ಕಿರುಗಥೆ
,ಸಂಬಂಧಗಳು
ಸಾಹುಕಾರ್ ತಿಮ್ಮಯ್ಯ ವಯೋಸಹಜ ಖಾಯಿಲೆಯಿಂದ ಮರಣಹೊಂದಿದಾಗ ಅವರ ಇಬ್ಬರು ಹೆಂಡತಿಯರು ಮತ್ತು ಮಕ್ಕಳು ಅವರ ಕೋಟಿಗಟ್ಟಲೆ ಆಸ್ತಿಯ ಹಂಚಿಕೊಳ್ಳಲು ಶವ ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದ ಕಂಡು ಊರ ಹಿರಿಯ ಜುಂಜಣ್ಣ " ಇದು ಕಿತ್ತಾಡುವ ಸಮಯವೆ ? ಮೊದಲು ಕಾರ್ಯ ಮಾಡಿ ಆಮೇಲೆ ನಿಮ್ಮ ವ್ಯವಹಾರ" ಎಂದು ಗದರಿದಾಗ ಅಂತ್ಯ ಸಂಸ್ಕಾರಕ್ಕೆ ಮುಂದಾದರು.
ಒಂದು ವಾರದ ಬಳಿಕ ರಾಜಿ ಪಂಚಾಯತಿ ಬಳಿಕ ಉಭಯ ಪತ್ನಿ ಮತ್ತು ಮಕ್ಕಳು ಸಂತಸದಿಂದ ತಿಮ್ಮಯ್ಯನವರ ಮರೆತು ಆನಂದದಿಂದ ಮೈಮರೆತಿದ್ದರು. ನಾಲ್ಕು ವರ್ಷದ "ರವಿ ಅಮ್ನ ಈ ನಾಯಿ ಏನೂ ತಿನ್ನುತ್ತಿಲ್ಲ" ಎಂದಾಗ ಅವರ ಗಮನಕ್ಕೆ ಬಂದಿದ್ದು. ವಾರದಿಂದ ಆ ನಾಯಿ ತನ್ನ ಮಾಲಿಕನ ನೆನೆದು ಕಣ್ಣೀರುಡುತ್ತ ಆಹಾರ ನೀರು ಸೇವಿಸದೇ ಒಂದು ಮೂಲೆಯಲ್ಲಿ ಮುದುರಿತ್ತು .

No comments:
Post a Comment