This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
25 ಸೆಪ್ಟೆಂಬರ್ 2017
24 ಸೆಪ್ಟೆಂಬರ್ 2017
*ಸನ್ಮಾನ ಸ್ವೀಕರಿಸಿದ ಕ್ಷಣಗಳು* ಲಯನ್ಸ್ ಕ್ಲಬ್ ಹಾಗೂ ಲಯೆನೆಸ್ ಕ್ಲಬ್ ವತಿಯಿಂದ Teachers, Docters, and Engineer's Day ಪ್ರಯುಕ್ತ ಆತ್ಮೀಯ ಸನ್ಮಾನ ಸ್ವೀಕಾರ . ಲಯನ್ಸ್ ಗೌರಿಬಿದನೂರು ಅಧ್ಯಕ್ಷರಾದ ಶ್ರೀ ಅಶ್ವತ್ಥ್ ರೆಡ್ಡಿ ಸರ್ .ಕಾರ್ಯದರ್ಶಿ ಆದ M.G.S Sir ಲಯೆನೆಸ್ ಅದ್ಯಕ್ಷೆಯಾದ ಅಂಬಿಕಾ ಮೇಡಂ.ಲಯೆನ್ ಸುವರ್ಣಮ್ಮ ಮೇಡಂ ಮತ್ತು ಎಲ್ಲಾ ಲಯನ್ಸ್ ಮತ್ತು ಲಯೆನೆಸ್ ಪದಾಧಿಕಾರಿಗಳಿಗೆ ಹೃತ್ಪೂರ್ವಕ ವಂದನೆಗಳು ಸಮಾರಂಭದಲ್ಲಿ ಹಾಜರಿದ್ದ ನನ್ನ ಸಹೋದ್ಯೋಗಿಗಳಾದ E.S. .M.G.M. Y.S.R. ಹಾಗೂ N.M ಇವರಿಗೂ ವಂದನೆಗಳು
ಎಂದು ಬರುವೆ ?(ಕವನ)
*ಎಂದು ಬರುವೆ?*
ಓ ಮೇಘ ರಾಜ ಬಾ ಧರೆಗೆ
ಈ ಇಳೆಯನೊಮ್ಮೆ ತಣಿಸು
ಜೀವಿಗಳಿಗೆ ಜಲವನುಣಿಸು
ಭುವಿ ಚೆಲ್ಲಲಿ ಹೂ ನಗೆ
ಬೆಳೆಗಳು ನೀರಿಲ್ಲದೆ ಒಣಗುತಿವೆ
ಕಳೆ ಇಲ್ಲದೆ ಜೀವಿಗಳು ನಲುಗುತಿವೆ
ಜಗದ ಕೊಳೆ ತೊಳೆಯಲು ನೀ ಬೇಕು
ಖಗಮೃಗಗಳು ಹೇಗೆ ಬದುಕಬೇಕು?
ಬರೀ ಮೋಡ ನೋಡಿ ಸಾಕಾಯಿತು
ಸರಿಯಾದ ಮಳೆ ಬರದಾಯಿತು
ವಸುಂಧರೆಗೆ ತಂಪನೆಂದು ತರುವೆ ?
ಕಾಯುತಿರುವೆ ನಿನ್ನ ಎಂದು ಬರುವೆ?
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
22 ಸೆಪ್ಟೆಂಬರ್ 2017
ಕಾಪಾಡು ತಾಯೆ (ಕವನ)
*ಕಾಪಾಡು ತಾಯೆ*
ಮಹಿಷನ ಮರ್ಧಿಸಿದ ತಾಯೆ
ನಮ್ಮನೆಲ್ಲಾ ಅನವರತ ಕಾಯೆ .
ತ್ರಿಮೂರ್ತಿಗಳ ಹೆತ್ತವಳೆ
ನಮ್ಮನೆಲ್ಲ ಹೊತ್ತವಳೆ
ಚಿಕ್ಷುರ ಬಿಡಾಲರ ವಧಿಸಿದೆ ನೀನು
ಅಷ್ಟ ದಿಕ್ಪಾಲಕರ ಪೊರೆದೆ ನೀನು .
ಶುಂಭ ನಿಶುಂಭರ ಶಿರವ ತರಿದೆ
ದುರುಳ ದೈತ್ಯರ ಸೊಕ್ಕನಡಗಿಸಿದೆ
ಚಂಡ ಮುಂಡರ ಸಂಹಾರ ಮಾಡಿದೆ
ಚಂಡಿ ಚಾಮುಂಡಿ ನಾಮ ಪಡೆದೆ .
ಕೂಳ ಮಧು ಕೈಟಬರ ಸಂಹರಿಸಿದೆ
ಕಾಳಿಕೆಯ ನಾಮದಿ ರಾರಾಜಿಸಿದೆ
ರಕ್ತ ಬೀಜನ ರಕ್ತವ ಕುಡಿದೆ
ಅಸುರರಿಂದ ಲೋಕವ ರಕ್ಷಿಸಿದೆ.
ನಿನ್ನ ದಯೆಯಿಲ್ಲದ ಜೀವನ ಬಿರುಗಾಳಿ
ನೀ ಹರಸಿದರೆ ನಮ್ಮ ಬಾಳು ತಂಗಾಳಿ
ಇಹಬಂಧನದಲಿ ಸಿಲುಕಿರುವೆವು ನಾವು
ಕಾಪಾಡು ಮರೆಸುತ ನಮ್ಮ ನೋವು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು.*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)


