ಲೇಖನ
*ಮನಸ್ಸಿದ್ದಲ್ಲಿ ಮಾರ್ಗ*
ಕಾಮ ಕ್ರೋಧ ಮೋಹ ಮಧ ಮತ್ಸರ ಮುಂತಾದವು ಪ್ರತಿಯೊಬ್ಬ ಮಾನವನಲ್ಲಿ ಇರುವ ಗುಣಗಳು .ಈ ಗುಣಗಳು ನಮ್ಮ ವ್ಯಕ್ತಿತ್ವ, ಸಂಸ್ಕೃತಿ ಸಂಸ್ಕಾರ ಗಳ ಆಧಾರಧ ಮೇಲೆ ನಿಯಮಿತವಾಗಿ ಎಷ್ಟು ಬೇಕೋ ಯಾವಾಗ ಬೇಕೋ ಆಗ ಬಳಸಿದರೆ ಅಂತಹ ತೊಂದರೆಯಾಗುವುದಿಲ್ಲ .ಇವುಗಳು ಅತಿಯಾದರೆ ಅದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುವುದು
ಪಾಶ್ಚಾತ್ಯೀಕರಣ ,ಆಧುನೀಕರಣ ಜಾಗತೀಕರಣದ ಪರಿಣಾಮವಾಗಿ ಇತ್ತೀಚಿಗೆ ದೇಶದ ಬಹುತೇಕ ಕಡೆ ಸ್ವೇಚ್ಚಾಚಾರ,ಅತ್ಯಾಚಾರ ಅನಾಚಾರಗಳು ಎಲ್ಲೆಡೆ ವರದಿಯಾಗುತ್ತಲಿವೆ .
ಹಸುಳೆಗಳು.ಮಹಿಳೆಯರು. ವೃದ್ದೆಯರೆಂಬ ಬೇಧವಿಲ್ಲದೆ ಅತ್ಯಾಚಾರ ಮಾಡಿ ಕೊಲೆ ಮಾಡುವುದು ನೋಡಿ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ .
ಈ ಪಿಡುಗು ತಡೆಯಲು ಸಾದ್ಯವಿಲ್ಲವೆ
ಮನಸ್ಸಿದ್ದರೆ ಮಾರ್ಗ ಎಂಬಂತೆ ಈ ಪಿಡುಗು ತಡೆಯಲು ಆಳುವ ಸರ್ಕಾರ, ಸಮಾಜ ಮತ್ತು ವ್ಯಕ್ತಿಗಳೆಲ್ಲ ಸಮೂಹಿಕ ಪ್ರಯತ್ನ ಮಾಡಬೇಕಾಗಿದೆ .
ನಮ್ಮನ್ನಾಳುವ ಸರ್ಕಾರಗಳು ಇಂತಹ ಅಪರಾಧಗಳಿಗೆ ಕಠಿಣಾತಿಕಠಿಣವಾದ ಕಾನೂನು ರೂಪಿಸಿ ಸಮರ್ಪಕವಾಗಿ ಜಾರಿಗೆ ತರಬೇಕಿದೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ನೆ ಸ್ವಾಗತಾರ್ಹ ನಡೆಯಾಗಿದೆ .
ಬಹುತೇಕ ಅತ್ಯಾಚಾರಕ್ಕೆ ಜನರಲ್ಲಿ ನೈತಿಕತೆ ಕುಸಿದಿರುವುದು ಮುಖ್ಯ ಕಾರಣವಾಗಿದೆ ಇದನ್ನೆ ಮನಗಂಡು ಜನರಲ್ಲಿ ನೈತಿಕತೆ ಬೆಳೆಸಲು ಪ್ರಯತ್ನಗಳಾಗಬೇಕು.
ಮಾಧ್ಯಮಗಳಲ್ಲಿ ಇತ್ತೀಚೆಗೆ ಕ್ರೌರ್ಯ. ಲೈಂಗಿಕತೆ ವಿಜೃಂಭಣೆಮಾಡುವ ಸಿನಿಮಾ ಮತ್ತು ಧಾರಾವಾಹಿ ಗಳು ಅವ್ಯಾಹತವಾಗಿ ಪ್ರಸಾರವಾಗುವ ಪರಣಾಮ ಜನರ ಮನದಲಿ ಕ್ರೌರ್ಯ ಚಿಗುರಿ ಇಂತಹ ಅನರ್ಥಗಳು ಹೆಚ್ಚಾಗುತ್ತದೆ ಇದಕ್ಕೆ ಸೂಕ್ತ ಕಡಿವಾಣ ಹಾಕುವ ಪ್ರಾಧಿಕಾರ ರಚನೆ ಆಗಬೇಕಿದೆ .
ನಮ್ಮ ಯುವತಿಯರು, ಮಹಿಳೆಯರು ಇಂತಹ ಸಂದರ್ಭಗಳಲ್ಲಿ ಸ್ವಯಂ ಶಿಸ್ತು ರೂಢಿಸಿಕೊಂಡು ಪ್ರಪಂಚದ ಎಲ್ಲಾ ಹೆಣ್ಣು ಮಕ್ಕಳು ನಮ್ಮ ಸಹೋದರಿಯರು ಎಂಬ ಬಾವ ಮೂಡದಿದ್ದರೆ ಯಾವ ಪ್ರಯೋಜನ ಇಲ್ಲ .
ಒಟ್ಟಿನಲ್ಲಿ ಹೇಳುವುದಾದರೆ ಅತ್ಯಾಚಾರದಂತಹ ಪಿಡುಗು ತೊಡೆದು ಹಾಕಲು ಸರ್ಕಾರದ ಬಿಗಿಯಾದ ಕಾನೂನಿನ ಜೊತೆಗೆ ಸಮಾಜದ ಸೂಕ್ತ ಬೆಂಬಲದಿಂದ ವೈಯಕ್ತಿಕ ಜಾಗೃತಿ ಮೂಲಕ ಸರ್ವರೂ ಪ್ರಯತ್ನ ಮಾಡಿದರೆ ಅತ್ಯಾಚಾರ ಸಮಸ್ಯೆಯನ್ನು ಪರಿಹರಿಸಲು ಕಷ್ಟವೇನಲ್ಲ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*