This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
21 ಸೆಪ್ಟೆಂಬರ್ 2022
20 ಸೆಪ್ಟೆಂಬರ್ 2022
ತೇಜಸ್ವಿ ಕಪ್ಪೆ ಲೋಕ .
ತೇಜಸ್ವಿ ಕಪ್ಪೆಲೋಕ
ಚಿಂತಕ ಲೇಖಕ, ಮಾದರಿ ಕೃಷಿಕ, ಪ್ರಕಾಶಕ, ಫೋಟೋಗ್ರಾಫರ್, ಕಾಡಿನ ಜೀವಿಗಳ ಹಿತಚಿಂತಕ , ಪರಿಸರ ಕಾಳಜಿಯ ವ್ಯಕ್ತಿ ಹೀಗೆ ಹೇಳುತ್ತಾ ಹೋದರೆ ವಿಶೇಷಣಗಳ ಪಟ್ಟಿ ಬೆಳೆಯುತ್ತದೆ ಇಷ್ಟು ಹೇಳಿದ ಮೇಲೆ ಯಾರೆಂದು ನಮಲ್ಲರ ಮನದಲ್ಲಿ ಮೂಡುವ ಹೆಸರೇ ತೇಜಸ್ವಿ!ಹೌದು ಈಗಲೂ ತೇಜಸ್ವಿ ಎಲ್ಲ ವಯೋಮಾನದ ನೆಚ್ಚಿನ ವ್ಯಕ್ತಿ. ನನಗೂ ತೇಜಸ್ವಿ ಎಂದರೆ ಗೌರವ, ಪ್ರೀತಿ .ಇದು ಇನ್ನೂ ಹೆಚ್ಚಾದ ಪರಿಯನ್ನು ಹೇಳುವ ಪ್ರಯತ್ನವೇ ಈ ಲೇಖನ.
ಮೊನ್ನೆ ಭಾನುವಾರ ಕಲಾವಿದ ಮಿತ್ರರಾದ ಕೋಟೆ ಕುಮಾರ್ ರವರ ಜೊತೆಯಲ್ಲಿ ಮೊದಲ ಬಾರಿಗೆ ಕರ್ನಾಟಕ ಚಿತ್ರ ಕಲಾ ಪರಿಷತ್ ಗೆ ಭೇಟಿ ನೀಡಿದ್ದೆ .ಮರ ಗಿಡಗಳ ನಡುವೆ ಸುಂದರವಾದ ಕಲೆ ಮತ್ತು ವಾಸ್ತುಶಿಲ್ಪದೊಂದಿಗೆ ನಿಂತಿರುವ ಪರಿಷತ್ ನೋಡಿ ನಿಜಕ್ಕೂ ಸಂತಸವಾಯಿತು.ಹಾಗೆ ಕಣ್ಣು ಹಾಯಿಸಿದಾಗ ಒಂದು ದೊಡ್ಡ ಬ್ಯಾನರ್ ನನ್ನ ಗಮನ ಸೆಳೆಯಿತು "ತೇಜಸ್ವಿ ಕಪ್ಪೆ ಲೋಕ " ಹೆಸರೇ ಆಕರ್ಷಕ ಮತ್ತು ಕುತೂಹಲ ಮೂಡಿಸತು .ಪರಿಷತ್ ನ ಒಳ ಹೊಕ್ಕಾಗ ಅಲ್ಲಿ ಕಪ್ಪೆಗಳ ಲೋಕ ಅನಾವರಣಗೊಂಡಿತು .ತೇಜಸ್ವಿಯವರ ಪರಿಸರದ ಪ್ರೇಮ ಮತ್ತು ಕಾಳಜಿಯಿಂದ ಪ್ರೇರಿತವಾದ ಯುವಕರ ಪಡೆ ಹಾಗೂ ಸಾರ್ವಜನಿಕರು ಅವರ ನೆನಪಿನಲ್ಲಿ ಆಯೋಜಿಸುವ ಅರ್ಥಪೂರ್ಣವಾದ ಕಾರ್ಯಕ್ರಮಗಳಲ್ಲಿ "ತೇಜಸ್ವಿ ಕಪ್ಪೆಲೋಕ ೧೦" ಸಹ ಒಂದು. ಜೈವಿಕ ವೈವಿಧ್ಯತೆಯ ಕುರಿತಾದ ಪೋಟೋಗ್ರಪಿ ಮಾಡುವ ಸಹೃದಯರ ಮತ್ತು ಸಮಾನ ಮನಸ್ಕರ ಕಪ್ಪೆಗಳ ಛಾಯಾಚಿತ್ರಗಳನ್ನು ಒಂದೆಡೆ ಪ್ರದರ್ಶನ ಮಾಡಿರುವ ತಾಣವೇ ತೇಜಸ್ವಿ ಕಪ್ಪೆಲೋಕ ೧೦ . ಪ್ರದರ್ಶನದ ಹಾಲ್ ಪ್ರವೇಶಕ್ಕೆ ಮುನ್ನ ನಮ್ಮನ್ನು ಒಂದು ದೊಡ್ದ ಕಪ್ಪೆ ಸ್ವಾಗತಿಸುತ್ತದೆ.ಅದು ಅಡಿಕೆ ಪಟ್ಟೆಯಲ್ಲಿ ಮಾಡಿದ ಪರಿಸರ ಪ್ರಿಯ ಕಪ್ಪೆಯ ಕಲಾಕೃತಿ ಅದರ ಮುಂದೆ ಒಂದು ಪಟ ತೆಗೆದುಕೊಂಡು ಪ್ರದರ್ಶನದ ಹಾಲ್ ಒಳಗೆ ಕಾಲಿಡುತ್ತಲೇ ನಮ್ಮನ್ನು ನಗು ಮೊಗದಿಂದ ಸ್ವಾಗತಿಸಿದವರು ಕುಣಿಗಲ್ ಪ್ರಸಾದ್ .ನಗುತ್ತಲೇ ನಮ್ಮ ನಗಿಸುತ್ತಲೇ ವಿವಿಧ ಪ್ರಕಾರಗಳ ಕಪ್ಪೆಗಳು ಮಾನವರಿಗೆ ಹೇಗೆ ಸಹಕಾರಿ ,ಅವುಗಳ ಸಂರಕ್ಷಣೆ ಮಾಡುವ ರೀತಿಯನ್ನು ಮನಮುಟ್ಟುವಂತೆ ವಿವರಿಸಿದರು .
ಕುಣಿಗಲ್ ಪ್ರಸಾದ್ ರವರ ಮಾತಿನಂತೆ ಜಗತ್ತಿನಲ್ಲಿ
ಸುಮಾರು 7300 ಕ್ಕೂ ಹೆಚ್ಚಿನ ಕಪ್ಪೆಗಳ ವಿಧಗಳಿವೆ.
ಎಲ್ಲಾ ಕಪ್ಪೆಗಳು ಸುಲಭವಾಗಿ ಗುರುತಿಸಬಹುದಾದರೂ, ದೊಡ್ಡ ಗಾತ್ರದ ಮತ್ತು ರಚನಾತ್ಮಕ ಮಾರ್ಪಾಡುಗಳ ಅಧಾರದ ಮೇಲೆ ಅವುಗಳ ವಿಧಗಳನ್ನು ತಿಳಿಯಬಹುದು. ಅನೇಕ ಕಪ್ಪೆಗಳು ಚಿಕ್ಕ ಪ್ರಾಣಿಗಳು; ಬಹುಶಃ ಚಿಕ್ಕದು ಬ್ರೆಜಿಲಿಯನ್ ಆಗಿದೆಸೈಲೋಫ್ರಿನ್ ಡಿಡಾಕ್ಟಿಲಾ ವಯಸ್ಕ ಕಪ್ಪೆ 9.8 ಮಿಮೀ (0.4 ಇಂಚು) ಅಥವಾ ಕಡಿಮೆ ದೇಹದ ಉದ್ದ ಇರುತ್ತದೆ . ಪಶ್ಚಿಮ ಆಫ್ರಿಕಾದಗೋಲಿಯಾತ್ ಕಪ್ಪೆ , ಕಾನ್ರಾವಾ ಗೋಲಿಯಾತ್ , ಸುಮಾರು 300 ಮಿಮೀ (12 ಇಂಚುಗಳು) ದೇಹದ ಉದ್ದವನ್ನು ಹೊಂದಿದೆ. ಅನೇಕ ಕಪ್ಪೆಗಳು ಮತ್ತು ನೆಲಗಪ್ಪೆಗಳು ನಯವಾದ ತೇವವಾದ ಚರ್ಮವನ್ನು ಹೊಂದಿವೆ. ಬುಫೊ ಕುಲದ ನೆಲಗಪ್ಪೆಗಳು "ವಾರ್ಟಿ" ಉಭಯಚರಗಳೆಂದು ಪರಿಚಿತವಾಗಿವೆ, ಚರ್ಮದಲ್ಲಿ ಹೆಚ್ಚು ಗ್ರಂಥಿಗಳಾಗಿರುತ್ತವೆ ಮತ್ತು ಟ್ಯೂಬರ್ಕಲ್ಸ್ ಗಳಿಂದ (ಸಣ್ಣ, ಸುತ್ತಿನ ಗಂಟುಗಳು) ಮುಚ್ಚಿರುತ್ತದೆ. ಅನೇಕ ಇತರ ಕುಟುಂಬಗಳ ಕಪ್ಪೆಗಳು ಒರಟಾದ ಚರ್ಮವನ್ನು ಹೊಂದಿರುತ್ತವೆ.
ಇನ್ನೂ ಕೆಲ ವಿಶೇಷವಾದ ಕಪ್ಪೆಗಳ ಬಗ್ಗೆ ನೋಡುವುದಾದರೆ
ಮಲಯನ್ ಎಲೆ ಕಪ್ಪೆಯ ( ಮೆಗೋಫ್ರಿಸ್ ನಸುತಾ ) ತಲೆಬುರುಡೆಯು ಅರಣ್ಯದ ನೆಲದ ಮೇಲೆ ಎಲೆಯ ಕಸದ ಆಕಾರ ಮತ್ತು ವಿನ್ಯಾಸವನ್ನು ಅನುಕರಿಸಲು ವಿಕಸನಗೊಂಡಿದೆ. ಬ್ಯಾಂಡೆಡ್ ಕೊಂಬಿನ ಮರದ ಕಪ್ಪೆಯ ತಲೆಯು ( ಹೆಮಿಫ್ರಾಕ್ಟಸ್ ಫ್ಯಾಸಿಯಾಟಸ್ ) ಅದರ ಕಣ್ಣುಗಳ ಮೇಲೆ ಮತ್ತು ಅದರ ತಲೆಬುರುಡೆಯ ಹಿಂಭಾಗದಲ್ಲಿ ಗಟ್ಟಿಯಾದ ಎಲುಬಿನ ಕೊಂಬಿನಂತಹ ರಚನೆಗಳೊಂದಿಗೆ ತ್ರಿಕೋನವಾಗಿದೆ. ಅಂತೆಯೇ, ಸಲಿಕೆ-ತಲೆಯ ಮರದ ಕಪ್ಪೆ ( ಟ್ರಿಪ್ರಿಯನ್ ಸ್ಪಾಟುಲಾಟಸ್ ) ವಿಶಾಲವಾದ ತಲೆಬುರುಡೆಯನ್ನು ಹೊಂದಿದ್ದು ಅದು ತನ್ನ ದೇಹದ ಉಳಿದ ಭಾಗವನ್ನು ದಾಳಿಯಿಂದ ರಕ್ಷಿಸುತ್ತದೆ, ಆದರೆ ಡಿಸ್ಕ್ ಕಪ್ಪೆಗಳು ( ಸಿನಾಪ್ಟುರಾನಸ್ ) ಬಿಲಕ್ಕೆ ಸಹಾಯ ಮಾಡುವ ಮೊನಚಾದ ಮೂತಿಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ .ಹೀಗೆ ಕಪ್ಪೆಗಳ ವರ್ಣಚಿತ್ರಗಳನ್ನು ತೋರಿಸುತ್ತಾ ನಮಗೆ ವಿವರಣೆ ನೀಡುವ ನಡುವೆಯೇ ಅಗ ತಾನೆ ಹುಟ್ಟಿದ ಕಪ್ಪೆಯಿಂದ ನಾಗರಾಜನ ಬಾಯಿ ಸೇರುವ ಕಪ್ಪೆಗಳ ವಿವಿಧ ಭಂಗಿಯ ಕಪ್ಪೆಗಳು ನಮ್ಮ ಕಣ್ ತುಂಬಿಕೊಂಡಿದ್ದವು.ಈ ನಡುವೆ ನಮ್ಮ ಜೊತೆಗೂಡಿದವರು ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ.ನಲ್ಲೂರು ಪ್ರಸಾದ್ ರವರು ಹಾಗೂ ಚಲನಚಿತ್ರ ಹಾಸ್ಯ ನಟರಾದ ಎಂ ಎನ್ ಸುರೇಶ್ ರವರು .ಅವರೊಂದಿಗೆ ಕಪ್ಪೆಗಳ ಚಿತ್ರಗಳನ್ನು ನೋಡುತ್ತಾ ಕಪ್ಪೆ ಲೋಕದಲ್ಲಿ ವಿಹರಿಸುತ್ತಾ ಸಾಗುವಾಗ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಕಪ್ಪೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ ಪ್ರಸಾದ್ ರವರಿಗೆ ನಮನ ಸಲ್ಲಿಸಿ .ಪರಿಷತ್ ನ ಮತ್ತೊಂದು ಗ್ಯಾಲರಿಯಲ್ಲಿ ತಮಿಳುನಾಡು ಮೂಲದ ಕಲಾವಿದರ ಛಾಯಾಚಿತ್ರ ಮತ್ತು ಕಲಾಕೃತಿಗಳ ಪ್ರದರ್ಶನ ವೀಕ್ಷಿಸಿ ಪರಿಷತ್ ನ ಕಾಮತ್ ಕ್ಯಾಂಟೀನ್ ನಲ್ಲಿ ಟೀ ಕುಡಿಯುವಾಗ ಮರದ ಪಕ್ಕದಲ್ಲಿ ಒಂದು ಕಪ್ಪೆ ಜಿಗಿದದ್ದು ಕಣ್ಣಿಗೆ ಬಿತ್ತು .ತಕ್ಷಣವೇ ಪ್ರಸಾದ್ ರವರ ಮಾತುಗಳು ನೆನಪಾಗಿ ಇದು ಯಾವ ರೀತಿಯ ಕಪ್ಪೆ ಎಂದು ಯೋಚಿಸುತ್ತಿರುವಾಗಲೆ ಆ ಕಪ್ಪೆ ಜಿಗಿದು ಮಾಯವಾಯಿತು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
19 ಸೆಪ್ಟೆಂಬರ್ 2022
ಕರುಣೆ
ಕರುಣೆ
ಪ್ರತಿಯೊಬ್ಬರ ಹೃದಯದಲ್ಲಿ
ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು
ಹೃತ್ಕುಕ್ಷಿಗಳೆಂಬ ಕೋಣೆ |
ಕೆಲವರ ಹೃದಯದಲ್ಲಿ
ಮಾತ್ರ ನೆಲೆಸಿರುತ್ತವೆ
ಮನುಷ್ಯತ್ವ ಮತ್ತು ಕರುಣೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಆಧುನಿಕ ಬದುಕು
#ಆಧುನಿಕಬದುಕು
ಎದುರಿಗಿರುವ ತಂದೆತಾಯಿಗಳ,
ಬಂಧುಬಳಗದ ಪ್ರೀತಿ ಅರಿಯದೆ
ಬೆದಕುವರು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟಿದೆ ಲೈಕು |
ವಾಸ್ತವಕ್ಕಿಂತ ಮರೀಚಿಕೆಯ
ಹಿಂದೆ ಓಡತಲಿರುವರು
ಇದೇ ಆಧುನಿಕ ಬದುಕು ||
#ಸಿಹಿಜೀವಿಯ_ಹನಿ