*ಗಜ಼ಲ್ ೧೪*
ಬಾಳದೋಣಿಯ ಪಯಣದ ಮಧ್ಯದಲಿ ಬಿಟ್ಟೆ ಏಕೆ?
ನಡುನೀರಿನಲಿ ಒಬ್ಬನನೆ ತೊರೆದು ಕೈಕೊಟ್ಟೆ ಏಕೆ ?
ಜಕ್ಕವಕ್ಕಿಯ ಹಾಗೆ ಮಧುರ ಮಿಲನದಿ ಸುಖಿಸಿ
ಮಲ್ಲಿಗೆಯ ಸುಗಂಧ ಸವಿದು ಕನಸುಗಳ ಪೇರಿಸಿಟ್ಟೆ ಏಕೆ ?
ಚಳಿಗಾಲದಲ್ಲಿ ಮೈಬಿಸಿಯ ಶಾಖ ಸೋಕಿಸಿ ಬೆಚ್ಚನೆಯ
ನೆನಪುಗಳ ನೀಡಿ ನನ್ನಲ್ಲಿ ಹುಸಿ ಕನಸುಗಳ ನೆಟ್ಟೆ ಏಕೆ?
ಅಮರ ,ನಿಷ್ಕಲ್ಮಷ, ನನ್ನ ವಾಸ್ತವ ಪ್ರೀತಿಯ
ತೊರೆದು ಬಿಸಿಲುಗುದುರೆಯ ಹಿಂದೆ ಓಡಿಬಿಟ್ಟೆ ಏಕೆ?
ಹೂವಿಂದ ಹೂವಿಗೆ ಹಾರದ ದುಂಬಿ ನಾನು
ಮಧುರ ಮನಸಿನ ಸೀಜೀವಿಯ ಬಿಟ್ಟು ಕೆಟ್ಟೆ ಏಕೆ?
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment