02 ಮೇ 2018

ರಜ ಮಜ (ಶಿಶುಗೀತೆ)

‌‌
.

ಶಿಶುಗೀತೆ
*ರಜ  ಮಜ*
ನಾನು ರಜೆಯ ಕಳೆಯುವೆ
ರಜದಿ ಮಜವ ಮಾಡುವೆ

ಅಜ್ಜಿ ಮನಗೆ ಹೋಗುವೆ
ಸಜ್ಜೆ ಬೆಲ್ಲ ತಿನ್ನವೆ

ಗೆಳೆಯರೊಡನೆ ಅಡುವೆ
ಒಳ್ಳೆಯ ಆಟ ಕಲಿವೆ

ಜಾತ್ರೆ ಗೆ ನಾ ಹೋಗುವೆ
ತುತ್ತೂರಿ ಊದುವ

ಆಟದ ಬಯಲಿಗೆ ಹೋಗುವೆ
ಗೋಲಿಯಾಟ ಆಡುವೆ 

ಮತ್ತೆ ಶಾಲೆಗೆ ಹಿಂತಿರುಗುವೆ
ಕಲಿಕೆಯಲ್ಲಿ ತೊಡಗುವೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

01 ಮೇ 2018

ಉದ್ದಾರ ಮಾಡಿಕೊಳ್ಳಿ (ಕವನ)

*ಉಧ್ದಾರ ಮಾಡಿಕೊಳ್ಳಿ*

ಕಾಲೇಜ್ ಹುಡುಗರ ಜೀವನ
ಕಮ್ಮಿ ಕಾಸಿದ್ರೆ ಧೂಮಪಾನ
 ಜಾಸ್ತಿ ಕಾಸಿದ್ರೆ ಮದ್ಯಪಾನ
ಇನ್ನು ಸ್ವಲ್ಪ ಜಾಸ್ತಿ ಇದ್ರೆ ಬೈಕಿನಲ್ಲಿ ಕಲ್ಪನಾ
ಎಲ್ಲಿ ಕಾಣುವರು ಜನ ?
ಕೊನೆಗೊಮ್ಮೆ ಎಕ್ಸಾಮ್ನಲ್ಲಿ ಮೈ ಎಲ್ಲ ಕಂಪನ .
ಪೇಲಾದಾಗ ಅರ್ಥವಾಗುವುದು ಜೀವನ
ಇವರ ಸ್ವಯಂಕೃತಾಪರಾಧಕ್ಕೆ ಕಾರಣ?
ಅಪ್ಪ ಅಮ್ಮನಾ ? ಸಮಾಜಾನಾ  ?
ಇದಕ್ಕೆಲ್ಲಾ ನಿಮ್ಮ ಅಜ್ಞಾನ ಕಾರಣ.
ಅರಿತು ಉಧ್ದರಾ ಮಾಡಿಕೊಳ್ಳಿ ನಿಮ್ಮ ಜನ್ಮಾನ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನ್ಯೂಟನ್ ಮೂರನೇ ನಿಯಮ (ಮದುವೆ ಕುರಿತ ಕವನ )

*ನ್ಯೂಟನ್ ಮೂರನೇ ನಿಯಮ*

ನಮ್ಮ  ಜವರ ಬಹಳ ಬುದ್ದಿವಂತ
ಎಂದು ಅವನೇ ತಿಳಿದಿದ್ದ
ಮದುವೆಯಾಗುವೆನೆಂದು ಹೆಣ್ಣು
ಹುಡುಕುತ್ತಲೇ ಇದ್ದ

ನಾಯಿಗೆ ಹೊಡೆಯಲು ಬೇಗ
ಒಳ್ಳೆಯಕಲ್ಲು ಸಿಗಲ್ಲವಂತೆ
ಇವನಿಗೂ ತಿರುಗಿ ದರೂ
ಒಳ್ಳೆಯ ಹೆಂಡತಿ ಸಿಗಲಿಲ್ಲವಂತೆ

ಹೆಣ್ಣು ಸಿಗದೆ ಜವರ  ಬಸವಳಿದು
ನಾನು ಬ್ರಹ್ಮಚಾರಿ ಆಗುವೆನೆಂದ
ಮದುವೆಯಾದ ನಾನು ಅನುಭವದಿಂದ
ಅವನಿಗಂದೆ ನೀನೇ ನಿಜವಾದ ಬುದ್ದ

ಮೊನ್ನೆ ಊರಲ್ಲಿ  ಜವರ ಸಿಕ್ಕಿದ್ದ
ನನ್ನ ಕಂಡೊಡನೆ  ಹಿರಿಹಿರಿಹಿಗ್ಗಿದ್ದ
ನಾನು ಕೇಳಿದೆ ಸಂತಸಕೆ ಕಾರಣವ
ಮದುವೆಯಾದನೆಂದು ತಿಳಿಸಿದ

ತಟ್ಟನೆ ನನಗೆ ನ್ಯೂಟನ್ ಮೂರನೆ
ನಿಯಮ ನೆನಪಿಗೆ ಬರುವುದು
ಪ್ರತಿ  ಮೂರ್ಖ ಗಂಡನಿಗೆ ಅಷ್ಟೇ
ಮೂರ್ಖ ಹೆಂಡತಿ ಸಿಗುವಳೆಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಏಪ್ರಿಲ್ 2018

ಬಳುಕುವ ಬಳ್ಳಿ (ಭಾವಗೀತೆ)

*ಬಳುಕುವ ಬಳ್ಳಿ*

ಶಿಲೆಗಳ ಸಂಗೀತದ ಹಿನ್ನೆಲೆಯಲ್ಲಿ
ಕಲಾದೇವತೆಯ ಸನ್ನಿದಿಯಲ್ಲಿ
ಕಮಲವಿರುವ ಕೊಳದ ಸನಿಹದಲ್ಲಿ
ನಿಂತಿರುವೆ ನಾನು ಬಳುಕುವ ಬಳ್ಳಿ

ಧರಿಸಿರುವೆ ರೇಶಿಮೆಯ ಸೀರೆ
ನಾಚಿ ನಿಂತಿರುವೆ ಕೋಮಲ ನೀರೆ
ಮೈಮೇಲಿನ ನಗವ ನೋಡು ಬಾರೆ
ನಾನಿದ್ದರೆ ಸೊಗಸೆಲ್ಲ ಈ ಧರೆ

ಮೈಮೇಲೆ ಹೊಳೆಯುತಿದೆ ನನ್ನ ನಗ
ಸೌಂದರ್ಯದಿ ಕಂಗೊಳಿಸುತಿದೆ ಮೊಗ
ನೋಡಲು ಬನ್ನಿ ನೀವೆಲ್ಲ ಬೇಗ
ನಾ ಹಚ್ಚಿದ ದೀಪಗಳು ಬೆಳಗಲಿ  ಜಗ

  *ಸಿ.ಜಿ.ವೆಂಕಟೇಶ್ವರ*
  *ಗೌರಿಬಿದನೂರು*

ಚೌ ಚೌಪದಿ (ಒಡತಿಯಾಗು)


*ಚೌ ಚೌ ಪದಿ*
ಬಂಜರಾಗಿದೆ ನನ್ನ ಹೃದಯ ನೀನಿಲ್ಲದೆ
ಬಾಗಿಲು ತೆರೆದು‌ ಕಾಯುತಿಹೆ
ಬೀದಿಯಲಿ ಹಾದಿಯ ನೋಡುತಿರುವೆ
ಒಡತಿಯಾಗು  ಬಾ ನನ್ನ ಬಾಡಿಗೆ ಮನೆಗೆ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*