ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು
ಯಾರು ಇಲ್ಲದಿದ್ದರೂ ಚಿಂತೆ ಬೇಡ|
ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||
ಸಿಹಿಜೀವಿ ವೆಂಕಟೇಶ್ವರ.
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು
ಯಾರು ಇಲ್ಲದಿದ್ದರೂ ಚಿಂತೆ ಬೇಡ|
ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||
ಸಿಹಿಜೀವಿ ವೆಂಕಟೇಶ್ವರ.
ರೂಪಯೌವನ ಸಂಪನ್ನಾ ವಿಶಾಲಕುಲ ಸಂಭವಾ |
ವಿದ್ಯಾಹೀನಾ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾಃ ||
ಸೌಂದರ್ಯದಿಂದಲೂ ಯೌವನದಿಂದಲೂ ಯುಕ್ತರು ಮಹಾಕುಲೀನರೂ ವಿದ್ಯಾ ವಿಹೀನರಾದರೆ ಪರಿಮಳವಿಲ್ಲದ ಪುಷ್ಪಗಳಂತೆ ಸ್ವಲ್ಪವೂ ಶೋಭಿಸುವುದಿಲ್ಲ.ಅಂದರೆ ಯಾರಿಂದಲೂ ಆದರಿಸಲ್ಪಡುವುದಿಲ್ಲ.
ಯುವ ಕವಿಗಳು ಮತ್ತು ಲೇಖಕರು ನಮ್ಮ ಪ್ರಾಚೀನ ಕವಿಗಳ ಸಾಹಿತ್ಯ ಓದಬೇಕು.ಆಗಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಅವಸರದ ಸಾಹಿತ್ಯಕ್ಕೆ ಆಯುಷ್ಯ ಕಡಿಮೆ ಎಂದು ಸಾಹಿತಿಗಳಾದ
ಡಾ ಕಬ್ಬಿನಾಲೆ ವಸಂತ್ ಭಾರದ್ವಾಜ್ ರವರು ಹೇಳಿದರು. ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದ ವತಿಯಿಂದ ನಡೆದ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿಹಿಜೀವಿ ವೆಂಕಟೇಶ್ವರ ರವರ 27 ನೇ ಕೃತಿ ಮಕ್ಕಳಿಗಾಗಿ ಮಹಾತ್ಮರ ಮಾತುಗಳು, ಕಿರಣ್ ಹಿರಿಸಾವೆ ರವರ ಹರಿವು ಕಾದಂಬರಿ ಹಾಗೂ ಡಾ ಗೀತಾ ಎನ್ ರವರ ಮುಕ್ತಕ ಮಂಜೂಷ ಕೃತಿಗಳು ಲೋಕಾರ್ಪಣೆಗೊಂಡವು.
ಲೇಖಕರಿಗೆ ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಹೊಮ್ಮಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಪಿಟೀಲು ವಾದಕರಾದ ಶ್ಯಾಮ್ ಸುಂದರ್ ರವರು, ಲೇಖಕರಾದ ಧನಂಜಯ ಜೀವಾಳ, ಸಾಹಿತಿಗಳು ಹಾಗೂ ಪ್ರಕಾಶಕರಾದ ಚಿನ್ನುಪ್ರಿಯ, ಸಾಹಿತಿಗಳಾದ ತ ನಾ ಶಿವಕುಮಾರ್,ಅನುಸೂಯ ಸಿದ್ದರಾಮ, ನೇತ್ರ ತಜ್ಞರಾದ ಉದಯ್ ಪಾಟೀಲ್, ಶ್ರೀಕಾಂತ್ ಪತ್ರೆಮರ, ರಾಸು ವೆಂಕಟೇಶ್ ಹಾಗೂ ನುಡಿ ಬಂಧುಗಳು ಉಪಸ್ಥಿತರಿದ್ದರು.