04 ಜುಲೈ 2018

ಜಗದ ಜನ ( ಕವನ)

*ಜಗದ ಜನ*

ನಾವೆಲ್ಲರೂ ದೇಶದಲಿರುವ  ಜಗದ ಜನ
ಮಾಡಲು ಪಣತೊಡೋಣ ಜಗವ ಹೂಬನ

ಬಿಳಿ‌‌ ಕರಿ ಬಣ್ಣಗಳೆನೇ ಇರಲಿ
ಉದ್ದ ಗಿಡ್ಡ  ಅಕಾರಗಳ ಗೊಡವೆಯೇಕೆ?
ಗಡಿಗಳ ಗೊಡವೆಯೇತಕೆ ಬೇಕು
ನಮ್ಮ ಮದ್ಯೆ ಜಗಳಗಳು ಬೇಕೆ?

ಇರಲಿ ನಮ್ಮ ದೇಶದ ಮೇಲೆ ಅಭಿಮಾನ
ಮರೆಯದಿರೋಣ ನಾವು ಜಗದ ಜನಗಳ
ನಮ್ಮ ಧರ್ಮ ನಮಗೆ ಮೇಲು
ಗೌರವಿಸೋಣ ಬೇರೆ ಧರ್ಮಗಳ

ಭಯೋತ್ಪಾದನೆ, ಪ್ರಾಂತೀಯತೆ  ತರವಲ್ಲ
ಪ್ರೀತಿ ವಿಶ್ವಾಸ ಮರೆವುದು ಬೇಕಿಲ್ಲ
ಜೊತೆಯಾಗಿ ಸಾಗೋಣ ಬೆಳೆಯೋಣ
ಭುವಿ ನಂದನವನ‌ ಮಾಡಿ ತಿನ್ನೋಣ ಸವಿ ಬೆಲ್ಲ

ಸ್ವರ್ಗ ಸಮಾನ ಜಗದ ಕನಸ ಕಾಣೋಣ
ಮಾನವ ಸಂಪನ್ಮೂಲ ಬೆಳೆಸೋಣ
ವಸುಧೈವಕುಟುಂಬ ಪರಿಕಲ್ಪನೆ ಬೆಳೆಸಿ
ಸರ್ವ ಜನಹಿತ ಕೋರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


03 ಜುಲೈ 2018

ಹುಚ್ಚು ಬಿಡಿಸು(ಕವನ)

*ಹುಚ್ಚು ಬಿಡಿಸು*

ಸಂಜೆಯ  ವೇಳೆಯಲಿ
ಸಾಗರತೀರದಿ ನಡೆವಾಗ
ಸೂರ್ಯಾಸ್ತವಾದಾಗ
ನಿನ್ನ ನೆನಪಾಗುವುದು

ಬೇಸಿಗೆ ಕಾಲದಲಿ
ಮೈ ಬಿಸಿಯಾದಾಗ
ನನ್ನ ಪಕ್ಕದಲ್ಲಿ ನೀನಿರುವಂತೆ
ನಿನ್ನ ನೆನಪಾಗುವುದು

ಮಳೆ  ಬಿಲ್ಲು ಕಂಡಾಗ
ಮಳೆಯಲ್ಲಿ ನೆನೆದಾಗ
ಇಳೆಯು ತಂಪಾದಾಗ
ನಿನ್ನ ನೆನಪಾಗುವುದು

ಶಿಲಾಬಾಲಿಕೆಯರ ನೋಡಿದಾಗ
ಕಲೆಯ ಚಿತ್ರಪಟದಲೂ ನೀನೆ
ಭುವನಸುಂದರಿ ನೋಡಿ
ನಿನ್ನ ನೆನಪಾಗುವುದು

ಹಗಲಿರುಳು ನಿನದೇ ಕನವರಿಕೆ
ಮರುಳನಾಗಿರುವೆ ನಿನ್ನ ನೋಡದೆ
ಬಂದು ಸೇರು ನನಗೆ ಮೋಸ ಮಾಡದೆ
ಪ್ರೀತಿ ತೋರಿ  ನನ್ನ ಹುಚ್ಚು ಬಿಡಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 ಜುಲೈ 2018

ನನಸಾದೀತೇ?(ಭಾವಗೀತೆ)

*ನನಸಾದೀತೆ?*

ಹಸಿವಿನಿಂದ ಸಾಯುವರು ಲಕ್ಷ
ಅಜೀರ್ಣದಿಂದ ಸಾಯವರು ಲಕ್ಷ
ಆಹಾರದ ಪೋಲಾಗುತಿದೆ ಲಕ್ಷ ಲಕ್ಷ
ಆದರೂ ನಾವು ನೀಡಿಲ್ಲ ಅದರೆಡೆ ಲಕ್ಷ್ಯ

ಉದರ ನಿಮಿತ್ತ ಬಹುಕೃತ ವೇಷ
ಕೆಲ ನೀತಿ ನಿಯತ್ತು ಪ್ರಮಾಣಿಕ
ಮತ್ತೆ ಕೆಲವು .ಅನ್ಯಾಯ  ಅಕ್ರಮ
ಇವರ ಕುಲದೇವರೇ ವಂಚಕ

ಅನ್ನದ ಬೆಲೆ ತಿಳಿಯದೆ ಕಾಲಕಸವಾಗಿ
ನೋಡಿ  ತಿಪ್ಪೆಗೆ ಎಸೆಯುತಿಹರು
ಅನ್ನದಾತನು ಒಂದಗಳ ಪಡೆಯಲು
ಪಟ್ಟ ಕಷ್ಟಗಳ ಮರೆಯುತಿಹರು

ಹಸಿವು ಮುಕ್ತ ಕನಸು ನನಸಾದೀತೆ?
ಹಸಿವಿನಿಂದಾಗುವ ಸಾವುಗಳು ನಿಂತೀತೆ  ?
ಸಮುದಾಯಕೆ ಬುದ್ದಿ ಬಂದೀತೆ ?
ಸ್ವಂತಕ್ಕೆ ಸ್ವಲ್ಪ ಜಗಕೆ ಸರ್ವಸ್ವ ಅಂದೀತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಜೂನ್ 2018

ಗುಟ್ಟೇನು (ಭಾವಗೀತೆ)

*ಗುಟ್ಟೇನು*

ಶ್ವೇತ ವಸ್ತ್ರ ದಾರಿ ನೀರೆ
ಹೇಳಿ ಬಿಡೆ ನೀನ್ಯಾರೆ

ಹಸಿರ ವನದಲಿ ಕುಳಿತಿರುವೆ
ಕರದಲಿ ಪುಸ್ತಕ ಹಿಡಿದಿರುವೆ
ಮಸ್ತಕಕೆ ಮೇವು ನೀಡಿರುವೆ
ಸಮಸ್ತದೊಳು ಒಂದಾಗುವ ಪರಿಯ ಹೇಳೆ

ಬಣ್ಣ ಬಣ್ಣದ ಮರದಡಿಯಲಿ
ಬಣ್ಣದ ಕನಸಹರಡಿ ಕುಳಿತ ಬಾಲೆ
ಲೋಕದ  ಜಂಜಡ ತೊರೆದು
ಸುಖವಾಗಿರುವ ರೀತಿ ನಮಗೂ ಹೇಳೆ

ನಿನ್ನೆಗಳ ಗೊಡವೆ ನಿನಗಿಲ್ಲ
ನಾಳೆಗಳ ಚಿಂತೆ ಸುಳಿದಿಲ್ಲ
ವರ್ತಮಾನದಿ ಬದುಕುತಿರುವ
ಮಂದಹಾಸದ  ಗುಟ್ಟೇನು ಹೇಳೆ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





28 ಜೂನ್ 2018

ಹನಿಗವನಗಳು



ಅವಳೆಂದಳು
ನನ್ನ ಜೊತೆಗಿರುವವರೆಗೆ
ಸುಖ ಕೊಡುವೆ ನಿನಗೆ
ನೀನೇ ಇಂದ್ರ ಚಂದ್ರ ನನಗೆ
ನಿನ್ನ ಹಣ ಮುಗಿದ ಮೇಲೆ
ಖಂಡಿತ ಕೈ ಕೊಡುವೆ ನಿನಗೆ



ಕೇವಲ ಸುಖವಲ್ಲದೆ
ಕಷ್ಟದಲ್ಲೂ ಜೊತೆಗಿರುವೆನೆಂದೆ
ಅವಳೊಲವ ಪಡೆಯಲು
ದೂರಮಾಡಿಕೊಂಡೆ ನನ್ನ ತಂದೆ
ನನ್ನೊಲವ ಲೆಕ್ಕಿಸದೆ ಅವಳೆಂದಳು‌
ನೀ ನನಗೇನು ತಂದೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*