30 ಡಿಸೆಂಬರ್ 2025

ಅಂಡಮಾನ್ ಸ್ವಾತಂತ್ರ ಪಡೆದ ದಿನ..


 ಇಂದು ನಾವು ಸ್ವಾತಂತ್ರ್ಯಹೊಂದಲು ಶುರು ಮಾಡಿದ ವರ್ಷ! ಹೌದು ಈ ಮಾತು ಕೇಳಿದ ಕೆಲವರು ಅಚ್ಚರಿ ಪಡಬಹುದು.ಆದರೆ ಅದೇ ಸತ್ಯ. 


1943 ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬೇರ್‌ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. 'ಆಜಾದ್ ಹಿಂದ್' ಸೇನೆ ಅಡಿಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆಗೊಂಡ ಮೊದಲ ತಾತ್ಕಾಲಿಕ ಭಾರತೀಯ ಪ್ರದೇಶವೆಂದು ಘೋಷಿಸಲಾಯಿತು. ಇದು ಭಾರತದ ಸ್ವಾತಂತ್ರ್ಯಕ್ಕೆ ಒಂದು ಮಹತ್ವದ ಸಾಂಕೇತಿಕ ಕಾರ್ಯವಾಗಿತ್ತು. ನೇತಾಜಿಯವರ ವಿವಾದಿತ ಅಂತ್ಯವಾಗದಿದ್ದರೆ ಅದೇ ವರ್ಷ ನಮಗೆ ಸ್ವತಂತ್ರ ಲಭಿಸುವ ಸಾಧ್ಯತೆ ಇತ್ತು.  ಸ್ವತಂತ್ರ ಭಾರತೀಯ ಆಡಳಿತವನ್ನು ಸ್ಥಾಪಿಸಿದ್ದ ನೇತಾಜಿಯವರ ನೆನಪಿಗಾಗಿ ಒಂದು   ದ್ವೀಪಕ್ಕೆ  'ಸ್ವರಾಜ್ ದ್ವೀಪ'   ಎಂದು ಮರುನಾಮಕರಣ ಮಾಡಲಾಗಿದೆ‌.ಎರಡು ವರ್ಷಗಳ ಹಿಂದೆ ಆ ದ್ವೀಪಕ್ಕೆ ನಾನು ಕಾಲಿಟ್ಟಾಗ   ನೇತಾಜಿಯವರು ಆ ಜಾಗದಲ್ಲಿ ಹೇಗೆಲ್ಲ ಓಡಾಡಿ,ಹೋರಾಡಿದರು ಎಂದು ಮನದಲ್ಲೇ ಊಹಿಸಿಕೊಂಡು‌ ರೋಮಾಂಚಕನಗೊಂಡಿದ್ದೆ..


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ