04 ಜನವರಿ 2021

ಸುರಿಯುವರು .ಹನಿ

 


*ಸಿಹಿಜೀವಿಯ ಹನಿ*


*ಸುರಿಯುವರು*


ನಾವು ತಿನ್ನುವ ಅನ್ನ

ಸಂಪಾದಿಸಲು 

ಅನ್ನದಾತ ಹೊಲಗಳಲ್ಲಿ

ಬೆವರು ಸುರಿಸುವರು|

ನಗರದ ಜನ ತಿಂದ

ಅನ್ನ ಕರಗಿಸಲು

ಜಿಮ್ ಗಳಿಗೆ ಹಣ 

ಸುರಿಯುವರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

03 ಜನವರಿ 2021

ನನಪಿದೆ ಕವನ


 *ನೆನಪಿದೆ*


ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ

ಕುಣಿದ ದಿನವು ನೆನಪಿದೆ

ನನ್ನ ನೃತ್ಯ ಕಂಡು ಅವನು

ಮೆಚ್ಚಿದ ಮಾತು ನೆನಪಿದೆ.


ವಾಲೆ ಜುಮುಕಿ ಕುಣಿತ ಕಂಡು

ಕರಗಳನ್ನು ತಟ್ಟಿ ನಲಿದು

ಬೆರಳಿನುಂಗುರದ ಸೌಂದರ್ಯ

ಕಂಡು ಅವನು ನಲಿದ ನೆನೆಪಿದೆ .


ನಾಗರ ಜಡೆ ಸರಿಸಿ ನಿಂದು

ರಾಗ ತಾಳ ಲಯಕೆ 

ಕುಣಿಯುವಾಗ ಅವನು 

ಮುಗುಳು ನಕ್ಕ  ನೆನಪಿದೆ.


ನನ್ನ ‌ನೃತ್ಯ ಮುಗಿದ ಮೇಲೆ

ಬಳಿಗೆ ಬಂದು ಬೈತಲೆ ಬಟ್ಟು

ಸರಿಸಿ ಮುತ್ತ ನೀಡಿದಾಗ 

ಕಂಠೀಹಾರ ಬಿಗಿಯಾದುದು ನೆನಪಿದೆ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೩/೧/೨೧


 

01 ಜನವರಿ 2021

ಶಾಲೆಗೆ ನಮಿಸೋಣ ಶಿಶುಗೀತೆ.

 

*ಶಾಲೆಗೆ ನಮಿಸೋಣ*


ಬನ್ನಿರಿ ಗೆಳೆಯರೆ 

ಬನ್ನಿರಿ ಎಲ್ಲರೂ 

ಶಾಲೆಯ ಕಡೆಗೆ ಹೊರಡೋಣ


ಹೊಸ ವರ್ಷದಲ್ಲಿ 

ಹೊಸ ಪಾಠಗಳ 

ಕಲಿಯುತ ನಾವು ಮುನ್ನೆಡೆಯೋಣ.


ಕರೋನ ಮುನ್ನೆಚ್ಚರಿಕೆ

ಪಾಲಿಸಿ ಮಾಸ್ಕ್ ಧರಿಸಿ

ಸಾಮಾಜಿಕ ಅಂತರ ಕಾಪಾಡೋಣ .


ಗುರುಗಳು ಹೇಳಿದ

ಹಿತವಚನಗಳ ಕೇಳುತ

ನಮ್ಮ ಭವಿಷ್ಯವ ರೂಪಿಸಿಕೊಳ್ಳೋಣ .


ಮನೆಯೇ ಶಾಲೆಯು

ಶಾಲೆಯು ದೇಗುಲ

ಮನೆಗೂ ಶಾಲೆಗೂ ನಮಿಸೋಣ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

31 ಡಿಸೆಂಬರ್ 2020

ಹೊಸ ವರ್ಷದ ಶುಭಾಶಯಗಳು

 ಬರಲಿದೆ ವರ್ಷ ಇಪ್ಪತ್ತು ಇಪ್ಪತ್ತೊಂದು |

ನಮ್ಮ ಬದುಕಲ್ಲಿ ಹರ್ಷ ತುಂಬಿರಲಿ ಎಂದೆಂದೂ||


ಹೊಸ ಕ್ಯಾಲೆಂಡರ್ ವರ್ಷದ ಹಾರ್ಧಿಕ ಶುಭಾಶಯಗಳು 💐💐


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ