23 ಜುಲೈ 2022

ಸ್ವರಾಜ್ಯಕ್ಕೆ ಮುಕ್ಕಾಲ್ನೂರು ....

 

*#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು @75*



ಪರಕೀಯರ ಸಂಕೋಲೆಯಿಂದ ಬಿಡಿಸಿಕೊಳ್ಳಲು

ಬಲಿದಾನ ಮಾಡಿದ ಮಹನೀಯರು ನೂರಾರು | 

ಅವರೆಲ್ಲರನ್ನೂ ಸ್ಮರಿಸುತ್ತಾ ನಮ್ಮರಾಷ್ಟ್ರವನ್ನು ಇನ್ನೂ ಸದೃಡಗೊಳಿಸುವ ಸಂಕಲ್ಪದಿಂದ 

ಆಚರಿಸೋಣ ಸ್ವರಾಜ್ಯದ ಮುಕ್ಕಾಲ್ನೂರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

ನಾವುಗಳೇ ಹಾಗೆ....


 


ನಾವುಗಳೇ ಹಾಗೆ....


ನಾವುಗಳೇ ಹಾಗೇ 

ಗೊತ್ತಾಗುವುದೇ ಇಲ್ಲ 

ನಮಗೇನು ಇಷ್ಟ

ಅರ್ಥ ಮಾಡಿಕೊಳ್ಳಲು 

ನಮಗೇ ಬಲು ಕಷ್ಟ  


ವಯಸ್ಸಾದ ಹಿರಿಯರಿಗೆ 

ಅನ್ನ ನೀಡಲು ಯೋಚಿಸುವರು ಈ ಜನ 

ಅವರು ಸತ್ತಾಗ ತಿಥಿಯಂದು ಎಲ್ಲರನೂ ಕರೆದು ಹಾಕುವರು ಭರ್ಜರಿ ಬೋಜನ .


ಬದುಕಿದ್ದಾಗ ಕೆಲವರಿಗೆ ತೊಡಲು

ಸಿಗುವುದಿಲ್ಲ ಒಳ್ಳೆಯ ಬಟ್ಟೆ 

ಹೆಣಕ್ಕೆ ಸಿಂಗಾರ ಮಾಡಲು 

ತಂದೇ ತರುವರು ಹೊಸ ಬಟ್ಟೆ 


ನಮಗೆ ಆರೋಗ್ಯ ಕೆಟ್ಟಾಗ 

ಯಾರೂ ಬಂದು ಮೂಸುವುದಿಲ್ಲ

ಅಂತಿಮ ಯಾತ್ರೆಯಲ್ಲಿ ಶವಕ್ಕೆ

ಹಾಕಿದ  ಸುಗಂಧ ಮಾಸುವುದಿಲ್ಲ .


ಬದುಕಿದ್ದಾಗ ಕಷ್ಟದಲ್ಲಿರುವವರ ಕಂಡು ಹಂಗಿಸಿ ನಗುವರು 

ಅದೇ ವ್ಯಕ್ತಿ ಸತ್ತಾಗ ತೋರ್ಪಡಿಕೆಗೆ   ಬಿಕ್ಕಿ ಬಿಕ್ಕಿ ಅಳುವರು .


ಬದುಕಿದ್ದಾಗ ಕನಿಷ್ಟ ಗೌರವ ಕೊಡದೆ 

ಮಾಡುವರು ತಿರಸ್ಕಾರ 

ಸತ್ತಾಗ ಭಯ ಭಕ್ತಿಯಿಂದ ಮಾಡುವರು ನಮಸ್ಕಾರ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529 







21 ಜುಲೈ 2022

ಶ್ವಾನ...



ಶ್ವಾನ..

ತಾತ್ಸರ ಬೇಡ
ಇದು ಕೇವಲ ನಾವಾಕುವ
ಅನ್ನತಿಂದು ಮನೆ
ಕಾಯುವ ಶ್ವಾನ |
ಕೆಲವರಿಗೆ ಮಾತ್ರ
ಅರ್ಥವಾಗಿದೆ ನಾಯಿ
ಕೆಳವರ್ಗದ ಪ್ರಾಣಿಯಲ್ಲ
ವಿಧೇಯತೆಗೊಂದು ವ್ಯಾಖ್ಯಾನ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


 

19 ಜುಲೈ 2022

ನಿನ್ನ ಇರವ ನಂಬಿ...


 ನಿನ್ನ ಇರವ ನಂಬಿ...


ಗುಡಿ, ಮಸೀದಿ, ಚರ್ಚಿಗೆ ಬಂದು 

ಕಷ್ಟ ಕಾಲದಿ ಕರೆಯುತಲೆ ಇದ್ದೆ|

ನೀ ಬರಲೇ ಇಲ್ಲ ನಾ ಕರೆದಾಗ

ಕಣ್ಣ ತೆರೆದು ನೋಡಿದಾಗ 

ನೀ ಅಲ್ಲಿರಲಿಲ್ಲ ನನ್ನೊಳಗಿದ್ದೆ ||


ಸಿಹಿಜೀವಿ

18 ಜುಲೈ 2022

*ತೊಂಭತ್ತು ...ತೊಂಭತ್ತು...

 



*ತೊಂಭತ್ತು... ತೊಂಬತ್ತು*


ಸಂಶೋಧನೆಯೊಂದು 

ಹೇಳಿದೆ ಮದ್ಯ ಸೇವಿಸಿದರೆ

ತಪ್ಪಿಲ್ಲವಂತೆ ದಾಟಿದರೆ      ನಮ್ಮ ವಯಸ್ಸು ನಲವತ್ತು|

ಇಂದಿನಿಂದಲೇ ಬಿಟ್ಟುಕೊಂಡು ಬಿಡೋಣ 

ಆಗಾಗ ತೊಂಭತ್ತು ,ತೊಂಭತ್ತು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ