*ವಿಜ್ಞಾನದ ಸದುಪಯೋಗ*
ವಿಜ್ಞಾನವೇ ಬದಲಾವಣೆಗೆ ಕಾರಣ
ಜ್ಞಾನ ಅದರ ಬೇರು
ಎಂಬುದನ್ನು ನೆನಪಿನಲ್ಲಿಡೋಣ
ವಿಜ್ಞಾನವನ್ನು ಸದುಪಯೋಗ
ಪಡಿಸಿಕೊಳ್ಳೋಣ
ಅಜ್ಞಾನವನ್ನು ತೊಲಗಿಸೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ವಿಜ್ಞಾನವೇ ಬದಲಾವಣೆಗೆ ಕಾರಣ
ಜ್ಞಾನ ಅದರ ಬೇರು
ಎಂಬುದನ್ನು ನೆನಪಿನಲ್ಲಿಡೋಣ
ವಿಜ್ಞಾನವನ್ನು ಸದುಪಯೋಗ
ಪಡಿಸಿಕೊಳ್ಳೋಣ
ಅಜ್ಞಾನವನ್ನು ತೊಲಗಿಸೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಓ ಗಿಳಿರಾಮ*
ಓ ಗಿಳಿರಾಮ ....
ಎಲ್ಲಿರುವನು ನನ್ನ ರಾಮ
ತಿಳಿಸಿಬಿಡು ಸಲ್ಲಿಸುವೆ
ನಿನಗೆ ನನ್ನ ಪ್ರಣಾಮ .
ದಿನಪ ಬರುವ ಮೊದಲೇ
ದಿನವೂ ಬಂದು
ಕದ್ದು ನೋಡುತ್ತಿದ್ದ, ಈಗೀಗ
ಅವನ ಸುದ್ದಿಯಿಲ್ಲ ನೀನೇ ಹೇಳು
ನಲ್ಲನಿಲ್ಲದೆ ಹೇಗಿರಲಿ?
ಮಣಿ ಸರವ ನೀಡಿ
ಹಣೆಗೊಂದು ಮುತ್ತನಿತ್ತು
ಸ್ವರ್ಗಕ್ಕೆ ಕರೆದೊಯ್ದಿದ್ದನು
ಕಣಿ ಹೇಳು ನನಗಿಂದು
ಅವನೆಂದು ಬರುವನು ?
ಅಕ್ಕರೆಯ ಮಾತನಾಡಿ
ಸಕ್ಕರೆಯ ಸವಿ ನೀಡಿ
ಪ್ರೇಮ ಲೋಕ ಸೃಷ್ಟಿಸಿದ್ದ ನನಗಾಗಿ
ಸಿಕ್ಕರೆ ನನ್ನ ಮಾರನಿಗೇಳು
ಕಾಯುತಿಹಳು ನಿನ್ನರಸಿ ನಿನಗಾಗಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ನ್ಯಾನೊ ಕಥೆ*
*ಗುರುದಕ್ಷಿಣೆ*
"ನಾನು ಆರ್ಥಿಕವಾಗಿ ಸಮಸ್ಯೆಯಲ್ಲಿರುವೆ ಅಂತ ತಿಳಿದು ನನಗೆ ಈ ಸಹಾಯ ಮಾಡಲು ಬರಬೇಡಿ , ನಿಮ್ಮ ಅಭಿಮಾನ ಸಾಕು ,ಇದೆಲ್ಲಾ ಬೇಡ ಇಂತಹ ದುಬಾರಿ ಉಡುಗೊರೆ ಬೇಡ, ದಯವಿಟ್ಟು ಹೊರಡಿ "ಎಂದು ತಮ್ಮ ದಪ್ಪನೆಯ ಕನ್ನಡಕವನ್ನು ಸರಿಪಡಿಸಿಕೊಂಡು ಕೋಲನಿಡಿದು ಎದ್ದು ಹೊರಗೆ ಹೋಗಲು ಸಿದ್ದರಾದರು." ತಿಪ್ಪೇಸ್ವಾಮಿ ಗಳು " ಗುರುಗಳೆ ನೀವು ಕಲಿಸಿದ ವಿದ್ಯೆಯಿಂದ ನಾವೆಲ್ಲರೂ ಇಂದು ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದೇವೆ , ದಯವಿಟ್ಟು ನಮ್ಮ ಉಡುಗೊರೆ ಸ್ವೀಕರಿಸುಲೇ ಬೇಕು ಇದನ್ನು ಗುರುದಕ್ಷಿಣೆ ಎಂದು ಸ್ವೀಕರಿಸಿ " ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದಾಗ ,ಅವರ ಬಲವಂತಕ್ಕೆ ಕಾರಿನಲ್ಲಿ ಕುಳಿತು, ಒಂದು ಹೊಸ ಮನೆಯ ಮುಂದೆ ನಿಂತರು .ಎಲ್ಲಾ ಶಿಷ್ಯರು ಗುರುಗಳ ಕೈಗೆ ಮನೆಯ ಬೀಗದ ಕೀಯನ್ನು ನೀಡಿದರು.
ಹೊಸ ಮನೆಯ ಬಾಗಿಲ ತೆರೆದ ಗುರುಗಳ ಕಣ್ಣಿನಿಂದ, ಹೊಸಿಲ ಮೇಲೆ ನಾಲ್ಕು ಹನಿಗಳು ಉದುರಿದವು....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಹಿತ್ತಲ ಗಿಡ.....*
ನ್ಯಾನೋ ಕಥೆ
"ಏ ಅವರೇನು ಬೇಡ ಸಿಟೀಲಿ ಇರೋ ಟ್ಯೂಷನ್ ಮೇಷ್ಟ್ರು ಬಾಳ ಸೆನಾಗಿ ಹೇಳ್ಕೊಡ್ತಾರಂತೆ ಅಲ್ಲಿಗೇ ಹೋಗು ಮೂವತ್ತು ಕಿಲೋಮೀಟರ್ ಆದ್ರೂ ಪರವಾಗಿಲ್ಲ ,ಪೀಜ್ ನಾನು ಕೊಡ್ತೀನಿ ಒಟ್ನಲ್ಲಿ ನೀನು ಡಾಕುಟ್ರು ಆಗ್ಬೇಕು"
ಎಂದು ಜೋರು ಧ್ವನಿಯಲ್ಲಿ ಹೇಳುತ್ತಿದ್ದರು ,ರಶ್ಮಿಕಾಳ ತಂದೆ ಪರಮೇಶ್.
" ರೀ ನಮ್ಮೂರಾಗೆ ಇರೋ ಲೋಹಿತಪ್ಪ ಪ್ರೀಯಾಗಿ ಪಾಠ, ಮಾಡ್ತಾರೆ,ಸೆನಾಗೂ ಮಾಡ್ತಾರಂತೆ, ಅವರತ್ರಾನೆ ಕಳ್ಸಾನ ನಮ್ಮುಡಿಗೀನಾ ಯಾಕೆ ಪ್ಯಾಟೆ ಸವಾಸ? " ಎಂಬ ಹೆಂಡತಿಯ ಮಾತು ಕೇಳಿ ಕೋಪಗೊಂಡ ಪರಮೇಶ್ "ಇದೆಲ್ಲಾ ನಿನಿಗೆ ಗೊತ್ತಾಗಲ್ಲ ,ಸುಮ್ಮನೆ ಮುದ್ದೆ ಮಾಡೋಗು" ಎಂದರು.
ಗೊನಗುತ್ತ ಅಡಿಗೆ ಮನೆಗೆ ಹೋದರು ಪವಿತ್ರ .
ದ್ವಿತೀಯ ಪಿ ಯು ಸಿ ಫಲಿತಾಂಶ ಪ್ರಕಟವಾದ ದಿನ ಅದೇ ಊರಿನ ಬಾಲಾಜಿ ೯೮℅ ಅಂಕ ಪಡೆದ ಎಂದು ಪರಮೇಶ್ ರವರ ಮನೆಗೆ ಬಂದು ಸಿಹಿನೀಡಿದ .
" ಯಾರತ್ರ ಟೂಷನ್ ಗೆ ಹೋಗಿದ್ದಪ್ಪ " ಪ್ರಶ್ನೆ ಮಾಡಿದರು ಪರಮೇಶ್ . ಬಾಲಾಜಿಯು " ಟ್ಯೂಷನ್ ಏನೂ ಇಲ್ಲ ಅಂಕಲ್ ನಮ್ಮೂರ ಲೋಹಿತ್ ಸರ್ ವಾರಕ್ಕೊಂದ್ ಎರಡ್ಸಾರಿ ಸಾರಿ ಗೈಡ್ ಮಾಡ್ತಿದ್ರು " ಎಂದ.
" ನೋಡಮ್ಮ ನೀನು ಇದಿಯಾ, ಟೌನ್ ಗೆ ಟೂಷನ್ ಕಳಿಸಿದ್ರೂ ೬೫℅ ಸಾಕಾ?
ಮಗಳು ತಲೆ ತಗ್ಗಿಸಿಕೊಂಡು ಅಡಿಗೆ ಮನೆ ಕಡೆ ನಡೆದಳು.
ಅಡಿಗೆ ಮನೆಯಲ್ಲಿ ರಶ್ಮಿಕಾಳ ತಾಯಿ "ಹಿತ್ತಲ ಗಿಡ ಮದ್ದಲ್ವಂತೆ " ಎಂದು ಹೇಳಿದ್ದು ಪರಮೇಶ್ ಕಿವಿಗೂ ಬೀಳದಿರಲಿಲ್ಲ...
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ