19 ಮೇ 2020

*ಇಂದಿನ #ಉದಯವಾಣಿ ದಿನಪತ್ರಿಕೆಯಲ್ಲಿ ಒಂದೇ ನನ್ನ #ಎರಡು #ಲೇಖನಗಳು ಪ್ರಕಟವಾಗಿವೆ*


*ಇಂದಿನ #ಉದಯವಾಣಿ ದಿನಪತ್ರಿಕೆಯಲ್ಲಿ ಒಂದೇ  ನನ್ನ #ಎರಡು #ಲೇಖನಗಳು ಪ್ರಕಟವಾಗಿವೆ*

ತಾರೆಗಳು



"ತಾರೆಗಳು*

ತಾವರೆ ಕೊಳದ
ತಾರೆಗಳು ನಾವು
ಹೂಗಳ ನೋಡಿ
ಮೈಮರೆಯುವೆವು||

ದಿನಪನ‌ ಕಂಡ
ಕಮಲದ ಹಾಗೆ
ನಗುತಲಿ ನಾವು
ಬಾಳುವೆವು ಹೀಗೆ||

ಬಡವರೆ ಆದರೂ
ನಗುವೆವು ನಾವು
ನಮ್ಮಯ ಸಿರಿತನ
ನೋಡಿರಿ ನೀವು||

ನಮ್ಮಯ ಜೀವನ
ಹೂವಿನ ರೀತಿ
ಹೊಸಕಿ ಹಾಕದಿರಿ
ತೋರಿಸಿ ಪ್ರೀತಿ||

ಸಿ ಜಿ ವೆಂಕಟೇಶ್ವರ




18 ಮೇ 2020

ಸಿಹಿಜೀವಿಯ "ರೀ... "ನಿಘಂಟು


*ನನ್ನವಳ ರೀ ನಿಘಂಟು*


1

ಗಾಡಿಯಲ್ಲಿ
ಹೋಗುತ್ತಿರುವಾಗ
"ರೀ"
ಎಂದರೆ
ಹೂವು ಬೇಕೂ'ರಿ'

2.

ಡೈನಿಂಗ್ ಟೇಬಲ್
ಹತ್ತಿರ ನಿಂತು
"ರೀ"
ಅಂದರೆ
ಊಟಕ್ಕೆ
ಬನ್ನಿ'ರಿ'

3.

ಊಟ ಮಾಡುವಾಗ
"ರೀ"
ಅಂದರೆ
ರುಚಿ ಹೇಗಿದ್ದರೂ
ತಿನ್ನಿ'ರಿ'


4.

ತಿಜೋರಿ  ಹತ್ತಿರ
ನಿಂತುಕೊಂಡು
"ರೀ"
ಅಂದರೆ
ನನ್ನ ಪರ್ಸ್ಗೆ
ಹಣ
ಸುರಿಯಿ'ರಿ'


5.

ಕನ್ನಡಿ ಮುಂದೆ
ನಿಂತುಕೊಂಡು
"ರೀ"
ಅಂದರೆ
ನಾನೇಗೆ ?
ಕಾಣುವೆ
ಹೇಳಿ'ರಿ'


6.

ಸ್ನಾನದ ಕೋಣೆಯಿಂದ
ಜೋರಾಗಿ
 "ರೀ"
ಎಂದರೆ
ಜಿರಲೆ,ಹಲ್ಲಿ
ಬಂದಿದೆ
ಹೊಡೆಯಿ'ರಿ'

7.

ಹೊಟೆಲ್ನಲ್ಲಿ
ತಿಂದ ಮೇಲೆ
 "ರೀ"
ಎಂದರೆ
ಬಿಲ್ಲುನ್ನು
ಪಾವತಿಸಿ'ರಿ'

*ಸಿ ಜಿ ವೆಂಕಟೇಶ್ವರ*

ನೀನೆಂದು ಬರುವೆ ? (ಭಾವಗೀತೆ)


*ನೀನೆಂದು ಬರುವೆ?* ‌ಭಾವಗೀತೆ

ನಲ್ಲೆ  ನೀನೆಂದು ಬರುವೆ
ಕರೆಯಲು ತರಂಗ ಕಳಿಸಿರುವೆ|ಪ|

ಹೃದಯದಾಳದಲಿ ಹುದುಗಿವೆ
ನೂರಾರು ಭಾವನೆಗಳ ಬಣವೆ
ಬಂದು ಬಿಡು ಈಗಲೆ
ಭಾವ ತರಂಗಗಳ ಕಳಿಸಿರುವೆ||

ನನ್ನ ದೇಹದ ಕಣಕಣದಲಿ
ಬರಿ ನೀನೆ ನೆಲೆಸಿರುವೆ
ಪ್ರೇಮಿಯ ಕೂಡಲು ಬಾ
ಪ್ರೇಮ ತರಂಗಗಳ ಕಳಿಸಿರುವೆ||

ನೀ ನನ್ನೆದೆಯ ಹೃದಯ
ವೀಣೆಯಲಿ ನೆಲೆಸಿರುವೆ
ನಿನ್ನ ಕರೆತರಲು ಈಗ
ನಾದತರಂಗಗಳ ಕಳಿಸಿರುವೆ||

*ಸಿ ಜಿ ವೆಂಕಟೇಶ್ವರ*


ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಾಕ್ಡೌನ್ ಅನುಭವದ ಬರಹ ( ಭಾವ ಸಂಗಮದ ತೃತೀಯ ಬಹುಮಾನಿತ ಬರಹ)

 ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಮತ್ತು ಭಾವಸಂಗಮ ಬಳಗದ ಸ್ಪರ್ಧೆಯ ಮೂರನೆ ಬಹುಮಾನ ಪಡೆದ ಲೇಖನ