ಎಪಿಕೆ ಫೈಲ್ ಡೌನ್ಲೋಡ್ ಆಗಿದ್ದರಿಂದ ನನ್ನ ಮೊಬೈಲ್ ಹ್ಯಾಕ್ ಮಾಡಿ ನನ್ನ ಮೊಬೈಲ್ ಕಂಟ್ರೋಲ್ ತೆಗೆದುಕೊಂಡು ನಾನು ನೋಡು ನೋಡುತ್ತಿದ್ದಂತೆ ನನಗೊಂದು ಓಟಿಪಿ ಅವರಿಗೊಂದು ಓಟಿಪಿ ಬರುತ್ತಿತ್ತು, ನಮಗೆ ಗೊತ್ತಿಲ್ಲದ ಹಾಗೆ ಮೆಸೇಜ್ ಗಳಿಂದ ಬರುವ ಓಟಿಪಿಗಳನ್ನು ತಾವೇ ಸ್ವೀಕರಿಸಿ ಫ್ಲಿಪ್ ಕಾರ್ಟ್ ನಲ್ಲಿ ತಲಾ 10,000 ಅಂತೆ ಎರಡು ಸಲ ಆರ್ಡರ್ ಮಾಡಿ ಆನ್ಲೈನ್ ಮೂಲಕ ಎಲೆಕ್ಟ್ರಾನಿಕ್ ಇ-ಮೇಲ್ ಗಿಫ್ಟ್ ಓಚರ್ ಗಳನ್ನು ಪಡೆದುಕೊಂಡಿರುತ್ತಾರೆ. ಮಧ್ಯಾಹ್ನ 12 ಗಂಟೆಗೆ ಆರ್ಡರ್ ಮಾಡಿದರು, 12:30ಕ್ಕೆ ಅವರಿಗೆ ಡೆಲಿವರಿ ಆಯಿತು. ಯಾರೋ ಮಹಾನ್ ಬಾವರು ಗ್ರೂಪಿಗೆ ಎಪಿಕೆ ಫೈಲ್ಸ್ ಕಳಿಸಿಕೊಟ್ಟಿದ್ದರಿಂದ ನಾನು ಸರಿಯಾಗಿ ಪರಿಶೀಲದೆ ಅವಸರವಾಗಿ ಡೌನ್ಲೋಡ್ ಮಾಡಿದೆ, ಆಕರಗಳು ನನ್ನ ಮೊಬೈಲನ್ನು ಮೊಬೈಲ್ ಇರೋ ಮಾಹಿತಿಗಳನ್ನು ನಿಧಾನವಾಗಿ ಸಂಗ್ರಹಿಸಿ, ಒಂದೇ ಸಲ ತಲಾ ಹತ್ತು ಸಾವಿರ ರೂಪಾಯಿಗೆ ಐದು ಸಲ ಆರ್ಡರ್ ಮಾಡಿದರು, ಅಂದರೆ 50,000ಗಳನ್ನು ಆರ್ಡರ್ ಮಾಡಿದರು, ನಾನು ತಕ್ಷಣ ಬ್ಯಾಂಕ್ಗೆ ಫೋನ್ ಮಾಡಿ ನನ್ನ ಎಲ್ಲಾ ಯುಪಿಐ ಬ್ಯಾಂಕ್ ಎಟಿಎಂ ಕಾರ್ಡ್ ಗಳನ್ನು ಸ್ಟಾಪ್ ಮಾಡುವಂತೆ ಕೋರಿಕೊಂಡಿದ್ದರಿಂದ, ಬ್ಯಾಂಕಿನವರು ತಕ್ಷಣ ಕಾರ್ಡನ್ನು ಲಾಕ್ ಮಾಡಿದರು, ಅಷ್ಟರೊಳಗಾಗಿ, 20,000 ಹ್ಯಾಕರ್ಸ್ ಕೈಗೆ ಹೋಗಿತ್ತು. ಹಾಗಾಗಿ ನಾನು ಎಲ್ಲರಲ್ಲಿ ಕೇಳಿಕೊಳ್ಳುವುದೇನೆಂದರೆ ಅಮೆಜಾನ್, ಫ್ಲಿಪ್ಕಾರ್ಟ್, ಆರ್ಡರ್ ಮಾಡುವಾಗ ಡೋರ್ ಡೆಲಿವರಿ ಮಾಡಿ, ದಯವಿಟ್ಟು ಎಟಿಎಂ ಕಾರ್ಡ್ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಹಾಕಿದ್ದರೆ ದಯವಿಟ್ಟು ಈಗ ಕೂಡಲೇ ಡಿಲೀಟ್ ಮಾಡಿ, ನನಗಾದ ಪರಿಸ್ಥಿತಿ ನಿಮಗೆ ಬರುವುದು ಬೇಡ, ಜಾಗರೂಕರಾಗಿರಿ, ಎಚ್ಚರವಾಗಿರಿ. ನಮ್ಮ ನ್ಯಾಯಾಲಯದಲ್ಲಿ ಈ ರೀತಿ 20 ರಿಂದ 25 ಕೇಸ್ಗಳು ಪ್ರತಿದಿನ ನೋಂದಣಿ ಆಗುತ್ತಿದೆ. ನಮಗೆ ಈ ರೀತಿ ಆದರೆ ಜನಸಾಮಾನ್ಯರ ಗತಿಯೇನು?. ನನಗಾದ ಪರಿಸ್ಥಿತಿಯನ್ನು ಎಲ್ಲರಿಗೂ ತಿಳಿಸಿ ನೀವು ಸಹ ಎಚ್ಚರದಿಂದಿರಿ. 🙏🙏
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
29 ಸೆಪ್ಟೆಂಬರ್ 2024
26 ಸೆಪ್ಟೆಂಬರ್ 2024
ಪ್ಲಾಸ್ಟಿಕ್ ಬಳಕೆ ನಿಲ್ಲಿಸೋಣ...
ಸಿಕ್ಕಿಂ ನಲ್ಲಿ ಪ್ಲಾಸ್ಟಿಕ್ ಬಾಟಲ್ ಗಳ ಬದಲಾಗಿ ಬಿದಿರಿನ ಬಾಟಲ್ ಗಳ ಬಳಕೆ ಹೆಚ್ಚಾಗುತ್ತಿದೆ.ಎಲ್ಲಾ ಕಡೆ ಇದು ಮುಂದುವರೆಯಲಿ..ಪರಿಸರ ಸಂರಕ್ಷಣೆಯ ಮಾತುಗಳನ್ನು ನಿಲ್ಲಿಸಿ ಕೃತಿಗಳಲ್ಲಿ ತೋರಿಸೋಣ...
#ಪರಿಸರಕಾಳಜಿ
Sikkim is setting a remarkable example by embracing bamboo bottles over plastic ones, paving the way for a more sustainable future; let's strive to make this eco-friendly practice a nationwide phenomenon.
#sihijeeviVenkateshwara #ecofriendly #environmentallyfriendly #SayNoToPlastic
#
25 ಸೆಪ್ಟೆಂಬರ್ 2024
ಅಪ್ಪನೂ ಗ್ರೇಟ್ ...ಹನಿಗವನ..
ಅಪ್ಪನೂ ಗ್ರೇಟ್..
ನನ್ನ ಬಾಲ್ಯದ ದಿನಗಳಲ್ಲಿ ಅಪ್ಪ
ಕೊಡಿಸಿದ್ದರು ಸೂಟು ಬೂಟು
ದುಬಾರಿ ಬೆಲೆ ತೆತ್ತು|
ಯಾರಿಗೂ ಗೊತ್ತೇ ಆಗಿರಲಿಲ್ಲ ಅವರ ಬೂಟುಗಳಲ್ಲಿನ ತೂತು||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
24 ಸೆಪ್ಟೆಂಬರ್ 2024
22 ಸೆಪ್ಟೆಂಬರ್ 2024
ಆದರ್ಶ ಪಿತ ,ಹೆಮ್ಮೆಯ ಸುತ.
ಆದರ್ಶ ಪಿತ ,ಹೆಮ್ಮೆಯ ಸುತ.
ಜಗತ್ತಿನಲ್ಲಿ ತಾಯಿಯ ತ್ಯಾಗಕ್ಕೆ, ಮಮತೆಗೆ, ಪಾಲನೆ ಮಾಡುವ ಗುಣಕ್ಕೆ ಸಾಟಿ ಬೇರಾವುದೂ ಇಲ್ಲ ಅಂತೆಯೇ ತಾಯಿಯ ಗುಣಗಳನ್ನು ಕೊಂಡಾಡುವ ಸಾವಿರದ ಕಥೆಗಳಿಗೆ ಬರವಿಲ್ಲ. ಸಂಸಾರ ಪೋಷಣೆಯಲ್ಲಿ ತಾಯಿಗೆ ಬೆಂಬಲವಾಗಿ ನಿಂತ ತಂದೆಯನ್ನು ನಾವು ಮರೆತೇ ಬಿಟ್ಟೆವೇನೋ ಎಂದೆನಿಸುವುದು ಸುಳ್ಳಲ್ಲ. ಇತ್ತೀಚೆಗೆ ಗೆಳೆಯನೊಬ್ಬ ಕಳಿಸಿದ ಸಂದೇಶವು ತಂದೆ ಮಗನ ನಡುವಿನ ಅಗೋಚರವಾದ ಬಾವುಕ ಪ್ರೀತಿಯನ್ನು ತರೆದಿಟ್ಟಿತು.ಅದನ್ನು ನೀವು ಓದಿದರೆ ಖಂಡಿತವಾಗಿಯೂ ನೀವು ಬಾವುಕರಾಗುವಿರಿ.
ತಂದೆ ತಾಯಿ ತಮ್ಮ ಒಬ್ಬನೇ ಮಗನನ್ನು ಮಮತೆಯಿಂದ ಸಾಕಿ ಸಲಹಿ ಒಳ್ಳೆಯ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು ಓದಿ ತುಂಬಾ ವಿಧೇಯನಾಗಿ ನಡೆದುಕೊಂಡು ವಿಧ್ಯಾಭ್ಯಾಸವನ್ನು ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು. ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಅರಸಿಕೊಂಡು ಬಂತು. ಮೊದಲನೇ ಸಂಬಳವೂ ಸಹ ಅವನ ಕೈ ಸೇರಿತು.
ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ. ತಾಯಿಗೆ ಖುಷಿಯಾಯಿತು. ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು. ಮಗನು ತಾಯಿಯ ಮಾತು ಕೇಳಿಸಿಕೊಂಡರೂ ಕೇಳದಂತೆ ಇದ್ದನು. ಮತ್ತೆ ತಾಯಿಯು ತಂದೆಯ ಕೈಗೆ ಕೊಡುವಂತೆ ಹೇಳಿ ಆ ಹಣವನ್ನು ಮರಳಿ ಮಗನ ಕೈಗೆ ನೀಡಿದಳು.
ಆಗ ಮಗನು, ''ಇಲ್ಲಮ್ಮ ನಾನು ಅವರಿಗೆ ಕೊಡುವುದಿಲ್ಲ'' ಎಂದನು. "ಹಾಗೆ ಹೇಳಬಾರದು ಕಂದಾ"ಎಂದಳು ತಾಯಿ. "ನನ್ನಿಂದ ಸಾಧ್ಯವಿಲ್ಲ" ಎಂದು ಮಗ ಉತ್ತರಿಸಿದ. ಇದರಿಂದ ತಾಯಿಗೆ ಸಿಟ್ಟು ಬಂದಿತು. ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು. ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ? ಎಂದು ಮನದಲ್ಲಿಯೇ ಸಂಕಟ ಪಟ್ಟುಕೊಂಡಳು. ಕೊನೆಗೆ ಏನಾಯಿತೋ ಏನೋ ಬೆಳೆದ ಮಗ ಎಂದೂ ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು. ಕೋಪದಿಂದ ಬೈದಳು. ಮುಂದುವರೆದು "ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ, ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ,ಛೇ!" ಎಂದು ಮೂದಲಿಸಿದಳು.
"ತಂದೆಗೆ ಕೊಡು ಎಂಬ ನನ್ನ ಮಾತನ್ನು ಸಹ ನೀನು ದಿಕ್ಕರಿಸಿರುವೆ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ" ಎಂದು ಬೈದಳು.
ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳುತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ ಒರೆಸಿಕೊಳ್ಳುತ್ತಾ ದುಃಖದಿಂದ ತಾಯಿಗೆ ಹೇಳುತ್ತಾನೆ, ''ಇಲ್ಲಮ್ಮ, ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು. ಕೆಳಗೆ ಕೈ ಚಾಚಕೂಡದು. ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ. ಇದುವರೆಗೂ ಅವರಿಂದ ನಾನು ಹಣ ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ ನನ್ನ ಕೈಗಳ ಕೆಳಗೆ ಬರುತ್ತದೆ. ಅದು ನನಗಿಷ್ಟವಿಲ್ಲ. ಎಂದೆಂದೂ ಸರ್ವಕಾಲಕ್ಕೂ ನನ್ನ ತಂದೆಯ ಕೈಗಳು ಮೇಲೆಯೇ ಇರಬೇಕು. ನೀವೇ ಇದನ್ನು ಅಪ್ಪನಿಗೆ ಕೊಟ್ಟು ಬಿಡಿ. ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ. ನೀವು ಕೊಡಿ, ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ'' ಎಂದನು.
ತಾಯಿಗೆ ದಿಗ್ಭ್ರಮೆಯಾಯಿತು. ವಿಗ್ರಹದಂತೆ ನಿಂತು ಬಿಟ್ಟಳು.
ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳುತ್ತಿದ್ದ ತಂದೆ, ತಕ್ಷಣ ಹೊರಬಂದು ತಮ್ಮ ಮಗನನ್ನು ನೋಡಿದ. ಕಣ್ಣಲ್ಲಿ ನೀರು ತುಂಬಿ ಬಂತು. ಅದು ಆನಂದ ಭಾಷ್ಬ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು. ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು. ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು. ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ. ಕೈಯಲ್ಲಿ ಮೋಡ ಹಿಡಿದ ಅನುಭವವಾಯಿತು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು




