ಸೋನು ನಿಗಮ್ ನಿನ್ನ ಹೆಸರಿನಲ್ಲಿ ಮಾತ್ರ ಬಂಗಾರವಿದ್ದರೆ ಸಾಲದು|
ಕನ್ನಡಿಗರ ಅವಮಾನಿಸುವ ನಿನಗೆ
ನಮ್ಮ ಅಭಿಮಾನ ದೊರಕದು||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅಂಚೆ ಇಲಾಖೆಯಿಂದ ಪಠ್ಯ ಪುಸ್ತಕ ಹಾಗೂ ಪುಸ್ತಕ ರವಾನೆಗೆ ‘ಜ್ಞಾನ ಅಂಚೆ’
ಪಠ್ಯಪುಸ್ತಕ ಹಾಗೂ ಸಾಹಿತ್ಯ ಕೃತಿಗಳು ಹಾಗೂ ಇತರೆ ಮುದ್ರಿತ ಪುಸ್ತಕಗಳ ರವಾನೆಗಾಗಿ ಅಂಚೆ ಇಲಾಖೆ ನೂತನವಾಗಿ ಜ್ಞಾನ ಆಂಚೆ (ಗ್ಯಾನ್ ಪೋಸ್ಟ್) ಎಂಬ ಸೇವೆಯನ್ನು ಆರಂಭಿಸಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರಾದ ಹರೀಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಮೇ 1 ರಿಂದ ಆರಂಭವಾಗಿರುವ ಈ ಸೇವೆಯ ಅಡಿಯಲ್ಲಿ ಪ್ರಕಾಶಕರು, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು, ಸರ್ಕಾರದ ಸ್ವಾಯತ್ತ ಸಂಸ್ಥೆಗಳು, ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ರವಾನಿಸಲು ಅನೂಕೂಲವಾಗಲಿದ್ದು ಈ ಸೇವೆಯು ಎಲ್ಲಾ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.
ಈ ಸೇವೆಯ ಅಡಿಯಲ್ಲಿ ಪುಸ್ತಕಗಳನ್ನು ಕಳುಹಿಸುವವರು ಪಾರ್ಸಲ್ ಮೇಲೆ “ಜ್ಞಾನ ಅಂಚೆ” ಎಂದು ಕಡ್ಡಾಯವಾಗಿ ಬರೆದಿರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಅಥವಾ ಬರಹದ ಸಂದೇಶ ಪತ್ರಗಳನ್ನು, ಬಿಲ್ ಬುಕ್ಸ್, ಆಹ್ವಾನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಈ ಸೇವೆಯಲ್ಲಿ ಕಳುಹಿಸಲು ಅವಕಾಶವಿರುವುದಿಲ್ಲ. ಕನಿಷ್ಠ 300 ಗ್ರಾಂ ನಿಂದ ಗರಿಷ್ಠ 5 ಕೆ.ಜಿಯವರೆಗೂ ಈ ವ್ಯವಸ್ಥೆಯಲ್ಲಿ ಪುಸಕ್ತಗಳನ್ನು ಕಳುಹಿಸಬಹುದು ಎಂದು ತಿಳಿಸಿರುವ ಅವರು ಪುಸ್ತಕಗಳನ್ನು ಕಳುಹಿಸುವವರ ಮತ್ತು ವಿಳಾಸದಾರರ ಸಂಪೂರ್ಣ ಅಂಚೆ ವಿಳಾಸವನ್ನು ದೂರವಾಣಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದ್ದಾರೆ.
ಜ್ಞಾನ ಅಂಚೆಯ ಶುಲ್ಕ ವಿವರ
ತೂಕ ಶುಲ್ಕ
300 ಗ್ರಾಂವರೆಗೆ ರೂ.20
301-500 ಗ್ರಾಂವರೆಗೆ ರೂ.25
501-1000 ಗ್ರಾಂವರೆಗೆ ರೂ.35
1001-2000 ಗ್ರಾಂವರೆಗೆ ರೂ.50
2001-3000 ಗ್ರಾಂವರೆಗೆ ರೂ.65
3001-4000 ಗ್ರಾಂವರೆಗೆ ರೂ.80
4001-5000 ಗ್ರಾಂವರೆಗೆ ರೂ.100
ನಾನಲ್ಲ ದರ್ಪತೋರತ
ಶೋಷಣೆಯ ಮಾಡುವ
ದೊಡ್ಡ ನಾಯಕ|
ದಿನವೂ ನನ್ನ ಪಾಡಿನ
ಕೆಲಸವನ್ನು ಶ್ರದ್ದೆಯಿಂದ
ಮಾಡುವ ಕಾರ್ಮಿಕ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಶುಭವಾಗಲಿಸೂರ್ಯಾವಂಶಿ,ನಿನ್ನ ಭವಿಷ್ಯ ವೈಭವವಾಗಿರಲಿ.
ಕಳೆದೆರಡು ದಿನಗಳಿಂದ ಎಲ್ಲರ ಬಾಯಲ್ಲಿ ನಲಿದಾಡುವ ಹೆಸರೇ ವೈಭವ್ ಸೂರ್ಯವಂಶಿ.
ಯಾರು ಈ ವೈಭವ್ ಸೂರ್ಯ ವಂಶಿ?
14 ವರ್ಷದ ಹುಡಗನೊಬ್ಬನನ್ನು ರಾಜಸ್ಥಾನ್ ರಾಯಲ್ಸ್ ಕೋಟಿ ಕೊಟ್ಟು ಐ ಪಿ ಎಲ್ ಆಟಗಾರನಾಗಿ ಕೊಂಡಾಗಲೇ ಬಹುತೇಕರು ಹುಬ್ಬೇರಿಸಿ ನೋಡಿದ್ದರು. ಚೊಚ್ಚಲ ಐಪಿಎಲ್ ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಸಿಕ್ಸ್ ಹೊಡೆದಾಗ ಜನ ಬೆರಗು ಗಣ್ಣಿನಿಂದ ನೋಡಿದ್ದರು.ಬೆಂಗಳೂರಿನ ವಿರುದ್ಧದ ಆಟದಲ್ಲಿ ಗಮನ ಸೆಳೆದಿದ್ದ ಸೂರ್ಯವಂಶಿಯ ವೈಭವವು ಪೂರ್ಣ ಪ್ರಮಾಣದಲ್ಲಿ ಪ್ರಜ್ವಲಿಸಿದ್ದು ಗುಜರಾತ್ ವಿರುದ್ಧದ ಪಂದ್ಯದಲ್ಲಿ.ವೇಗದ ಅರ್ಧ ಶತಕ, ವೇಗದ ಶತಕ ಬಾರಿಸಿ ತಂಡವನ್ನೂ ಗೆಲ್ಲಿಸಿ ತಾನೂ ಗೆದ್ದು ತನ್ನ ಗುರು ಗ್ರೇಟ್ ವಾಲ್ ದ್ರಾವಿಡ್ ಚರಣಗಳಿಗೆ ವಿನಮ್ರವಾಗಿ ವಂದಿಸಿ ಮುಗ್ಧ ನಗೆ ಬೀರಿದ ಹುಡುಗನ ಬಗ್ಗೆ ಖಂಡಿತವಾಗಿಯೂ ಹೆಮ್ಮೆಯಾಗುತ್ತದೆ.
ಮಾರ್ಚ್ 27 ತಾರೀಖಿನಂದು 2011ರಲ್ಲಿ ಬಿಹಾರದ ಸಮಷ್ಟಿಪುರದ ತಾಜ್‌ಪುರದಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲಿಯೇ ಗಮನಾರ್ಹ ಸಾಧನೆಗಳಿಗೆ ಹೆಸರುವಾಸಿಯಾದ ಭಾರತೀಯ ಕ್ರಿಕೆಟಿಗ. ಎಡಗೈ ಬ್ಯಾಟ್ಸ್‌ಮನ್ ಮತ್ತು ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್ ಆಗಿರುವ ಈ ಬಾಲಕ ಈಗ ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾನೆ.
ಜನವರಿ 2024 ರಲ್ಲಿ ಮುಂಬೈ ವಿರುದ್ಧ ಬಿಹಾರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಈ ಪೋರನ ವಯಸ್ಸು 12 ವರ್ಷ ಮತ್ತು 284 ದಿನಗಳು!
ಬಿಹಾರ ಪರ ಪಾದಾರ್ಪಣೆ ಮಾಡಿದ ಎರಡನೇ ಕಿರಿಯ ಆಟಗಾರ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಕಿರಿಯ ಭಾರತೀಯ ಎಂಬ ಮನ್ನಣೆಯನ್ನು ಪಡೆದ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾದ ಈ ಬಾಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ. ತಮ್ಮ ತಂಡ ಎರಡು ರನ್‌ಗಳ ಸೋಲಿನ ಹೊರತಾಗಿಯೂ ಅವನ 20 ಎಸೆತಗಳಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಸೇರಿದಂತೆ 34 ರನ್ ಗಳಿಸಿದ್ದು ಮೆಚ್ಚುಗೆಗೆ ಅರ್ಹ.
ಸೂರ್ಯವಂಶಿ ಒಂಬತ್ತನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ. ಆರಂಭದಲ್ಲಿ ಅವರ ತಂದೆ ರೈತ ಮತ್ತು ಅರೆಕಾಲಿಕ ಪತ್ರಕರ್ತ ಸಂಜೀವ್ ಅವರಿಂದ ತರಬೇತಿ ಪಡೆದು ನಂತರ ಸಮಸ್ತಿಪುರದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸೇರಿದ. ಬಳಿಕ ಮಾಜಿ ರಣಜಿ ಆಟಗಾರ ಮನೀಶ್ ಓಜಾ ಅವರ ಅಡಿಯಲ್ಲಿ ತರಬೇತಿ ಪಡೆದ. ಅವನ ಪ್ರತಿಭೆ ಬೆಳಕಿಗೆ ಬಂದದ್ದು ವಿನೂ ಮಂಕಡ್ ಟ್ರೋಫಿಯಲ್ಲಿ! ಆ ಪಂದ್ಯದಲ್ಲಿ ಅವನ 12 ನೇ ವಯಸ್ಸಿನಲ್ಲಿ ಐದು ಪಂದ್ಯಗಳಲ್ಲಿ 400 ರನ್ ಗಳಿಸಿ ಎಲ್ಲರ ಗಮನ ಸೆಳೆದ. ದೇಶೀಯ ಪಂದ್ಯಾವಳಿಗಳಲ್ಲಿ ಮತ್ತು ನಾಗ್ಪುರದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ. ಅಲ್ಲಿ ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಐಪಿಎಲ್ ಸೆಲೆಕ್ಟರ್ ಗಮನ ಸೆಳೆದ.
ಈಗ ಇಡೀ ಜಗದ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ಆಗಿರುವ ಈ ಪ್ರತಿಭಾವಂತ ಬಾಲಕನ ಪ್ರತಿಭೆ ಜನರ ಅತಿಯಾದ ನಿರೀಕ್ಷೆಯ ಭಾರದಿಂದ ನಲುಗದಿರಲಿ ಎಂಬುದೇ ನನ್ನ ಆಶಯ. ಶುಭವಾಗಲಿ ಸೂರ್ಯಾವಂಶಿ.ನಿನ್ನ ಭವಿಷ್ಯ ವೈಭವವಾಗಿರಲಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು