ಸಾಕು ಮಗ
ದತ್ತು ತೆಗೆದುಕೊಂಡ
ಮಗ ಬಾಲ್ಯದಲ್ಲಿ ಓದಿನಲ್ಲಿ
ಸಾಧನೆ ಕಂಡ ತಂದೆ ಹೆಮ್ಮೆಯಿಂದ ಹೇಳುತ್ತಿದ್ದರು
ಇವನು ನನ್ನ ಸಾಕು ಮಗ|
ಮಗನಿಗೆ ಮದುವೆ ಮಾಡಿದ
ನಂತರ ಅರ್ಧ ಡಜನ್
ಮಕ್ಕಳನ್ನು ಕೊಟ್ಟಿರುವ ಮಗನಿಗೆ ಆತಂಕದಿಂದ ಹೇಳುತ್ತಾರೆ
ಸಾಕು ಮಗ||
ಸಿಹಿಜೀವಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸಾಕು ಮಗ
ದತ್ತು ತೆಗೆದುಕೊಂಡ
ಮಗ ಬಾಲ್ಯದಲ್ಲಿ ಓದಿನಲ್ಲಿ
ಸಾಧನೆ ಕಂಡ ತಂದೆ ಹೆಮ್ಮೆಯಿಂದ ಹೇಳುತ್ತಿದ್ದರು
ಇವನು ನನ್ನ ಸಾಕು ಮಗ|
ಮಗನಿಗೆ ಮದುವೆ ಮಾಡಿದ
ನಂತರ ಅರ್ಧ ಡಜನ್
ಮಕ್ಕಳನ್ನು ಕೊಟ್ಟಿರುವ ಮಗನಿಗೆ ಆತಂಕದಿಂದ ಹೇಳುತ್ತಾರೆ
ಸಾಕು ಮಗ||
ಸಿಹಿಜೀವಿ ವೆಂಕಟೇಶ್ವರ
"ಆಂಧ್ರಪ್ರದೇಶದ ಅಯ್ಯಂಬೋಟ್ಲಪಲ್ಲಿಯಲ್ಲಿ ಕಾಯಸ್ಥರಾಜಗಂಗಯ್ಯಸಾಹಿನಿಗೆ ಸಂಬಂಧಿಸಿದ ಶಾಸನ ಕಂಡುಬಂದಿದೆ."
ಗಂಗಯ್ಯ ಸಾಹಿನಿ 1262 CE ನಲ್ಲಿ ನಿಧನರಾದರು ಎಂದು ಶಾಸನದಲ್ಲಿ ಉಲ್ಲೇಖವಿದೆ.
ಕಾಯಸ್ಥ ರಾಜ ಗಂಗಯ ಸಾಹಿನಿಯ ಮರಣವನ್ನು ಚಿತ್ರಿಸುವ ಶಾಸನವು ಪ್ರಕಾಶಂ ಜಿಲ್ಲೆಯ ಅಯ್ಯಂಬೋಟ್ಲಪಲ್ಲಿಯಲ್ಲಿ ಕಂಡುಬಂದಿದೆ.
ಪುರಾತತ್ವ ತಜ್ಞರು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯರ್ರಗೊಂಡಪಾಲೆಂ ಮಂಡಲದ ಅಯ್ಯಂಬೋಟ್ಲಪಲ್ಲಿಯಲ್ಲಿ ದೊರೆತ ಶಾಸನದ ಆಧಾರದ ಮೇಲೆ ಕಾಯಸ್ಥ ರಾಜ ಗಂಗಯ ಸಾಹಿನಿಯ ಮರಣದ ವರ್ಷಕ್ಕೆ ಪುರಾವೆಗಳನ್ನು ಹುಡುಕಿದ್ದಾರೆ.
ಕೆ. ಮುನಿರತ್ನಂ ರೆಡ್ಡಿಯವರು ನಿರ್ದೇಶಕ (ಎಪಿಗ್ರಫಿ), ಭಾರತೀಯ ಪುರಾತತ್ವ ಸರ್ವೇಕ್ಷಣಾ (ASI) ಮೈಸೂರು, ಶಾಸನವನ್ನು ಡಿಕೋಡ್ ಮಾಡಿದ್ದಾರೆ."
ಗಂಗಾಯ ಸಾಹಿನಿಯು ಸಾಹಿನಿ ಕಾಯಸ್ಥ ರಾಜವಂಶದ ಮೊದಲ ದೊರೆ. ಅವರು ಕಾಕತೀಯ ರಾಜವಂಶದ (ಕಾಕತೀಯ ರಾಜವಂಶವು ಕ್ಯಸ್ತ ರಾಜವಂಶದವರಾಗಿದ್ದರು) ಗಣಪತಿ ದೇವರೊಂದಿಗೆ ಒಡನಾಟವನ್ನು ಹೊಂದಿದ್ದರು.
ಕಾಯಸ್ಥ ದೊರೆಗಳು ತಮ್ಮ ರಾಜ್ಯವನ್ನು ಪ್ರಸ್ತುತ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಾನುಗಲ್ಲುನಿಂದ ಪ್ರಸ್ತುತ ಕರ್ನಾಟಕದ ಕೋಲಾರದ ಬಳಿ ಚಿಂತಾಮಣಿಯವರೆಗೆ ವಿಸ್ತರಿಸಿದರು. ಈ ಕಾಯಸ್ಥರು ವಿವಿಧ ಕಾರಣಗಳಿಂದ ಆ ಸಮಯದಲ್ಲಿ ಮಹಾರಾಷ್ಟ್ರದಿಂದ ಆಂಧ್ರಪ್ರದೇಶಕ್ಕೆ ವಲಸೆ ಬಂದರು ಎಂದು ನಂಬಲಾಗಿದೆ.
ಶ್ರೀ ಕೆ. ಮುನಿರತ್ನಂ ರೆಡ್ಡಿ ಅವರು ಶಾಸನವನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ ಮತ್ತು ದಿನಾಂಕ [ಶಕ 1184] ದುಂದುಭಿ, ಭಾದ್ರಪದ, ಸು 15, ಗುರುವಾರ, 1262 ಸಿ.ಇ.ಯಲ್ಲಿ ಆಗಸ್ಟ್ 31 ರಂದು ಚಂದ್ರಗ್ರಹಣ ಎಂದು ವಿವರಿಸಿದ್ದಾರೆ.
"ಈ ಶಾಸನವು ಗಂಗಾಯ ಸಾಹಿನಿಯ (1239-1257 ಸಿ.ಇ.) ಪುಣ್ಯಕ್ಕಾಗಿ ಸತ್ರಯ್ಯನಿಂದ ಶ್ರೀಗಿರಿ (ಶ್ರೀಶೈಲದ ಮಲ್ಲಿಕಾರ್ಜುನ ದೇವರು) ದೇವರಿಗೆ ಸದಾ-ಸುಂಕಮ್ ಜೊತೆಗೆ ಗುಡೂರು ಗ್ರಾಮದ ಉಡುಗೊರೆಯನ್ನು (ಎಲ್ಲ ತೆರಿಗೆಗಳಿಂದ ವಿನಾಯಿತಿ ಪಡೆದ ನಂತರ) ದಾಖಲಿಸುತ್ತದೆ. ಒಂದು ಚಂದ್ರ ಗ್ರಹಣ. ಮೇಲಿನ ಕಾಣಿಕೆಯನ್ನು ಹಳ್ಳಿಶೆಟ್ಟಿಯವರಿಗೆ ಒಪ್ಪಿಸಲಾಯಿತು,” ಹಳ್ಳಿಶೆಟ್ಟಿ ಆ ಪ್ರದೇಶದ ವ್ಯಕ್ತಿಯಾಗಿದ್ದು, ಉಡುಗೊರೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು.
#sihijeeviVenkateshwara #inscription #stone #Kingdom #Telangana
ನಾವು ಆಮೆ ಮತ್ತು ಮೊಲದ ಕತೆ ಕೇಳಿದ್ದೇವೆ.ಇದು ವಿಭಿನ್ನವಾದ ಕಥೆ ಓದಿ.ಒಂದು ದಿನ ಆಮೆಗೆ ತಿನ್ನಲು ಆಹಾರವಿರಲಿಲ್ಲ ಅದು ಯೋಚಿಸಿತು. ಹೇರಳವಾಗಿ ಆಹಾರವನ್ನು ಹೊಂದಿದ್ದ ಜಿಪುಣನಾದ ಮೇಕೆಯ ಬಳಿಗೆ ಹೋಗಿ"ಹೇ ಮೇಕೆ, ನಾನು ನಿನಗೆ ಸರಳವಾದ ಪ್ರಶ್ನೆಯನ್ನು ಕೇಳಬಹುದೇ?" ಎಂದಿತು.
"ಖಂಡಿತವಾಗಿಯೂ ಕೇಳಬಹುದು" ಮೇಕೆ ಉತ್ತರ ನೀಡಿತು."ವಿಶ್ವದ ಅತ್ಯಂತ ವೇಗದ ಪ್ರಾಣಿ ಯಾವುದು ಎಂದು ನೀನು ನನಗೆ ಹೇಳಬಲ್ಲೆಯಾ?"
ಮೇಕೆ ಪ್ರತಿಕ್ರಿಯಿಸಿತು. "ಭೂಮಿಯಲ್ಲಿ? ಅಥವಾ ನೀರಿನಲ್ಲಿ?" "ಭೂಮಿಯ ಮೇಲೆ"
"ಖಂಡಿತವಾಗಿಯೂ ಇದು ಚಿರತೆ" ಎಂದು ಮೇಕೆ ಹೇಳಿತು.
"ಸರಿ! ನೀನು ತುಂಬಾ ಬುದ್ಧಿವಂತ. ಕೇಳು, ನೀನು ನನಗೆ ಆಹಾರ ಕೊಟ್ಟರೆ, ನಾನು ನಿನ್ನನ್ನು ಭೂಮಿಯ ಮೇಲಿನ ಅತ್ಯಂತ ವೇಗದ ಜೀವಿಯನ್ನಾಗಿ ಮಾಡುತ್ತೇನೆ" ಎಂದಿತು ಆಮೆ
ಮೇಕೆ ಗೊಂದಲದಿಂದ ನುಡಿಯಿತು "ಅದು ಹೇಗೆ ಸಾಧ್ಯ? ನೀನು ದೇವರೇ?"
"ನಾನು ದೇವರಲ್ಲ ಆದರೆ ನನಗೆ ಅಲೌಕಿಕ ಶಕ್ತಿಗಳಿವೆ. ನಾನು ನಿನಗೆ ಹೇಳಿದರೆ ನೀನು ನನ್ನನ್ನು ನಂಬುವುದಿಲ್ಲ. ಆದರೆ ನಾನು ರಣಹದ್ದಿಗೆ ಮಾಟ ಮಂತ್ರ ಮಾಡಿ ಕುರೂಪಿಯಾಗುವಂತೆ ಮಾಡಿದವನು"
"ವಾವ್!" ಮೇಕೆ ಉದ್ಘರಿಸುತ್ತಾ. "ಹಾಗಾದರೆ ನೀನು ನನ್ನನ್ನು ನಿಜವಾಗಿಯೂ ಚಿರತೆಗಿಂತ ವೇಗವಾಗಿ ಓಡುವಂತೆ ಮಾಡಬಲ್ಲೆಯಾ? ಎಂದಿತು"
"ಖಂಡಿತವಾಗಿಯೂ" ಆಮೆ ಕೂಗಿತು. ಮೇಕೆ ಉತ್ಸುಕವಾಯಿತು. ಅದು ಆಮೆಯನ್ನು ಊಟಕ್ಕೆ ಆಹ್ವಾನಿಸಿತು ಮತ್ತು ಅದಕ್ಕೆ ಉತ್ತಮ ಆಹಾರ ಮತ್ತು ದ್ರಾಕ್ಷಾರಸವನ್ನು ಬಡಿಸಿತು. ಹೊಟ್ಟೆತುಂಬಾ ತಿಂದು ಕುಡಿದು, ಆಮೆ ಹೊರಡಲು ಮುಂದಾದಾಗ ಮೇಕೆ ತಡೆದು.
"ಈಗ ಇದು ನಿನ್ನ ಸರದಿ. ನನ್ನನ್ನು ವಿಶ್ವದ ಅತ್ಯಂತ ವೇಗದ ಪ್ರಾಣಿಯಾಗಿ ಪರಿವರ್ತಿಸು . ನಾನು ಕಾಯಲು ಸಾಧ್ಯವಿಲ್ಲ" ಎಂದಿತು. ಆಮೆ ಗಹಗಹಿಸಿ ನಗುತ್ತಾ ನಂತರ ಹೇಳಿತು.
"ನೀನು ಎಷ್ಟು ದೊಡ್ಡ ಮೂರ್ಖ. ನಾನು ಪ್ರಪಂಚದಲ್ಲೇ ಅತೀ ನಿಧಾನವಾದ ಪ್ರಾಣಿ ಎಂದು ಎಲ್ಲರಿಗೂ ತಿಳಿದಿದೆ.ನನಗೆ ವೇಗವಾಗಿ ಪರಿವರ್ತಿಸುವ ಜಾದೂ ಗೊತ್ತಿದ್ದರೆ ನನ್ನ ಮೇಲೆ ಅದನ್ನು ಪ್ರಯೋಗ ಮಾಡಿಕೊಂಡು ಮೊದಲು ನಾನೇ ವೇಗವಾದ ಪ್ರಾಣಿಯಾಗುತ್ತಿದ್ದೆ ಅದೇನೇ ಇರಲಿ ಪುಷ್ಕಳ ಭೋಜನ ಹಾಕಿದ್ದಕ್ಕೆ ಧನ್ಯವಾದಗಳು" ಎಂದು ಹೊರಡಲನುವಾಯಿತು.
ಮೇಕೆಗೆ ತುಂಬಾ ಕೋಪ ಬಂದು ಆಮೆಯ ಕುತ್ತಿಗೆಯನ್ನು ಹಿಡಿದು ಗೋಡೆಯ ಮೇಲೆ ತಳ್ಳಿತು. ನಂತರ ಲೋಹದ ರಾಡ್ನಿಂದ ಅದರ ಬೆನ್ನಿನ ಮೇಲೆ ಹಲವಾರು ಬಾರಿ ಅದರ ಬೆನ್ನು ಬಿರುಕು ಬಿಡುವವರೆಗೆ ಹೊಡೆಯಿತು.
ಬಂಧುಗಳೇ ನಮ್ಮ ಈ ಕಥೆಯಲ್ಲಿ ಬರುವ ಮೇಕೆಯಂತೆ ವಿವೇಚನೆಯಿಲ್ಲದ ತಮ್ಮ ಮೆದಳುನ್ನು ಸರಿಯಾಗಿ ಬಳಸದ ಜನರು ನಮ್ಮ ನಡುವೆಯೇ ಈಗಲೂ ಇದ್ದಾರೆ. ಅಂತಹ ಜನರನ್ನು ಆಮೆಯಂತಹವರು ಬಹಳ ಸುಲಭವಾಗಿ ವಂಚಿಸುವರು. "ಎತ್ತು ಕರು ಹಾಕಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು" ಎಂಬ ಜಾಣರು ಈಗಲೂ ನಮ್ಮಲ್ಲಿ ಇದ್ದಾರೆ.ಶಿಕ್ಷಣದ ಮೂಲಕ ಜಾಗೃತರಾಗಿ ವಂಚಕರ ಬಲೆಗೆ ಬೀಳದೇ ವಿವೇಚನೆಯಿಂದ ಬದುಕಿದರೆ ನಮ್ಮ ಬಾಳು ಬಂಗಾರವಾಗುವುದು ಅಲ್ಲವೆ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
ಅಲಕ್ ಪಾಂಡೆ, ಭಾರತ ಕಂಡ ಅತ್ಯಂತ ಶ್ರೀಮಂತ ಶಿಕ್ಷಕ!
ಮಗಳು ಸಂದೇಹ ಪರಿಹಾರಕ್ಕಾಗಿ ಒಮ್ಮೆ ಯೂಟೂಬ್ ನಲ್ಲಿ ಫಿಸಿಕ್ಸ್ ವಿಷಯದ ಬಗ್ಗೆ ವೀಡಿಯೋ ನೋಡುತ್ತಿದ್ದಳು. ಕುತೂಹಲದಿಂದ ಚಾನೆಲ್ ಬಗ್ಗೆ ಕೇಳಿದಾಗ ಫಿಸಿಕ್ಸ್ ವಾಲಾ ಎಂದಳು.ಆ ಚಾನೆಲ್ ಸ್ಥಾಪಿಸಿದ ಅಲಕ್ ಪಾಂಡೆಯವರ ಸಾಧನೆ ಕೇಳಿ ಬೆರಗಾದೆ.
ಭಾರತದಲ್ಲಿ ಯಾವೆಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೋ ಅವರೆಲ್ಲರಿಗೂ ಅಲಕ್ ಪಾಂಡೆ ಎಂಬ ಶಿಕ್ಷಕನ ಹೆಸರು ಚಿರಪರಿಚಿತ. ಈ ವ್ಯಕ್ತಿ ದೇಶದ ಎಲ್ಲ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೂ ಒಂದು ಲೆಕ್ಕದಲ್ಲಿ ಸ್ಫೂರ್ತಿಯ ಸೆಲೆ. ಇವರನ್ನು ಭಾರತದಲ್ಲಿಯೇ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಗುರುತಿಸಲಾಗುತ್ತದೆ. ಆದ್ರೆ ನೆನಪಿರಲಿ ಇವರು ಜೆಇಇ ಹಾಗೂ ಐಐಟಿ ಫೇಲ್ ಆದವರು. ಆದರೂ ಈಗ ಜೆಇಇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಇವರು ಶುರು ಮಾಡಿರುವ ತರಬೇತಿ ಕೇಂದ್ರದ ಹೆಸರು ಪಿಸಿಕ್ಸ್ ವಲ್ಹಾ ಎಂದು. ಅಲಕ್ ಪಾಂಡೆ ಈ ಒಂದು ಸಂಸ್ಥೆಯನ್ನು ಏಕಾಂಗಿಯಾಗಿ ಕಟ್ಟಿದ್ದರು. ಸದ್ಯ ಅವರ ಸಂಸ್ಥೆ ಈಗ ಸಾವಿರಾರು ಕೋಟಿ ರೂಪಾಯಿ ತಂದುಕೊಡುತ್ತಿದೆ. ಅಲಕ್ ಪಾಂಡೆಯವರು ಈ ಒಂದು ತರಬೇತಿ ಕೇಂದ್ರದಿಂದ ಗಳಿಸಿದ ಒಟ್ಟು ಆಸ್ತಿ 4500 ಕೋಟಿ ರೂಪಾಯಿ.
1991ರಲ್ಲಿ ಉತ್ತರಪ್ರದೇಶದ ಅಲಹಾಬಾದ್ನಲ್ಲಿ ಹುಟ್ಟಿದ ಅಲಕ್ ಪಾಂಡೆ, ಜೀವನ ಕಳೆದಿದ್ದು ಅತ್ಯಂತ ಮಧ್ಯಮ ವರ್ಗದ ಕುಟುಂಬದಲ್ಲಿ. ಅವರ ತಂದೆ ಖಾಸಗಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಥಿಕ ಪರಿಸ್ಥಿತಿ ಅವರನ್ನು ಹೇಗೆ ತಿಂದು ಹಾಕಿತ್ತು ಎಂದರೆ. ಅದರಿಂದ ಪಾರಾಗಲು ಅವರು ಸ್ವಂತ ಮನೆಯನ್ನೇ ಮಾರಿ, ಬಾಡಿಗೆ ಮನೆಗೆ ಬರಬೇಕಾಯ್ತು.
ಅಲೋಕ್ ಪಾಂಡೆ 6ನೇ ತರಗತಿಯಲ್ಲಿದ್ದಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುವ ಮೂಲಕ ಅವರ ಶಿಕ್ಷಕನ ವೃತ್ತಿ ಆರಂಭವಾಯತು. ಈ ವೇಳೆ ತಮ್ಮ ಊರಿನಿಂದ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಿ ತನ್ನ ಜೂನಿಯರ್ಗಳಿಗೆ ಪಾಠ ಮಾಡುತ್ತಿದ್ದರು.
ತಮ್ಮ ಶಾಲಾ ದಿನಗಳು ಮುಗಿದ ಬಳಿಕ ಅಲಕ್ ಐಐಟಿ ಹಾಗೂ ಜೆಇಇ ಪರೀಕ್ಷೆಯನ್ನು ಎದುರಿಸಿ ವಿಫಲರಾಗಿದ್ದರು. ತಮ್ಮ ಪ್ರಯಾಣವನ್ನು ಯೂಟ್ಯೂಬ್ ಚಾನೆಲ್ನತ್ತ ಹೊರಳಿಸಿದ ಅಲೋಕ್ ಹಿಂತಿರುಗಿ ನೋಡಲಿಲ್ಲ.
2014ರಲ್ಲಿ ತಮ್ಮದೇ ಒಂದು ಪಿಜಿಕ್ಸ್ ವಲ್ಹಾ ಎಂಬ ಚಾನೆಲ್ ಶುರು ಮಾಡಿದ ಅಲಕ್ ಪಾಂಡೆ ಅವರ ಕಲಿಕಾ ಶೈಲಿಯಿಂದಲೇ ಫೇಮಸ್ ಆದರು. ಅವರ ವಿಡಿಯೋಗಳು ಎಲ್ಲೆಡೆ ಹರಿದಾಡಲು ಶುರುವಾದವು. ಇಲ್ಲಿಂದ ಅಲಕ್ ಪಾಂಡೆ ಅವರ ಲಕ್ ಸಂಪೂರ್ಣವಾಗಿ ಬದಲಾಯ್ತು. ಮುಂದೆ ಇದು ವೆಬ್ಸೈಟ್ ರೂಪವನ್ನು ಪಡೆದುಕೊಂಡಿತು. ಅನೇಕ ಕಡೆ ಪಿಜಿಕ್ಸ್ ವಲ್ಹಾ ಕೋಚಿಂಗ್ ಸೆಂಟರ್ಗಳನ್ನು ಶುರುವಾದವು.ಸದ್ಯ ಅಲಕ್ ಪಾಂಡೆ ಅವರ ಆಸ್ತಿ 4100 ಕೋಟಿ ರೂಪಾಯಿ ತಲುಪುತ್ತದೆ. ಇವರು ಭಾರತದ ಅತ್ಯಂತ ಕಿರಿಯ ಬಿಲಿಯೇನಿಯರ್ಗಳಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ. ಇವರನ್ನು ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಕೂಡ ಗುರುತಿಸಲಾಗಿದೆ.
ಸಿಹಿಜೀವಿ ವೆಂಕಟೇಶ್ವರ
ನಮ್ಮಲ್ಲಿ ಕುಮಾರ ಪರ್ವತ ಚಾರಣ ದುರ್ಗಮ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದಕ್ಕಿಂತ ದುರ್ಗಮ ಮತ್ತು ಕಠಿಣ ವೆನುಜುಯೇಲ ದೇಶದ ಟೆಪುಯಿ ಪರ್ವತಾರೋಹಣ! ಅದು ಜೀವಮಾನದ ಸಾಹಸ! ಈ ಸಾಹಸಕ್ಕೆ ಅತ್ಯುತ್ತಮ ದೈಹಿಕ ಸಾಮರ್ಥ್ಯದ ಅಗತ್ಯವಿದೆ. ಹೃದಯರಕ್ತನಾಳದ ವ್ಯಾಯಾಮಗಳು, ಶಕ್ತಿ ತರಬೇತಿ ಮತ್ತು ಸಹಿಷ್ಣುತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಕಠಿಣವಾಗಿ ತರಬೇತಿಯೂ ಬೇಕು.
ಗಟ್ಟಿಮುಟ್ಟಾದ ಹೈಕಿಂಗ್ ಬೂಟುಗಳು, ಕ್ರಾಂಪನ್ಗಳು, ಹಗ್ಗಗಳು, ಸರಂಜಾಮುಗಳು ಮತ್ತು ಕ್ಯಾರಬೈನರ್ಗಳು ಬೇಕೇ ಬೇಕು.ಪ್ರಥಮ ಚಿಕಿತ್ಸಾ ಕಿಟ್, ದಿಕ್ಸೂಚಿ, GPS ಸಾಧನ ಮತ್ತು ನಕ್ಷೆಗಳಿದ್ದರೆ ಒಳಿತು...
ನೀವೇನಾದರೂ ವೆನುಜುಯೇಲಾಗೆ ಹೋದರೆ ಒಮ್ಮೆ ಈ ಟ್ರಕ್ ಟ್ರೈ ಮಾಡಿ..
#sihijeeviVenkateshwara #tour #venezuela #trekking