31 January 2019

ದೇವಾಲಯಗಳಲ್ಲಿ ನಾವು ಮಾಡುವ ಅಪರಾಧಗಳು (ಸಂಗ್ರಹ ಲೇಖನ)

            " *ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು*..

೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.

೨.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.

೩.ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು.

೪.ಭಗವಂತನ ಮಂದಿರಕ್ಕೆ ಸಿಗರೇಟು,ಬೀಡಾ,ಸರಾಯಿ,ಮಾಂಸ ಸೇವಿಸಿ ಪ್ರವೇಶಿಸುವದು.

೫.ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್,ಚಪ್ಪಲಿ,ಕೈ ಚೀಲ ಧರಿಸಿ ಕೊಂಡು ಹೋಗುವುದು.

೬.ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.

೭.ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.

೮.ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.

೯.ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.

೧೦.ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.

೧೧.ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು.

೧೨.ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..

೧೩.ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.

 ೧೪. ಒಂದೇ ಹಸ್ತದಿಂದ ನಮಸ್ಕರಿಸುವುದು.

೧೫. ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. , ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.

೧೬. ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..

೧೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು..

೧೮. ಭಗವಂತನ ಸಮ್ಮುಖ ಭೋಜನ ಮಾಡುವುದು..

೧೯. ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..

೨೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು..

೨೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..

೨೨.ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..

೨೩. ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..

೨೪. ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..

೨೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..

೨೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..

೨೭. ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..

೨೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.

೨೯. ಯಾವುದೇ ದೇವರನ್ನು ನಿಂದಿಸುವುದು..

೩೦. ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು..

೩೧. ಗುರುಗಳ ಸ್ಮರಣೆ ಮಾಡದೇ ಇರುವುದು..

೩೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..

೩೩.ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.

೩೪.ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು.

೩೫.ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಕಾಯಿ,ಹೂವು,ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ,ಬಿಕ್ಷುಕರಿಗೆ ನೀಡುವುದು.

೩೬.ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು ಉತ್ತೇಜಿಸುವುದು.

೩೭.ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.

೩೮.ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.

೩೯.ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.

೪೦.ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ  ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.

೪೧.ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.

೪೨.ದೇವರಿಗೆ ಅರ್ಪಿಸುವ ಮೊದಲು ಹೂವು.ಹಣ್ಣು,ಊದು ಬತ್ತಿಗಳನ್ನು ಆಘ್ರಾಣಿಸುವುದು(ಮೂಸಿ ನೋಡುವುದು).

೪೩.ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು.ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು.

೪೪.ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.

೪೫.ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.

****ಇತ್ಯಾದಿ
 ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..

ಈ ಅಂಶಗಳನ್ನು ಎಚ್ಚರಿಕೆಯಾಗಿ ದೇವಾಲಯಗಳಲ್ಲಿ ಪ್ರಚಾರ ಮಾಡಿ ದಯವಿಟ್ಡು ನಮ್ಮ ಸಂಸ್ಕೃತಿಯನ್ನು ಉಳಿಸಿರಿ..


ಸಂಗ್ರಹ:
ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು

30 January 2019

ವರಕವಿ ( ಕವನ)

                   *ವರಕವಿ*

ನೀಡಿದಿರಿ ನಮಗೆ ಸಾಹಿತ್ಯದ ಸವಿ
ಮರೆಯಲಿ ಹೇಗೆ ನಿನ್ನ ವರಕವಿ

ರಸವೆ ಜನನ
ವಿರಸವೇ ಮರಣ
ಸಮರಸವೆ ಜೀವನ
ಎಂದ ತತ್ವಜ್ಞಾನಿಯ
ಮರೆಯಲಿ ಹೇಗೆ ?


ಸಾದನಕೇರಿಯಲಿ ನಿಂತ
ಸಾಧಕರಿಗೆ ಸ್ಫೂರ್ತಿಯಾದ
ಜೀವನದಲಿ ಬೆಂದರೂ
ಸಾಹಿತ್ಯದ ನಳಪಾಕ ಬಡಿಸಿದ
ಬೇಂದ್ರೆ ಅಜ್ಜನ
ಮರೆಯಲಿ ಹೇಗೆ?


ಕುಣಿಯೋಣ ಬಾರಾ ಎಂದು
ಮಕ್ಕಳ ಕುಣಿಸಿದ
ಪಾತರಗಿತ್ತಿ ಅಂದವ ತೋರಿದ
ಇಳಿದುಬಾ ತಾಯಿ ಎಂದ
ಅಂಬಿಕಾತನಯದತ್ತನ
ಮರೆಯಲಿ ಹೇಗೆ?

ಕನ್ನಡಕೆ ಜ್ಞಾನ ಪೀಠ ಗರಿಯನಿತ್ತ
ಶ್ರಾವಣದ ಸೊಬಗ ಬಣ್ಣಿಸಿದ
ನಾಕುತಂತಿಯ ಮೀಟಿ
ನಾದಲೀಲೆಯ ತೋರಿದ
ವರಕವಿಯೇ ನಿನ್ನ
ಮರೆಯಲಿ ಹೇಗೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 January 2019

ದೇವರು(ಶಿವಕುಮಾರ ಸ್ವಾಮೀಜಿ ರವರಿಗೆ ನುಡಿ ನಮನ)

                 *ದೇವರು*

ದೇವರು ನೀನು ನಿಜವಪ್ಪ
ಮಾನವ ರೂಪದ ಶಿವಪ್ಪ
ನಿನ್ನೀ  ಸೇವೆಗೆ ಕೊನೆಯಿಲ್ಲ
ನೀನಿರದೇ ಬೆಳಕು ಮೂಡಲ್ಲ |ಪ|

ಅನ್ನದಾಸೋಹವ ನೀನಿತ್ತೆ
ಅಕ್ಷರ ಕಲಿಸಲು ಪಣತೊಟ್ಟೆ
ಜ್ಞಾನದ ಆಂದೋಲನ ನಿನ್ನಿಂದ
ನಿನ್ನ ನೆನೆದರೆ ನಮಗಾನಂದ.
 |ದೇವರು|

ಸರ್ವಜನಾಂಗದ ಸಂಗಮವು
ನೀನೆಲೆಸಿರುವ ಆ ಮಠವು
ಹೋಲಿಕೆ ನಿನಗೆ ಯಾರಿಲ್ಲ
ನಿನ್ನನು ಮರೆತು ಬಾಳಲ್ಲ .
|ದೇವರು|

ಬಡವರ ಪಾಲಿನ ಬಂಧುವುನೀ
ಅಶಕ್ತರಿಗೆ ಆಧಾರವು ನೀ
ಸೇವೆಯ ಅರ್ಥವು ನೀನಪ್ಪ
ನಿನ್ನ ದಾರಿಯಲಿ ನಡೆಸಪ್ಪ .
|ದೇವರು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

23 January 2019

ನೇತಾಜಿ ಮತ್ತು ವರ್ಷಿತಾ ಗೆ ಹುಟ್ಟು ಹಬ್ಬದ ಶುಭಾಶಯಗಳು


                 *ನೇತಾಜಿ*

ಕ್ರಾಂತಿ ಕಾರರ ನಾಯಕ ಸ್ವಾತಂತ್ರ್ಯ ಪರಿಕಲ್ಪನೆಯು ಇಂದ್ರ
ಅವರೇ ನಮ್ಮ ಸುಭಾಷ್ ಚಂದ್ರ


ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನ
ಕ್ರಾಂತಿಕಾರಿ ನಾಯಕ
ಪೂರ್ಣ ಚಂದ್ರನ ತಂಪಾದ ಬೆಳಕು ನೀಡಿ
ಸ್ವತಂತ್ರದ ಬೆಳಕಿನೆಡೆಗೆ ಕೊಂಡೊಯ್ದ ನಾವಿಕ

ಮತ್ತೊಮ್ಮೆ ಅವತರಿಸಿ ಬಾ ಧರೆಗೆ
ಸಹಿಸಲಾಗುತ್ತಿಲ್ಲ ಭ್ರಷ್ಟಾಚಾರಿಗಳ ದುರಾಡಳಿಗಾರರ
ನಿನ್ನ ದಾರಿಯಲ್ಲೇ ಅವರಿಗೆ
ಪಾಠವ ಕಲಿಸಿ
ಸ್ವತಂತ್ರ ನೀಡು ಇಂತವರಿಂದ
ಇವರ ಅನಾಚಾರಗಳಿಂದ ಮುಕ್ತಿ ನೀಡು
ಭಾರತಾಂಬೆಯ ನವಸಂಕೋಲೆಗಳಿಂದ
ಮುಕ್ತಿಗೊಳಿಸು

ಭಾರತೀಯ ರಾಷ್ಟ್ರೀಯ ಸೇನೆಯ ಬದಲಿಗೆ
ಭಾರತೀಯ ಸುಮನಸುಗಳ ಸೇನೆ
ಕಟ್ಟಿ ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನೀವೇ ಬರಬೇಕು ನೇತಾಜಿ

*ವರ್ಷಿತ ಹುಟ್ಟು ಹಬ್ಬದ ಶುಭಾಶಯಗಳು*

*ವ*ರ್ಷದ ಆಗಮನದಿಂದ ಸಕಲರು
ಹ*ರ್ಷಿ* ಸುವಂತೆ
*ತ*ಮವನು ಕಳೆಯುವ ಬೆಳಕಿನಂತೆ
ನಿನ್ನ ಜೀವನವು ಸುಖಕರವಾಗಿರಲಿ
ಮಗಳೆ
ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


22 January 2019

ಸಿಹಿಜೀವಿಯ ಕಣ್ಣೀರ ಹನಿಗಳು(ಹನಿ ಹನಿ‌ಬಳಗದಿಂದ ಅತ್ಯುತ್ತಮ ಹನಿಗಳು ಎಂದು ಪುರಸ್ಕೃತ) ಶಿವಕುಮಾರ ಸ್ವಾಮೀಜಿಗಳಿಗೆ ನುಡಿನಮನ

                  ಸಿಹಿಜೀವಿಯ ಕಣ್ಣೀರ ಹನಿಗಳು

ಶಿವಕುಮಾರ ಸ್ವಾಮೀಜಿಗಳಿಗೆ  ನುಡಿನಮನ

*೧*

*ಎಂದು?*

ಜನತಾಜನಾರ್ಧನನ
ಸೇವೆ ಮಾಡಲು‌ನೋಡಲಿಲ್ಲ
ಹಿಂದು ಮುಂದು
ಪ್ರತಿ ಪಾದಿಸಿದಿರಿ
ನಾವೆಲ್ಲರೂ ಒಂದು
ಸೇವಾ ವರ್ಷಗಳು
ನೂರ ಹನ್ನೊಂದು
ನಿಮಗಾಗಿ ಕಾತುರದಿ
ಕಾಯುವೆವು
ಭುವಿಗೆ ಮತ್ತೆ
ಆಗಮಿಸುವಿರಿ ಎಂದು?

*೨*

*ಶ್ರೀಸಿದ್ದಗಂಗಾ*

ಮಿಂದರೆ
ಪಾಪ ಕಳೆವಳು
ಉತ್ತರದ ಗಂಗಾ
ನಿಂದರೆ ನೆನೆದರೆ
ಪಾಪ ನಾಶ
ದಕ್ಷಿಣದ ಗಂಗಾ
ಶ್ರೀಸಿದ್ದಗಂಗಾ

*೩*

*ಅನಾಥರಾದೆವು*

ವಿದ್ಯೆ ಬುದ್ದಿ ನೀಡಿದ
ಭಕ್ತರ ಪಾಲಿನ
ಬುದ್ದಿ ಇನ್ನಿಲ್ಲ
ಅನಾಥರಾದೆವು
ಸ್ವಾಮಿಗಳಿಲ್ಲದೆ
ನಾವೆಲ್ಲ

*೪*

*ಶಿವಧ್ಯಾನ*

ಕುಮಾರನಾಗಿ
ಶಿವನ ಧ್ಯಾನವ
ಮಾಡಿದಿರಿ
ಅವನು ಕರೆದರೆ
ನಗುತಲಿ ಕೈಲಾಸಕ್ಕೆ
ತೆರಳಿದಿರಿ
ನಮಗಾರು ಗತಿ
ನೀವೇ ಹೇಳಿರಿ

*೫*

*ಬಹುವಿಧ ದಾಸೋಹಿ*

ಹರನೇನಾದರು ದೊರೆತರೆ
ಕೇಳುವೆನು
ಎಲ್ಲೆಡೆ ಎಲ್ಲರಿಗೂ
ಅನ್ನ,ವಿಧ್ಯೆ ಸಿಗುತಿಲ್ಲ
ಬಹುವಿಧ ದಾಸೋಹಿ
ಸ್ವಾಮೀಜಿಯನೇತಕೆ
ಧರೆಯಲಿ  ಬಿಡಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*








18 January 2019

ಕಾಯಿಲೆ (ಹನಿಗವನ)

                  ಸಿಹಿಜೀವಿಯ ಹನಿ


*ಕಾಯಿಲೆ*

ರೀ ಕಳೆದ ವರ್ಷವೇ
ಭರವಸೆ ನೀಡಿದ್ದಿರಿ
ಕೊಡಿಸುವೆ ಬಂಗಾರದ
ಜುಮಿಕೆ ಒಲೆ
ಅಯ್ಯೋ ಕ್ಷಮಿಸಿ ಬಿಡೆ
ನನಗೆ ಮರೆವಿನ ಕಾಯಿಲೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 January 2019

ಸಿಹಿಜೀವಿಯ ಹನಿಗಳು

             *ಸಿಹಿಜೀವಿಯ ಹನಿಗಳು*

*೧*

*ಅಪಾರ*

ನಿನ್ನೆ ಶತ್ರು
ಇಂದು ಮಿತ್ರ
ನಿನ್ನೆ ಕಮಲ
ಹಿಡಿಯಲು ಕಾತರ
ಇಂದು ಕೈಯೇ ಸುಂದರ
ನಡೆಯುತಿದೆಯಂತೆ
ಕುದುರೆ ವ್ಯಾಪಾರ.
ಓ ಅಧಿಕಾರವೇ
ನಿನ್ನ ಮಹಿಮೆ ಅಪಾರ .

*ಆಧುನಿಕತೆ?*


ತೋರಣವಾಗಲಿ
ಒಬ್ಬಟ್ಟಗಾಲಿ
ಎಳ್ಳು ಬೆಲ್ಲವಾಗಲಿ
ಎಲ್ಲವೂ ರಡಿಮೇಡ್
ನಗರ ಪಟ್ಟಣದ
ಮನೆಯಲ್ಲಿ ಮಾಡುವುದು
ಬಹಳ ಕಡಿಮೆ.
ಇದೆಲ್ಲವೂ ಆಧುನಿಕತೆಯ
ಮಹಿಮೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 January 2019

ಸಿಹಿಜೀವಿಯ ಹನಿಗಳು( ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ಹನಿ ಪುರಸ್ಕೃತ)


               *ಸಿಹಿಜೀವಿಯ ಹನಿಗಳು*

*೧*

*ಆಪರೇಷನ್*

ಪ್ರಿಯೆ ನೀ
ಸನಿಹದಲ್ಲಿ ಇದ್ದರೆ
ನಮ್ಮ ಪ್ರೀತಿಯೆಂಬ
ಸರ್ಕಾರ ಸುಭದ್ರ
ಅನಿಸುವುದು.
ನೀ ಚೂರು
ಮರೆಯಾದರೆ
ಆಪರೇಷನ್ ಕಮಲವೋ
ಕೈಯೋ ತೆನೆಯೋ
ಎಂಬ ಅನುಮಾನ
ಮೂಡುವುದು

*೨*

*ಪಾಪ*

ಪ್ರಿಯೆ ನಿನ್ನನ್ನು ದೂರದಿಂದ
ನೋಡಿದರೆ ನೀನೆ
ಅಪ್ಸರೆಯ ಪ್ರತಿರೂಪ
ಹತ್ತಿರದಿಂದ ನೋಡಿದ
ನೆರಮನೆಯ ಪಾಪ
ತಾಯತ ಕಟ್ಟಿಸಿಕೊಂಡಿದೆ
ಪಾಪ

*ಅಚ್ಚರಿಯಲ್ಲ*

ಚಂದ್ರನ ಮೇಲೆ
ಬೀಜ ಮೊಳಕೆಯೊಡಿದಿದೆ
ಅದೇನೂ ಅಚ್ಚರಿಯಲ್ಲ
ಗೆಳತಿ ನೀ ನನ್ನ ಸನಿಹವಿರೆ
ನೀರು ಗೊಬ್ಬರವಿಲ್ಲದಿದ್ದರೂ
ಆ ಮೊಳಕೆ ಗಿಡವಾಗಿ ಮರವಾಗಿ
ಹಣ್ಣು ಬಿಡುವುದಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



15 January 2019

ನಲಿಯೋಣ (ಕವನ)

*ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು*

*ನಲಿಯೋಣ*

ಬಂದಿದೆ ನೋಡಿ ಸಂಕ್ರಾಂತಿ
ತಂದಿದೆ ನಮಗೆ ಸುಖಶಾಂತಿ
ಸೂರ್ಯನು ಪಥವನು ಬದಲಿಸುವ
ಉತ್ತರಾಯಣಕೆ ಪಯಣಿಸುವ

ಎಳ್ಳು ಬೆಲ್ಲವ ತಿನ್ನೋಣ
ಒಳ್ಳೆಯ ಮಾತುಗಳಾಡೋಣ
ಸುಗ್ಗಿಯ ಹಬ್ಬ ಮಾಡೋಣ
ಹಿಗ್ಗುತ ನಕ್ಕು ನಲಿಯೋಣ

ರಂಗೋಲಿಯನು ಹಾಕೋಣ
ಪೊಂಗಲ್ ಮಾಡಿ ಹಂಚೋಣ
ಕಬ್ಬಿನ ಜಲ್ಲೆ ಸವಿಯೋಣ
ಎತ್ತುಗಳ ಕಿಚ್ಚುಹಾಯಿಸೋಣ


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*





14 January 2019

ಸಿಹಿಜೀವಿಯ ಹನಿಗಳು (ಹನಿ ಹನಿ ಬಳಗದಿಂದ ಉತ್ತಮ ಹನಿ ಎಂದು ಪುರಸ್ಕೃತ)

            *ಸಿಹಿಜೀವಿಯ ಹನಿಗಳು*

*೧*

*ಪುನರಾವರ್ತನೆ*

ಈ ವರ್ಷ ಬಂಗಾರದೊಡವೆ
ಕೊಡಿಸುವೆ ಕೋಪಿಸಿಕೊಳ್ಳದಿರು
ನನ್ನ ಮನದನ್ನೆ
ಸುಮ್ಮನಿರಿ ಮದುವೆಯಾದಗಿನಿಂದ
ಹೇಳುತ್ತಿರುವಿರಿ ಇದನ್ನೇ

*೨*


*ಪರಿಸ್ಥಿತಿ*

ಪ್ರತಿ ಬಾರಿಯೂ
ನಾನು ಸೀರೆ ಕೊಡಿಸಿ
ಎಂದಾದಲೆಲ್ಲಾ ನಿರಾಕರಿಸುವಿರಿ
ನಿಮಗೆ ಅರ್ಥವಾಗುವುದಿಲ್ಲ
ನನ್ನ ಮನಸ್ಥಿತಿ
ಅವನು ಗೊಣಗಿದ
ನಿನಗೂ ಅರ್ಥವಾಗುವುದಿಲ್ಲ
ನನ್ನ ಆರ್ಥಿಕ ಪರಿಸ್ಥಿತಿ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 January 2019

ಮಾದರಿ? (ನ್ಯಾನೋ ಕಥೆ)

              ನ್ಯಾನೋ ಕಥೆ

*ಮಾದರಿ?*

 "ಎಷ್ಟು ಹೇಳಿದರೂ ಅಷ್ಟೇ ಉಗುರು ಕತ್ತರಿಸಿ ಶಾಲೆಗೆ ಬರುವುದಿಲ್ಲ " ಎಂದು ಶಿಕ್ಷಕರು ಕೋಲಿನಿಂದ ವಿದ್ಯಾರ್ಥಿಗಳಿಗೆ ಮೊಟ್ಟ ಏಟುಗಳನ್ನು ವಿಧೇಯತೆಯಿಂದ ಸ್ವೀಕರಿಸಿದ ಓರ್ವ ವಿದ್ಯಾರ್ಥಿಯ ಕಣ್ಣು ಶಿಕ್ಷಕರ ಕಿರುಬೆರಳಿನ ಎರಡು ಇಂಚು ಉಗುರಿನ ಮೇಲೆ ಬಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 January 2019

ನಿರೀಕ್ಷೆ (ಹನಿಗವನ)

               *ನಿರೀಕ್ಷೆ*

ನನಗೆ ಬುದ್ದಿ ಬಂದಾಗಿನಿಂದ
ನಿರೀಕ್ಷೆ ಮಾಡುತ್ತಲೇ ಇದ್ದೆ
ಮಹಾನ್ ಚೇತನ ಗುರು
ಬಂದರು ಹೋದರು ಹಲವರು
ಸೋಜಿಗವೆಂದರೆ
ಹಲವಾರು ವಿವೇಕರು ಬಂದರು
ಕೆಲವಾರು ಆನಂದರು ಬಂದರು
ಅವತರಿಸಲೇ ಇಲ್ಲ ಮತ್ತೊಬ್ಬ
ಸ್ವಾಮಿ ವಿವೇಕಾನಂದರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ವಿಳಂಬವಾಯಿತೇ(ಹನಿಗವನ)

                   ಸಿಹಿಜೀವಿಯ ಹನಿ

*ವಿಳಂಬವಾಯಿತೇ?*

ಅವಳ ವ್ಯಾಮೋಹಕೆ
ಬಿದ್ದು ಗೋವಿಂದನ
ಮರೆತೆ.
ಅವಳು ನನ್ನ ಮರೆತಳು
ಭಗವಂತನ ಕರೆದೆ
ಕೇಳುತ ಬಂದ ಕಂದ
ವಿಳಂಬವಾಯಿತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 January 2019

ಅವತರಿಸು ಬಾ(ಚಿತ್ರ ಹನಿಗವನ)

                    *ಅವತರಿಸು ಬಾ*

ಕಲ್ಲಾಗದಿರು ಬುದ್ದ
ಅವತರಿಸು‌  ಎದ್ದು
ತಿಳಿಹೇಳು ನಮಗೆ
ಬೀರಲು ಹೂನಗೆ
ತೊರೆಯಲು ಹಗೆ
ಕಲಿಸಿಕೊಡು ಆಸೆ
ತೊರೆದು ದುಃಖವ
ಅಳಿಸುವ  ಬಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



10 January 2019

ಪ್ರಶ್ನೆ (ಹನಿ)

                 ಸಿಹಿಜೀವಿಯ ಹನಿ

*೧*

*ಪ್ರಶ್ನೆ*

ಸ್ವೆಟರ್  ಟೋಪಿ
ಹಾಕಿಕೊಂಡರೂ
ಎರಡೆರಡು ಬೆಡ್ ಶೀಟ್
ಹೊದ್ದುಕೊಂಡರೂ
ಬೆಂಕಿಕಾಯಿಸಿಕೊಂಡರೂ
ಮಾನವರಾದಿಯಾಗಿ ಜೀವಿಗಳು
ಗಢ ಗಢ  ನಡುಗುತಲಿವೆ
ಹತಾಶಗೊಂಡ ಜೀವಿಗಳು
ಕೇಳುತಲಿವೆ ಥಂಡಾಸುರ
ನೀನೆಂದು ಹೋಗುವೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 January 2019

ಸಿಹಿಜೀವಿಯ ಹನಿಗಳು

                  ಸಿಹಿಜೀವಿಯ ಹನಿಗಳು

*೧*

*ನನ್ನ ನೋಡು*

ಸಿಟ್ಯಾಕೆ ಸಿಡುಕ್ಯಾಕೆ ರಾಣಿ
ಮಾಡು ಮುತ್ತಿನ ಬೋಣಿ
ಸಿಟ್ಟು ಸೆಡುವು ಬಿಡು
ತಪ್ಪಿದ್ದರೆ ಮನ್ನಿಸಿಬಿಡು
ಪ್ರೀತಿಯಿಂದ ನನ್ನ ನೋಡು
ಗುನುಗುವೆ ದಾಂಪತ್ಯದ ಹಾಡು

*೨*

*ಸಿಂಗಾರಿ*

ಸಿಡುಕದಿರು ಸಿಂಗಾರಿ
ಏಕೆ ಮಾಡುವೆ ಕಿರಿ ಕಿರಿ
ನೀ ನನ್ನ ಬಂಗಾರಿ
ಏರೋಣ ಅಂಬಾರಿ
ಹೋಗೋಣ ಸವಾರಿ

*ಸಿ. ಜಿ ವೆಂಕಟೇಶ್ವರ*
*ಗೌರಿಬಿದನೂರು*



08 January 2019

ಮತ್ತೆರಡು ಹನಿಗಳು

      ಎರಡು ಹನಿಗಳು

*೧*

*ಪಶ್ಚಾತ್ತಾಪ*

ಗುರುಗಳು ಹೇಳಿದರು
ಸಿಟ್ಟು ಬಂದಾಗ ಎಣಿಸು
ಒಂದರಿಂದ ಹತ್ತು
ಖಂಡಿತ ತಪ್ಪುವುದು
ದೊಡ್ಡ ಆಪತ್ತು
ಶಿಷ್ಯ ಗೊಣಗುತ್ತಾ ನುಡಿದ
ಹೌದು ನನ್ನ ಮದುವೆಯ
ದಿನ ಎಣಿಸಬೇಕಿತ್ತು

*೨*

*ಮಾಯ*

ಸಮಯ ಕಳೆಯದಿರು
ಅತ್ತು ಅತ್ತು
ದೇವನ ನೆನೆದು
ಏಳು ಬೆಟ್ಟಗಳ ಹತ್ತು
ಭಗವಂತನ ಸುತ್ತ
ಹತ್ತು ಸುತ್ತು
ಮಾಯವಾಗುವುದು
ನಿನ್ನ ಆಪತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 January 2019

ಎರಡು ಹನಿಗಳು

*ಹನಿಗವನಗಳು*

*೧*

*ಮರೆತರೇನು*

ಈಗ ಒಪ್ಪಿದೆ ನಿನ್ನ
ನನ್ನ ಹಣ ಕೇಳದೆ
ಕೊಂಡಿರುವೆ ಒಡವೆಯನ್ನ
ನಿನ್ನ ತವರು ಮನೆಯರು
ಕೊಡಿಸಿದರೇನು?
ಹೆಂಡತಿ ನಾಚುತ ಹೇಳಿದಳು
ಮೊನ್ನೆ ನೀವು ಕುಡಿದ  ನಶೆಯಲಿ
ಎರಡು ಸಾವಿರದ ಒಂದು
ಕಂತೆ ಕೊಟ್ಟಿದ್ದ ಮರೆತರೇನು?

*೨*

*ಬಂದ್*

ನಾಚುತ ನಿಂತಿದ್ದಳು
ಸುಂದರಿ ಅಂದು
ಮಡದಿಯಾದಳು
ನನ್ನ ಮನೆಗೆ ಬಂದು
ಅವಳು ಬಂದಾಗಿನಿಂದ
ನನ್ನ ಬಾಯಿ ಬಂದು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 January 2019

ತಪಾಸಣೆ ( ನ್ಯಾನೋ ಕಥೆ)

      *ತಪಾಸಣೆ*(ನ್ಯಾನೋ ಕಥೆ)

"ಅಯ್ಯೋ ಇವತ್ತೇ ಹೆಲ್ಮೆಟ್ ಬಿಟ್ಟು ಬಂದೆನಲ್ಲಪ್ಪಾ ಬಿತ್ತು ಪೈನ್ " ಎಂದು ಬಾಲಜಿ ಮನದಲ್ಲೇ  ಗೊಣಗಿಕೊಂಡು   ಬೈಕ್ ನಿಲ್ಲಿಸಿದಾಕ್ಷಣ ಪೊಲೀಸ್ ಬಂದು ಬಾಯಲ್ಲಿ ಅದೇನೋ ಮಿಷನ್ ಇಟ್ಟು "ಜೋರಾಗಿ ಊದು" ಎಂದರು .
" ಸರಿ ನೀನೇನೂ ಕುಡಿದಿಲ್ಲ ಹೊರಡು" ಅಂದ ಪೊಲೀಸ್ ನ ಮಾತು ಕೇಳಿ ನಿಟ್ಟುಸಿರು ಬಿಟ್ಟು ಗಾಡಿ ಸ್ಟಾರ್ಟ್ ಮಾಡಿ ನೋಡಿದರೆ ಪೊಲೀಸ್ ಸ್ಟೇಷನ್ ಎದುರಿಗೆ "ಮಣಿಕಂಠ ಬಾರ್ ಅಂಡ್ ರೆಸ್ಟೋರೆಂಟ್" ಎಂಬ ಬೋರ್ಡ್ ನೇತಾಡುತ್ತಿತ್ತು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 January 2019

ಪರಿವರ್ತನೆ ( ನ್ಯಾನೋ ಕಥೆ)

           *ನ್ಯಾನೋ ಕಥೆ*

*ಪರಿವರ್ತನೆ*

ಆತ್ಮೀಯ ಗೆಳೆಯ ರಮೇಶ್ ನೋಡಲು ಬೆಳಿಗ್ಗೆ ಒಂಭತ್ತಕ್ಕೆ ರಮೇಶ್ ನ ಮನೆಗೆ ಹೋದ . "ಇನ್ನೂ ಮಲಗಿದ್ದೀಯಲ್ಲಯ್ಯ ಸೂರ್ಯ ವಂಶಸ್ತ ನಲವತ್ತು ವರ್ಷ ದಾಟಿದ ಮೇಲಾದರೂ ಬೇಗ ಎದ್ದು ವಾಕ್ ಗೀಕ್ ಮಾಡು"ಎನ್ನವಷ್ಟರಲ್ಲಿ " ನನಗೇನಾಗಿದೆ  ನನದು ಸ್ಟೀಲ್ ಬಾಡಿ" ಎಂದು ರಮೇಶ್  ಉಡಾಪೆಯಿಂದ ಉತ್ತರಿಸಿದ .
ಒಮ್ಮೆ ರಮೇಶ್ ನ  ಕೈಗೆ  ಗಾಯವಾಗಿ ತಿಂಗಳಾದರೂ ಮಾದಿರಲಿಲ್ಲ . ಒಂದು ಮುಂಜಾನೆ ಆದರ್ಶ್ ವಾಕ್  ಮಾಡುವಾಗ ಟ್ರಾಕ್ ಸೂಟ್ನಲ್ಲಿ  ಗೆಳೆಯ ರಮೇಶ್ ನನ್ನು ಕಂಡ ಆದರ್ಶನಿಗೆ ಎಲ್ಲಾ ಅರ್ಥವಾಯಿತು. ಗೆಳೆಯನೊಡನೆ ಹೆಜ್ಜೆ ಹಾಕಿದ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 January 2019

ಮಾದರಿ (ನ್ಯಾನೋ ಕಥೆ) ಹನಿ‌ ಹನಿ ಇಬ್ಬನಿ ಬಳಗದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತಮ ಎಂದು ಪುರಸ್ಕಾರ ಪಡೆದ ಕಥೆ

             ನ್ಯಾನೋ ಕಥೆ

*ಮಾದರಿ*

"*ಮಕ್ಕಳು ಸಂಸ್ಕಾರ ಹೊಂದಿರಬೇಕು, ಸ್ವಚ್ಚತೆಯನ್ನು ಕಾಪಡಬೇಕು , ನಮ್ಮ ಪರಂಪರೆಯನ್ನು ಉಳಿಸಿ  ಬೆಳೆಸಬೇಕು*" ಎಂದು ಸ್ವಾಮೀಜಿಗಳು  ಪ್ರವಚನ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದರು .ಭಕ್ತರು ಕೊಟ್ಟ ಬಾಳೆ ಹಣ್ಣು ತಿಂದು ಸಿಪ್ಪೆಯನ್ನು ಅಲ್ಲೇ ಬಿಸಾಡಿ ಮುಂದೆ ನಡೆದರು.ಐದನೆಯ ತರಗತಿ ಓದುವ ಸುಲೋಚನ ಎಂಬ ಬಾಲಕಿ ಆ ಸಿಪ್ಪೆ ಎತ್ತಿ ಕಸದ ಡಬ್ಬಿಗೆ ಹಾಕಿದಳು .

*ಸಿ. ಜಿ ವೆಂಕಟೇಶ್ವರ*
*ಗೌರಿಬಿದನೂರು*