31 July 2022

ಸಿಂಹ ಧ್ವನಿ ೩೧/೭/೨೨


 

ಮೀರಾ ಚಾನು

 ಕಾಮನ್ವೆಲ್ತ್ ಗೇಮ್ಸ್ ನಲ್ಲಿ

ಭಾರತಕ್ಕೆ ಮೊದಲ ಸ್ವರ್ಣ ಪದಕ

ತಂದುಕೊಟ್ಟರು  ಮೀರಾ ಚಾನು |

ಸಂತಸದಿಂದ ಅಭಿನಂದಿಸಿ

ಕರತಾಡನ ಮಾಡುತ್ತಿಹೆವು

ನಮ್ಮವರು ಮತ್ತು ನಾನು||



#ಸಿಹಿಜೀವಿ

ಕಾಮನ್ವೆಲ್ತ್

 


#ಕಾಮನ್‌ವೆಲ್ತ್_ಕ್ರೀಡಾಕೂಟ 


ಮೊದಲ ದಿನವೇ ಭಾರತ 

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ

ಕಂಚು ತಲಾ ಒಂದೊಂದು  

ಕಂಚು , ಬೆಳ್ಳಿ, ಚಿನ್ನ |

ಭಾರತೀಯರೆಲ್ಲರೂ 

ಮನತುಂಬಾ ಹಾರೈಸುತ್ತಿದ್ದೇವೆ

ಪದಕ ಪಟ್ಟಿಯಲ್ಲಿ ಪಡೆಯಲಿ

ಮೊದಲ ಸ್ಥಾನವನ್ನ ||


#ಸಿಹಿಜೀವಿ

30 July 2022

ಅವನಿ ಬೇಸರ ಪಡಲಿಲ್ಲ....

 



ಸಣ್ಣಕಥಾ_ಸಂಭ್ರಮ 


ಅವನಿ ಬೇಸರ ಪಡಲಿಲ್ಲ...


ಅವನು ಹುಟ್ಟಿದಾಗ ಅಮ್ಮ ತಾಯ್ತನ ಅನುಭವಿಸಿ ಸಂಭ್ರಮಿಸಿದಳು .ಅವನಿ ಭಾರವಾಯಿತೆಂದು ಬೇಸರಪಡಲಿಲ್ಲ.ಬೆಳೆಯುತ್ತಾ ಅವಗುಣಗಳ ದಾಸನಾದ ಅವನು ದುಶ್ಚಟಕ್ಕೆ ಬಲಿಯಾಗಿ ಅಕಾಲ ಮೃತ್ಯುಗೀಡಾದ ತಾಯಿಕರುಳು ಕಂಬನಿ ಮಿಡಿಯಿತು.ಅವನಿ ಆಗಲೂ ಬೇಸರಪಡಲಿಲ್ಲ...ಏಕೆಂದರೆ ಅವನಿ ಬರೀ ಅವನಿಗಾಗಿ ಇಲ್ಲ......


#ಸಿಹಿಜೀವಿ

28 July 2022

ಸಾತ್ವಿಕ ಸಂಸ್ಕಾರ

 #ಸಾತ್ವಿಕ_ಸಂಸ್ಕಾರ 


ಸಮಾಜದಲ್ಲಿದಿನವು 

ಹೆಚ್ಚುತ್ತಿರುವ ದುಷ್ಟಕೂಟಗಳ

ಮಾಡಬೇಕಿದೆ ಸಂಹಾರ |

ಬೆಳಸಬೇಕಿದೆ ಸರ್ವರಲೂ

ಸಾತ್ವಿಕ ಸಂಸ್ಕಾರ ||


#ಸಿಹಿಜೀವಿ

24 July 2022

ಸಾಕು ಮಗ...

 



ಸಾಕು ಮಗ 


ಮದುವೆಯಾಗಿ ವರ್ಷಗಳೇ 

ಕಳೆದರೂ ದಂಪತಿಗೆ ಮಕ್ಕಳಾಗಲಿಲ್ಲ

ದತ್ತು ಪಡೆದ ನಂತರ ಮನೆಗೆ ಬಂದ ಸಾಕು ಮಗ |

ಮಗನಿಗೆ ಮಗುವಾದಾಗ ವಂಶೋದ್ಧಾರಕ ಬಂದನೆಂದು ಬೀಗಿದರು. ವರ್ಷಕ್ಕೊಂದರಂತೆ  ಮೂರ್ನಾಲ್ಕು ಮಕ್ಕಳಾದಾಗ  ಮಗನನ್ನು ಪ್ರೀತಿಯಿಂದ ಗದರಿದರು "ಸಾಕುಮಗ"||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ಇಂದಿನ ಸಿನಿಮಾಗಳು

 ಇಂದಿನ ಸಿನಿಮಾಗಳು


ವರ್ಷಗಟ್ಟಲೇ ಓಡುತ್ತಿದ್ದವು 

ಉತ್ತಮ ಸಂದೇಶವುಳ್ಳ, 

ಕುಟುಂಬ ಸಮೇತ

ನೋಡುತ್ತಿದ್ದ  ಅಂದಿನಸಿನಿಮಾಗಳು |

ಬರೀ ಮಚ್ಚು ಕೊಚ್ಚು ಎಂದು ಹಿಂಸೆ 

ಅಶ್ಲೀಲತೆಯನ್ನುಬಿಂಬಿಸುತ್ತಾ 

ಚಿತ್ರಮಂದಿರಕ್ಕೆ ಬಂದ ವೇಗದಲ್ಲೇ ಓಡುತ್ತಿವೆ ಇಂದಿನ ಸಿನಿಮಾಗಳು ||


#ಸಿಹಿಜೀವಿ

23 July 2022

ಸ್ವರಾಜ್ಯಕ್ಕೆ ಮುಕ್ಕಾಲ್ನೂರು ....

 

*#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು @75*



ಪರಕೀಯರ ಸಂಕೋಲೆಯಿಂದ ಬಿಡಿಸಿಕೊಳ್ಳಲು

ಬಲಿದಾನ ಮಾಡಿದ ಮಹನೀಯರು ನೂರಾರು | 

ಅವರೆಲ್ಲರನ್ನೂ ಸ್ಮರಿಸುತ್ತಾ ನಮ್ಮರಾಷ್ಟ್ರವನ್ನು ಇನ್ನೂ ಸದೃಡಗೊಳಿಸುವ ಸಂಕಲ್ಪದಿಂದ 

ಆಚರಿಸೋಣ ಸ್ವರಾಜ್ಯದ ಮುಕ್ಕಾಲ್ನೂರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

ನಾವುಗಳೇ ಹಾಗೆ....


 


ನಾವುಗಳೇ ಹಾಗೆ....


ನಾವುಗಳೇ ಹಾಗೇ 

ಗೊತ್ತಾಗುವುದೇ ಇಲ್ಲ 

ನಮಗೇನು ಇಷ್ಟ

ಅರ್ಥ ಮಾಡಿಕೊಳ್ಳಲು 

ನಮಗೇ ಬಲು ಕಷ್ಟ  


ವಯಸ್ಸಾದ ಹಿರಿಯರಿಗೆ 

ಅನ್ನ ನೀಡಲು ಯೋಚಿಸುವರು ಈ ಜನ 

ಅವರು ಸತ್ತಾಗ ತಿಥಿಯಂದು ಎಲ್ಲರನೂ ಕರೆದು ಹಾಕುವರು ಭರ್ಜರಿ ಬೋಜನ .


ಬದುಕಿದ್ದಾಗ ಕೆಲವರಿಗೆ ತೊಡಲು

ಸಿಗುವುದಿಲ್ಲ ಒಳ್ಳೆಯ ಬಟ್ಟೆ 

ಹೆಣಕ್ಕೆ ಸಿಂಗಾರ ಮಾಡಲು 

ತಂದೇ ತರುವರು ಹೊಸ ಬಟ್ಟೆ 


ನಮಗೆ ಆರೋಗ್ಯ ಕೆಟ್ಟಾಗ 

ಯಾರೂ ಬಂದು ಮೂಸುವುದಿಲ್ಲ

ಅಂತಿಮ ಯಾತ್ರೆಯಲ್ಲಿ ಶವಕ್ಕೆ

ಹಾಕಿದ  ಸುಗಂಧ ಮಾಸುವುದಿಲ್ಲ .


ಬದುಕಿದ್ದಾಗ ಕಷ್ಟದಲ್ಲಿರುವವರ ಕಂಡು ಹಂಗಿಸಿ ನಗುವರು 

ಅದೇ ವ್ಯಕ್ತಿ ಸತ್ತಾಗ ತೋರ್ಪಡಿಕೆಗೆ   ಬಿಕ್ಕಿ ಬಿಕ್ಕಿ ಅಳುವರು .


ಬದುಕಿದ್ದಾಗ ಕನಿಷ್ಟ ಗೌರವ ಕೊಡದೆ 

ಮಾಡುವರು ತಿರಸ್ಕಾರ 

ಸತ್ತಾಗ ಭಯ ಭಕ್ತಿಯಿಂದ ಮಾಡುವರು ನಮಸ್ಕಾರ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529 







21 July 2022

ಶ್ವಾನ...



ಶ್ವಾನ..

ತಾತ್ಸರ ಬೇಡ
ಇದು ಕೇವಲ ನಾವಾಕುವ
ಅನ್ನತಿಂದು ಮನೆ
ಕಾಯುವ ಶ್ವಾನ |
ಕೆಲವರಿಗೆ ಮಾತ್ರ
ಅರ್ಥವಾಗಿದೆ ನಾಯಿ
ಕೆಳವರ್ಗದ ಪ್ರಾಣಿಯಲ್ಲ
ವಿಧೇಯತೆಗೊಂದು ವ್ಯಾಖ್ಯಾನ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


 

19 July 2022

ನಿನ್ನ ಇರವ ನಂಬಿ...


 ನಿನ್ನ ಇರವ ನಂಬಿ...


ಗುಡಿ, ಮಸೀದಿ, ಚರ್ಚಿಗೆ ಬಂದು 

ಕಷ್ಟ ಕಾಲದಿ ಕರೆಯುತಲೆ ಇದ್ದೆ|

ನೀ ಬರಲೇ ಇಲ್ಲ ನಾ ಕರೆದಾಗ

ಕಣ್ಣ ತೆರೆದು ನೋಡಿದಾಗ 

ನೀ ಅಲ್ಲಿರಲಿಲ್ಲ ನನ್ನೊಳಗಿದ್ದೆ ||


ಸಿಹಿಜೀವಿ

18 July 2022

*ತೊಂಭತ್ತು ...ತೊಂಭತ್ತು...

 



*ತೊಂಭತ್ತು... ತೊಂಬತ್ತು*


ಸಂಶೋಧನೆಯೊಂದು 

ಹೇಳಿದೆ ಮದ್ಯ ಸೇವಿಸಿದರೆ

ತಪ್ಪಿಲ್ಲವಂತೆ ದಾಟಿದರೆ      ನಮ್ಮ ವಯಸ್ಸು ನಲವತ್ತು|

ಇಂದಿನಿಂದಲೇ ಬಿಟ್ಟುಕೊಂಡು ಬಿಡೋಣ 

ಆಗಾಗ ತೊಂಭತ್ತು ,ತೊಂಭತ್ತು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮುಂಗಾರು ಅಧಿವೇಶನ ...

 


#ಮುಂಗಾರುಅಧಿವೇಶನ 


ಶುರುವಾಗುತ್ತಿದೆ ಈ ಬಾರಿಯ 

ಮುಂಗಾರಿನಸಂಸತ್  ಅಧಿವೇಶನ |

ಜನ ಹಿತ ಬಯಸುವ ಚರ್ಚೆಗಳಾಗಲಿ 

ಜನಪ್ರತಿನಿಧಿಗಳು ಪರಸ್ಪರ ಜಗಳವಾಡಿ ಸದನದಲ್ಲಿ ಮಾಡದಿರಲಿ

ಕೈ ಕೈ ಮಿಲಾಯಿಸಿ  ಕದನ ||


@ಸಿಹಿಜೀವಿ

ನನ್ನೊಳಗಿನ ನೀನು.


 



#ನನ್ನೊಳಗಿರುವ_ನೀನು 


ಎಷ್ಟು ಪ್ರಯತ್ನ

ಪಟ್ಟರೂ ಆಗುತ್ತಿಲ್ಲ 

ಮರೆಯಲು ನಿನ್ನನ್ನು ನಾನು |

ಬಿಡದಂತೆ ಸದಾ

ಕಾಡುತ್ತಲೇ ಇರುವೆ 

ನನ್ನೊಳಗಿನ ನೀನು ||


@ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

07 July 2022

ಪ್ರಕೃತಿಯ ಶಿಶು


 


#ಪ್ರಕೃತಿಯ_ಶಿಶು


ಮರೆತೇ ಬಿಡುವೆನು 

ನನ್ನನ್ನೇ ನಾನು

ನೋಡುತಲಿದ್ದರೆ

ಈ ಇಳೆ, ಆ ಬಾನು|| 

ಹೇಳಿಕೊಳ್ಳಲು ನನಗೆ

ಖಂಡಿತ ಹೆಮ್ಮೆ ಏಕೆಂದರೆ

ಪ್ರಕೃತಿಯ ಶಿಶು ನಾನು


#ಸಿಹಿಜೀವಿ

ಬೆಳಕು


 


#ಬೆಳಕು 

ಕತ್ತಲಲ್ಲಿ ತೊಳಲಿ

ಬಳಲಿದುದು ಸಾಕು||

ಮುನ್ನಡೆ ,ಪ್ರಯತ್ನಿಸು

ಮುಂದಿದೆ ಬೆಳಕು ||


#ಸಿಹಿಜೀವಿ



06 July 2022

ಕಜ್ಜಾಯ .ಹನಿ

 

ಬಾಲ್ಯದಲ್ಲಿ ಗೆಳೆಯರ 

ಕೂಡಿ ಮನೆಯಿಂದ

ಆಡಲು ಹೊರಟರೆ

ಕಳೆದದ್ದೇ ಗೋತ್ತಾಗುತ್ತಿರಲಿಲ್ಲ

ಸಮಯ|

ಸಂಜೆ ಮನೆಗೆ ಹೋದಾಗ

ಅಮ್ಮನಿಂದ ಸಿಗುತ್ತಿತ್ತು

ಬಿಸಿ ಬಿಸಿ ಕಜ್ಜಾಯ||


ಸಿಹಿಜೀವಿ

05 July 2022

ಸಿಹಿಜೀವಿಯ ಹನಿ

 


*ಸಿಹಿಜೀವಿಯ ಹನಿ*


ಮದುವೆಯಾದ ಪುರುಷ

ಬೀಗುವನು ಎಲ್ಲರ ಮುಂದೆ

ನನಗೆ ಸಿಕ್ಕಿದೆ ಸಂಸಾರಸ್ತ 

ಎಂಬ ಮಹಾಗಾದಿ|

ಕ್ರಮೇಣ ಅರಿವಾಗುವಾಗುವುದು

ಅದು ಅರಸನ ಗಾದಿಯಲ್ಲ

ಅಗೋಚರ ಕಾಡಿನ ಹಾದಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ವಿಶ್ವವಾಣಿ .೩.೭/೨೨


 

01 July 2022

ನುಡಿತೋರಣ

 

*ನುಡಿತೋರಣ*


ಊರು ಬೇರೆ ಕೆಲಸ ಬೇರೆ

ಸಂಬಂಧಿಗಳಂತೂ ಅಲ್ಲವೇ ಅಲ್ಲ 

ಆದರೂ ಹೇಳುತ್ತಿದೆ

ನಾವೆಲ್ಲರೂ ಒಂದೇ

ಎಂದು ನಮ್ಮ ಕಣ ಕಣ|

ಹನಿ,ಕವನ,ಕಥೆ,ಲೇಖನ

ಮನದ ಭಾವನೆಗಳ ಹಂಚಿ

ಕಟ್ಟಿ ಬಿಡೋಣ ನಮ್ಮ

ಕನ್ನಡಾಂಬೆಗೆ ನುಡಿತೋರಣ||


*ಸಿಹಿಜೀವಿ*

ತುಮಕೂರು

ಮೂರು ತಲೆಮಾರು.


 

ಮೂರು ತಲೆಮಾರು.
ವಿಮರ್ಶೆ

ತ ಸು ಶಾಮರಾಯರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಮಾಡಿದ ಪ್ರಕಟಣೆಯಾದ
"ಮೂರು ತಲೆಮಾರು" ಕನ್ನಡದ ಮೊದಲ ಪ್ರಾಧ್ಯಾಪಕ ಶ್ರೀ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕುರಿತಾಗಿ ಅವರ ಸಹೋದರ ಶ್ರೀ ತ.ಸು.ಶ್ಯಾಮರಾಯರು ಬರೆದ ಜೀವನ ಚರಿತ್ರೆ .ಇದು ತ.ಸು.ಶಾಮರಾಯರ ಆತ್ಮ ಚರಿತ್ರೆ ಎಂದರೂ ತಪ್ಪಿಲ್ಲ.
  ಈ "ಮೂರು ತಲೆಮಾರು"ವಿನಲ್ಲಿ ಶ್ರೀ ಶಾಮರಾಯರು ಶ್ರೀ ತ.ಸು.ವೆಂಕಣ್ಣಯ್ಯನವರ ಬಗೆಗೆ ಸ್ವತಃ ಕಂಡ, ತಾಯಿ ಮತ್ತು ಇತರ ಸೋದರರಿಂದ ಕೇಳಿದ ಮತ್ತು ಅನುಭವಿಸಿದ ವಿವರಗಳನ್ನು ಮೂರು ವಿಭಾಗಗಳಲ್ಲಿ ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ರಾಷ್ಟ್ರಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ರವರು ಬರೆದಿರುವುದು ವಿಶೇಷ. 
ಜಿ ಎಸ್ ಎಸ್ ರವರ ಮಾತಿನಲ್ಲೇ ಹೇಳುವುದಾದರೆ ಈ ಕೃತಿ, ಪುರಾಣ, ಚರಿತ್ರೆ ಹಾಗೂ ವಾಸ್ತವಗಳನ್ನು ಒಂದು ಸೃಜನಶೀಲ ಕೇಂದ್ರಬಿಂದುವಿಗೆ ತಂದುಕೊಂಡು ಸಾಕ್ಷಿಪ್ರಜ್ಞೆಯಲ್ಲಿ ನಿರೂಪಿಸಿದ ಅನನ್ಯ ಕಥನವಾಗಿದೆ. ನಿಜವಾಗಿ ನೋಡಿದರೆ ಪುರಾಣ ಚರಿತ್ರೆ ಮತ್ತು ವಾಸ್ತವ ಎಂದು ನಾವು ಗುರುತಿಸುವ ಈ ಮೂರು ನೆಲೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಈ ಮೂರೂ ಅಸ್ತಿತ್ವದ ನಿರಂತರತೆ ಯಲ್ಲಿ ಉದ್ಭದ್ಧವಾಗುವ ಘಟನಾವಳಿಗಳನ್ನು ಕುರಿತು ಕಾಲ - ದೇಶ ಬದ್ಧವಾದ ಮನಸ್ಸು ತನ್ನ ಸಂಸ್ಕಾರಕ್ಕೆ ಅನುಸಾರವಾಗಿ ಅದನ್ನು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವ ಕ್ರಮಕ್ಕೆ ನಾವು ಕೊಟ್ಟುಕೊಳ್ಳುವ ಹೆಸರುಗಳಷ್ಟೇ.
ಲೇಖಕರ ಬಿನ್ನಹದಲ್ಲಿ ಶಾಮರಾಯರು ಕಳೆದ ಕೆಲವು ಶತಮಾನಗಳಿಂದ ವ್ಯತ್ಯಾಸಗೊಳ್ಳುತ್ತಾ ಹೋಗಿರುವ ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನ ಮೌಲ್ಯಗಳ ಒಂದು ಕಿರುನೋಟವನ್ನು ಇಲ್ಲಿ ಕಾಣಬಹುದು. ಈ ದೃಷ್ಟಿಯಿಂದ ಇದು ಸರ್ವಜನಾದರಣೀಯವಾಗುವುದೆಂದು ಆಶಯ ವ್ಯಕ್ತಪಡಿಸಿದ್ದರು .ಪುಸ್ತಕ ಓದಿದ ಮೇಲೆ ನಿಜಕ್ಕೂ ಓದುಗರಿಗೆ ಮೂರು ತಲೆಮಾರಿನ ವೈವಿಧ್ಯಮಯ ಅನುಭವಗಳನ್ನು ಓದಿದ ಸಂತಸ ಖಂಡಿತವಾಗಿಯೂ ದೊರೆಯುತ್ತವೆ.
ಈ ಮೊದಲೇ ಹೇಳಿದಂತೆ ಈ ಪುಸ್ತಕದ ಮೂರು ವಿಭಾಗಗಳಲ್ಲಿ
" ಕೇಳಿದ್ದು" ವಿಭಾಗದಲ್ಲಿ ಶ್ರೀ ವೆಂಕಣ್ಣಯ್ಯನವರ ಪೂರ್ವೀಕರ ವಿಚಾರಗಳಿಂದ ಹಿಡಿದು ಅವರ ಅಂತಿಮ ಯಾತ್ರೆ ವಿವರಗಳು ದಾಖಲಾಗಿವೆ.
   "ಕಂಡದ್ದು" ವಿಭಾಗದಲ್ಲಿ   ತಳುಕಿನಲ್ಲಿನ ವ್ಯಕ್ತಿಗಳು, ಸುಬ್ಬಣ್ಣ ನವರ  ಬಾಲ್ಯ, ವಿವಾಹ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸುಬ್ಬಣ್ಣ ನವರ ಅಂತಿಮ ದಿನಗಳ ಪ್ರಸ್ತಾಪಗಳಿವೆ.
ಕೊನೆಯ "ಅನುಭವಿಸಿದುದು" ಭಾಗದಲ್ಲಿ ಶ್ರೀ ವೆಂಕಣ್ಣಯ್ಯನವರ ಬಾಲ್ಯ, ಶಿಕ್ಷಣ, ವೃತ್ತಿ, ಸಂಸಾರ  ಅಂತ್ಯದ ಮಾಹಿತಿಗಳಿವೆ.
ಮೊದಲ ಭಾಗ "ಕೇಳಿದ್ದು". ಅದರಲ್ಲಿನ ಮುಖ್ಯ ಏಳು  ಅಧ್ಯಾಯಗಳಿವೆ .
ಬಂದನಾ ಹುಲಿರಾಯನು,ಧರ್ಮೋ ರಕ್ಷತಿ ರಕ್ಷಿತಃ,ಹಾಳೂರಿನ ಅನುಭವ
,ಸತ್ವಪರೀಕ್ಷೆ,ವೆಂಕಣ್ಣಯ್ಯನವರ ಪೂರ್ವಿಕರು , 'ದೇವರಲೀಲೆ' ವೆಂಕಪ್ಪನವರು ವೈಷ್ಣವರಾದುದು ಎಂಬ ಶೀರ್ಷಿಕೆ ಅಡಿಯಲ್ಲಿ ಬರುವ ಪ್ರತಿಯೊಂದು ಸಾಲು ನಮಗೆ ದಾರಿ ದೀಪ ಎಂದರೆ ತಪ್ಪಾಗಲಾರದು. ಬಂದನಾ ಹುಲಿರಾಯ ಎಂಬ ಭಾಗದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ್ದು ಹಾಗೂ ಸರಳವಾದ ಮತ್ತು ಧಾರ್ಮಿಕ ಸತ್ ಚಿಂತನೆಗಳ ಫಲವಾಗಿ  ಮತ್ತೆ ಉನ್ನತವಾದ ಸ್ಥಾನ ಪಡೆಯುವ ಮಾರ್ಗ ಇಂದಿನ ಸಮಾಜಕ್ಕೆ ದಾರಿದೀವಿಗೆ ಎಂಬುದು ನನ್ನ ಅನಿಸಿಕೆ. 
ಹಿರಿಯೂರಿನಿಂದ ಚಳ್ಳಕೆರೆ ಮಾರ್ಗದಲ್ಲಿ ನಾನು ಪ್ರಯಾಣ ಮಾಡುವಾಗ ಗರಣಿ ಎಂಬ ಊರಿನ ಬಳಿ ಬಂದಾಗ ವೆಂಕಣ್ಣಯ್ಯನವರ ಹಾಳೂರಿನ ಪ್ರಸಂಗ ನೆನಪಾಗುತ್ತದೆ ಮತ್ತು ಆ ಕಾಲದಲ್ಲಿ ಅತೀಂದ್ರಿಯ ಶಕ್ತಿಗಳನ್ನು ಜನ ಹೇಗೆ ನಂಬಿದ್ದರು ಎಂಬುದನ್ನು ವಿವರಿಸುವಾಗ ನಂಬಲು ಕಷ್ಟವಾದರೂ ಓದುತ್ತಾ ರೋಚಕತೆಯ ಅಂಶಗಳು ಮನಸೆಳೆಯುತ್ತವೆ.
"ಕಂಡದ್ದು" ಭಾಗದಲ್ಲಿ ಇಪ್ಪತ್ತೊಂದು ಅಧ್ಯಾಯಗಳಿದ್ದು
ತಳುಕಿನಲ್ಲಿ ನೆಲೆಸಿದರು.
ವೆಂಕಣ್ಣಯ್ಯನವರು ತೀರಿಕೊಂಡ ಮೇಲೆ ಅವರ ಪತ್ನಿ ಹನುಮಕ್ಕ ಮೂವರು ಮಕ್ಕಳೊಡನೆ ತಳುಕು ಗ್ರಾಮಕ್ಕೆ ಬಂದು ನೆಲೆಸಿದ ಬಗ್ಗೆ, ಊರ ಪ್ರಮುಖರಿಗೆ ವೆಂಕಣ್ಣಯ್ಯನವರಲ್ಲಿ ಅಪಾರ ಅಭಿಮಾನ ಇದ್ದುದರಿಂದ ಅವರಿಗೆ ಎಲ್ಲ ರೀತಿಯ ನೆರವನ್ನು ಮಾಡಿಕೊಟ್ಟ ರೀತಿ, ಚಳ್ಳಕೆರೆ ತಾಲ್ಲೂಕು ಕಛೇರಿ ಗುಮಾಸ್ತ ಶ್ಯಾಮಣ್ಣ ವೆಂಕಣ್ಣಯ್ಯನವರ ಮಗ ಸುಬ್ಬಣ್ಣನಿಗೆ ಲೆಕ್ಕಪತ್ರ ಇಡುವ ಕಲೆ ಕಲಿಸಿಕೊಟ್ಟ ವಿಚಾರಗಳು ಪ್ರಸ್ತಾಪವಾಗಿವೆ.
ಸುಬ್ಬಣ್ಣನ ವಿವಾಹ ಪ್ರಸಂಗ ,
ನರಸಮ್ಮ ರವರ ಬಗ್ಗೆ ಪುತ್ರೋತ್ಸವದ ಬಗ್ಗೆ,ಸ್ಟ್ಯಾಂಪ್ವೆಂಡರ್ ಸುಬ್ಬಣ್ಣ,ಕಂಟ್ರಾಕ್ಟದಾರ ಭೀಮರಾಯ,ಅಶ್ವರತ್ನರಂಗ
, ಗುಗ್ಗರಿ ಕಂಚವ್ವ - ತೊರೆಯಪ್ಪ,ಸಣ್ಣ ಸುಬ್ಬಣ್ಣನ ಮದುವೆ,ಅಡಿಕೆಯ ಕಳವು ,ದಾಯಾದಿ ಮಾತ್ಸರ್ಯ, ಸೇಂದಿ ಕಂಟ್ರಾಕ್ಟರ್ ಹಾಗೂ ಅಚ್ಚಮ್ಮ ಎಂಬ ಅಧ್ಯಾಯಗಳು ಅಂದಿನ ಜನಜೀವನ ಮತ್ತು ಕುಟುಂಬ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ.
ಕೊನೆಯ ಭಾಗ "ಅನುಭವಿಸಿದುದು" ನಲ್ಲಿ ಮೂರನೆಯ ತಲೆಮಾರಿನ ವೆಂಕಣ್ಣಯ್ಯನವರ   ಬಾಲ್ಯ ಮತ್ತು ವಿದ್ಯಾಭ್ಯಾಸ, ಕಾಲೇಜು ವಿದ್ಯಾಭ್ಯಾಸ ಧಾರವಾಡದಲ್ಲಿ ಅಧ್ಯಾಪನ ಕೈಗೊಂಡ ಬಗ್ಗೆ,ಬೆಂಗಳೂರಿನ ಜೀವನದ ಕೆಲ ಪ್ರಮುಖ ಘಟನೆಗಳ ಉಲ್ಲೇಖವಿದೆ.
ಮೈಸೂರುಜೀವನ,ವೆಂಕಣ್ಣಯ್ಯನವರ ವ್ಯಕ್ತಿತ್ವ,ಸಾಹಿತ್ಯ ಸೃಷ್ಟಿ
ಹಾಗೂ ಕೊನೆಯ ದಿನಗಳ ಬಗ್ಗೆ ತ ಶು ಶಾಮರಾಯ ರವರು ತಮ್ಮ ನೆನಪಿನ ಭಂಡಾರದಿಂದ ಉತ್ತಮ ಮಾಹಿತಿಯನ್ನು  ಪುಸ್ತಕ ರೂಪದಲ್ಲಿ ನೀಡಿರುವರು .ಮೂರು ತಲೆಮಾರುಗಳ ಮಹಾನ್ ಚೇತನಗಳ ಬಗ್ಗೆ ತಿಳಿಯಲು ಎಲ್ಲರೂ ಈ ಪುಸ್ತಕ ಓದಲೇಬೇಕು.

ಪುಸ್ತಕದ ಹೆಸರು: ಮೂರು ತಲೆಮಾರು
ಲೇಖಕರು: ತ.ಸು.ಶಾಮರಾಯ
ಪ್ರಕಾಶನ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಬೆಂಗಳೂರು
ಬೆಲೆ: 200ರೂ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು