03 May 2018

ಕಾಯಕವೇ ಕೈಲಾಸ (ಕಾರ್ಮಿಕರ ಬಗ್ಗೆ ಕವನ)

             
               *ಕಾಯಕವೆ ಕೈಲಾಸ*

ಕಾಯಕ ನಿರತ ಕಾರ್ಮಿಕರು ನಾವು
ದೇಶದ ಪ್ರಗತಿಯ ಚಾಲಕರು ನಾವು
ಸಹಿಸುವೆವು ನೂರಾರು ನೋವು
ಗೌರವಿಸಿ ನಮ್ಮನ್ನೆಲ್ಲ  ನೀವು

ಕೈಜೋಡಿಸುವೆವು ನಮ್ಮ ಏಕತೆಗೆ
ಸಿಡಿದೇಳುವೆವು ದುರುಳತೆಗೆ
ನಮ್ಮ ಕಾರ್ಯವ ನಾವು ಮಾಡುವೆವು
ಅನ್ಯಾಯದ ವಿರುದ್ಧ ಗುಡುಗುವೆವು

ಕೃಷಿ ಕೈಗಾರಿಕೆ ಸೇವೆ ಎಲ್ಲೆಡೆ ನಾವು ಇಹೆವು
ಕೆಲಸ ಮಾಡಲು ಹಿಂಜರಿಯೆವು ನಾವು
ಕಾಯಕವೆ ಕೈಲಾಸ ಎಂದು ನಂಬಿಹೆವು
ಸ್ವಾಭಿಮಾನದ ಬಾಳು ಬಾಳುತಿಹೆವು

ಬಿಸಿಲು ಮಳೆ ಚಳಿ ಹಂಗು ನಮಗಿಲ್ಲ
ದುಡಿಯುವುದು ಬಿಟ್ಟು ಬೇರೆ ತಿಳಿದಿಲ್ಲ
ನಮ್ಮ ಬೆವರಿನ ಬೆಲೆಯು ನಮಗೆ ಗೊತ್ತು
ಯಾರ ಅಡಿಯಾಳಲ್ಲ ಸ್ವಾಭಿಮಾನ ನಮ್ಮ ಸ್ವತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: