This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
13 ಜುಲೈ 2025
11 ಜುಲೈ 2025
ಆತ್ಮೀಯ ಗೆಳೆಯ..
ಇತ್ತೀಚೆಗೆ ಮೈಸೂರಿಗೆ ಹೋದಾಗ ಬಿ ಎಡ್ ಮಾಡುವಾಗ ಜೊತೆಯಲ್ಲಿ ಓದಿದ ಗೆಳೆಯ ಸುರೇಶ್ ಸಿಕ್ಕಿದ್ದರು. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನನ್ನ ಜೊತೆಗಿದ್ದು ನನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸ್ನೇಹಜೀವಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ,ಒಡನಾಡಿದ, ಸಂತಸದ ಕ್ಷಣಗಳನ್ನು ಮೆಲುಕು ಹಾಕಿದೆವು. ಸುರೇಶ್ ಈಗ P D O ಆಗಿ ಕಾರ್ಯ ಮಾಡುತ್ತಾರೆ.ಬಿ ಎಡ್ ಓದುವಾಗಲೇ ನಾನು ಅವರಿಗೆ ತಲೈವ ಎಂದಿದ್ದು ಈಗ ನಿಜಕ್ಕೂ ತಲೈವ ಆಗಿದ್ದಾರೆ. ನಾನೀಗ 27 ಪುಸ್ತಕ ಬರೆದಿರುವ ಲೇಖಕ, ಕವಿ ಎಂಬುದನ್ನು ತನ್ನ ಮಡದಿ ಮಕ್ಕಳಿಗೆ ಹೆಮ್ಮೆಯಿಂದ ಪರಿಚಯಿಸಿದರು.ಒಳ್ಳೆಯ ಬಿರಿಯಾನಿ ಊಟ ಹಾಕಿಸಿದ ಗೆಳೆಯ ಕಳೆದ ತೊಂಬತ್ತರ ದಶಕದ ನಮ್ಮ ದುರಿತ ಕಾಲ,ಹಾಗೂ ಆ ಕಾಲದಲ್ಲೂ ಎಂಜಾಯ್ ಮಾಡಿದ ಸವಿ ಕ್ಷಣಗಳನ್ನು ನೆನಪು ಮಾಡಿದರು. ಅವರ ಮಕ್ಕಳಿಗೆ ನನ್ನ ಕೃತಿಗಳನ್ನು ನೀಡಿ ಓದಲು ಹೇಳಿದೆ.ಧನ್ಯವಾದಗಳು🙏🙏 ತಲೈವ ಮತ್ತೊಮ್ಮೆ ಮಗದೊಮ್ಮೆ ಸಿಗೋಣ.ನಮ್ಮ ಸ್ನೇಹವನ್ನು ಸಂಭ್ರಮಿಸೋಣ...
ಇಂತಿ ನಿನ್ನ ಗೆಳೆಯ
ಸಿಹಿಜೀವಿ ವೆಂಕಟೇಶ್ವರ.
#FriendshipGoals #CherishedFriends #FriendshipMatters #BestiesForLife #TrueFriendship #FriendsForLife #BondingTime #BFFs #FriendshipVibes #MakingMemories #GoodFriends #FriendshipForever #UnderstoodByYou #LifelongFriends #CrazyAdventures #SupportSystem #FriendshipLove #DynamicDuos #FriendshipMoments #TogetherAlways
10 ಜುಲೈ 2025
ಗುರು ಪೂರ್ಣಿಮೆ
ಇಂದಿನ ಸುಭಾಷಿತ:-
"ಗು"ಕಾರಶ್ಚಾಂಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ । ಅಂಧಕಾರ ನಿರೋಧಿತ್ವಾತ್ "ಗುರು"ರೀತ್ಯಭಿಧೀಯತೇ ।। ಗುರು ಎಂಬ ಪಾದದಲ್ಲಿ ಗುಕಾರವು ಅಂಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಹೀಗಾಗಿ ಗುರು ಶಬ್ದಕ್ಕೆ ಅಂಧಕಾರವನ್ನು ನಾಶಮಾಡುವವನು ಎಂದರ್ಥ.
#TeacherLife #TeachersofInstagram #TeachingTips #InspireTeachers #TeacherAppreciation #ClassroomCommunity #TeacherGoals #EducationMatters #FutureLeaders #TeachTheFuture #EducatorLife #PassionForTeaching #TeacherTravel #LearnThroughPlay #ClassroomStories #TeachingInspiration #BackToSchool #TeachAndInspire #CultivatingYoungMinds
03 ಜುಲೈ 2025
ಸಿಹಿಜೀವಿಯ ಹನಿ
ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು
ಯಾರು ಇಲ್ಲದಿದ್ದರೂ ಚಿಂತೆ ಬೇಡ|
ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||
ಸಿಹಿಜೀವಿ ವೆಂಕಟೇಶ್ವರ.
02 ಜುಲೈ 2025
DHL ನ ಸ್ಪೂರ್ತಿದಾಯಕ ಕಥೆ
DHL ನ ಸ್ಪೂರ್ತಿದಾಯಕ ಕಥೆ 1969 ರಲ್ಲಿ ಮೂವರು ಯುವಕರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ತಮ್ಮ ವಿತರಣಾ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಮೊದಲನೆಯವನ ಹೆಸರು ಆಡ್ರಿಯನ್ ಡಾಲ್ಸಿ.ಎರಡನೆಯವ ಲ್ಯಾರಿ ಹಿಲ್ಬ್ಲೋಮ್. ಮೂರನೆಯವ ರಾಬರ್ಟ್ ಲಿನ್. ಹೀಗೇ ಆ ಮೂವರ ಹೆಸರಿನಲ್ಲಿ ಒಂದೊಂದು ಪದ ತೆಗೆದುಕೊಂಡು ಆರಂಭಿಸಿದ ಕಂಪನಿಯೇ DHL ! . 55 ವರ್ಷಗಳ ನಂತರ ಇಂದು DHL ಕಂಪನಿ 250 ವಿಮಾನಗಳನ್ನು ಹೊಂದಿದೆ. 32,000 ವಾಹನಗಳು, 550,000 ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಇಂದು DHL ಪ್ರಪಂಚದ ಎಲ್ಲೆಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.ಅದರ ಆದಾಯ ನೂರಾರು ಶತಕೋಟಿ ಡಾಲರ್‌ಗಳು! ಜೀವನದಲ್ಲಿ ಯೋಜನೆಗಳು, ವ್ಯವಹಾರ, ಯಶಸ್ಸು, ಕನಸುಗಳು, ಗುರಿಗಳ ಬಗ್ಗೆ ಮಾತನಾಡುವ ಜನರು ಯಾವಾಗಲೂ ನಿಮ್ಮ ಸುತ್ತ ಮುತ್ತ ಇರಲಿ. ನಕಾತ್ಮಕ, ಭಯಭೀತ, ಸೋಮಾರಿ ಜನರಿಂದ ದೂರವಿರಿ. ನೀವು ವ್ಯವಹಾರಕ್ಕೆ ಇಳಿದರೆ.ದೃಢವಾಗಿ ಇರಿ. ಅಂದಿನ DHL ಇಂದಿನ DHL ಆಗಲು 55 ವರ್ಷಗಳು ಬೇಕಾಯಿತು. ಯಶಸ್ಸಿಗೆ ಸಮಯ, ಶ್ರಮ, ಬುದ್ಧಿವಂತಿಕೆ ಮತ್ತು ತಾಳ್ಮೆ ಬೇಕು. ಯಶಸ್ಸು ನಿಮ್ಮದಾಗಲಿ... ಸಿಹಿಜೀವಿ ವೆಂಕಟೇಶ್ವರEntrepreneurship #EntrepreneurMindset #StartUpLife #BizTips #EntrepreneurJourney #SmallBusinessSuccess #GrowthMindset #InnovativeThinking #HustleAndGrind #BusinessMotivation #Suc




