02 ಅಕ್ಟೋಬರ್ 2017

ಕರಿಮಣಿ ತಾ (ಕವನ)

             *ಕರಿ ಮಣಿ ತಾ*

ಬರೆಯುವೆ ನಲ್ಲನೆ ನಿನಗಾಗಿ
ಬರುವೆಯಾ  ನಿನ್ನೊಲವಿಗಾಗಿ

ಹಾಳೆಗಳೆ ಖಾಲಿ ನಿನಗಾಗಿ ಬರೆದು
ನಾಳೆಗಳ ಕನಸಾಗಲಿಲ್ಲ ಬರಿದು
ನೀನಿತ್ತ ಸವಿ ಮುತ್ತ ಮರೆತಿಲ್ಲ
ನಿನ್ನಾಗಮನದ ನಿರೀಕ್ಷೆ ಬಿಟ್ಟಿಲ್ಲ

ನನ್ನ ಮದುವೆ ತಯಾರಿ ಮನೆಯಲ್ಲಿ
ಅನ್ಯ ಹುಡುಗ ಬೇಡ ನನ ಮನದಲ್ಲಿ
ನಿನ್ನನೇ ವರಿಸುವೆನು ಈ ಜನುಮದಲಿ
ಇನ್ನೂ ಭರವಸೆ  ನೀನಿತ್ತ  ಮಾತಿನಲಿ

ಬರುವೆಯೆಂದಿದ್ದೆ ಕಳೆದ ವಾರ
ಬರದೇ ಹೋದೆ ಇದು ನನಗೆ ಬರ
ಸರ ಕೊಂಡು ತಂದಿದ್ದೆ ಅಂದು
ಕರಿ ಮಣಿ ತಾ ಬೇಗ ಬಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಅಕ್ಟೋಬರ್ 2017

ಕಾಯಿ(ಹನಿಗವನ)

         
  *ನೋವು*

ನೋಡುತಾ ಮಾವು
ನಾನು ಮರೆವೆ
ನನ್ನ ಇಳಿ
ಜೀವನದ ನೋವು.

*ಕಾಯಿ*

ಇವು ಮಾವಿನ ಕಾಯಿ
ನನ್ನಂತೆಯೇ ನಿನಗೂ
ವಯಸ್ಸಾಗುವುದು
ಸ್ವಲ್ಪ ದಿನ ಕಾಯಿ .

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು



ದೀನದಯಾಳು (ಕವನ)

                *೧*
*ದೀನದಯಾಳು*

ಸ್ವಾಮಿಯೇ ದೇವನೆ ಓ ತಿರಮಲನೆ
ಭಕ್ತರ ಕಾಯುವ ಕರುಣಾಕಾರನೆ

ಏಳು ಬೆಟ್ಟಗಳೊಡೆಯ ನಮ್ಮನರಸು
ಭವದ ಬಂಧನದಿಂದ ಬಿಡಿಸು
ಸವಿ ಮಾತನಾಡಲು ಕಲಿಸು
ಎಲ್ಲರೊಳಗೊಂದಾಗಿ ಬೆರಸು /

ಬಾಲಜಿ ಗೋವಿಂದ ನಾಮ ಪಡೆದವನೆ
ಭಕ್ತರಕ್ಷಕ ದೀನದಯಾಳು ಎನಿಸಿದವನೆ
ಪ್ರಾರ್ಥನೆಗೆ ಮೆಚ್ಚಿ ಓಗೊಡುವವನೆ
 ಕಾಪಾಡು ನಮ್ಮನೆಲ್ಲರ  ಸುಮ್ಮನೆ /

ವೆಂಕಟರಮಣನು  ಸಂಕಟಹರಣನು
ಸಂಕಷ್ಟ ಹರಿಸಿ ಕಾಪಾಡುವನು
ಅಲಂಕಾರ ಪ್ರಿಯ ಇವನು
ಪದ್ಮಾವತಿಯ ಪ್ರಿಯರಮಣನು /

ವರಕೊಡು ನಾಡು ಸುಭಿಕ್ಷವಾಗಲಿ
 ಸಕಲ   ಚರಾಚರಗಳಿಗೆ ಒಳಿತಾಗಲಿ
ಕಲಿಯುಗದ ಕಾಮಧೇನು ನೀನು
ವರಕೊಟ್ಟು ಹರಸು ನಮ್ಮೆಲ್ಲರನು /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಸೆಪ್ಟೆಂಬರ್ 2017

ಆತ್ಮೀಯ ಸ್ನೇಹಿತ (ಕವನ ನನ್ನಣ್ಣನ ಕುರಿತು)

               *ಆತ್ಮೀಯ ಸ್ನೇಹಿತ*

ಸರಳ ಸಜ್ಜನ ಜೀವಿ ನನ್ನಣ್ಣ
ತಾಳ್ಮೆಗೆ ಸಹಕಾರಕೆ ಹಿರಿಯಣ್ಣ
ನಮ್ಮ ಕುಟುಂಬದ ಕಣ್ಣು ಇವನು
ನಮಗೆಲ್ಲರಿಗಾಗಿ ಜೀವಿಸುವನು /

ಕಾಯಕ ಇವನದು ಹೆಮ್ಮೆಯ ಕೃಷಿ
ನಾಯಕ ಇವನು ಹಂಚಲು ಖುಷಿ
ಚಳಿ ಮಳೆ ಲೆಕ್ಕಿಸದೇ ದುಡಿವನು
ಕಷ್ಟ ಸುಖ ಒಂದೆ ಎಂದು ಹೇಳುವನು/


ಮನೆಯವರಿಗೆ ಮೆಚ್ಚಿನ ಯಜಮಾನ
ಊರಿಗೆ ಸಹಾಯ ಇವನ ಜಾಯಮಾನ
ನನಗೆ ಯಾವಾಗಲೂ ಆತ್ಮೀಯ ಸ್ನೇಹಿತ
ಕೋರುವನು ಯಾವಾಗಲೂ  ನನ್ನ ಹಿತ /

*ಸಿ .ಜಿ .ವೆಂಕಟೇಶ್ವರ*.
*ಗೌರಿಬಿದನೂರು*

29 ಸೆಪ್ಟೆಂಬರ್ 2017

ನಮ್ಮನೆಯ ಪರಿಮಳ (ಕವನ)

               *ನಮ್ಮನೆಯ ಪರಿಮಳ*

ಇವಳೆ ನನ್ನ ಮುದ್ದಿನ ಹೆಂಡತಿ
ಕೆಲವೊಮ್ಮೆ ಮಾಡುವಳು ಅತಿ
ಒಲವಿನಲಿ ತಿದ್ದುವಳು ಮಕ್ಕಳ
ಇವಳೇ ನಮ್ಮನೆಯ ಪರಿಮಳ

ಮನೆಕೆಲಸವನೆಲ್ಲಾ ಮಾಡುವಳು
ಆದರೆ  ಇವಳು ಕೆಲಸದ ಆಳಲ್ಲ
ಸವಿಮಾತನಾಡಿ ಸೀರೆ ಕೇಳುವಳು
ಆದರೆ ಬೇಡುವ ಬಿಕ್ಷುಕಿಯಲ್ಲ ಇವಳು

ಬಂಗಾರದ ಮೇಲೆ ಬಲು ವ್ಯಾಮೋಹ
ಸಿಂಗಾರಗೊಂಡಾಗ ಇವಳೇ ಆಹಾ
ತಾಯಿಯಾದಳು ನನ್ನೆರಡು ಲಕ್ಷ್ಮಿಗಳಿಗೆ
ಬಿಟ್ಟಿರಲಾರೆ ನಾ    ನಿನ್ನ ಅರೆಘಳಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*