*ಭಾವಗೀತೆ*
*ಸೂತ್ರಧಾರ*
ಜೀವನವೆಂಬುದು ಒಂದು ನಾಟಕ
ಇಲ್ಲೇ ಇರುವುದು ನರಕ ನಾಕ
ಸೂತ್ರದ ಬೊಂಬೆಗಳು ನಾವು
ಸಾಮಾನ್ಯ ಇಲ್ಲಿ ನಲಿವು ನೋವು
ಮೇಲಿರುವ ಸೂತ್ರದಾರ ಅವನು
ಸದಾ ನಮ್ಮ ಪಾಲಿಸುತಿಹನು
ನ್ಯಾಯ ಸಲ್ಲಿಸಬೇಕು ನಮ್ಮ ಪಾತ್ರಕೆ
ಬದ್ದರಾಗಿರಬೇಕು ಅವನ ಸೂತ್ರಕೆ
ನಾವಂದು ಕೊಂಡಂತೆ ಏನೂ ಆಗದಿಲ್ಲಿ
ಅವನಾಡಿಸಿದಂತೆ ಆಡುವೆವು ನಾವಿಲ್ಲಿ
ನಾವಿರುವೆವು ಇಲ್ಲಿ ನಾಲ್ಕು ದಿನ
ತೀರಿಸಬೇಕು ಈ ನೆಲದ ಋಣ
ಅವನಾಡಿಸಿದಂತೆ ಆಡಬೇಕು
ಕರೆ ಬಂದಾಗ ಹೋಗುತಿರಬೇಕು
*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment