುವುದನ್ನು ಮುಂದುವರೆಸಿತು. ಅದರಿಂದಾಗಿ ಆ ಕರುವಿನ ಚರ್ಮ ಕಿತ್ತುಹೋಗುವಂತಾಯಿತು, ಆದರೂ ಸಹ ಆ ತಾಯಿ ಹಸು ಕರುವನ್ನು ನೆಕ್ಕುವುದನ್ನು ಬಿಡಲಿಲ್ಲ. ಅದನ್ನು ಗಮನಿಸಿದ ಕೆಲವು ಜನ ಬಹಳ ಕಷ್ಟಪಟ್ಟು ಆ ಹಸು ಕರುಗಳನ್ನು ಬೇರ್ಪಡಿಸಿದರು. *ನಕುಲನಿಗೂ* ಸಹ ಹಸುವಿನಂತಹ ಸಾಧು ಪ್ರಾಣಿಯ ವರ್ತನೆಯು *ಆಶ್ಚರ್ಯವನ್ನುಂಟು* ಮಾಡಿತು.

      *ಸಹದೇವನು* ತನ್ನ ಬಾಣವನ್ನು ಪರ್ವತವೊಂದರ ಹತ್ತಿರದಿಂದ ಎತ್ತಿಕೊಂಡ. ಅಲ್ಲಿ ಮೇಲಿನಿಂದ ಕೆಳಗೆ ಉರುಳುತ್ತಿದ್ದ ಬೃಹತ್ ಬಂಡೆಯೊಂದನ್ನು ನೋಡಿದ. ಉರುಳುತ್ತಿದ್ದ, ಆ ಹೆಬ್ಬಂಡೆಯು ತನ್ನ ಅಡಿಗೆ ಸಿಕ್ಕ ದೊಡ್ಡ ದೊಡ್ಡ ಬಂಡೆಗಳನ್ನು ಸಹ ಪುಡಿಪುಡಿ ಮಾಡುತ್ತಾ, ಬೃಹದಾಕಾರದ ಮರಗಳನ್ನು ನೆಲಕ್ಕೆ ಒರಗುವಂತೆ ಮಾಡುತ್ತಿತ್ತು, ಅಂತಹ ಬಂಡೆಯು ಒಂದು ಚಿಕ್ಕ ಗಿಡವು ಅಡ್ಡ ಬಂದುದರಿಂದ ನಿಂತುಕೊಂಡಿತು. ಸಹಜವಾಗಿಯೇ *ಸಹದೇವನೂ* ಸಹ ಈ ಸೋಜಿಗವನ್ನು ನೋಡಿ *_ಅಚ್ಚರಿಗೊಂಡ_* .

     ಎಲ್ಲ *ಪಾಂಡವರೂ* ತಾವು ಕಂಡ ಸಂಗತಿಗಳ ಕುರಿತು *ಕೃಷ್ಣನಿಗೆ* ಹೇಳಿ ಅವನಿಂದ ವಿವರಣೆಯನ್ನು ಬಯಸಿದರು.  *ಕೃಷ್ಣನು* ನಸುನಕ್ಕು ಅವುಗಳನ್ನು ವಿವರಿಸತೊಡಗಿದ...

      " *ಕಲಿಯುಗ* ದಲ್ಲಿ ಪುರೋಹಿತರು ಬಹಳ ಮಧುರವಾದ ಧ್ವನಿಯನ್ನು ಹೊಂದಿರುತ್ತಾರೆ ಮತ್ತು ಬಹಳ ಉನ್ನತವಾದ ಜ್ಞಾನವನ್ನೂ ಹೊಂದಿರುತ್ತಾರೆ; ಆದರೂ ಸಹ ಆ ಕೋಗಿಲೆಯು ಮೊಲವನ್ನು ಕಿತ್ತು ತಿಂದಂತೆ ಅವರು ಭಕ್ತರನ್ನು ಸುಲಿದು, ಪೀಡಿಸುತ್ತಾರೆ.

     ಕಲಿಯುಗದಲ್ಲಿ ಬಡವರು ಶ್ರೀಮಂತರ ಮಧ್ಯೆಯೇ ಬದುಕುತ್ತಾರೆ ಮತ್ತು ಆ ಶ್ರೀಮಂತರು ತುಂಬಿ ತುಳುಕುವಷ್ಟು ಧನಕನಕಗಳನ್ನು ಹೊಂದಿರುತ್ತಾರೆ; ಆದರೂ ಸಹ ಅವರು ಬಡವರಿಗೆ ಬಿಡಿಗಾಸನ್ನೂ ಕೊಡುವುದಿಲ್ಲ, ಆ ತುಂಬಿ ಹರಿಯುತ್ತಿದ್ದ ನಾಲ್ಕು ಬಾವಿಗಳಂತೆ ಬರಿದಾದ ಬಾವಿಗೆ ಅವರು ನೀರುಣಿಸುವುದಿಲ್ಲ.

      ಕಲಿಯುಗದಲ್ಲಿ ತಾಯ್ತಂದೆಯರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಅವರ ಮಮಕಾರವು ಮಕ್ಕಳನ್ನು ಹಾಳುಮಾಡುವುದಷ್ಟೇ ಅಲ್ಲ ಅವರ ಜೀವನವನ್ನೂ ನಾಶಮಾಡುತ್ತದೆ; ಆ ಆಕಳು ತನ್ನ ಕರುವಿನ ಮೇಲೆ ತೋರಿಸಿದ ಮಮತೆಯಂತೆ.

       ಕಲಿಯುಗದಲ್ಲಿ ಪರ್ವತದ ಮೇಲಿಂದ ಬೀಳುವ ಹೆಬ್ಬಂಡೆಯಂತೆ ಜನರು ತಮ್ಮ ಸುಗುಣಗಳನ್ನು ಕಳಚಿಕೊಂಡು ಅಧಃಪತನಕ್ಕೆ ಬೀಳುತ್ತಾರೆ ಮತ್ತು ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ; ಆದರೆ ಅಂತಿಮವಾಗಿ ಭಗವನ್ನಾಮ ಸ್ಮರಣೆ ಮಾತ್ರ ಅವರನ್ನು ಆ ಪುಟ್ಟ ಗಿಡದಂತೆ ಕೆಳಗೆ ಜಾರದಂತೆ ಹಿಡಿದು ರಕ್ಷಿಸುತ್ತದೆ".

~*ಶ್ರೀಮದ್ಭಾಗವತದಿಂದ ಆಯ್ದ ಉದ್ಧವ ಗೀತೆಯ ಭಾಗ.*
🙏🙏🙏🙏🏼🙏🏼🙏🏼🙏🏼☘🍁☘🍁☘🍁☘

15 June 2018

ವಿವೇಚನೆಯಿಂದ ಮೊಬೈಲ್ ಬಳಸೋಣ ( ಲೇಖನ)



*ವಿವೇಚನೆಯಿಂದ ಮೊಬೈಲ್ ಬಳಸೋಣ*

ಅಸಾದ್ಯವಾದುದನ್ನು ಸಾದ್ಯವಾಗಿಸಿ ,ಸಕಲ ಕಾರ್ಯಗಳನ್ನು ಮಾಡಿ ಇನ್ನೂ ಏನಾದರೂ ಮಾಡಬೇಕು,ಎಂದು ತುಡಿಯುತ್ತಿರುವ ನಮ್ಮ ಸೇವೆಗಾಗಿ ಸಿದ್ದವಾಗಿರುವ,ಕೆಲ ಅವಾಂತರಗಳಿಗೂ ಸಾಕ್ಷಿಯಾಗಿರುವ ಸಾಧನವೇ ಮೊಬೈಲ್.
ಆರಂಭದಲ್ಲಿ ಕೇವಲ ಮಾತು ಮತ್ತು ಸಂದೇಶಗಳನ್ನು ಕಳಿಸಲು ಮೀಸಲಾಗಿದ್ದ ಮೊಬೈಲ್ ಇಂದು ಜಾಗತೀಕರಣದ ಪರಿಣಾಮ ,ಇಂಟರ್ನೆಟ್‌ ಕ್ರಾಂತಿಯ ಪ್ರಭಾವದಿಂದಾಗಿ ಮೊಬೈಲ್ ಹಲವಾರು ಸಾಧನಗಳನ್ನು ನುಂಗಿ ನೀರು ಕುಡಿದು ಇನ್ನೂ ಕೆಲವು ಸಾಧನಗಳನ್ನು ಆಪೋಷನ ತೆಗೆದುಕೊಳ್ಳುವ ಹಂತದಲ್ಲಿದೆ  ಟೇಪ್ ರೆಕಾರ್ಡರ್, ಅಲಾರಾಂ,ಕ್ಯಾಲ್ಕುಲರೆಟರ್, ಸ್ಟಾಪ್ವಾಚ್ ,ಗಡಿಯಾರ, ಕಂಪ್ಯೂಟರ್, ಟಾರ್ಚ್, ಬ್ಯಾಕಿಂಗ್, ಟೈಪಿಂಗ್  ಮುಂತಾದವುಗಳ ಕಾರ್ಯವನ್ನು ಮಾಡುತ್ತಾ ಸಾಧನ ಒಂದು ಕಾರ್ಯಗಳು ನೂರಾರು ಎಂಬಂತೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ
ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಗಳಾದ ವಾಟ್ಸಪ್ ,ಪೇಸ್ಬುಕ್ ಮುಂತಾದವುಗಳ ಮೂಲಕ ಸಾಮಾನ್ಯ ಜ್ಞಾನ, ಮನರಂಜನಾ, ಸಂಗೀತ, ವ್ಯವಹಾರ, ಸಾಹಿತ್ಯದ ಇತ್ಯಾದಿ ಗುಂಪುಗಳ ಮೂಲಕ ಸೃಜನಶೀಲತೆ ಬೆಳೆಯಲು‌ ಮತ್ತು ವ್ಯವಹಾರ ವೃದ್ದಿಸಲು ಮೊಬೈಲ್ ಸಹಕಾರಿಯಾಗಿದೆ.
.ಇಂತಿಪ್ಪ ಈ ಮೊಬೈಲ್ ಕೆಲವು ಅನಾನುಕೂಲ ಅವಘಡಗಳಿಗೂ ಕಾತಣವಾಗಿರುವುದು ಆತಂಕಕಾರಿಯಾದುದು.
ಕ್ಷುಲ್ಲಕ ಕಾರಣಗಳಿಗಾಗಿ ವಾಟ್ಸಪ್ ಮತ್ತು ಇತರೆ ಸಂದೇಶಗಳನ್ನು ನೋಡಿ ಅನುಮಾನಿಸಿ ಸಂಸಾರದಲ್ಲಿ ಜಗಳಗಳಾಗಿ ವಿಚ್ಚೇದನಗಳಾಗಿರುವುದು ಕಂಡಿದ್ದೇವೆ.ಕೆಲ ಯುವಕರು ಸಮಯ ಕಳೆವ ಸಾಧನವಾಗಿ ಮೊಬೈಲ್ ಬಳಕೆ ಮಾಡುತ್ತಿರುವುದು ದುರದೃಷ್ಟಕರ.
ಮೊಬೈಲ್ ಆಧುನಿಕ ತಂತ್ರಜ್ಞಾನದ ಒಂದು ಉತ್ತಮ ಕೊಡುಗೆ ಇದನ್ನು ವಿವೇಚನೆಯಿಂದ ಬಳಸಿದರೆ ಮನುಕುಲಕ್ಕೆ ಕೆಡುಕಿಗಿಂತ ಒಳಿತೇ ಆಗುವುದು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
9900925529

14 June 2018

ಹಬ್ಬ (ಹನಿಗವನ)

*ಹಬ್ಬ*

ಮದುವೆಯ ಸಮಯದಲ್ಲಿ
ಬಂಧು ಬಾಂಧವರು ಬಂದು
ಅಕ್ಕಪಕ್ಕದಲಿ‌ ನಿಂತು
ಪಟ ತೆಗೆಸಿಕೊಳ್ಳುವರು
ನವ ವಧು ವರರು ತಿಳಿಯುವರು
ಇವರು ನಮ್ಮ ಹಾರೈಸುವರು ಎಂದು
ಬಾಂಧವರು ಒಳಗೊಳಗೆ ನಗುವರು
ಇರುವುದು ಮಾರಿ ಹಬ್ಬ ಮುಂದೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*