*ವಿವೇಚನೆಯಿಂದ ಮೊಬೈಲ್ ಬಳಸೋಣ*
ಅಸಾದ್ಯವಾದುದನ್ನು ಸಾದ್ಯವಾಗಿಸಿ ,ಸಕಲ ಕಾರ್ಯಗಳನ್ನು ಮಾಡಿ ಇನ್ನೂ ಏನಾದರೂ ಮಾಡಬೇಕು,ಎಂದು ತುಡಿಯುತ್ತಿರುವ ನಮ್ಮ ಸೇವೆಗಾಗಿ ಸಿದ್ದವಾಗಿರುವ,ಕೆಲ ಅವಾಂತರಗಳಿಗೂ ಸಾಕ್ಷಿಯಾಗಿರುವ ಸಾಧನವೇ ಮೊಬೈಲ್.
ಆರಂಭದಲ್ಲಿ ಕೇವಲ ಮಾತು ಮತ್ತು ಸಂದೇಶಗಳನ್ನು ಕಳಿಸಲು ಮೀಸಲಾಗಿದ್ದ ಮೊಬೈಲ್ ಇಂದು ಜಾಗತೀಕರಣದ ಪರಿಣಾಮ ,ಇಂಟರ್ನೆಟ್ ಕ್ರಾಂತಿಯ ಪ್ರಭಾವದಿಂದಾಗಿ ಮೊಬೈಲ್ ಹಲವಾರು ಸಾಧನಗಳನ್ನು ನುಂಗಿ ನೀರು ಕುಡಿದು ಇನ್ನೂ ಕೆಲವು ಸಾಧನಗಳನ್ನು ಆಪೋಷನ ತೆಗೆದುಕೊಳ್ಳುವ ಹಂತದಲ್ಲಿದೆ ಟೇಪ್ ರೆಕಾರ್ಡರ್, ಅಲಾರಾಂ,ಕ್ಯಾಲ್ಕುಲರೆಟರ್, ಸ್ಟಾಪ್ವಾಚ್ ,ಗಡಿಯಾರ, ಕಂಪ್ಯೂಟರ್, ಟಾರ್ಚ್, ಬ್ಯಾಕಿಂಗ್, ಟೈಪಿಂಗ್ ಮುಂತಾದವುಗಳ ಕಾರ್ಯವನ್ನು ಮಾಡುತ್ತಾ ಸಾಧನ ಒಂದು ಕಾರ್ಯಗಳು ನೂರಾರು ಎಂಬಂತೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ
ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಗಳಾದ ವಾಟ್ಸಪ್ ,ಪೇಸ್ಬುಕ್ ಮುಂತಾದವುಗಳ ಮೂಲಕ ಸಾಮಾನ್ಯ ಜ್ಞಾನ, ಮನರಂಜನಾ, ಸಂಗೀತ, ವ್ಯವಹಾರ, ಸಾಹಿತ್ಯದ ಇತ್ಯಾದಿ ಗುಂಪುಗಳ ಮೂಲಕ ಸೃಜನಶೀಲತೆ ಬೆಳೆಯಲು ಮತ್ತು ವ್ಯವಹಾರ ವೃದ್ದಿಸಲು ಮೊಬೈಲ್ ಸಹಕಾರಿಯಾಗಿದೆ.
.ಇಂತಿಪ್ಪ ಈ ಮೊಬೈಲ್ ಕೆಲವು ಅನಾನುಕೂಲ ಅವಘಡಗಳಿಗೂ ಕಾತಣವಾಗಿರುವುದು ಆತಂಕಕಾರಿಯಾದುದು.
ಕ್ಷುಲ್ಲಕ ಕಾರಣಗಳಿಗಾಗಿ ವಾಟ್ಸಪ್ ಮತ್ತು ಇತರೆ ಸಂದೇಶಗಳನ್ನು ನೋಡಿ ಅನುಮಾನಿಸಿ ಸಂಸಾರದಲ್ಲಿ ಜಗಳಗಳಾಗಿ ವಿಚ್ಚೇದನಗಳಾಗಿರುವುದು ಕಂಡಿದ್ದೇವೆ.ಕೆಲ ಯುವಕರು ಸಮಯ ಕಳೆವ ಸಾಧನವಾಗಿ ಮೊಬೈಲ್ ಬಳಕೆ ಮಾಡುತ್ತಿರುವುದು ದುರದೃಷ್ಟಕರ.
ಮೊಬೈಲ್ ಆಧುನಿಕ ತಂತ್ರಜ್ಞಾನದ ಒಂದು ಉತ್ತಮ ಕೊಡುಗೆ ಇದನ್ನು ವಿವೇಚನೆಯಿಂದ ಬಳಸಿದರೆ ಮನುಕುಲಕ್ಕೆ ಕೆಡುಕಿಗಿಂತ ಒಳಿತೇ ಆಗುವುದು .
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
9900925529
No comments:
Post a Comment