This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
28 ಜೂನ್ 2025
ಸಿಹಿಜೀವಿಯ ಹನಿ...
26 ಜೂನ್ 2025
ಪ್ರತಿಭೆಗಳನ್ನು ಗೌರವಿಸೋಣ..
ತನ್ನ ಪಾಡಿಗೆ ತಾನು ಹೊಳೆಯುತ್ತಾ ಬದುಕಿದ್ದ ಮಿಂಚುಹುಳವನ್ನು ಹಾವೊಂದು ಬೆನ್ನಟ್ಟಲು ಪ್ರಾರಂಭಿಸಿತು. ಮಿಂಚುಹುಳು ನಿಂತು ಹಾವಿಗೆ ಕೇಳಿತು
"ನಾನು ನಿನ್ನ ಬಳಿ ಮೂರು ಪ್ರಶ್ನೆಗಳನ್ನು ಕೇಳಬಹುದೇ?"
ಹಾವು, "ಕೇಳು " ಎಂದಿತು.
ನಾನು ನಿನ್ನ ಆಹಾರ ಸರಪಳಿಗೆ ಸೇರಿದವನೇ?
ಹಾವು, "ಇಲ್ಲ" ಎಂದಿತು.
ನಾನು ನಿನಗೆ ಏನಾದರೂ ಮಾಡಿದೆಯೇ?
ಹಾವು, "ಇಲ್ಲ" ಎಂದಿತು.
ಹಾಗಾದರೆ ನೀನು ನನ್ನನ್ನು ಏಕೆ ನುಂಗಲು ಬಯಸುತ್ತೀಯ?
ಆಗ ಹಾವು ಉತ್ತರ ನೀಡಿತು "ನೀನು ಹೊಳೆಯುವುದನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ!"
ನಮ್ಮಲ್ಲೂ ಅದೇ ಕಥೆ. ಕೆಲವರು ತಮ್ಮ ಶ್ರಮ ಸಹಜ ಪ್ರತಿಭೆಯಿಂದ ಸಾಧನೆ ಮಾಡಿ ಹೆಸರು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಕಂಡರೆ ಕೆಲ ಸಂಕುಚಿತ ಮನೋಭಾವದವರಿಗೇನೋ ಸಂಕಟ. ಹೊಟ್ಟೆ ಉರಿ.
ಅವರ ಏಳಿಗೆಯನ್ನು ಹೊಳೆಯುವಿಕೆಯನ್ನು ನೋಡಲಾರರು. ಸಹಿಸಲಾರರು. ಇಂತಹ ಗುಣಗಳನ್ನು ತ್ಯಜಿಸೋಣ ಪ್ರತಿಭೆಗಳನ್ನು ಗೌರವಿಸೋಣ.ನಾವು ಬೆಳೆಯೋಣ ಇತರರನ್ನು ಬೆಳೆಸೋಣ.ಏನಂತೀರಾ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
25 ಜೂನ್ 2025
ನಮ್ಮ ದಾರಿ...
ತಲುಪಲು ನಮ್ಮ
ಜೀವನದ ಗುರಿ।
ನಾವೇ ಸವೆಸಬೇಕು
ನಮ್ಮ ದಾರಿ|
ಸಿಹಿಜೀವಿ ವೆಂಕಟೇಶ್ವರ
#KannadaKavana #Kavana #KannadaPoetry #KannadaLiterature #PoetryLovers #KannadaWriters #LiteraryArt #WrittenWord #IndianPoetry #CulturalHeritage #Verses #CreativeWriting #SpokenWord #ArtInWords #PoeticExpressions #LanguageOfLove #Storytelling #Inspiration
24 ಜೂನ್ 2025
ಸಂತೆ
ನಮ್ಮ ಬಾಲ್ಯದ ದಿನಗಳಲ್ಲಿ ಶನಿವಾರ ಬಂತು ಅಂದ್ರೆ ಏನೋ ಖುಷಿ.ಅದ್ರಲ್ಲೂ ಅಮ್ಮ ಸಂತೆಗೆ ಹೋಗ್ತಾರೆ ಅಂದ್ರೆ ಖುಷಿಯು ಇಮ್ಮಡಿಯಾಗ್ತಿತ್ತು.ಯಾಕಂದ್ರೆ ಸಂತೆಯಿಂದ ಅಮ್ಮ ತರಕಾರಿ ಕಮ್ಮಿ ತಂದ್ರೂ ಕಾರ ಮಂಡಕ್ಕಿ ಪಕ್ಕಾ ತರ್ತಿದ್ರು.ನಿನ್ನೆ ಅದೇ ಸಂತೆಗೆ ಅಮ್ಮನೊಂದಿಗೆ ಅಣ್ಣ ನಾನು ಹೋಗಿದ್ವಿ. ಅಮ್ಮ ಅನಾರೋಗ್ಯ ನಿಮಿತ್ತ ಕಾರಲ್ಲೇ ಕೂತಿದ್ರು.ಅಣ್ಣ ತರಕಾರಿ ತಂದ್ರು.ಕಾರ ಮಂಡಕ್ಕಿ ಮಾತ್ರ ತರಲಿಲ್ಲ.ಯಾಕಂದ್ರೆ ಅಮ್ಮ ಕಾರಮಂಡಕ್ಕಿ ತಿನ್ನೋ ಸ್ಥಿತಿಯಲ್ಲಿರಲಿಲ್ಲ."ನೀವ್ ತಿನ್ವಂತ್ರಿ ಕಾರ ಮಂಡಕ್ಕಿ ತಕ್ಕಳ್ರಪ್ಪ" ಅಂದ್ರು ಅಮ್ಮ ನಮ್ಮತ್ರ ದುಡ್ಡಿದ್ರೂ ಅವತ್ತು ನಾವು ಕಾರ ಮಂಡಕ್ಕಿ ತೊಗೊಳ್ಳಲಿಲ್ಲ.
#ChildhoodMemories #Nostalgia #RetroVibes #ThrowbackThursday #HappyTimes #ChildhoodAgain #MemoriesMatter #FondMemories #InnocenceLost #MemoryLane #GoodOldDays #BlastFromThePast #PreciousMoments #ThrowbackMemories #LifeAsAKid #JoyfulDays #GrowingUp #CherishedTimes #ForeverYoung

 



