This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
29 ಸೆಪ್ಟೆಂಬರ್ 2021
28 ಸೆಪ್ಟೆಂಬರ್ 2021
26 ಸೆಪ್ಟೆಂಬರ್ 2021
ಟೆಂಟ್
ಹನಿಗವನ
ಬೇಕಿಲ್ಲ ನನಗೆ ಬಂಧನದಂತೆ
ಕಾಣುವ ಅಪಾರ್ಟ್‌ಮೆಂಟ್|
ಸುಂದರ ಪರಿಸರದಲಿ
ಇದ್ದರೂ ಸುಖವಾಗಿರುವೆ
ಹಾಕಿಕೊಂಡು ಸಣ್ಣ ಟೆಂಟ್||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಚಿನ್ನಮ್ಮನ ಸೈಕಲ್ .ವಿಶ್ವ ಹೆಣ್ಣುಮಕ್ಕಳ ದಿನದ ನೆನಪಿಗೆ
ಶಿಶುಗೀತೆ
*ಚಿನ್ನಮ್ಮನ ಸೈಕಲ್*
ಮೂರು ಗಾಲಿಯ ಸೈಕಲ್
ತುಳಿಯುತ ಬಂದಳು ಚಿನ್ನಮ್ಮ
ಹಿಂದಕೆ ಮುಂದಕೆ ಚಲಿಸಿ
ನಲಿಯುತ ಇದ್ದಳು ಕಂದಮ್ಮ||
ಟ್ರಿಣ್ ಟ್ರಿಣ್ ಬೆಲ್ಲು ಒತ್ತುತಾ
ಮನೆಯಲ್ಲೆಲ್ಲಾ ಸುತ್ತಿದಳು
ಸಂತಸದಿಂದ ನಕ್ಕು ನಲಿಯುತ
ನಗುವಿನ ವದನ ತೋರಿದಳು||
ಜೋರಾಗಿ ತುಳಿಯುತ ಮುಗುಚಿ
ಬಿದ್ದಿತು ಸೈಕಲ್ಲು
ಅಪ್ಪ ಎತ್ತಿದರು ನೋಡಿದರಾಗ
ಮುರಿದು ಬಿದ್ದಿತ್ತು ಒಂದಲ್ಲು||
ಅಳುತಲಿ ಅಮ್ಮನ ಮಡಿಲು
ಸೇರಿದಳು ಚಿನ್ನಮ್ಮ
ಕೋಲನು ಎತ್ತುತಾ ಸೈಕಲ್ಗೆ
ಎರಡೇಟು ಕೊಟ್ಟರು ಅವರಮ್ಮ ||
ಅಪ್ಪ ಹೇಳಿದರು ಮತ್ತೆ ತುಳಿ
ಅದೇ ಸೈಕಲ್ಲು
ತಲೆಯಾಡಿಸುತಾ ಮಗಳು
ತೋರಿದಳು ಮುರಿದ ಹಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ನನ್ನ ಪುತ್ರಿಯರು
ವಿಶ್ವ ಹೆಣ್ಣುಮಕ್ಕಳ ದಿನದ ನೆನಪಿಗಾಗಿ
"ಚುಟುಕುಗಳು*
೧
ನನಗೆ ಬಹಳ ಹೆಮ್ಮೆ
ನಮ್ಮನೆಯಲಿವೆ ಮುತ್ತು
ರತ್ನಗಳು |
ಅವರೇ ನನ್ನೆರಡು ಕಣ್ಣುಗಳಾದ
ಹೆಣ್ಣು ಮಕ್ಕಳು ||
೨
ಜ್ಞಾನ ,ವಿನಯ, ಭಕ್ತಿ ಸದ್ಗುಣದಲಿ
ಅವರಿಗೆ ಸಾಟಿ ಇನ್ನಾರು|
ಸಮಯ ಬಂದರೆ ಗುರುವಿಗೆ ಗುರು ನನ್ನ ಪುತ್ರಿಯರು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ




