This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
30 ಡಿಸೆಂಬರ್ 2017
ಕನ್ನಡ ನಾಡು (ಭಾವಗೀತೆ)
ಭಾವಗೀತೆ
*ಕನ್ನಡ ನಾಡು*
ನೋಡು ಬಾ ಯಾತ್ರಿಕ ನಮ್ಮ ನಾಡಸಿರಿಯ
ಸುಂದರ ಮನೋಹರ ಕರುನಾಡ ಸಿರಿಯ
ಗಂಗ ಕದಂಬ ರಾಷ್ಟ್ರಕೂಟರು ಆಳಿದ ನಾಡು
ಸಂಗೀತ ನಾಟ್ಯ ಸಾಹಿತ್ಯ ಕಲೆಗಳ ನೆಲೆವೀಡು
ಕಲೆ ನಾಟಕ ಶಿಲ್ಪಕಲೆಗಳ ತವರೂರು ಇದು
ಆದಿಪಂಪ ಕುಮಾರವ್ಯಾಸರುದಿಸುದ ನಾಡಿದು
ಕೃಷ್ಣ ತುಂಗೆ ಕಾವೇರಿ ನೇತ್ರಾವತಿಯರ ತಾಣ
ತೇಗ ಹೊನ್ನೆ ಬೀಟೆ ಗಂಧದ ಮರಗಳ ವನ
ನವಿಲು ಸಾರಂಗ ಹುಲಿ ಕರಡಿಯ ನೋಡಿ
ಸಹ್ಯಾದ್ರಿಯ ಸೊಬಗಿನ ಸುಂದರ ಮೋಡಿ
ಹಕ್ಕ ಬುಕ್ಕ ಕೃಷ್ಣದೇವರಾಯರಾಳಿದ ನಾಡು
ಕನಕ ಪುರಂದರ ದಾಸರ ಪದಗಳ ನೆಲೆವೀಡು
ಶಾಸ್ತ್ರೀಯ ನುಡಿ ಕನ್ನಡ ಭಾಷೆಯ ತವರೂರು
ದಾನಧರ್ಮಗಳಿಗೆ ಹೆಸರಾದ ಹಿರಿಯೂರು
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
29 ಡಿಸೆಂಬರ್ 2017
ಹನಿಗವನಗಳು (ಜೀವನ. ಕುವೆಂಪು ರವರಿಗೆ ಸಮರ್ಪಣೆ)
ಹನಿಗವನಗಳು
*೧*
*ಸೂತ್ರಧಾರ*
ಜೀವನವೊಂದು ನಾಟಕ ರಂಗ
ನಾವೆಲ್ಲ ಪಾತ್ರ ದಾರಿಗಳು
ಭಗವಂತ ಸೂತ್ರಧಾರ
ಸೂತ್ರ ಹರಿದರೆ
ಹೊಲಿಯಲು
ಉಪಯೋಗಕ್ಕೆ ಬರುವುದಿಲ್ಲ
ನಮ್ಮ ಸೂಜಿದಾರ
*೨*
*ದಾರಿ*
ಒಳ್ಳೆಯ ಮಾರ್ಗದಿ ನಡೆ
ಜೀವನ ಉತ್ತಮವಾಗುವುದು
ಎಂದು ಬುದ್ದಿಹೇಳಿದೆ
ಸಾರಿ ಸಾರಿ
ಕೇಳಲಿಲ್ಲ ಹಿಡಿದ ಅಡ್ಡದಾರಿ
ಪರಿಣಾಮ ಭಗವಂತ
ಬೇಗ ತೋರಿದ
ಯಮಪುರಕ್ಕೆ ದಾರಿ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




