🍁☘🍁☘🍁☘🍁☘🍁☘🍁☘🍁☘ *ಕಲಿಯುಗ!*
ಒಮ್ಮೆ ನಾಲ್ಕು ಜನ ಪಾಂಡವರು ಯುಧಿಷ್ಠಿರನನ್ನು ಹೊರತುಪಡಿಸಿ (ಅವನಾಗ ಅಲ್ಲಿರಲಿಲ್ಲ) ಕೃಷ್ಣನನ್ನು ಪ್ರಶ್ನಿಸಿದರು, " *ಕಲಿಯುಗವೆಂದರೇನು ಮತ್ತು ಕಲಿಯುಗದಲ್ಲಿ ಏನು ಜರುಗುತ್ತದೆ?"*
ಕೃಷ್ಣನು ಮುಗುಳ್ನಕ್ಕು, "ನಾನು ನಿಮಗೆ ಕಲಿಯುಗದ ಪರಿಸ್ಥಿತಿ ಹೇಗಿರುತ್ತದೆಂದು ತೋರಿಸುತ್ತೇನೆ" ಎಂದು ಹೇಳಿದ. ಶ್ರೀ ಕೃಷ್ಣನು ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಾಲ್ಕು ಬಾಣಗಳನ್ನು ನಾಲ್ದೆಸೆಗಳಿಗೆ ಹೊಡೆದು ಆ ನಾಲ್ಕು ಜನ ಪಾಂಡವರಿಗೆ ಆ ಬಾಣಗಳನ್ನು ತೆಗೆದುಕೊಂಡು ಬರಲು ಹೇಳಿದ.
ಆ ನಾಲ್ವರೂ ಬಾಣಗಳನ್ನು ಹುಡುಕಲು ತಲಾ ಒಂದೊಂದು ದಿಕ್ಕಿಗೆ ತೆರಳಿದರು.
*ಅರ್ಜುನನು* ತನಗೆ ಸಿಕ್ಕ ಬಾಣವನ್ನು ಕೈಗೆತ್ತಿಕೊಳ್ಳುತ್ತಿದ್ದಾಗ ಅವನಿಗೆ ಒಂದು ಮಧುರವಾದ ಸ್ವರವು ಕೇಳಿಸಿತು. ಅವನು ತಿರುಗಿ ನೋಡಿದಾಗ ಒಂದು ಕೋಗಿಲೆಯು ಸಮ್ಮೋಹನಗೊಳಿಸುವ ಸ್ವರದಲ್ಲಿ ಹಾಡುತ್ತಿತ್ತು. ಅದರೊಂದಿಗೆ ಜೀವಂತವಿದ್ದ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದ ಒಂದು ಮೊಲದ ಮಾಂಸವನ್ನು ಆ ಕೋಗಿಲೆಯು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಅಂತಹ ದಿವ್ಯ ಪಕ್ಷಿಯು ಮಾಡುತ್ತಿದ್ದ *ಹೇಯವಾದ* ಕಾರ್ಯವನ್ನು ನೋಡಿ ಅದನ್ನು ಭರಿಸಲಾಗದೆ *ಅರ್ಜುನನು* ಜಿಗುಪ್ಸೆಗೊಂಡು ಅಲ್ಲಿಂದ ತಕ್ಷಣವೇ ಹೊರಟುಹೋದ.
*ಭೀಮನು* ಐದು ಬಾವಿಗಳಿರುವಂತಹ ಒಂದು ಸ್ಥಳದಿಂದ ಬಾಣವನ್ನು ಎತ್ತಿಕೊಂಡ. ನಾಲ್ಕು ಬಾವಿಗಳು ಒಂದು ಬಾವಿಯ ಸುತ್ತಲೂ ಇದ್ದವು. ಆ ನಾಲ್ಕೂ ಬಾವಿಗಳು ಸಿಹಿಯಾದ ನೀರಿನಿಂದ ತುಂಬಿ ತುಳುಕುತ್ತಾ ತಮ್ಮಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಉಕ್ಕಿ ಹರಿಯುತ್ತಿದ್ದವು, ಆದರೆ ಆಶ್ಚರ್ಯಕರವಾಗಿ ಮಧ್ಯದಲ್ಲಿರುವ ಬಾವಿಯು ಸಂಪೂರ್ಣವಾಗಿ ಬರಿದಾಗಿತ್ತು. *ಭೀಮನೂ* ಸಹ ಆ ದೃಶ್ಯವನ್ನು ನೋಡಿ *ಸೋಜಿಗಗೊಂಡ* .
*ನಕುಲನೂ* ಸಹ ತನಗೆ ಸಿಕ್ಕ ಬಾಣವನ್ನು ಎತ್ತಿಕೊಂಡು ಹಿಂದಿರುಗಿ ಬರುತ್ತಿದ್ದ. ಒಂದು ಸ್ಥಳದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡುತ್ತಿದ್ದ ಸ್ಥಳದಲ್ಲಿ ನಿಂತುಕೊಂಡ. ಕರು ಹಾಕಿದ ತಕ್ಷಣ ಆ ಹಸುವು ತನ್ನ ಕಂದನ ಮೈಯನ್ನು ನೆಕ್ಕತೊಡಗಿತು. ಹಾಗೆ ನೆಕ್ಕುವ ಮೂಲಕ ಕರುವಿನ ಶರೀರವು ಸ್ವಚ್ಛಗೊಂಡ ಬಳಿಕವೂ ಹಸುವು ಕರುವನ್ನು ನೆಕ್ಕುವುದನ್ನು ಮುಂದುವರೆಸಿತು. ಅದರಿಂದಾಗಿ ಆ ಕರುವಿನ ಚರ್ಮ ಕಿತ್ತುಹೋಗುವಂತಾಯಿತು, ಆದರೂ ಸಹ ಆ ತಾಯಿ ಹಸು ಕರುವನ್ನು ನೆಕ್ಕುವುದನ್ನು ಬಿಡಲಿಲ್ಲ. ಅದನ್ನು ಗಮನಿಸಿದ ಕೆಲವು ಜನ ಬಹಳ ಕಷ್ಟಪಟ್ಟು ಆ ಹಸು ಕರುಗಳನ್ನು ಬೇರ್ಪಡಿಸಿದರು. *ನಕುಲನಿಗೂ* ಸಹ ಹಸುವಿನಂತಹ ಸಾಧು ಪ್ರಾಣಿಯ ವರ್ತನೆಯು *ಆಶ್ಚರ್ಯವನ್ನುಂಟು* ಮಾಡಿತು.
*ಸಹದೇವನು* ತನ್ನ ಬಾಣವನ್ನು ಪರ್ವತವೊಂದರ ಹತ್ತಿರದಿಂದ ಎತ್ತಿಕೊಂಡ. ಅಲ್ಲಿ ಮೇಲಿನಿಂದ ಕೆಳಗೆ ಉರುಳುತ್ತಿದ್ದ ಬೃಹತ್ ಬಂಡೆಯೊಂದನ್ನು ನೋಡಿದ. ಉರುಳುತ್ತಿದ್ದ, ಆ ಹೆಬ್ಬಂಡೆಯು ತನ್ನ ಅಡಿಗೆ ಸಿಕ್ಕ ದೊಡ್ಡ ದೊಡ್ಡ ಬಂಡೆಗಳನ್ನು ಸಹ ಪುಡಿಪುಡಿ ಮಾಡುತ್ತಾ, ಬೃಹದಾಕಾರದ ಮರಗಳನ್ನು ನೆಲಕ್ಕೆ ಒರಗುವಂತೆ ಮಾಡುತ್ತಿತ್ತು, ಅಂತಹ ಬಂಡೆಯು ಒಂದು ಚಿಕ್ಕ ಗಿಡವು ಅಡ್ಡ ಬಂದುದರಿಂದ ನಿಂತುಕೊಂಡಿತು. ಸಹಜವಾಗಿಯೇ *ಸಹದೇವನೂ* ಸಹ ಈ ಸೋಜಿಗವನ್ನು ನೋಡಿ *_ಅಚ್ಚರಿಗೊಂಡ_* .
ಎಲ್ಲ *ಪಾಂಡವರೂ* ತಾವು ಕಂಡ ಸಂಗತಿಗಳ ಕುರಿತು *ಕೃಷ್ಣನಿಗೆ* ಹೇಳಿ ಅವನಿಂದ ವಿವರಣೆಯನ್ನು ಬಯಸಿದರು. *ಕೃಷ್ಣನು* ನಸುನಕ್ಕು ಅವುಗಳನ್ನು ವಿವರಿಸತೊಡಗಿದ...
" *ಕಲಿಯುಗ* ದಲ್ಲಿ ಪುರೋಹಿತರು ಬಹಳ ಮಧುರವಾದ ಧ್ವನಿಯನ್ನು ಹೊಂದಿರುತ್ತಾರೆ ಮತ್ತು ಬಹಳ ಉನ್ನತವಾದ ಜ್ಞಾನವನ್ನೂ ಹೊಂದಿರುತ್ತಾರೆ; ಆದರೂ ಸಹ ಆ ಕೋಗಿಲೆಯು ಮೊಲವನ್ನು ಕಿತ್ತು ತಿಂದಂತೆ ಅವರು ಭಕ್ತರನ್ನು ಸುಲಿದು, ಪೀಡಿಸುತ್ತಾರೆ.
ಕಲಿಯುಗದಲ್ಲಿ ಬಡವರು ಶ್ರೀಮಂತರ ಮಧ್ಯೆಯೇ ಬದುಕುತ್ತಾರೆ ಮತ್ತು ಆ ಶ್ರೀಮಂತರು ತುಂಬಿ ತುಳುಕುವಷ್ಟು ಧನಕನಕಗಳನ್ನು ಹೊಂದಿರುತ್ತಾರೆ; ಆದರೂ ಸಹ ಅವರು ಬಡವರಿಗೆ ಬಿಡಿಗಾಸನ್ನೂ ಕೊಡುವುದಿಲ್ಲ, ಆ ತುಂಬಿ ಹರಿಯುತ್ತಿದ್ದ ನಾಲ್ಕು ಬಾವಿಗಳಂತೆ ಬರಿದಾದ ಬಾವಿಗೆ ಅವರು ನೀರುಣಿಸುವುದಿಲ್ಲ.
ಕಲಿಯುಗದಲ್ಲಿ ತಾಯ್ತಂದೆಯರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಅವರ ಮಮಕಾರವು ಮಕ್ಕಳನ್ನು ಹಾಳುಮಾಡುವುದಷ್ಟೇ ಅಲ್ಲ ಅವರ ಜೀವನವನ್ನೂ ನಾಶಮಾಡುತ್ತದೆ; ಆ ಆಕಳು ತನ್ನ ಕರುವಿನ ಮೇಲೆ ತೋರಿಸಿದ ಮಮತೆಯಂತೆ.
ಕಲಿಯುಗದಲ್ಲಿ ಪರ್ವತದ ಮೇಲಿಂದ ಬೀಳುವ ಹೆಬ್ಬಂಡೆಯಂತೆ ಜನರು ತಮ್ಮ ಸುಗುಣಗಳನ್ನು ಕಳಚಿಕೊಂಡು ಅಧಃಪತನಕ್ಕೆ ಬೀಳುತ್ತಾರೆ ಮತ್ತು ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ; ಆದರೆ ಅಂತಿಮವಾಗಿ ಭಗವನ್ನಾಮ ಸ್ಮರಣೆ ಮಾತ್ರ ಅವರನ್ನು ಆ ಪುಟ್ಟ ಗಿಡದಂತೆ ಕೆಳಗೆ ಜಾರದಂತೆ ಹಿಡಿದು ರಕ್ಷಿಸುತ್ತದೆ".
~*ಶ್ರೀಮದ್ಭಾಗವತದಿಂದ ಆಯ್ದ ಉದ್ಧವ ಗೀತೆಯ ಭಾಗ.*
🙏🙏🙏🙏🏼🙏🏼🙏🏼🙏🏼☘🍁☘🍁☘🍁☘

No comments:
Post a Comment