#ಕಾಮನ್ವೆಲ್ತ್_ಕ್ರೀಡಾಕೂಟ
ಮೊದಲ ದಿನವೇ ಭಾರತ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ
ಕಂಚು ತಲಾ ಒಂದೊಂದು
ಕಂಚು , ಬೆಳ್ಳಿ, ಚಿನ್ನ |
ಭಾರತೀಯರೆಲ್ಲರೂ
ಮನತುಂಬಾ ಹಾರೈಸುತ್ತಿದ್ದೇವೆ
ಪದಕ ಪಟ್ಟಿಯಲ್ಲಿ ಪಡೆಯಲಿ
ಮೊದಲ ಸ್ಥಾನವನ್ನ ||
#ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ಕಾಮನ್ವೆಲ್ತ್_ಕ್ರೀಡಾಕೂಟ
ಮೊದಲ ದಿನವೇ ಭಾರತ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ
ಕಂಚು ತಲಾ ಒಂದೊಂದು
ಕಂಚು , ಬೆಳ್ಳಿ, ಚಿನ್ನ |
ಭಾರತೀಯರೆಲ್ಲರೂ
ಮನತುಂಬಾ ಹಾರೈಸುತ್ತಿದ್ದೇವೆ
ಪದಕ ಪಟ್ಟಿಯಲ್ಲಿ ಪಡೆಯಲಿ
ಮೊದಲ ಸ್ಥಾನವನ್ನ ||
#ಸಿಹಿಜೀವಿ
ಸಣ್ಣಕಥಾ_ಸಂಭ್ರಮ
ಅವನಿ ಬೇಸರ ಪಡಲಿಲ್ಲ...
ಅವನು ಹುಟ್ಟಿದಾಗ ಅಮ್ಮ ತಾಯ್ತನ ಅನುಭವಿಸಿ ಸಂಭ್ರಮಿಸಿದಳು .ಅವನಿ ಭಾರವಾಯಿತೆಂದು ಬೇಸರಪಡಲಿಲ್ಲ.ಬೆಳೆಯುತ್ತಾ ಅವಗುಣಗಳ ದಾಸನಾದ ಅವನು ದುಶ್ಚಟಕ್ಕೆ ಬಲಿಯಾಗಿ ಅಕಾಲ ಮೃತ್ಯುಗೀಡಾದ ತಾಯಿಕರುಳು ಕಂಬನಿ ಮಿಡಿಯಿತು.ಅವನಿ ಆಗಲೂ ಬೇಸರಪಡಲಿಲ್ಲ...ಏಕೆಂದರೆ ಅವನಿ ಬರೀ ಅವನಿಗಾಗಿ ಇಲ್ಲ......
#ಸಿಹಿಜೀವಿ
#ಸಾತ್ವಿಕ_ಸಂಸ್ಕಾರ
ಸಮಾಜದಲ್ಲಿದಿನವು
ಹೆಚ್ಚುತ್ತಿರುವ ದುಷ್ಟಕೂಟಗಳ
ಮಾಡಬೇಕಿದೆ ಸಂಹಾರ |
ಬೆಳಸಬೇಕಿದೆ ಸರ್ವರಲೂ
ಸಾತ್ವಿಕ ಸಂಸ್ಕಾರ ||
#ಸಿಹಿಜೀವಿ
ಸಾಕು ಮಗ
ಮದುವೆಯಾಗಿ ವರ್ಷಗಳೇ
ಕಳೆದರೂ ದಂಪತಿಗೆ ಮಕ್ಕಳಾಗಲಿಲ್ಲ
ದತ್ತು ಪಡೆದ ನಂತರ ಮನೆಗೆ ಬಂದ ಸಾಕು ಮಗ |
ಮಗನಿಗೆ ಮಗುವಾದಾಗ ವಂಶೋದ್ಧಾರಕ ಬಂದನೆಂದು ಬೀಗಿದರು. ವರ್ಷಕ್ಕೊಂದರಂತೆ ಮೂರ್ನಾಲ್ಕು ಮಕ್ಕಳಾದಾಗ ಮಗನನ್ನು ಪ್ರೀತಿಯಿಂದ ಗದರಿದರು "ಸಾಕುಮಗ"||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ಇಂದಿನ ಸಿನಿಮಾಗಳು
ವರ್ಷಗಟ್ಟಲೇ ಓಡುತ್ತಿದ್ದವು
ಉತ್ತಮ ಸಂದೇಶವುಳ್ಳ,
ಕುಟುಂಬ ಸಮೇತ
ನೋಡುತ್ತಿದ್ದ ಅಂದಿನಸಿನಿಮಾಗಳು |
ಬರೀ ಮಚ್ಚು ಕೊಚ್ಚು ಎಂದು ಹಿಂಸೆ
ಅಶ್ಲೀಲತೆಯನ್ನುಬಿಂಬಿಸುತ್ತಾ
ಚಿತ್ರಮಂದಿರಕ್ಕೆ ಬಂದ ವೇಗದಲ್ಲೇ ಓಡುತ್ತಿವೆ ಇಂದಿನ ಸಿನಿಮಾಗಳು ||
#ಸಿಹಿಜೀವಿ