ಮಾನವ ನಿರ್ಮಿತ ಆಕೃತಿಗಳಿಗಿದೆ ಮಿತಿ। ನಾವಳಿದರೂ ಸದಾ ಉಳಿವುದು ಪ್ರಕೃತಿ॥
ಸಿಹಿಜೀವಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ನಾನಲ್ಲ ದರ್ಪತೋರತ
ಶೋಷಣೆಯ ಮಾಡುವ
ದೊಡ್ಡ ನಾಯಕ|
ದಿನವೂ ನನ್ನ ಪಾಡಿನ
ಕೆಲಸವನ್ನು ಶ್ರದ್ದೆಯಿಂದ
ಮಾಡುವ ಕಾರ್ಮಿಕ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಶುಭವಾಗಲಿಸೂರ್ಯಾವಂಶಿ,ನಿನ್ನ ಭವಿಷ್ಯ ವೈಭವವಾಗಿರಲಿ.
ಕಳೆದೆರಡು ದಿನಗಳಿಂದ ಎಲ್ಲರ ಬಾಯಲ್ಲಿ ನಲಿದಾಡುವ ಹೆಸರೇ ವೈಭವ್ ಸೂರ್ಯವಂಶಿ.
ಯಾರು ಈ ವೈಭವ್ ಸೂರ್ಯ ವಂಶಿ?
14 ವರ್ಷದ ಹುಡಗನೊಬ್ಬನನ್ನು ರಾಜಸ್ಥಾನ್ ರಾಯಲ್ಸ್ ಕೋಟಿ ಕೊಟ್ಟು ಐ ಪಿ ಎಲ್ ಆಟಗಾರನಾಗಿ ಕೊಂಡಾಗಲೇ ಬಹುತೇಕರು ಹುಬ್ಬೇರಿಸಿ ನೋಡಿದ್ದರು. ಚೊಚ್ಚಲ ಐಪಿಎಲ್ ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಸಿಕ್ಸ್ ಹೊಡೆದಾಗ ಜನ ಬೆರಗು ಗಣ್ಣಿನಿಂದ ನೋಡಿದ್ದರು.ಬೆಂಗಳೂರಿನ ವಿರುದ್ಧದ ಆಟದಲ್ಲಿ ಗಮನ ಸೆಳೆದಿದ್ದ ಸೂರ್ಯವಂಶಿಯ ವೈಭವವು ಪೂರ್ಣ ಪ್ರಮಾಣದಲ್ಲಿ ಪ್ರಜ್ವಲಿಸಿದ್ದು ಗುಜರಾತ್ ವಿರುದ್ಧದ ಪಂದ್ಯದಲ್ಲಿ.ವೇಗದ ಅರ್ಧ ಶತಕ, ವೇಗದ ಶತಕ ಬಾರಿಸಿ ತಂಡವನ್ನೂ ಗೆಲ್ಲಿಸಿ ತಾನೂ ಗೆದ್ದು ತನ್ನ ಗುರು ಗ್ರೇಟ್ ವಾಲ್ ದ್ರಾವಿಡ್ ಚರಣಗಳಿಗೆ ವಿನಮ್ರವಾಗಿ ವಂದಿಸಿ ಮುಗ್ಧ ನಗೆ ಬೀರಿದ ಹುಡುಗನ ಬಗ್ಗೆ ಖಂಡಿತವಾಗಿಯೂ ಹೆಮ್ಮೆಯಾಗುತ್ತದೆ.
ಮಾರ್ಚ್ 27 ತಾರೀಖಿನಂದು 2011ರಲ್ಲಿ ಬಿಹಾರದ ಸಮಷ್ಟಿಪುರದ ತಾಜ್‌ಪುರದಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲಿಯೇ ಗಮನಾರ್ಹ ಸಾಧನೆಗಳಿಗೆ ಹೆಸರುವಾಸಿಯಾದ ಭಾರತೀಯ ಕ್ರಿಕೆಟಿಗ. ಎಡಗೈ ಬ್ಯಾಟ್ಸ್‌ಮನ್ ಮತ್ತು ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್ ಆಗಿರುವ ಈ ಬಾಲಕ ಈಗ ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾನೆ.
ಜನವರಿ 2024 ರಲ್ಲಿ ಮುಂಬೈ ವಿರುದ್ಧ ಬಿಹಾರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಈ ಪೋರನ ವಯಸ್ಸು 12 ವರ್ಷ ಮತ್ತು 284 ದಿನಗಳು!
ಬಿಹಾರ ಪರ ಪಾದಾರ್ಪಣೆ ಮಾಡಿದ ಎರಡನೇ ಕಿರಿಯ ಆಟಗಾರ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಕಿರಿಯ ಭಾರತೀಯ ಎಂಬ ಮನ್ನಣೆಯನ್ನು ಪಡೆದ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾದ ಈ ಬಾಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ. ತಮ್ಮ ತಂಡ ಎರಡು ರನ್‌ಗಳ ಸೋಲಿನ ಹೊರತಾಗಿಯೂ ಅವನ 20 ಎಸೆತಗಳಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಸೇರಿದಂತೆ 34 ರನ್ ಗಳಿಸಿದ್ದು ಮೆಚ್ಚುಗೆಗೆ ಅರ್ಹ.
ಸೂರ್ಯವಂಶಿ ಒಂಬತ್ತನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ. ಆರಂಭದಲ್ಲಿ ಅವರ ತಂದೆ ರೈತ ಮತ್ತು ಅರೆಕಾಲಿಕ ಪತ್ರಕರ್ತ ಸಂಜೀವ್ ಅವರಿಂದ ತರಬೇತಿ ಪಡೆದು ನಂತರ ಸಮಸ್ತಿಪುರದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸೇರಿದ. ಬಳಿಕ ಮಾಜಿ ರಣಜಿ ಆಟಗಾರ ಮನೀಶ್ ಓಜಾ ಅವರ ಅಡಿಯಲ್ಲಿ ತರಬೇತಿ ಪಡೆದ. ಅವನ ಪ್ರತಿಭೆ ಬೆಳಕಿಗೆ ಬಂದದ್ದು ವಿನೂ ಮಂಕಡ್ ಟ್ರೋಫಿಯಲ್ಲಿ! ಆ ಪಂದ್ಯದಲ್ಲಿ ಅವನ 12 ನೇ ವಯಸ್ಸಿನಲ್ಲಿ ಐದು ಪಂದ್ಯಗಳಲ್ಲಿ 400 ರನ್ ಗಳಿಸಿ ಎಲ್ಲರ ಗಮನ ಸೆಳೆದ. ದೇಶೀಯ ಪಂದ್ಯಾವಳಿಗಳಲ್ಲಿ ಮತ್ತು ನಾಗ್ಪುರದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ. ಅಲ್ಲಿ ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಐಪಿಎಲ್ ಸೆಲೆಕ್ಟರ್ ಗಮನ ಸೆಳೆದ.
ಈಗ ಇಡೀ ಜಗದ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ಆಗಿರುವ ಈ ಪ್ರತಿಭಾವಂತ ಬಾಲಕನ ಪ್ರತಿಭೆ ಜನರ ಅತಿಯಾದ ನಿರೀಕ್ಷೆಯ ಭಾರದಿಂದ ನಲುಗದಿರಲಿ ಎಂಬುದೇ ನನ್ನ ಆಶಯ. ಶುಭವಾಗಲಿ ಸೂರ್ಯಾವಂಶಿ.ನಿನ್ನ ಭವಿಷ್ಯ ವೈಭವವಾಗಿರಲಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
2019 ರಲ್ಲಿ #hyderabad ನ #ramojifilmcity ನಲ್ಲಿ ಗೆಳೆಯರೊಂದಿಗೆ ಖುಷಿಯಿಂದ ಕುಣಿದ ಚಿತ್ರಗಳು ನಿಮಗಾಗಿ..
ನಾನು ಬಾಲ್ಯದಲ್ಲಿ "ಕಾಣದಂತೆ ಮಾಯವಾದನು" ಹಾಡಿಗೆ ಬಹಳ ಸಲ ನನ್ನ ಸಹಪಾಟಿಗಳ ಮುಂದೆ ಕುಣಿದಿರುವೆ.ಇದಕ್ಕೆ ನಮ್ಮ TNT ಮಾಸ್ಟರ್ ಪ್ರೋತ್ಸಾಹ ಬಹಳ ಇತ್ತು. ಟಿ ಸಿ ಹೆಚ್ ಓದುವಾಗ "ತು ಚೀಸ್ ಬಡಿ ಹೈ ಮಸ್ತ್ ಮಸ್ತ್" ಹಾಗೂ " ಮಾರಿ ಕಣ್ಣು ಹೋರಿ ಮ್ಯಾಗೆ" ಹಾಡಿಗೆ ಸಮಾರಂಭದಲ್ಲಿ ಕುಣಿದಿದ್ದೆ. ಬಿ ಎಡ್ ಓದುವಾಗ ಮೈಸೂರಿನಲ್ಲಿ "ಸಂದೇಸ್ ಆತೇ ಹೈ" ಹಾಡಿಗೆ ಗೆಳೆಯರೊಂದಿಗೆ ನರ್ತನ ಮಾಡಿದ್ದೆ. ಭಾರತ ಪಾಕ್ ಗಡಿಯ ವಾಘಾ ಬಾರ್ಡರ್ ನಲ್ಲಿ ದೇಶಭಕ್ತಿ ಉಕ್ಕಿ ಕುಣಿದೆ. ನಮ್ಮ ಊರಿನ ಚೌಡಮ್ಮ ಜಾತ್ರೆಯಲ್ಲಿ ಡಿ ಜೆ ಸದ್ದಿಗೆ ಊರ ಗೆಳೆಯರ ನಡುವೆ ಹೆಜ್ಜೆ ಹಾಕಿದ್ದೆ.ಚಿಕ್ಕಮಗಳೂರಿನ ಝರಿ ರೆಸಾರ್ಟ್ ನಲ್ಲಿ ಫೈರ್ ಕ್ಯಾಂಪ್ ನಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಸ್ವಲ್ಪ ಹೆಚ್ಚಾಗೇ ಕುಣಿದಿದ್ದೆ.ಇವು ನನ್ನ ಕುಣಿತದ ಹೈಲೈಟ್ಸ್ .
ವಿಶ್ವ ನೃತ್ಯ ದಿನದ ನೆಪವಾಗಿ ಇವೆಲ್ಲವೂ ನೆನಪಾದವು.
ಈ ದಿನ ನಿಮ್ಮ ಜೀವನದ ಮರೆಯಲಾಗದ ಕುಣಿತವನ್ನು ಹಂಚಿಕೊಳ್ಳಬಹುದು.
#sihijeeviVenkateshwara
#dance Dance + india Dancer Mani Gbd #dancechallenge #dancereels #dancers #dancelife #dancing #dancelover #dancevideo #dancedancedance #dabceday #dancestudio #danceschool
ಅಭಿಮಾನಿಗಳು ಈಗ ಇನ್ನೂ ಹೆಚ್ಚು
ಮಾಡ್ತೇವೆ ಸದ್ದು|
ಕಾರಣ ಅತಿ ಹೆಚ್ಚು ರನ್ ಹೊಡೆದದ್ದಕ್ಕೆ
ಸಿಕ್ಕಿದೆಯಲ್ಲ ನಮ್ಮ ಕಿಂಗ್ ಗೆ
ಟೋಪಿ (purple cap)ನೇರಳೆ ಬಣ್ಣದ್ದು|