ಇತ್ತೀಚೆಗೆ ಮೈಸೂರಿಗೆ ಹೋದಾಗ ಬಿ ಎಡ್ ಮಾಡುವಾಗ ಜೊತೆಯಲ್ಲಿ ಓದಿದ ಗೆಳೆಯ ಸುರೇಶ್ ಸಿಕ್ಕಿದ್ದರು. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನನ್ನ ಜೊತೆಗಿದ್ದು ನನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸ್ನೇಹಜೀವಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ,ಒಡನಾಡಿದ, ಸಂತಸದ ಕ್ಷಣಗಳನ್ನು ಮೆಲುಕು ಹಾಕಿದೆವು. ಸುರೇಶ್ ಈಗ P D O ಆಗಿ ಕಾರ್ಯ ಮಾಡುತ್ತಾರೆ.ಬಿ ಎಡ್ ಓದುವಾಗಲೇ ನಾನು ಅವರಿಗೆ ತಲೈವ ಎಂದಿದ್ದು ಈಗ ನಿಜಕ್ಕೂ ತಲೈವ ಆಗಿದ್ದಾರೆ. ನಾನೀಗ 27 ಪುಸ್ತಕ ಬರೆದಿರುವ ಲೇಖಕ, ಕವಿ ಎಂಬುದನ್ನು ತನ್ನ ಮಡದಿ ಮಕ್ಕಳಿಗೆ ಹೆಮ್ಮೆಯಿಂದ ಪರಿಚಯಿಸಿದರು.ಒಳ್ಳೆಯ ಬಿರಿಯಾನಿ ಊಟ ಹಾಕಿಸಿದ ಗೆಳೆಯ ಕಳೆದ ತೊಂಬತ್ತರ ದಶಕದ ನಮ್ಮ ದುರಿತ ಕಾಲ,ಹಾಗೂ ಆ ಕಾಲದಲ್ಲೂ ಎಂಜಾಯ್ ಮಾಡಿದ ಸವಿ ಕ್ಷಣಗಳನ್ನು ನೆನಪು ಮಾಡಿದರು. ಅವರ ಮಕ್ಕಳಿಗೆ ನನ್ನ ಕೃತಿಗಳನ್ನು ನೀಡಿ ಓದಲು ಹೇಳಿದೆ.ಧನ್ಯವಾದಗಳು🙏🙏 ತಲೈವ ಮತ್ತೊಮ್ಮೆ ಮಗದೊಮ್ಮೆ ಸಿಗೋಣ.ನಮ್ಮ ಸ್ನೇಹವನ್ನು ಸಂಭ್ರಮಿಸೋಣ...
ಇಂತಿ ನಿನ್ನ ಗೆಳೆಯ
ಸಿಹಿಜೀವಿ ವೆಂಕಟೇಶ್ವರ.
#FriendshipGoals #CherishedFriends #FriendshipMatters #BestiesForLife #TrueFriendship #FriendsForLife #BondingTime #BFFs #FriendshipVibes #MakingMemories #GoodFriends #FriendshipForever #UnderstoodByYou #LifelongFriends #CrazyAdventures #SupportSystem #FriendshipLove #DynamicDuos #FriendshipMoments #TogetherAlways
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ