04 ಫೆಬ್ರವರಿ 2021

ನನ್ನ ಬಂಧು .ಹನಿ

 *ನನ್ನ ಬಂಧು*


ಅಸಹಾಯಕತೆಯಿಂದ ನಿಂತಿದ್ದೆ

ಕೈಹಿಡಿದು ಮುನ್ನೆಡೆಸಿದ

ಸಾಂತ್ವನ ನೀಡಿ ಹೋದ

ಧೈರ್ಯವಾಗಿರೆಂದು ಹೇಳಿದ

ಸರಳತೆಯ ಮೈಗೂಡಿಸಿದ

ಆಡಂಬರವ ತೊರೆ ಎಂದ 

ದಿಟ್ಟತನವನು ಕಲಿಸಿದ 


ಅವನೇ ನನ್ನ ಬಂಧು ಮುಕುಂದ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 ಫೆಬ್ರವರಿ 2021

ಸ್ವಚ್ಚ ಮನೆ . ಸ್ವಚ್ಚ ನಗರ ? ಕವನ


 *ಸ್ವಚ್ಛ ಮನೆ ಸ್ವಚ್ಛ ನಗರ?*


(ಇಂದೋರ್ ನಲ್ಲಿ ವೃದ್ದರನ್ನು ಲಾರಿ ಯಲ್ಲಿ ತುಂಬಿಕೊಂಡು ಪಶುಗಳಂತೆ ರಸ್ತೆಯಲ್ಲಿ ಬಿಸಾಡಿ ಬಂದ ಘಟನೆ ನೋಡಿ ಮನ ನೊಂದು ಬರೆದ ಕವನ)


ಹೌದು ನಮ್ಮದು

ಸ್ವಚ್ಛ ನಗರ, ಸ್ವಚ್ಛ ಮನೆ,

ಇದು ನಮಗೆ ಹೆಮ್ಮೆಯ ವಿಷಯ.


ನಮ್ಮ ಮನೆಯಲ್ಲಿ 

ನಾನು ನಮ್ಮವರು ಮಾತ್ರ

ನಮ್ಮ ಜನ್ಮದಾತರನ್ನು 

ಮಹಾನಗರ ಮಾಲಿಕೆಗೆ

ಒಪ್ಪಿಸಿ ನಮ್ಮ ಮನೆಯನ್ನು

ಸ್ವಚ್ಛ ಮಾಡಿಕೊಂಡಿರುವೆವು.


ಅವರೂ ಅಷ್ಟೇ ನಗರದಲ್ಲಿ

ಸೌಂದರ್ಯವನ್ನು ಕಾಪಾಡಿಕೊಳ್ಳಲು

ವಯಸ್ಸಾದವರನ್ನೆಲ್ಲಾ ಒಂದು ಕಸದ

ಲಾರಿ ಯಲ್ಲಿ ತುಂಬಿಕೊಂಡು

ನಗರದ ಹೊರವಲಯದ ರಸ್ತೆಗೆ 

ಎಸೆದು ಬಂದಿದ್ದಾರೆ.


ಮುಂದಿನ ವಾರ ನಮ್ಮ 

ಮನೆಗೆ ನಮ್ಮ ನಗರಕ್ಕೆ ರಾಷ್ಟ್ರದ ಮಟ್ಟದ

ಸ್ವಚ್ಛ ಮನೆ ಸ್ವಚ್ಛ ನಗರ ಬಹುಮಾನ

ಕೊಡುವರಂತೆ ನಾವೂ 

ಸಜ್ಜಾಗಿದ್ದೇವೆ ಇನ್ನೂ ಸ್ವಚ್ಛವಾಗಲೂ

ಮಾನವೀಯತೆ ,ಮೌಲ್ಯಗಳ ತೊರೆದು.


ನಮ್ಮ ಮಕ್ಕಳು ,ನಮ್ಮನ್ನು 

ಗಮನಿಸುತ್ತಿದ್ದಾರೆ 

ಅಂತರರಾಷ್ಟ್ರೀಯ ಮಟ್ಟದ ಸ್ವಚ್ಛತಾ ಬಹುಮಾನ ಪಡೆಯಲು.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


30 ಜನವರಿ 2021

ಪ್ರದಕ್ಷಿಣೆ ಹನಿ

 

*ಪ್ರದಕ್ಷಿಣೆ*

ಮದುವೆಗೂ ಮುನ್ನ
ಮಗ ಅಮ್ಮನ ಸುತ್ತ
ಹಾಕುತ್ತಿದ್ದ ಪ್ರದಕ್ಷಿಣೆ|
ಮದುವೆಯಾದ ಮೇಲೆ
ಬೇರೆ ಮನೆ ಮಾಡಿದ
ಹೆಂಡತಿಯ ಪ್ರೀತಿಗೆ
ಹಾಕಲು ದಕ್ಷಿಣೆ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

27 ಜನವರಿ 2021

ಹಾಯ್ಕು

 

*ಹಾಯ್ಕು*

ನೀರೆಯರು
ಸೀರೆಯಿಂದ ದೂರ
ಪಾಶ್ಚಾತ್ಯ ಮೋಹ

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

ಸಿಹಿಜೀವಿಯ ಹಾಯ್ಕುಗಳು

 ಹಾಯ್ಕುಗಳು 

ಗಾಳಿಗೂ ಕೋಪ

ತಿರ್ರನೆ ತಿರುಗಿದೆ

ಸುಂಟರಗಾಳಿ



ಸೂತ್ರದಾರನ

ಗಾಳಿಪಟ ಹಾರಾಟ

ಗಗನಚುಂಬಿ 



ಜೀವಾನಿಲವು

ರೊಚ್ಚಿಗೆದ್ದಿದೆ ನೋಡು

ಸುಂಟರಗಾಳಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ