*ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹*
ಕಳೆದ ಕ್ಯಾಲೆಂಡರ್ ವರ್ಷದಲ್ಲಿ
ಕಂಡಿದ್ದೇವೆ ನೋವು ನಲಿವು
ನೂರಾರು|
ಸರ್ವರಿಗೂ ಶುಭವನ್ನುಂಟು ಮಾಡಲಿ ಬರಲಿರುವ ಎರಡು ಸಾವಿರದ ಇಪ್ಪತ್ತಾರು(2026)||
*ಸಿಹಿಜೀವಿ ವೆಂಕಟೇಶ್ವರ.*
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಳೆದ ಕ್ಯಾಲೆಂಡರ್ ವರ್ಷದಲ್ಲಿ
ಕಂಡಿದ್ದೇವೆ ನೋವು ನಲಿವು
ನೂರಾರು|
ಸರ್ವರಿಗೂ ಶುಭವನ್ನುಂಟು ಮಾಡಲಿ ಬರಲಿರುವ ಎರಡು ಸಾವಿರದ ಇಪ್ಪತ್ತಾರು(2026)||
*ಸಿಹಿಜೀವಿ ವೆಂಕಟೇಶ್ವರ.*
1943 ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬೇರ್ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. 'ಆಜಾದ್ ಹಿಂದ್' ಸೇನೆ ಅಡಿಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆಗೊಂಡ ಮೊದಲ ತಾತ್ಕಾಲಿಕ ಭಾರತೀಯ ಪ್ರದೇಶವೆಂದು ಘೋಷಿಸಲಾಯಿತು. ಇದು ಭಾರತದ ಸ್ವಾತಂತ್ರ್ಯಕ್ಕೆ ಒಂದು ಮಹತ್ವದ ಸಾಂಕೇತಿಕ ಕಾರ್ಯವಾಗಿತ್ತು. ನೇತಾಜಿಯವರ ವಿವಾದಿತ ಅಂತ್ಯವಾಗದಿದ್ದರೆ ಅದೇ ವರ್ಷ ನಮಗೆ ಸ್ವತಂತ್ರ ಲಭಿಸುವ ಸಾಧ್ಯತೆ ಇತ್ತು. ಸ್ವತಂತ್ರ ಭಾರತೀಯ ಆಡಳಿತವನ್ನು ಸ್ಥಾಪಿಸಿದ್ದ ನೇತಾಜಿಯವರ ನೆನಪಿಗಾಗಿ ಒಂದು ದ್ವೀಪಕ್ಕೆ 'ಸ್ವರಾಜ್ ದ್ವೀಪ' ಎಂದು ಮರುನಾಮಕರಣ ಮಾಡಲಾಗಿದೆ.ಎರಡು ವರ್ಷಗಳ ಹಿಂದೆ ಆ ದ್ವೀಪಕ್ಕೆ ನಾನು ಕಾಲಿಟ್ಟಾಗ ನೇತಾಜಿಯವರು ಆ ಜಾಗದಲ್ಲಿ ಹೇಗೆಲ್ಲ ಓಡಾಡಿ,ಹೋರಾಡಿದರು ಎಂದು ಮನದಲ್ಲೇ ಊಹಿಸಿಕೊಂಡು ರೋಮಾಂಚಕನಗೊಂಡಿದ್ದೆ..
ತಾವು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ತಮ್ಮ ಮನರಂಜನೆಗೆ ಮೀಸಲಿಡುವ ಜನರಲ್ಲಿ ನಾನೂ ಒಬ್ಬ.ಉತ್ತಮ ಕಥೆ, ಬಿಗಿಯಾದ ಚಿತ್ರಕಥೆ, ಹಿನ್ನೆಲೆ ಸಂಗೀತ, ಮಧುರವಾದ ಹಾಡು ಹಾಸ್ಯ ಇರುವ ಚಿತ್ರ ಯಾವುದಾದರೂ ಯಾವುದೇ ಭಾಷೆಯಾದರೂ ನಾನು ಥಿಯೇಟರ್ ಗೆ ಹೋಗುತ್ತೇನೆ.ಕೆಲವೊಮ್ಮೆ ಕುಟುಂಬ ಸಮೇತ ಕೆಲವೊಮ್ಮೆ ಒಂಟಿಯಾಗಿಯೇ ಸಿನಿಮಾ ವೀಕ್ಷಣೆ ಮಾಡಲು ಹೊರಡುವೆ.ಹತ್ತಾರು ಓಟಿಟಿ ನೂರಾರು ವೆಬ್ಸೈಟ್ ಗಳಲ್ಲಿ ಸಿನಿಮಾ ಲಭ್ಯವಿದ್ದರೂ ನಾನು ಅಲ್ಲಿ ಸಿನಿಮಾ ನೋಡಲು ಇಚ್ಚಿಸುವುದಿಲ್ಲ. ಸಿನಿಮಾ ಮಂದಿರದಲ್ಲಿ ಡಾಲ್ಬಿ ಅಟ್ಮಾಸ್ ಎಫೆಕ್ಟ್ ನಲ್ಲಿ ಸಿನಿಮಾ ಎಂಜಾಯ್ ಮಾಡುವುದೇ ಇಂದು ಸುಂದರ ಅನುಭೂತಿಯನ್ನು ನೀಡುತ್ತದೆ.
ಸಿಹಿಜೀವಿ ವೆಂಕಟೇಶ್ವರ...
ತುಮಕೂರು