ಕೋಳಿಯ ಜೀವನ ಪಾಠ.
ಕೋಳಿಯೆಂದರೆ ನಮಗೆ ನೆನಪಾಗುವುದು ಮುಂಜಾನೆಯ ಕೂಗು, ಇಲ್ಲವೇ ಮೊಟ್ಟೆ, ಇಲ್ಲಾ ಅಂದ್ರೆ ಕಬಾಬ್, ಬಿರ್ಯಾನಿ, ಅಷ್ಟೇ.
ಆದರೆ ಕೋಳಿಯಿಂದಲೂ ನಾವು ಜೀವನದ ಪಾಠಗಳನ್ನು ಕಲಿಯಬಹುದು ಅವ್ಯಾವು ನೋಡೋಣ ಬನ್ನಿ.
ಕೋಳಿ ಮೊದಲು ಮೊಟ್ಟೆ ಇಟ್ಟು ಅವುಗಳ ಮೇಲೆ ಕುಳಿತುಕೊಳ್ಳುವ ಮೂಲಕ ಅದರ ಉತ್ತಮ ಯೋಜನೆಯನ್ನು ನಾವು ಗಮನಿಸಬೇಕು.
ಕೋಳಿಯು ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲಾರಂಭಿಸಿದಾಗ ಅದು ಚಲನೆಯನ್ನು ಕಡಿಮೆ ಮಾಡುತ್ತದೆ ಇದು ಶಿಸ್ತುಬದ್ಧ ನಡವಳಿಕೆ. ನಾವು ಸಹ ಏನಾದರೂ ಅಸಾಧಾರಣ ಸಾಧನೆ ಮಾಡುವಾಗ ಅನವಶ್ಯಕ ತಿರುಗಾಟ ಕಡಿಮೆ ಮಾಡಿ ಶಿಸ್ತು ರೂಢಿಸಿಕೊಳ್ಳಬೇಕು. ಅದು ಕಾವು ಕೊಡುವ ವೇಳೆ ಕಡಿಮೆ ಆಹಾರ ಸೇವನೆಯಿಂದಾಗಿ ಅದು ತನ್ನ ಮೊಟ್ಟೆಗಳ ಮೇಲೆ ಕುಳಿತಾಗ ದೈಹಿಕವಾಗಿ ತೂಕವನ್ನು ಕಳೆದುಕೊಳ್ಳುತ್ತದೆ ಇದು
ತ್ಯಾಗ ಮತ್ತು ಪರಹಿತಚಿಂತನೆಗೆ ಉದಾಹರಣೆ. ಇದರ ಜೊತೆಯಲ್ಲಿ ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶವೆಂದರೆ ಒಂದು ಕೋಳಿಯು ಮತ್ತೊಂದು ಕೋಳಿಯ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿ ಮಾಡುವುದನ್ನು ನಾವು ನೋಡಿದ್ದೇವೆ.ಇದು ಕೋಳಿಯ ಉದಾರ ಮತ್ತು ನಿಸ್ವಾರ್ಥ ಮನಸ್ಸಿಗೆ ಸಾಕ್ಷಿ.
ಅದು 21 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ತಾಳ್ಮೆಯಿಂದ ಕಾಯುತ್ತದೆ ಮತ್ತು ಅವು ಮರಿಯಾಗದಿದ್ದರೂ ಅದು ಮತ್ತೆ ಮೊಟ್ಟೆಗಳನ್ನು ಇಡುತ್ತದೆ ಇದು ನಂಬಿಕೆ, ಭರವಸೆ ಮತ್ತು ಧೈರ್ಯಕ್ಕೆ ಉದಾಹರಣೆ.
ಇದು ಫಲವತ್ತಾಗಿಸದ ಮೊಟ್ಟೆಗಳನ್ನು ಪತ್ತೆ ಮಾಡುತ್ತದೆ
ಸೂಕ್ಷ್ಮ ಮತ್ತು ವಿವೇಚನಾಶೀಲ ಕೋಳಿಯು ಕೊಳೆತ ಮೊಟ್ಟೆಗಳನ್ನು ತ್ಯಜಿಸುತ್ತದೆ ಮತ್ತು ಮೊಟ್ಟೆಯೊಡೆದ ಮರಿಗಳನ್ನು ಅದು ಒಂದೇ ಆಗಿದ್ದರೂ ಸಹ ನೋಡಿಕೊಳ್ಳಲು ಪ್ರಾರಂಭಿಸುತ್ತದೆ.ಇದು ಕೋಳಿಯ
ಬುದ್ಧಿವಂತಿಕೆ,ಪ್ರಜ್ಞೆ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ.
ಅದು ಮರಿಯ ಹಾರೈಕೆ ಮಾಡುವಾಗ ಅದರ ಮರಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.ಅದು
ರಕ್ಷಣಾತ್ಮಕ ಪ್ರೀತಿ.
ಅದು ತನ್ನ ಎಲ್ಲಾ ಮರಿಗಳನ್ನು ಒಟ್ಟುಗೂಡಿಸುತ್ತಾ ಏಕತೆಯ ಸಂದೇಶವನ್ನು ಸಾರುತ್ತದೆ.ಮರಿಗಳನ್ನು ಪ್ರೌಢಾವಸ್ಥೆಗೆ ತರುವ ಮೊದಲೇ ಎಂದಿಗೂ ಕೈಬಿಡದೇ ಉತ್ತಮ ಮಾರ್ಗದರ್ಶನ ನೀಡುತ್ತದೆ.
ಹೀಗೆ ಕೋಳಿಯಂತಹ ಸಾಮಾನ್ಯ ಜೀವಿಯು ತನಗರಿವಿಲ್ಲದೇ ಎಂತಹ ಅಮೂಲ್ಯವಾದ ಸಂದೇಶಗಳನ್ನು ನೀಡುತ್ತದೆ. ಇಂತಹ ಸಂದೇಶಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜನ್ನ ಸಾರ್ಥಕ ಪಡಿಸಿಕೊಳ್ಳೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ