12 ಫೆಬ್ರವರಿ 2024

ನೆಮ್ಮದಿಯಿಂದಿರುವುದು ಹೇಗೆ?


ನೆಮ್ಮದಿಯಿಂದಿರುವುದು  ಹೇಗೆ?




ಅಲ್ಲೊಂದು ಪುಟ್ಟ ಗುಡಿಸಲು. ಅದೊಂದು ಚಿಕ್ಕ ಸಂಸಾರ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ.  ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು.


ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು.ನಂತರ ಅವರನ್ನು ಕರೆಯುವುದನ್ನು ನಿಲ್ಲಿಸು ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದಳು. ಅವರೋ ಸಂತೋಷದಿಂದ ಬಂದು ಊಟ ಮಾಡಿ ಹೋಗುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಊಟ ಕೊಡುವುದನ್ನು ನಿಲ್ಲಿಸಿ ಬಿಟ್ಟಳು.


ಆಶ್ಚರ್ಯವೆಂಬಂತೆ ಇಷ್ಟುದಿನ ಖುಷಿಯಿಂದಿರುತ್ತಿದ್ದ ಅವರಲ್ಲಿ ಏನೋ ಒಂದು ರೀತಿಯ ಬೇಸರದ ಭಾವನೆ ಕಾಣತೊಡಗಿತು. ಉಚಿತವಾದ ಭೋಜನದ ಸವಿ ಕಂಡ ಅವರಿಗೆ ಈಗ ನಿತ್ಯದ ಊಟ ಸಪ್ಪೆ ಎನಿಸತೊಡಗಿತು. ದುಡಿಮೆ ಮರೆತ ಶರೀರ ಕೃಶವಾಗತೊಡಗಿತು. ‘ಅಯ್ಯೋ ದಿನಾಲೂ ಇಂಥ ಊಟ ಸವಿಯುವ ಭಾಗ್ಯ ನಮಗಿಲ್ಲವಲ್ಲ’ ಎಂಬ ಕೊರಗು ಅವರನ್ನು ಆವರಿಸಿಬಿಟ್ಟಿತು. ಇದನ್ನೆಲ್ಲ ಗಮನಿಸಿದ ಆ ಹೆಂಗಸು ಸಾಧುಗಳಲ್ಲಿ ವಿಷಯ ತಿಳಿಸಿದಾಗ ಅವರು ‘ನಿನ್ನ ಪ್ರಶ್ನೆಗೆ ಉತ್ತರ ಇಲ್ಲಿಯೇ ಇದೆ. ಮೊದಲು ಇದ್ದುದ್ದರಲ್ಲಿಯೇ ಅವರು ತೃಪ್ತರಾಗಿದ್ದರು. ಆದ್ದರಿಂದ ಸದಾ ಸಂತಸದಿಂದಿರುತ್ತಿದ್ದರು. ಈಗ ಬೇರೆಯವರನ್ನು ನೋಡಿ ತಮಗಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿರುವುದರಿಂದ ನಗು ಮಾಯವಾಗಿದೆ. ಅದಕ್ಕೇ ಹಿರಿಯರು, ‘ಸಂತೃಪ್ತಿಯೇ ಸುಖಕ್ಕೆ ಕಾರಣ’ ಎಂದು ಹೇಳಿರುವುದು. ಆದ್ದರಿಂದಲೇ ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ ಇದ್ದುದ್ದರಲ್ಲಿಯೇ ತೃಪ್ತಿ ಕಂಡುಕೊಂಡಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದರು. ಡಿ ವಿ ಜಿ ಯವರು ತಮ್ಮ ಕಗ್ಗದಲ್ಲಿ 

ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।ಗುರುತಿಸೊಳಿತಿರುವುದನು ಕೇಡುಗಳ ನಡುವೆ ।।

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।  

ಎಂದಿರುವರು.


 ನಮಗೆ ನಿಜವಾದ ಸಂತೋಷವೇನೆಂದು ಗೊತ್ತಿಲ್ಲ.  ನಮಗೆ ಯಾವುದು ಸಂತೋಷ ನೀಡುವ ವಸ್ತು, ವ್ಯಕ್ತಿ ಅಥವಾ ವಿಷಯ ಎಂದೂ ಗೊತ್ತಿಲ್ಲ. ತೃಪ್ತಿ ಎಂದರೆ ಏನು ಮತ್ತು ಹೇಗಿರುತ್ತದೆ ಎನ್ನುವುದು ನಮಗೆ ಅರಿವಿಲ್ಲ. ಹೀಗಿರುವಾಗ ಸಂತೋಷ ಪಡುವುದಾದರೂ ಹೇಗೆ ?  ಬಹಳ ಸುಲಭ   ನಮಗೆ ಸಿಕ್ಕದ್ದರಲ್ಲಿ ತೃಪ್ತಿಯಿಂದ ಜೀವಿಸೋಣ.ಸಂತೋಷಪಡೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು


  

11 ಫೆಬ್ರವರಿ 2024

ಮರಳುಗಾಡು ..

 ಮರಳುಗಾಡು


ಬೇಸರದಿಂದ ಕೂಡಿ

ನನ್ನ ಜೀವನವಾಗಿದೆ

ಮರಳುಗಾಡು |

ನನ್ನ ಕಾಪಾಡಲು ನನ್ನ

ಕಡೆಗೆ ಮರಳು ಗಾಡು ||



ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಬಾರದ ರತ್ನ

 


ಬಾರದ ರತ್ನ


ಈ ವರ್ಷ ಐದು ಗಣ್ಯರಿಗೆ

ಸಿಕ್ಕಿದೆ ಭಾರತ ರತ್ನ|

ತಾವು ನಿರೀಕ್ಷಿಸಿದವರಿಗೆ 

ಸಿಗದಿದ್ದರೆ ಅದು ಬಾರದ ರತ್ನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 ಫೆಬ್ರವರಿ 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩ #gk #quiz @kannada

 


ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩


41."ದಿ ಸ್ಟಾರಿ ನೈಟ್" ಅನ್ನು ಯಾವ ಪ್ರಸಿದ್ಧ ಕಲಾವಿದ ಚಿತ್ರಿಸಿದ್ದಾರೆ?

42.ಚೀನಾದ ಕರೆನ್ಸಿ ಯಾವುದು?

43.ವಿಶ್ವದ ಅತಿ ಎತ್ತರದ ಜಲಪಾತ ಯಾವುದು?

44.ಮೈಕ್ರೋಸಾಫ್ಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಿದವರು ಯಾರು?

45.ಭಾರತದ ರಾಷ್ಟ್ರೀಯ ಲಾಂಛನ ಯಾವುದು?

46.ಭೂ ವಿಸ್ತೀರ್ಣದಲ್ಲಿ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು?

47."ದಿ ಪರ್ಸಿಸ್ಟೆನ್ಸ್ ಆಫ್ ಮೆಮೊರಿ" ಅನ್ನು ಚಿತ್ರಿಸಿದವರು ಯಾರು?

48.ಭಾರತದ ಮೊದಲ ರಾಷ್ಟ್ರಪತಿ ಯಾರು?

49.ಆಸ್ಟ್ರೇಲಿಯಾದ ರಾಜಧಾನಿ ಯಾವುದು?

50.ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು?

51.ಭಾರತದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಗೌರವ ಯಾವುದು?

52.ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು

53.ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

54."ದಿ ಕ್ಯಾಂಟರ್ಬರಿ ಟೇಲ್ಸ್" ಬರೆದವರು ಯಾರು?

55.ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು?

56.ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಯಾರು?

57.ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು?

58.ಉತ್ತರ ಅಮೇರಿಕಾದಲ್ಲಿ ಅತಿ ದೊಡ್ಡ ಜಲಪಾತ

ಯಾವುದು?

59."ದಿ ಲಾಸ್ಟ್ ಸಪ್ಪರ್" ಅನ್ನು ಚಿತ್ರಿಸಿದವರು ಯಾರು?

60.ಭಾರತದ ಅತಿ ದೊಡ್ಡ ಮರುಭೂಮಿ ಯಾವುದು


ಉತ್ತರಗಳು.

41.ವಿನ್ಸೆಂಟ್ ವ್ಯಾನ್ ಗಾಗ್.

42.ಚೈನೀಸ್ ಯುವಾನ್.

43.ಏಂಜೆಲ್ ಫಾಲ್ಸ್.

44.ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್.

45. ನಾಲ್ಕು ತಲೆಯ ಸಿಂಹ.

46.ವ್ಯಾಟಿಕನ್ ಸಿಟಿ.

47.ಸಾಲ್ವಡಾರ್ ಡಾಲಿ

48.ಡಾ. ರಾಜೇಂದ್ರ ಪ್ರಸಾದ್

49.ಕ್ಯಾನ್‌ಬೆರಾ

50.ಮ್ಯಾಂಡರಿನ್ ಚೈನೀಸ್.

51.ಭಾರತ ರತ್ನ

52.ರಾಜಸ್ಥಾನ

53.ಡಾ.ಬಿ.ಆರ್. ಅಂಬೇಡ್ಕರ್

54.ಜೆಫ್ರಿ ಚಾಸರ್.

55.ಪೆಸಿಫಿಕ್ ಸಾಗರ.

56.ನರೇಂದ್ರ ಮೋದಿ.

57.ಸರ್ ಐಸಾಕ್ ನ್ಯೂಟನ್.

58.ನಯಾಗರಾ ಜಲಪಾತ.

59.ಲಿಯೊನಾರ್ಡೊ ಡಾ ವಿನ್ಸಿ.

60.ಥಾರ್ ಮರುಭೂಮಿ


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

9900925529

08 ಫೆಬ್ರವರಿ 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ 2

 



ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ 2 



21 ವಿಶ್ವದ ಅತಿ ಎತ್ತರದ ಪರ್ವತ ಯಾವುದು


22.ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಸ್ತುತ ಅಧ್ಯಕ್ಷರು ಯಾರು?


23.ಭೂಪ್ರದೇಶದ ಪ್ರಕಾರ ಅತ್ಯಂತ ಚಿಕ್ಕ ಖಂಡ ಯಾವುದು?


24.ಪೆನ್ಸಿಲಿನ್ ಕಂಡುಹಿಡಿದವರು ಯಾರು?


25.ಯಾವ ಪ್ರಸಿದ್ಧ ಭೌತಶಾಸ್ತ್ರಜ್ಞ ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು?


26.ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ?


27.ವಿಶ್ವದ ಅತಿ ದೊಡ್ಡ ಸಾಗರ ಯಾವುದು?


28.ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಯಾರು?


29.ನಮ್ಮ ಸೌರವ್ಯೂಹದ ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ?


30.ಜಪಾನ್ನ ರಾಜಧಾನಿ ಯಾವುದು?


31.ದೂರವಾಣಿಯನ್ನು ಕಂಡುಹಿಡಿದವರು ಯಾರು?


32.ವಿಶ್ವದ ಅತಿ ಉದ್ದದ ನದಿ ಯಾವುದು?


33.ಭೂ ವಿಸ್ತೀರ್ಣದಲ್ಲಿ ಜಗತ್ತಿನ ಅತಿ ದೊಡ್ಡ ದೇಶ ಯಾವುದು?


34.ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು?


35.ಕೆನಡಾದ ರಾಜಧಾನಿ ಯಾವುದು?


36.ಲೈಟ್ ಬಲ್ಬ್ ಅನ್ನು ಕಂಡುಹಿಡಿದವರು ಯಾರು?


37ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು?


38."ಹ್ಯಾಮ್ಲೆಟ್" ಎಂಬ ಪ್ರಸಿದ್ಧ ನಾಟಕವನ್ನು ಬರೆದವರು ಯಾರು?


39.ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು?


40.ಜರ್ಮನಿಯ ಪ್ರಸ್ತುತ ಚಾನ್ಸೆಲರ್ ಯಾರು?



ಸರಿಉತ್ತರಗಳು.


21ಮೌಂಟ್ ಎವರೆಸ್ಟ್.

22ಜೋ ಬಿಡನ್.

23 ಆಸ್ಟ್ರೇಲಿಯಾ

24ಅಲೆಕ್ಸಾಂಡರ್ ಫ್ಲೆಮಿಂಗ್.

25ಆಲ್ಬರ್ಟ್ ಐನ್ಸ್ಟೈನ್.

26ಬಂಗಾಳ ಹುಲಿ.

27ಪೆಸಿಫಿಕ್ ಸಾಗರ.

28ನೀಲ್ ಆರ್ಮ್ಸ್ಟ್ರಾಂಗ್.

29ಮಂಗಳ

30ಟೋಕಿಯೋ

31ಅಲೆಕ್ಸಾಂಡರ್ ಗ್ರಹಾಂ ಬೆಲ್.

32 ನೈಲ್ ನದಿ.

33 ರಷ್ಯಾ

34 ಮೇರಿ ಕ್ಯೂರಿ.

35 ಒಟ್ಟಾವಾ

36. ಥಾಮಸ್ ಎಡಿಸನ್.

37 ಸಹಾರಾ ಮರುಭೂಮಿ.

38 ವಿಲಿಯಂ ಷೇಕ್ಸ್ಪಿಯರ್.

39  ನೀಲಿ ತಿಮಿಂಗಿಲ.

40 ಏಂಜೆಲಾ ಮರ್ಕೆಲ್.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಲೇಖಕರು

ತುಮಕೂರು 

 9900925529