03 ಡಿಸೆಂಬರ್ 2017

*ವಿಶ್ವಮಾನವನಾಗು*(ಕವನ)



*ವಿಶ್ವಮಾನವನಾಗು*

ಮಡಿಲಲಿ  ಪವಡಿಸು ನನ್ನ ಕಂದ
ನಿನ್ನಯ  ಮೊಗವು ಬಲು ಅಂದ
ಸಾಧಿಸಿ ತೋರಿಸು ನಿನ್ನ ಗುರಿಯ
ಈಡೇರಿಸು ಮುಂದೆ ನನ್ನಾಸೆಯ

ಒಲವಿನ ಮಾತಾಡಿ ಗೆಲುವನೆ ನೀ ಪಡೆ
ಛಲವ ಬಿಡಬೇಡ ಸಾಗು ಗುರಿಯೆಡೆ
ಮೇಲು ಕೀಳು ಬೇಡ ಸಾಮಾನತೆ ಸಾರು
ಬಡವರ ಕಂಬನಿಯ ನೀ  ಒರೆಸುತಿರು

ಒಳ್ಳೆಯ ಗುಣಗಳ ಗಣಿಯಾಗು
ಕೆಟ್ಟ ಮನುಜರ ಶಿಕ್ಷಿಪ ಖಲಿಯಾಗು
ಧರ್ಮದ  ಮಾರ್ಗದಿ ನೀ ನಡೆ
ಅಧರ್ಮದ ಹಾದಿಗೆ ನೀಡು‌ ತಡೆ

ದೇಶ ಭಕ್ತಿಯ ಕಿಚ್ಚನು  ಹೊತ್ತಿಸು
ಸಂಕುಚಿತ ಭಾವನೆಯ ಹೊಡೆದೋಡಿಸು
ವಿಶಾಲವಾದ ಭಾವದ ಪಾಠವ ಕಲಿಸು
ವಿಶ್ವಮಾನವತೆಯ ಸಂದೇಶ ಪಾಲಿಸು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ