*ಲೇಖನ*
*ಶಿಕ್ಷಕ ವೃತ್ತಿಯಲ್ಲಿ ತಂತ್ರಜ್ಞಾನದ ಪಾತ್ರ*
ಗುರುಬ್ರಹ್ಮ ಗುರು ವಿಷ್ಣು ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೆ ನಮಃ ಎಂಬ ಮಾತಿನಂತೆ. ಗುರುತಿಸಲ್ಪಡುವ ಗುರು ಅಥವಾ ಶಿಕ್ಷಕರು ತಮ್ಮದೇ ಅದ ಪಾವಿತ್ರತೆ ಪಡೆದು ಸಮಾಜ ತಿದ್ದುವ ಮತ್ತು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಡಾ ರಾಧಾಕೃಷ್ಣನ್ ರವರು ಹೇಳುವಂತೆ ಶಿಕ್ಷಕ ವೃತ್ತಿಯನ್ನು ಪ್ರಪಂಚದ ಅತ್ಯುತ್ತಮ ಹುದ್ದೆ ಎಂಬುದು ಇಂದಿಗೂ ಪ್ರಸ್ತುತ.
ಬದಲಾದ ಕಾಲಘಟ್ಟದಲ್ಲಿ ಕೇವಲ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಜೀವನದ ಮೂಲಭೂತ ಅವಶ್ಯಕತೆ ಇರುವ ಜೀವನ ಕೌಶಲಗಳನ್ನು ಕಲಿಸಿ,ಕೆಲ ವೇದೋಕ್ತ ಮಂತ್ರಗಳನ್ನು ಕಲಿಸಿದರೆ .ಇಂದಿನ ಶಿಕ್ಷಣ ವ್ಯವಸ್ಥೆ ಪೂರ್ಣಗೊಳ್ಳುವುದಿಲ್ಲ
ಇಂದಿನ ಮಕ್ಕಳು ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳ ಬಗ್ಗೆ ತಿಳಿದು ಆಧುನಿಕ ಶಿಕ್ಷಣ ಪಡೆಯಲು ಕಾತರರಾಗಿರುತ್ತಾರೆ ಅಂತಹ ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರು ಸಹ ಒಬಿರಾಯನ ಕಾಲದ ವಿಧಾನ ತಂತ್ರ ಬಳಸಿ ಕಲಿಸುವುದು ಸಮಂಜಸವಾದ ಕ್ರಮವಾಗಲಾರದು .ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅಂಗಸಂಸ್ಥೆಗಳು ಪಠ್ಯಕ್ರಮವನ್ನು ಬದಲಾವಣೆ ಮಾಡಿ ಶಿಶುಕೇಂದ್ರಿತ ತಂತ್ರಜ್ಞಾನದ ಆಧಾರಿತ ಕಲಿಕೆಗೆ ಒತ್ತು ನೀಡಿವೆ .
ಶಿಕ್ಷಕ ವೃತ್ತಿಯಲ್ಲಿ ತಂತ್ರಜ್ಞಾನದ ಮಹತ್ವ
೧ ಕಲಿಕೆ ಆಸಕ್ತಿ ಹೆಚ್ಚಿಸಲು
ಕಲಿಕೆ ಸುಲಭವಾಗಿ ಆಸಕ್ತಿಯನ್ನು ಉಂಟುಮಾಡಿಸಿ ಕಲಿಸಲು ತಂತ್ರಜ್ಞಾನ ಶಿಕ್ಷಕರು ಮತ್ತು ಮಕ್ಕಳಿಗೆ ಬಹಳ ಅನುಕೂಲ ಮಾಡಿಕೊಡುತ್ತದೆ
೨ ಮೂರ್ತ ಕಲಿಕೆಗೆ ಒತ್ತು
ಸಮುದ್ರ, ಬೆಟ್ಟ, ಬೇರೆ ದೇಶಗಳ ವಾಯುಗುಣ, ಅಂತರಿಕ್ಷ, ವಿಜ್ಞಾನ ದ ತತ್ವ ಮುಂತಾದ ಅಮೂರ್ತ ಕಲ್ಪನೆಯನ್ನು ಮಕ್ಕಳಿಗೆ ಮೂರ್ತ ರೂಪದಲ್ಲಿ ನೀಡಲು ನಾವು ವೀಡಿಯೋ ಪಾಠಗಳನ್ನು. ಮತ್ತು ವರ್ಚುಯಲ್ ರಿಯಾಲಿಟಿ ಪಾಠಗಳನ್ನು ನೀಡಿ ಕಲಿಯಬಹುದು ಮತ್ತು ಕಲಿಸಬಹುದು.
೩ ಶಿಕ್ಷಕ ಮತ್ತು ಮಕ್ಕಳ ಬಾಂದವ್ಯ ವೃದ್ದಿ
ತಂತ್ರಜ್ಞಾನದ ಬಳಕೆಯಿಂದ ಕ್ಲಿಷ್ಟಕರವಾದ ಪರಿಕಲ್ಪನೆಯನ್ನು ಸುಲಭವಾಗಿ ಹೇಳಿಕೊಟ್ಟ ಶಿಕ್ಷಕರ ಬಗ್ಗೆ ಮಕ್ಕಳಿಗೆ ಒಂದು ಅವ್ಯಕ್ತ ಅಭಿಮಾನ ಪ್ರೀತಿ ಬೆಳೆದು ಅನ್ಯೋನ್ಯತೆ ಬೆಳೆದು ಅವರ ಕಲಿಕೆ ಇಮ್ಮಡಿ ಆಗಲು ಪೂರಕವಾಗುತ್ತದೆ .
೪ ದೂರಶಿಕ್ಷಣಕ್ಕೆ ಪೂರಕ
ಮದ್ಯದಲ್ಲಿ ಶಾಲೆ ತೊರೆದ ಮಕ್ಕಳನ್ನು ಪುನಃ ಕಲಿಕೆಯಲ್ಲಿ ತೊಡಗಿಸಿ ಅವರಿಗೆ ದೂರ ಶಿಕ್ಷಣ ನೀಡುವಲ್ಲಿ ಆನ್ಲೈನ್ ವೀಡಿಯೋ ಪಾಠಗಳನ್ನು ಮಾಡಲು ಈ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಬಹುದು.
ಈ ನಿಟ್ಟಿನಲ್ಲಿ ಸರ್ಕಾರ ಮತ ಸಂಘ ಸಂಸ್ಥೆಗಳು, ಕೆಲಸ್ಬಯಂ ಸೇವಾ ಸಂಸ್ಥೆಗಳು, ಮತ್ತು ಕಾರ್ಪೊರೇಟ್ ಕಂಪನಿಗಳು. ಶಾಲೆಯಲ್ಲಿ ವಿಜ್ಞಾನ ತಂತ್ರಜ್ಞಾನ ಅಳವಡಿಕೆಯ ಕಲಿಕೆಗೆ ಕ್ರಮವಹಿಸಿವೆ .
ಸರ್ಕಾರದ ಎಜುಸ್ಯಾಟ್ ,ಬಾನುಲಿ ಕೇಳಿ ಕಲಿ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡು ಸಿ.ಇ.ಟಿ.ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ನೀಡುತ್ತಿದೆ.
ಇನ್ಫೋಸಿಸ್, ವಿಪ್ರೋ,ಮುಂತಾದ ಕಾರ್ಪೊರೇಟ್ ಕಂಪನಿಗಳು ಕೆಲ ಸರ್ಕಾರಿ ಶಾಲೆಯಲ್ಲಿ ದತ್ತು ತೆಗೆದುಕೊಂಡು ಆ ಶಾಲೆಗಳ ಬೌತಿಕ ಮತ್ತು ಅವಶ್ಯಕ ತಂತ್ರಜ್ಞಾನದ ತರಬೇತಿಯನ್ನು ನೀಡಿ ಶಿಕ್ಷಣ ನೀಡಲು ತಮ್ಮದೇ ಆದ ಸಹಾಯಹಸ್ತ ಚಾಚಿವೆ
ಶಿಕ್ಷಕರ ತಂತ್ರಜ್ಞಾನದ ಬಳಕೆ ಮತ್ತು ಸಾಮಾಜಿಕ ಮಾದ್ಯಮಗಳು
ಈಗಿನ ಮಾಹಿತಿ ಯುಗದಲ್ಲಿ ಸಾಮಾಜಿಕ ಮಾದ್ಯಮ ಗಳಾದ ಫೇಸ್ಬುಕ್, ವಾಟ್ಸಪ್, ಹೈಕ್,ಟೆಲಿಗ್ರಾಂ ಬ್ಲಾಗ್, ಅಪ್ಲಿಕೇಷನ್, ಇತ್ಯಾದಿ ಗಳು ಬಹುತೇಕ ಜನರ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು.
ಇಂತಹ ಸಾಮಾಜಿಕ ಮಾದ್ಯಮ ಗಳನ್ನು ನಮ್ಮ ಶಿಕ್ಷಕರು ಬಳಸಿಕೊಂಡು ಮಕ್ಕಳ ಕಲಿಕೆ ಸರಲ ಮಾಡಿದ ಯಶೋಗಥೆಗಳು ನಮ್ಮ ಕಣ್ ಮುಂದಿವೆ .
ವಾಟ್ಸಪ್ ಗುಂಪುಗಳು
ವಿಷಯವಾರು ಶಿಕ್ಷಕರ ವಾಟ್ಸಪ್ ಗುಂಪಿನಲ್ಲಿ ಇಂದು ವಿಷಯಗಳ ಚರ್ಚೆ, ವಿಷಯಗಳ ವಿನಿಮಯದ ಜೊತೆಗೆ ಪರಸ್ಪರ ಅನಮಾನ ಬಗೆಹರಿಸಲು ಈ ಗುಂಪಿನಲ್ಲಿ ಅವಕಾಶವಿದೆ .ಇದರ ಜೊತೆಗೆ ವಿದ್ಯಾರ್ಥಿಗಳ ವಾಟ್ಸಪ್ ಗುಂಪು ಮಾಡಿ ಪಠ್ಯ ಮತ್ತು ಸಹ ಪಠ್ಯ ವಿಷಯಗಳ ಮಾರ್ಗದರ್ಶನ ನೀಡಲು ಬಳಸಲಾಗುತ್ತದೆ.
ಹೈಕ್ ಗುಂಪುಗಳು
ನಮ್ಮ ರಾಜ್ಯದ ಸಮಾಹ ವಿಜ್ಞಾನ ಶಿಕ್ಷಕರ ಹೈಕ್ ಗುಂಪು ಈಗ ಚಾಲ್ತಿಯಲ್ಲಿದೆ ಅದರಲ್ಲಿ ಸಾವಿರಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಶಾಲಾಮಕ್ಕಳ ಕಲಿಕೆ ಸುಲಭವಾಗಿ ಮಾಡಲು ,ಪಿ.ಪಿ.ಟಿ ವಿಡಿಯೋ, ಮುಂತಾದ ಸಂಪನ್ಮೂಲಗಳ ತಯಾರಿಸಲು ಮತ್ತು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮ ವನ್ನು .ರಾಮಚಂದ್ರ. ಸಂತೋಷ ಕುಮಾರ್. ನಾಗಣ್ಣ ಶಹಬಾದ್ ,ವಾಸು ಶ್ಯಾಗೊಟಿ,ರವಿ ಅಹೇರಿ, ರಮೇಶ್,ದಾನಮ್ಮ ಝಳಕಿ ಮುಂತಾದ ಶಿಕ್ಷಕರು ಮಾಡುತ್ತಾ ಬಂದಿದ್ದಾರೆ. ಈ ಸಂಪನ್ಮೂಲಗಳನ್ನು ಹಲವಾರು ಶಾಲೆಗಳ ಮೂಲಕ ಮಕ್ಕಳು ಬಳಸಿರುವುದು ಶ್ಲಾಘನೀಯ.
ಇದೇ ರೀತಿಯಲ್ಲಿ ವಿವಿಧ ವಿಷಯಗಳ ಹೈಕ್ ಗುಂಪುಗಳು ಮಕ್ಕಳ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಿವೆ
ಬ್ಲಾಗ್ ಗಳು
ಹೈಕ್ ಮೂಲಕ ಸಂಪನ್ಮೂಲಗಳ ಹಂಚಿಕೊಳ್ಳಲು ಮತ್ತು ಪರಸ್ಪರ ಸಮಸ್ಯೆಯನ್ನು ಬಗೆಹರಿಸಲು ಪ್ರಾರಂಭಿಸಿದ ಸಮಾಜ ವಿಜ್ಞಾನ ಶಿಕ್ಷಕರ ಗುಂಪು ತಮ್ಮದೇ ಆದ " ಸೋಷಿಯಲ್ ಸೈನ್ಸ್ ಡಿಜಿಟಲ್ ಗ್ರೂಪ್ " ಎಂಬ ತಮ್ಮದೇ ಆದ ಬ್ಲಾಗ್ ಒಂದು ಸಿದ್ದಪಡಿಸಿ ಉಚಿತವಾಗಿ ಬೋಧನ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿ ದೇಶಾದ್ಯಂತ ಮನೆಮಾತಾಗಿದೆ ಜೊತೆಗೆ ಇದು ಲಕ್ಷಾಂತರ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಹ ಈ ಬ್ಲಾಗ್ ಭೇಟಿ ನೀಡಿ ಉಪಯೋಗ ಪಡೆದಿದ್ದಾರೆ.
ಇದೇ ರೀತಿ ವಿಜ್ಞಾನ.ಗಣಿತ ಕನ್ನಡ ಇಂಗ್ಲಿಷ್ ಈಗೆ ವಿವಿಧ ವಿಷಯಗಳ ಬ್ಲಾಗ್ ಗಳು ಶಿಕ್ಷಕರ ಮತ್ತು ಮಕ್ಕಳ ಕಲಿಕೆ ಸುಲಭವಾಗಿ ನಡೆಯಲು ಸಹಕಾರಿ ಆಗಿದೆ
ಶಿಕ್ಷಣ ಅಪ್ಲಿಕೇಶನ್ ಗಳು
ಒಂದು ಪ್ಲೇಸ್ಟೊರ್ ನಲ್ಲಿ ಎಲ್ಲಾ ವಿಷಯಗಳ ವಿವಿಧ ಅಪ್ಲಿಕೇಶನ್ ಗಳು ಲಭ್ಯವಿದ್ದು ಶಿಕ್ಷಕರ ವೃತ್ತಿಪರ ತರಭೇತಿ ಗೆ ಮತ್ತು ಮಕ್ಕಳ ಕಲಿಕೆಯ ಸುಲಭವಾಗಿ ಮಾಡಲು ಸಹಾಯಕ ಅಗಿವೆ
ಉಪಸಂಹಾರ
ಈ ರೀತಿಯಲ್ಲಿ ಶಿಕ್ಷಕರು ಇಂದು ಸಮಾಜದಲ್ಲಿ ದೊರೆಯುವ ವಿವಿಧ ವಿಜ್ಞಾನ ತಂತ್ರಜ್ಞಾನ ದ ಉತ್ಪನ್ನಗಳ ಬಳಕೆಯಿಂದ ನಮ್ಮ ಮಕ್ಕಳ ಕಲಿಕೆಯ ಸುಧಾರಿಸಿ ಅವರನ್ನು ಇಪ್ಪತ್ತೊಂದನೇ ಶತಮಾನದಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಮತ್ತು ಸಶಕ್ತ ವಿಶ್ವ ಮಾನವ ನನ್ನ ಮಾಡುವ ಮಹತ್ತರ ಜವಾಬ್ದಾರಿ ಹೊರಬೇಕಾಗಿದೆ .
ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕ ತಂತ್ರಜ್ಞಾನದ ಮಹತ್ವ ಅರಿತು ಶಿಕ್ಷಕ ವೃತ್ತಿಯನ್ನು ಮಾಡುವುದು ಇಂದಿನ ಬಹುಮುಖ್ಯ ಅವಶ್ಯಕತೆ ಎಂದರೆ ತಪ್ಪಾಗಲಾರದು.
*ಸಿ.ಜಿ.ವೆಂಕಟೇಶ್ವರ*
*ಸಮಾಜ ವಿಜ್ಞಾನ ಶಿಕ್ಷಕರು*
*ಗೌರಿಬಿದನೂರು*

No comments:
Post a Comment