ತನ್ನ ಪಾಡಿಗೆ ತಾನು ಹೊಳೆಯುತ್ತಾ ಬದುಕಿದ್ದ ಮಿಂಚುಹುಳವನ್ನು ಹಾವೊಂದು ಬೆನ್ನಟ್ಟಲು ಪ್ರಾರಂಭಿಸಿತು. ಮಿಂಚುಹುಳು ನಿಂತು ಹಾವಿಗೆ ಕೇಳಿತು
"ನಾನು ನಿನ್ನ ಬಳಿ ಮೂರು ಪ್ರಶ್ನೆಗಳನ್ನು ಕೇಳಬಹುದೇ?"
ಹಾವು, "ಕೇಳು " ಎಂದಿತು.
ನಾನು ನಿನ್ನ ಆಹಾರ ಸರಪಳಿಗೆ ಸೇರಿದವನೇ?
ಹಾವು, "ಇಲ್ಲ" ಎಂದಿತು.
ನಾನು ನಿನಗೆ ಏನಾದರೂ ಮಾಡಿದೆಯೇ?
ಹಾವು, "ಇಲ್ಲ" ಎಂದಿತು.
ಹಾಗಾದರೆ ನೀನು ನನ್ನನ್ನು ಏಕೆ ನುಂಗಲು ಬಯಸುತ್ತೀಯ?
ಆಗ ಹಾವು ಉತ್ತರ ನೀಡಿತು "ನೀನು ಹೊಳೆಯುವುದನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ!"
ನಮ್ಮಲ್ಲೂ ಅದೇ ಕಥೆ. ಕೆಲವರು ತಮ್ಮ ಶ್ರಮ ಸಹಜ ಪ್ರತಿಭೆಯಿಂದ ಸಾಧನೆ ಮಾಡಿ ಹೆಸರು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಕಂಡರೆ ಕೆಲ ಸಂಕುಚಿತ ಮನೋಭಾವದವರಿಗೇನೋ ಸಂಕಟ. ಹೊಟ್ಟೆ ಉರಿ.
ಅವರ ಏಳಿಗೆಯನ್ನು ಹೊಳೆಯುವಿಕೆಯನ್ನು ನೋಡಲಾರರು. ಸಹಿಸಲಾರರು. ಇಂತಹ ಗುಣಗಳನ್ನು ತ್ಯಜಿಸೋಣ ಪ್ರತಿಭೆಗಳನ್ನು ಗೌರವಿಸೋಣ.ನಾವು ಬೆಳೆಯೋಣ ಇತರರನ್ನು ಬೆಳೆಸೋಣ.ಏನಂತೀರಾ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ