02 December 2017

ಕನ್ನಡ ಸಾಹಿತ್ಯಕ್ಕೆ ಸಾಹಿತ್ಯ ಸಮ್ಮೇಳನಗಳ ಕೊಡುಗೆ ಎಷ್ಟು?

ಕನ್ನಡ ಸಾಹಿತ್ಯಕ್ಕೆ ಸಾಹಿತ್ಯ ಸಮ್ಮೇಳನಗಳ ಕೊಡುಗೆ ಎಷ್ಟು?

ಮೇಳ ಎಂದರೆ ಗುಂಪು ,ಜೊತೆ ಸೇರುವುದು. ಮುಂತಾದ ಅರ್ಥದಲ್ಲಿ ಬಳಸಲಾಗುತ್ತದೆ. ಸಮ್ಮೇಳನ ಒಂದು ಒಳ್ಳೆಯ ಉದ್ದೇಶದಿಂದ ಸೇರಿದ ಒಂದು ಕಾರ್ಯಕ್ರಮ ಎನ್ನಬಹುದು.
ಕನ್ನಡ ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿ ಒಂದು ಉತ್ತಮ ಕಾರ್ಯಕ್ರಮ.
ವಿಶ್ವೇಶ್ವರಯ್ಯ ರವರು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಕ ಮಾಡಿದಾಗಿನಿಂದಲೂ ಈ ರೀತಿಯಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದು ಕೊಂಡು ಬಂದಿವೆ .ಅವು ವಿಶ್ವ ,  ಅಖಿಲಭಾರತ, ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಇಂದಿಗೂ ನಡೆದು ಕೊಂಡು ಬರುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮ್ಮೇಳನದಲ್ಲಿ ನಡೆಯುವ ಕೆಲ ಅನಪೇಕ್ಷಣೀಯ ಬೆಳವಣಿಗೆಗಳು .ಸಾಹಿತ್ಯ ಸಮ್ಮೇಳನ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ .
ಅಂದ ಮಾತ್ರಕ್ಕೆ ಸಮ್ಮೇಳನದಲ್ಲಿ ಕನ್ನಡದ ಕೆಲಸ ಆಗಿಲ್ಲ ಎಂದರೆ ಒಪ್ಪಲು ಸಾದ್ಯವಿಲ್ಲ.
ಪ್ರತಿ ಸಮ್ಮೇಳನದ ಹಿನ್ನೆಲೆಯಲ್ಲಿ ಹಲವಾರು ಕವಿಗಳ ಸಮ್ಮಿಳನ ಹೊಸ ಕವಿಮನಗಳಿಗೆ ಬರೆಯಲು ಪ್ರೇರಣೆ ನೀಡುವುದು ಸುಳ್ಳಲ್ಲ .ಸಮ್ಮೇಳನದ ಅಂಗವಾಗಿ ನಡೆವ ಪುಸ್ತಕ ಮಾರಾಟದ ಮತ್ತು ಪ್ರಕಾಶನ ಸಂಸ್ಥೆಗಳು ಕನ್ನಡ ಪುಸ್ತಕಗಳನ್ನು ಈಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಮಾಡಿ ಮುದ್ರಿಸಿ ಮಾರುವಲ್ಲಿ ಸಮ್ಮೇಳನದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ .
ಇನ್ನೂ ಕವಿ ಗೋಷ್ಠಿ. ವಿವಾದ ಗೋಷ್ಟಿ, ಮುಂತಾದವು ನಮ್ಮ ಭಾಷೆ ನೆಲ ಜಲ ಮುಂತಾದ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಸುವುದು ಭಾಷೆಯ ಬೆಳವಣಿಗೆಗೆ ಪೂರಕವಾಗಿವೆ .
ಸಮ್ಮೇಳನದಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿಲ್ಲ ಎಂಬ ಕೊರಗು‌ ಹಲವಾರು ಬಾರಿ ಕಾಡಿದೆ .ಅಂದ ಮಾತ್ರಕ್ಕೆ ನಿರ್ಣಯವನ್ನು ಅಂಗೀಕಾರ ಮಾಡುವುದು ಬೇಡ ಎಂದರೆ ಹೇಗೆ ಕೆಲವೊಮ್ಮೆ ನಾವು ಆ ದಿಕ್ಕಿನಲ್ಲಿ ಯೋಚಿಸಲು  ಸಹಾಯಕ ಮತ ಇದು ಪರೋಕ್ಷವಾಗಿ ನಮ್ಮ ಭಾಷೆ ,ನೆಲ ,ಜಲದ  ಅಭಿವೃದ್ಧಿಗೆ ಪೂರಕವಾಗಿರುವ ಉದಾಹರಣೆ ಇವೆ .
ಆದರೆ ಇತ್ತೀಚಿನ ಕೆಲ ಬೆಳವಣಿಗೆಯ ಗಮನಿಸಿ ನೋಡಿದರೆ ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನ ಅಥವಾ ಒಂದು ರಾಜಕೀಯ ಪಕ್ಷಗಳ ಸಮಾವೇಶ ಅಥವಾ ಸಭೆ ಆಗಿ ಮಾರ್ಪಟ್ಟಿತೋ ಏನೋ ಎಂಬ ಅನಮಾನ ಕಾಡದಿರದು .ಸಾಹಿತಿಗಳು ಪಕ್ಷಾತೀತರಾಗಿರಬೇಕೆಂದು ನಮ್ಮ ಅಪೇಕ್ಷಿಸುವ ಮನಸು ನಮ್ಮದಲ್ಲ ಆದರೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕೀಯವಾಗಿ ಬಳಸುವುದು ತಪ್ಪಲ್ಲವೇ ಹಾಗಂದ ಮಾತ್ರಕ್ಕೆ ಮುಂದಿನ ವರ್ಷಗಳಲ್ಲಿ ಸಮ್ಮೇಳನ ನಿಲ್ಲಿಸಿಬಿಡೋಣ ಎಂದರೆ ಮೂರ್ಖತನದ ಪರಮಾವಧಿ ಆಗುತ್ತದೆ ನಮ್ಮ ಮನೆಗಳಲ್ಲಿ ಚಿಕ್ಕ ಕಾರ್ಯಕ್ರಮ ಮಾಡಿದಾಗ ಬಂಧುಗಳು ,ಸ್ನೇಹಿತರು ಮತ್ತು ಹಿತೈಷಿಗಳು ಪಾಲ್ಗೊಂಡು ನಮ್ಮ ಸಂಬಂದ ಗಳು ಗಟ್ಟಿಯಾಗಿ ಮನಸಂತೋಷವಾಗುತ್ತದೆ ಅಂತಹ ಚಿಕ್ಕ ಕಾರ್ಯಕ್ರಮ ದಲ್ಲಿಯೂ ಕೆಲವು ಎಡವಟ್ಟು ಆಗಿರುತ್ತದೆ ಅಂದರೆ ಮುಂದೆ ಹಬ್ಬ .ಜಾತ್ರೆ, ಕಾರ್ಯ ಕ್ರಮ ಮಾಡದೇ ಇರುತ್ತೇವೆಯೇ?
ಇನ್ನೂ ಮುಂದಾದರೂ   ನಮ್ಮ ನಾಡು ನುಡಿ ಹಬ್ಬಗಳನ್ನು ಮತ್ತು ಸಾಹಿತ್ಯ ಸಮ್ಮೇಳನ ಮಾಡುವಾಗ ಸಾಹಿತ್ಯ ಮತ್ತು ಸಾಹಿತ್ಯ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಹಮ್ಮಿಕೊಂಡು ಮುನ್ನೆಡದರೆ ಖಂಡಿತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರ್ಥಕ ಆಚರಣೆಯಾಗುವುದರಲ್ಲಿ ಸಂದೇಹವಿಲ್ಲ.

ವಂದನೆಗಳೊಂದಿಗೆ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: