09 ಏಪ್ರಿಲ್ 2021

ಬರ ಹನಿ.


 



*ಬರ?*


ರೈತರ ಉತ್ಪನ್ನಗಳಿಗೆ

ಬೆಲೆ ಕಡಿಮೆ

ಈಗ ಗಾಯದ ಮೇಲೆ ಬರೆ

ಗಗನ ಮುಖಿಯಾಗಿದೆ

ರಸಗೊಬ್ಬರ|

ಹೀಗೆ ಮುಂದುವರೆದರೆ

ಕೃಷಿಕ ಕೃಷವಾಗಿ 

ಎದುರಿಸಬೇಕಾಗಬಹುದು

ಆಹಾರದ ಬರ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಸಾಧಿಸಲು .ಹನಿ




ಎನೂ ಕಳೆದುಕೊಂಡಿಲ್ಲ

ನೀ ರೋಧಿಸಲು |

ಕಲಿಯಬೇಕಿದೆ

ಕಷ್ಟಗಳಿದ್ದರೂ 

ನಗುತಾ ಜೀವಿಸಲು||

ಜನಮಿಡಿತ ೭.೪.೨೧


 

08 ಏಪ್ರಿಲ್ 2021

ಸಂಬಂಧಗಳು


 ಒಳ್ಳೆಯ ಸಂಬಂಧಗಳನ್ನು 

ಕಷ್ಟ ಪಟ್ಟಾದರೂ,

ಪ್ರೀತಿ ಕೊಟ್ಟಾದರೂ 

ಉಳಿಸಿಕೊಳ್ಳಬೇಕು|

ಕೆಟ್ಟ ಸಂಬಂಧಗಳನ್ನು 

ಮೌನವಾಗಿದ್ದುಕೊಂಡು

 ಕಳೆದುಕೊಳ್ಳಬೇಕು||

07 ಏಪ್ರಿಲ್ 2021

ಆರೋಗ್ಯ


 ದೇಹಕ್ಕೂ ಬೇಕು

ಮನಕ್ಕೂ ಬೇಕು

ಆರೋಗ್ಯ|

ನಮ್ಮ ದೇಹವು

ಮತ್ತು 

ಚಿಂತನೆಗಳು

ಸದಾ ಆಗಿರಲಿ

ಯೋಗ್ಯ ||