ನುಡಿತೋರಣ ಮೊದಲ ಸಮಾಗಮದಲ್ಲಿ ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಿರಲಿಲ್ಲ.ಎರಡು ಮತ್ತು ಮೂರನೇ ಸಮಾವೇಶದಲ್ಲಿ ಪಾಲ್ಗೊಂಡ ಸವಿನೆನಪುಗಳನ್ನು ಈಗಲೂ ಮೆಲುಕು ಹಾಕುತ್ತಿರುವೆ...
ಮೂರನೇ ಸಮಾವೇಶದ ದಿನ ಆರಕ್ಕೆ ತುಮಕೂರು ಬಿಟ್ಟು ಒಂಭತ್ತಕ್ಕೆ ಸಾಹಿತ್ಯ ಪರಿಷತ್ತು ಸೇರಿ ಕಿರಣ್ ಸರ್ ಮತ್ತು ನುಡಿ ಬಂಧುಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿ ಚಿನ್ನು ಪ್ರಿಯ ಸರ್ ರವರೊಂದಿಗೆ ಕನ್ನಡ ಹಾಡು ಹಾಡಿದ್ದು ಖುಷಿ ನೀಡಿತು.ಕಡೆಯ ಕ್ಷಣಗಳಲ್ಲಿ ಪುಸ್ತಕ ಬಿಡುಗಡೆಗೆ ಮನಸ್ಸು ಮಾಡಿದೆ. ನಮ್ಮ ಬಳಗದ ಮುಂದೆ ನನ್ನ ಕೃತಿ ಲೋಕಾರ್ಪಣೆಗೊಂಡಿದ್ದು ಖುಷಿ ನೀಡಿತು.
ಹಲವಾರು ಸಾಹಿತ್ಯ ಬಂಧುಗಳನ್ನು ಭೇಟಿ ಮಾಡಿದ್ದು ಸಂತಸ ತಂದಿತು.
ಜಿ ಬಿ ಹರೀಶ್ ಸರ್, ಮತ್ತು ಸೇತೂರಾಮ್ ಸರ್ ರವರ ಮಾತು ನೇರವಾಗಿ ಕೇಳಿ ಪುಳಕಗೊಂಡೆ.
ನನ್ನ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕೊಂಡ ನಮ್ಮ ನುಡಿ ಬಂಧುಗಳಿಗೆ ನಮನಗಳನ್ನು ಸಲ್ಲಿಸಲೇಬೇಕು.
ನುಡಿ ತಾಂಬೂಲ ವಿಶೇಷವಾಗಿತ್ತು. ನಮ್ಮ ಮನೆಯವರ ಮೆಚ್ಚುಗೆ ಗೆ ಪಾತ್ರವಾಗಿದೆ.
ಒಟ್ಟಾರೆ ಒಂದು ಉತ್ತಮ ಕೌಟುಂಬಿಕ ಭಾವನಾತ್ಮಕ ನುಡಿ ಹಬ್ಬದಲ್ಲಿ ಪಾಲ್ಗೊಂಡ ಸಾರ್ಥಕ ಭಾವನೆ ನನ್ನದು....
ನಿಮ್ಮ...
ಸಿಹಿಜೀವಿ ವೆಂಕಟೇಶ್ವರ
#Bangalore #BangaloreEvents #BookLaunch #AuthorMeet #LiteratureLovers #BookDiscussion #WritersCommunity #ReadingNook #CulturalScene #M
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ