ಅಭಿಮಾನಿಗಳು ಈಗ ಇನ್ನೂ ಹೆಚ್ಚು
ಮಾಡ್ತೇವೆ ಸದ್ದು|
ಕಾರಣ ಅತಿ ಹೆಚ್ಚು ರನ್ ಹೊಡೆದದ್ದಕ್ಕೆ
ಸಿಕ್ಕಿದೆಯಲ್ಲ ನಮ್ಮ ಕಿಂಗ್ ಗೆ
ಟೋಪಿ (purple cap)ನೇರಳೆ ಬಣ್ಣದ್ದು|
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅಭಿಮಾನಿಗಳು ಈಗ ಇನ್ನೂ ಹೆಚ್ಚು
ಮಾಡ್ತೇವೆ ಸದ್ದು|
ಕಾರಣ ಅತಿ ಹೆಚ್ಚು ರನ್ ಹೊಡೆದದ್ದಕ್ಕೆ
ಸಿಕ್ಕಿದೆಯಲ್ಲ ನಮ್ಮ ಕಿಂಗ್ ಗೆ
ಟೋಪಿ (purple cap)ನೇರಳೆ ಬಣ್ಣದ್ದು|
ತೃಪ್ತಿಕರವಾದ ಜೀವನ ನಮ್ಮದಾಗಲಿ..
ಮಾನವನ ಗುಣವೇ ಹಾಗೆ.ಇಷ್ಟು ಇದ್ದರೆ ಮತ್ತಷ್ಟು ಬೇಕು.ಮತ್ತಷ್ಟು ಬಂದರೆ ಮಗದೊಷ್ಟು ಬೇಕು ಎಂಬ ಮಹಾದಾಸೆ ಬೆಳೆಯುತ್ತಲೇ ಇರುತ್ತದೆ. ಇರುವುದಲ್ಲೇ ತೃಪ್ತಿಯಿಂದ ಜೀವಿಸುವವರು ಬಲು ವಿರಳ.ಅತಿಯಾಸೆಯಿಂದ ಅತಿಯಾಗಿ ಪಡೆಯಲು ಹೋಗಿ ಪೀಕಲಾಟಕ್ಕೆ ಸಿಲುಕುವವರನ್ನು ಎಲ್ಲೆಡೆ ಕಾಣುತ್ತೇವೆ. ಅಂತದೇ ವ್ಯಕ್ತಿಯ ಕಥೆ ಓದಿ. ಭಕ್ತನೊಬ್ಬ ಭಗವಂತನನ್ನು ಪ್ರಾರ್ಥಿಸಿ "ತನಗೆ ಬೇಕಾದುದೆಲ್ಲವನ್ನು ತಾನು ಕೇಳಿದ ಒಡನೆ ದೊರಕಬೇಕು ಮತ್ತು ನಾನು ಹೇಳಿದ ಕೆಲಸಗಳು ತಾನು ಹೇಳಿದ ತಕ್ಷಣ ಜರುಗಬೇಕು ಹಾಗೆ ನಡೆಸಿ ಕೊಡುವ ಒಬ್ಬನನ್ನು ನನಗೆ ವರವಾಗಿ ಕರುಣಿಸು"ಎಂದು ಬೇಡಿದ.ಭಗವಂತ ಹೇಳಿದ "ನೋಡು ಆಲೋಚನೆ ಮಾಡು ನಾನು ನಿನಗೆ ವರವನ್ನು ಕೊಡುವೆ ಅದರ ಫಲಾ ಫಲಗಳನ್ನು ನೀನು ಅನುಭವಿಸುವುದಕ್ಕೆ ತಯಾರಿದ್ದರೆ ನಿನಗೆ ನಾನು ವರವನ್ನು ಕೊಡುತ್ತೇನೆ". ಭಕ್ತನು ಬಹಳ ಸಂತೋಷದಿಂದ ಆಗಲಿ ಎಂದ. ಭಗವಂತನು ಅವನ ಜೊತೆಗೆ ಒಂದು ಭೂತವನ್ನು ಕಳುಹಿಸಿದನು.
ಭಕ್ತನಿಗೆ ಖುಷಿಯೋ ಖುಷಿ. ಆ ಭೂತಕ್ಕೆ ನನಗೆ ಒಂದು ದೊಡ್ಡ ಅರಮನೆ ಬೇಕು ಎಂದಾಗ ಆ ಭೂತ ತಕ್ಷಣ ಅವನಿಗೆ ಒಂದು ಅರಮನೆಯನ್ನು ಕಟ್ಟಿಸಿತು. ನನಗೆ ಪಂಚ ಭಕ್ಷ ಪರಮಾನ್ನ ಬೇಕು ಅಂದಾಗ ಅದು ಅವನ ಮುಂದೆ ಬಂತು. ನನಗೆ ಮುತ್ತು, ವಜ್ರ ಬಂಗಾರ ಒಡವೆಗಳು ಬೇಕು ಅಂದಾಗ ಅವುಗಳೂ ಅವನ ಮುಂದೆ ಪ್ರತ್ಯಕ್ಷ ವಾದವು. ಆದರೆ ಆ ಭೂತ ಭಕ್ತನಿಗೆ ಒಂದಾದ ಮೇಲೆ ಒಂದು ಕೆಲಸ ಕೊಡು ಮತ್ತು ಕೊಡುತ್ತಲೇ ಇರಬೇಕು ನನಗೆ ಸುಮ್ಮನೆ ಇರಲು ಸಾಧ್ಯವಿಲ್ಲ ನೀನು ನನಗೆ ಒಂದಾದ ಮೇಲೆ ಒಂದು ಕೆಲಸ ಕೊಡುತ್ತಿರಲೇಬೇಕು ಎಂದಾಗ ಈ ಭಕ್ತನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಭಕ್ತನಿಗೆ ಬೇರೆ ಯಾವ ಕೆಲಸವೂ ಮಾಡಲು ಆ ಭೂತ ಬಿಡದೆ ನೀನು ನನಗೆ ಪುರುಸೊತ್ತಿಲ್ಲದೆ ಕೆಲಸ ಕೊಡುತ್ತಿರಬೇಕು ಇಲ್ಲದಿದ್ದರೆ ನಿನ್ನನ್ನೇ ನಾನು ತಿಂದು ಮುಗಿಸಿ ಬಿಡುವೆ ಎಂದು ಹೆದರಿಸಿತು. ಆ ಭಕ್ತ ಊಟ ಮಾಡುವುದಕ್ಕೂ ಬೇರೆ ಏನು ಕೆಲಸ ಮಾಡುವುದಕ್ಕೂ ಈ ಭೂತ ಬಿಡಲಿಲ್ಲ. ಆಗ ಆ ಭಕ್ತನಿಗೆ ತಾನು ಅದು ಬೇಕು ಇದು ಬೇಕು ಎಂದು ಭಗವಂತನನ್ನು ಕೇಳಿದ್ದು ತನಗೆ ಕಷ್ಟ ವಾಯಿತು ಎಂದು ಮತ್ತೆ ಭಗವಂತನನ್ನು ಪ್ರಾರ್ಥಿಸಿದ. "ದಯವಿಟ್ಟು ಈ ಭೂತದಿಂದ ನನಗೆ ಬಿಡುಗಡೆ ಕೊಡಿಸು. ಈ ಭೂತಕ್ಕೆ ಕೆಲಸ ಹೇಳುವುದು ನನಗೆ ಅಸಾಧ್ಯ ನನಗೆ ಏನು ಬೇಡ ಈಗ ನನಗಿರುವುದೇ ಸಾಕು" ಎಂದನು. ಆಗ ಭಗವಂತ ಆ ಭೂತವನ್ನು ಕರೆದು "ನೋಡು ಅಲ್ಲಿ ನಿಂತಿರುವ ನಾಯಿಯ ಬಲವನ್ನು ನೆಟ್ಟಗೆ ಮಾಡು" ಎಂದು ಹೇಳಿ ಆ ಭಕ್ತನನ್ನ್ನುಭೂತದ ಕಷ್ಟದಿಂದ ಪಾರು ಮಾಡಿದನು.
ಭಗವಂತ ನಮಗೇನು ಬೇಕು ಎಂದು ಅರ್ಥಮಾಡಿಕೊಂಡು ಕೊಡಬೇದ್ದನ್ನು ಈಗಾಗಲೇ ಕೊಟ್ಟಿರುವನು. ಇದರ ಜೊತೆಗೆ ಬೆಲೆಕಟ್ಟಲಾಗದ ಅಮೂಲ್ಯವಾದ ಕಾಯ ನೀಡಿ ಸೂಕ್ತವಾದ ಕಾಯಕ ಮಾಡಲು ಹೇಳಿರುವನು. ಅದಕ್ಕೆ ನಾವು ಅವನಿಗೆ ಸದಾ ಕೃತಜ್ಞತೆಯಿಂದ ಇದ್ದು ಇರುವುದರಲ್ಲೇ ತೃಪ್ತಿಕರವಾಗಿ ಜೀವನ ಸಾಗಿಸುವ ಕಲೆಯನ್ನು ರೂಢಿಸಿಕೊಂಡು ಬಾಳಬೇಕು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
ಇರುವುದೇ ವರವು.
ನಾವು ಇಲ್ಲಿ ಸಂಪತ್ತನ್ನು ಹುಡುಕುತ್ತಿದ್ದರೆ ಅನೇಕರು ಆರೋಗ್ಯವನ್ನು ಹುಡುಕುತ್ತಿದ್ದಾರೆ.
ನಾವು ಇಲ್ಲಿ ಆರೋಗ್ಯವನ್ನು ಹುಡುಕುತ್ತಿದ್ದರೆ ಬಹುತೇಕರು ಮರಣ ಹೊಂದಿದ್ದಾರೆ.
ನಾವು ಅಧಿಕಾರವನ್ನು ಹುಡುಕುತ್ತಿದ್ದರೆ ಕೆಲವರು ಅದನ್ನು ಪಡೆದುಕೊಂಡು ಶಕ್ತಿಹೀನರಾಗಿದ್ದಾರೆ.
ನಾವು ಫ್ಯಾನ್ಸಿ ಕಾರನ್ನು ಕೊಂಡು ಓಡಿಸಲು ಬಯಸುತ್ತಿರುವಾಗ ಅಲ್ಲಾರೋ ಕಾರು ಅಪಘಾತದಲ್ಲಿ ಸಾಯುತ್ತಿದ್ದಾರೆ.
ನಾವು ಭೂಮಿಯಿಂದ ಮೇಲಕ್ಕೆ ಹೊಸ ಮಹಲುಗಳನ್ನು ಕಟ್ಟುವಾಗ ಕೆಲವರು ಭೂಮಿಯ ಕೆಳಗೆ ಹೊಸ ಸಮಾಧಿಯನ್ನು ಅಗೆಯುತ್ತಿದ್ದಾರೆ.
ನಾವು ಆಹಾರವನ್ನು ಕಸದ ಬುಟ್ಟಿಗೆ ಎಸೆದು ಪೋಲು ಮಾಡುವಾಗ ಬೇರೊಬ್ಬರು ತಿನ್ನಲು ಅಗಳು ಅನ್ನ ಹುಡುಕುತ್ತಿದ್ದಾರೆ.
ನಾವು ನಮ್ಮ ಸ್ಥಿತಿಯನ್ನು ಉತ್ತಮ ಪಡಿಸಲು ಭಗವಂತನನ್ನು ಕೇಳುವಾಗ ಬೇರೊಬ್ಬರು ನಮ್ಮ ಸ್ಥಿತಿಗೆ ಬರಲು ಪ್ರಾರ್ಥಿಸುತ್ತಿದ್ದಾರೆ.
ನಾವು ಹೆರಿಗೆಯ ಆಚರಣೆ ಮಾಡುವಾಗ ಅಲ್ಲಾರೋ ಮಸಣದಲ್ಲಿ ಕಣ್ಣೀರಿಡುತ್ತಿದ್ದಾರೆ.
ನಾವು ಸಹಜವಾಗಿ ಮೂತ್ರ ವಿಸರ್ಜಿಸುವಾಗ ಅಥವಾ ನೀರು ಕುಡಿಯುವಾಗ ಮತ್ತಾರೋ ಅದೇ ಉದ್ದೇಶಕ್ಕಾಗಿ ಪೈಪ್ ಬಳಸುತ್ತಿದ್ದಾರೆ.
ಇರುವುದೇ ವರವೆಂದು ಅರಿತು ಸಿಹಿಜೀವಿಗಳಾಗುವುದನ್ನು ಮರೆತು ಇಲ್ಲದಿರುವುದರ ಬಗ್ಗೆ ಕೊರಗಿ ಮರುಗುತ್ತಿದ್ದಾರೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
10G ಗೆ ದಾಪುಗಾಲಿಟ್ಟ ಡ್ರಾಗನ್..
ಭಾರತದ ಕೆಲ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ಭಾರತದ ಎಲ್ಲಾ ಕಡೆ 5G ಸೇವೆ ಅರಂಭಿಸಿದ್ದೇವೆ ಎಂದು ನಾಮಮಾತ್ರಕ್ಕೆ ಹೇಳುತ್ತಿವೆ.ಇನ್ನೂ 2G ಮುಟ್ಟದ ಗ್ರಾಮಗಳಿವೆ. ನಾನಿರುವ ತುಮಕೂರಿನಲ್ಲಿ ನನ್ನ ಒಂದೇ ಮೊಬೈಲ್ ನಲ್ಲಿ ಎರಡು ಕಂಪನಿಗಳ 5G ಸಿಮ್ ಇದ್ದರೂ ಇಂಟರ್ನೆಟ್ ಸ್ಪೀಡ್ ಇನ್ನೂ kbps ನಲ್ಲೇ ಇದೆ.ಇನ್ನೂ ಹಳ್ಳಿಗಳ ನೆಟ್ವರ್ಕ್ ನೀವೇ ಯೋಚಿಸಿ. ನಮ್ಮ ಕಥೆ ಇದಾದರೆ ಚೀನಾವು ಆರು, ಏಳಲ್ಲ 10G ಇಂಟರ್ನೆಟ್ ಸೇವೆಯನ್ನು ಪರೀಕ್ಷೆ ಮಾಡಿ ಜಗತ್ತಿಗೆ ಅಚ್ಚರಿಯ ಸಂದೇಶ ನೀಡಿದೆ.
ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಹೆಬ್ಬೆಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಅನುಷ್ಠಾನಗೊಳಿಸಿದೆ.
ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ಸ್ಪೀಡ್ 100 ಎಂಬಿ ಪಿಎಸ್ ಒಳಗಿದೆ. ಆದರೆ ಚೀನಾವು 1000 ಎಂ ಬಿ ಪಿಎಸ್ ವೇಗದ ಬ್ರಾಡ್‌ಬ್ಯಾಂಡ್ ಪರಿಚಯಿಸುವ ಮೂಲಕ ಇಂಟರ್ನೆಟ್ ಮೂಲಸೌಲಭ್ಯ ಕ್ಷೇತ್ರದಲ್ಲಿ ಆ ದೇಶ ಬಹುದೊಡ್ಡ ಜಿಗಿತ ದಾಖಲಿಸಿದೆ.ಇದರ ಪರಿಣಾಮವಾಗಿ
900 ಜಿಬಿಯಷ್ಟು ಭಾರಿ ಫೈಲ್‌ಗಳನ್ನು ಈ ತಂತ್ರಜ್ಞಾನದಿಂದ ಕೆಲ ಸೆಕೆಂಡಲ್ಲಿ ಡೌನ್‌ಲೋಡ್ ಮಾಡಬಹುದು ಈ ಸ್ಪೀಡ್ ನಿಂದ
8ಕೆ ವಿಡಿಯೋ ಸ್ಟ್ರೀಮಿಂಗ್, ಅಡ್ವಾನ್ಸ್ ಕ್ಲೌಡ್ ಕಂಪ್ಯೂಟಿಂಗ್‌ಗೆ ಅನುಕೂಲವಾಗಲಿದೆ.
ಭಾರತದ ಟೆಲಿಕಾಂ ಕ್ಷೇತ್ರವು ಮುಂದಿನ ವರ್ಷ 6G ಅನುಷ್ಠಾನ ಮಾಡಲು ತಯಾರಿ ನಡೆಸಿದೆ. 10 G ಗೆ ಹೋಗಲು ಇನ್ನೂ ಎಷ್ಟು ಸಂವತ್ಸರ ಕಳೆಯಬೇಕೋ ಆ ಭಗವಂತನಿಗೇ ಗೊತ್ತು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಸಿಹಿಜೀವಿಯ ಹನಿ
ಎನಿತು ಕಾಲ ಕುಳಿತೇ
ಇರುವೆ ಚಿಂತಿಸುತಾ|
ಏಳು ಎದ್ದೇಳು ಸಂತಸಪಡೆ
ಕಾಯಕ ಮಾಡುತಾ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು