This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
24 ಜುಲೈ 2023
ಅರಸಿ
ಅರಸಿ...
ಬಳಲಿ ಬೆಂಡಾಗಿರುವೆ
ಅಲೆದಾಡುತ ನಿನ್ನ ಅರಸಿ|
ಪರಿತಪಿಸುತಲಿರುವೆ
ಬಂದು ಬಿಡು ನನ್ನ
ಹೃದಯದರಮನೆಯರಸಿ|
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೆ ಸಿ ಬಿ ಆಪರೇಟರ್...
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೆ ಸಿ ಬಿ ಆಪರೇಟರ್
ಸಾಧಿಸಬೇಕೆಂಬ ಹಂಬಲ ಮತ್ತು ಸತತ ಪ್ರಯತ್ನ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರಿಗೆ ಸೋಲೆಂಬ ಮಾತೇ ಇಲ್ಲ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ತಾಜಾ ಉದಾಹರಣೆ ಕೇರಳದ ಕೆ ಅಖಿಲ್.
ರಾತ್ರಿ ವೇಳೆ ಜೆಸಿಬಿ ಆಪರೇಟರ್ ಕೆಲಸಮಾಡಿಕೊಂಡು ಬೆಳಿಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕಾಯಕ ಮಾಡುತ್ತಿದ್ದು ಬಿಡುವಿನ ಸಮಯದಲ್ಲಿ ಬರವಣಿಗೆಯ ಗೀಳು ಹತ್ತಿಸಿಕೊಂಡು ಸಾಹಿತ್ಯ ರಚನೆ ಮಾಡುತ್ತಿದ್ದ ಅಖಲ್ ರವರ ಮೊದಲ ಕಥಾ ಸಂಕಲನಕ್ಕೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಷ್ಟಕ್ಕೂ ಈ ಯಶಸ್ಸು ರಾತ್ರೋರಾತ್ರಿ ಬರಲಿಲ್ಲ ಅದರ ಹಿಂದೆ ಸತತ ಶ್ರಮ ಇರುವುದು ಸತ್ಯ.
ಎಂಟು ಬಾರಿ ಮರುಮುದ್ರಣ ಕಂಡಿರುವ "ನೀಲಚಡಯನ್ " ಕಥಾ ಸಂಕಲನದ ಒಂದೂ ಪ್ರತಿ ಖರ್ಚಾಗಿರಲಿಲ್ಲ. ಯಾರೂ ಓದಿರಲಿಲ್ಲ ಈಗ ಅದ್ಭುತ ಯಶಸ್ಸಿನ ಕೃತಿಯಾಗಿ ಪ್ರಶಸ್ತಿ ಚಾಚಿಕೊಂಡಿರುವ ವಿಷಯ ಹೇಳುವಾಗ ಅಖಿಲ್ ಕಣ್ಣಲ್ಲಿ ನೀರಾಡುತ್ತವೆ! ಹೌದು ಅವು ಆನಂದ ಬಾಷ್ಪಗಳು!
ಬಡತನದಿಂದಾಗಿ ಕುಟುಂಬವನ್ನು ಪೋಷಿಸುವ ಸಲುವಾಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ ಅಖಿಲ್ ಪಿಯುಸಿ ಬಳಿಕ ಶಿಕ್ಷಣ ಮುಂದುವರಿಸಬೇಕೆಂಬ ಹಂಬಲವಿತ್ತು. ಆದರೆ ಅವರ ಕೌಟುಂಬಿಕ ಪರಿಸ್ಥಿತಿ ಬೇರೆಯೇ ಇತ್ತು. ತಂದೆ,ತಾಯಿ, ಅಜ್ಜಿ ಮತ್ತು ತಮ್ಮನನ್ನು ಸಲಹುವ ಜವಾಬ್ದಾರಿ ಅವರ ಹೆಗಲ ಮೇಲೇರಿತು. ಅಖಿಲ್ ಅವರ ತಾಯಿ ಕೂಡ ದಿನಗೂಲಿ ನೌಕರಿ ಮಾಡುತ್ತಾ ಸಂಸಾರಕ್ಕೆ ಅಧಾರವಾದರು.
ರಾತ್ರಿ ವೇಳೆ ಬಿಡುವಿನ ಸಮಯದಲ್ಲಿ ಅವರ ಕಲ್ಪನೆಗ
ಳಲ್ಲಿ ಮೂಡಿ ಬರುವ ಕಥೆಗಳನ್ನು ಬರೆಯಲಾರಂಭಿಸಿದರು ದಿನನಿತ್ಯದ ಬದುಕಿನ ಅನುಭವ ಗಳನ್ನೇ ಆಧಾರವಾಗಿಟ್ಟುಕೊಂಡು ಕಥೆಗಳನ್ನು ಬರೆದರು.ಇದರ ಪರಿಣಾಮವಾಗಿಯೇ 'ನೀಲಚಡಯನ್' ಕೃತಿ ಹೊರಬಂತು.
ಅದೂ ಕೂಡಾ ಅಷ್ಟು ಸುಲಭವಾಗಿರಲಿಲ್ಲ. ಕೇರಳದ
ಗಾಂಜಾ ತಳಿಯ ಗಿಡಕ್ಕೆ 'ನೀಲಚಡಯನ್' ಎನ್ನುತ್ತಾರೆ. ಈ ಹೆಸರನ್ನು ಕೃತಿಯ ಶೀರ್ಷಿಕೆಯಾಗಿಟ್ಟು ಪುಸ್ತಕ ಪ್ರಕಟಿಸಲು ಪ್ರಕಾಶಕರನ್ನು ಎಡತಾಕಿದಾಗ ಎಂದಿನಂತೆ ಪ್ರಕಾಶಕರು ನಿರಾಕರಿಸಿದಾಗ ತಾವೇ ಪುಸ್ತಕ ಪ್ರಕಾಶನ ಮಾಡಲು ಮುಂದೆ ಬಂದರು.
20 ಸಾವಿರ ಪಾವತಿಸಿದರೆ ಪುಸ್ತಕ ಪ್ರಕಟಿಸುತ್ತೇವೆ ಎಂಬ ಜಾಹೀರಾತನ್ನು ಫೇಸ್ಬುಕ್ನಲ್ಲಿ ಗಮನಿಸಿದ ಅವರು ಉಳಿತಾಯ ಮಾಡಿದ್ದ 10,000 ಹಾಗೂ ತಾಯಿ ನೀಡಿದ 10,000 ಪಾವತಿಸಿ ಈ ಪುಸ್ತಕ ಪ್ರಕಟಿಸಿದ್ದರು ಆಗ ಅದು ಆನ್ಲೈನ್ ಮೂಲಕ ಮಾತ್ರವೇ ಮಾರಾಟವಿತ್ತು .
ಆರಂಭದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಒಂದೂ ಪುಸ್ತಕ ಮಾರಾಟವಾಗದೇ ಕಷ್ಟ ಪಟ್ಟು ರಾತ್ರಿಹಗಲು ದುಡಿದ ಹಣ ವನ್ನು ಹೀಗೆ ವ್ಯಯ ಮಾಡಿದೆನಲ್ಲ ಎಂದು ಕೊರಗುವ ಸಮಯದಲ್ಲಿ ಕೇರಳದ ಚಿತ್ರಕಥೆಗಾರ ಬಿಪಿನ್ ಚಂದ್ರನ್ ಅವರು ಪುಸ್ತಕದ ಕುರಿತು ಫೇಸ್ಬುಕ್ನಲ್ಲಿ ಬರೆದ ಬಳಿಕ ಜನರಿಂದ ಬೇಡಿಕೆ ಬಂತು. ಇದೀಗ ಈ ಪುಸ್ತಕದ ಎಂಟನೇ ಅವೃತ್ತಿ ಮುದ್ರಣವಾಗಿ ಪ್ರತಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅಖಿಲ್ ರವರಿಗೆ ಪ್ರಶಸ್ತಿಯ ಜೊತೆಯಲ್ಲಿ ಸಂಪಾದನೆ ಮತ್ತು ಹೆಸರು ಸಿಕ್ಕಿದೆ. ಅಭಿನಂದನೆಗಳು ಅಖಿಲ್.ನಿಮ್ಮಲ್ಲೂ ಒಬ್ಬ ಅಖಿಲ್ ಇರಬಹುದು ಹಿಡಿದ ಕಾರ್ಯವನ್ನು ಸಾಧಿಸುವ ಗುಣ ನಿಮ್ಮದಾಗಲಿ ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
23 ಜುಲೈ 2023
ಸಿಹಿಜೀವಿಯ ಹನಿ
ವ್ಯತ್ಯಾಸ
ಮೂಗಿನ ಮೇಲೆ
ಬೆರಳಿಟ್ಟುಕೊಂಡರೆ ಅಚ್ಚರಿ!
ಮೂಗಿನ ಒಳಗೆ ಇಟ್ಟರೆ
ಥೂ ಅಸಹ್ಯ ಮೊದಲು
ಹೊರಗೆ ತಗೀರಿ !!
ಸಿಹಿಜೀವಿ ವೆಂಕಟೇಶ್ವರ
ತುಮಕೂರು

.webp)
