29 ಡಿಸೆಂಬರ್ 2022

ವಿಶ್ವ ಮಾನವರಾಗೋಣ...


 


ವಿಶ್ವ ಮಾನವರಾಗೋಣ...


ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ  ನಾಲ್ಕು ದಿನಗಳ  ಕುವೆಂಪು ನಾಟಕೋತ್ಸವದಲ್ಲಿ ಪ್ರೇಕ್ಷಕನಾಗಿ ಕುವೆಂಪು ಕೃತಿಗಳ ಕಣ್ತುಂಬಿಕೊಳ್ಳುವ ಸದವಕಾಶ ಲಭಿಸಿತ್ತು. ಹಿರಿಯ ರಂಗಕರ್ಮಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಆದ ಸಿ ಲಕ್ಷ್ಮಣ ರವರ ಮಗ ಓಹಿಲೇಶ್ವರ ಬಹಳ ಅಚ್ಚುಕಟ್ಟಾಗಿ ನಾಟಕಗಳ ಪ್ರದರ್ಶನ ಆಯೋಜಿಸಿದ್ದರು ಎಲ್ಲಾ ನಾಟಕ ತಂಡಗಳ ಅಭಿನಯ ಪ್ರೇಕ್ಷಕರ ಮನಗೆದ್ದಿತು. ರಂಗಭೂಮಿಗೆ ಭವಿಷ್ಯವಿಲ್ಲ ಇದು ಟಿ ವಿ ಸಿನಿಮಾಗಳ ಕಾಲ ಎಂಬ ಕೂಗಿನ ನಡುವೆ ಎಲ್ಲಾ ದಿನಗಳಲ್ಲಿ ಕಲಾಕ್ಷೇತ್ರ ತುಂಬಿದ ಪ್ರೇಕ್ಷಕರಿಂದ ಕಂಗೊಳಿಸಿದ್ದು ನನಗೆ ಅತೀವ ಸಂತೋಷ ಉಂಟುಮಾಡಿತು. ಮನದಲ್ಲೆ ಅಂದುಕೊಂಡೆ ಯಾವ ಮಾದ್ಯಮ ಬಂದರೂ ರಂಗಭೂಮಿ ಮಣಿಸಲು ಸಾದ್ಯವಿಲ್ಲ.


ಬೊಮ್ಮನ ಹಳ್ಳಿ ಕಿಂದರಿಜೋಗಿ, ಮೋಡಣ್ಣನ ತಮ್ಮ, ಯಮನಸೋಲು ,ಸ್ಮಶಾನ ಕುರುಕ್ಷೇತ್ರ ಮುಂತಾದ ನಾಟಕಗಳನ್ನು ಕಲಾವಿದರು ಅಭಿನಯಿಸುವಾಗ ಪ್ರತಿ ದೃಶ್ಯದ ಕೊನೆಗೆ ಪ್ರೇಕ್ಷಕರ ಕರತಾಡನ ಕಲಾಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿತ್ತು.

ನಾನು ಈಗಾಗಲೇ ಈ ಕೃತಿಗಳನ್ನು ಹಲವಾರು ಬಾರಿ ಓದಿದ್ದರೂ ,ನಾಟಕಗಳನ್ನು ಕೆಲವು ಸಲ ನೋಡಿದ್ದರೂ ಆ ನಾಟಕಗಳ ಸಂಭಾಷಣೆಗಳು ಇಂದು ನನಗೆ ಹೊಸ ದಾಗಿ ಕಂಡವು .ಚಿಂತನೆಗೆ ಹಚ್ಚಿದವು.ಅದೇ ಅಲ್ಲವೇ ಕುವೆಂಪು ಸಾಹಿತ್ಯದ ತಾಕತ್ತು! 


ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ 

ಕುವೆಂಪುರವರು  ಎಲ್ಲಾ ತರಹದ ಸಾಹಿತ್ಯ ರಚಿಸಿದ್ದಾರೆ.ಅವರ ಸಾಹಿತ್ಯ ಓದಿದವರಿಗೆ ಅವರ ಸಾಹಿತ್ಯದ ಗಟ್ಟಿತನ ತಿಳಿಯುತ್ತದೆ. ಪ್ರತೀ ಪುಸ್ತಕದ ಕೆಲ ಸಂಭಾಷಣೆಗಳು, ಹೇಳಿಕೆಗಳು ಪ್ರತಿ ದಿನ ನಮಗೆ ಮಾರ್ಗದರ್ಶನ ಮಾಡುತ್ತವೆ .ಎಚ್ಚರಿಸುತ್ತವೆ. ಪ್ರೇರೇಪಿಸುತ್ತವೆ.

ಅದಕ್ಕೆ ಉದಾಹರಣೆ ನೀಡುವುದಾರೆ 

ಸ್ಮಶಾನ ಕುರುಕ್ಷೇತ್ರ ದ ಎರಡು ಪಾತ್ರಗಳ ಸಂಭಾಷಣೆಯ ನಡುವೆ ಪರಸ್ಪರ ವಿರೋಧ ಗುಂಪುಗಳಾದ ಪಾಂಡವರ ಮತ್ತು ಕೌರವರ ಸೈನಿಕರ ಮರಣದ ವಿಷಯ ತಿಳಿದು ನಾವು ಪರಸ್ಪರ ವಿರೋಧ ಗುಂಪುಗಳಲ್ಲವೇ ಎಂದು ಮಹಿಳೆ ಕೇಳಿದಾಗ ಅಜ್ಜಿ ನೀಡುವ ಉತ್ತರ


"ನಮಗೆಂತಹ ಹಗೆ ನಾವು ಅವರ ಕೈಗೊಂಬೆಗಳು...ಅವರು ಅಧಿಕಾರಕ್ಕೆ ನಮ್ಮ ಕುಟುಂಬದ ಬಲಿಯಾಗುತ್ತಿವೆ " ಎಂಬ ಮಾತುಗಳು ನನ್ನನ್ನು ಬಹಳ ಕಾಡಿದವು.

ಅದೇ ರೀತಿಯಲ್ಲಿ ಯಮನ ಸೋಲು ನಾಟಕ ಸಂಭಾಷಣೆಯ ಮಾತುಗಳಲ್ಲಿ ಸಾವಿತ್ರಿಯ 

"ಕರುಣೆಯಿರದ ಕಾಲ ಚಕ್ರ ಇದು..

ನಿನ್ನ ಧರ್ಮ ನೀನು ಮಾಡು ನನ್ನ ಧರ್ಮವ ನಾನು ಮಾಡುವೆ..

ಧರ್ಮದಿಂ ಧರ್ಮವ ಗೆಲ್ವೆನ್ ....

ನರಕ ನಾಕಗಳನು ಸೃಜಿಸುವುದು ಮನಸು..." ಮುಂತಾದ ಮಾತುಗಳು ಈಗಲೂ ಕಿವಿಯಲ್ಲಿ ಅನುರಣಿಸುತ್ತವೆ. 


ಹೀಗೆ ಕುವೆಂಪು ರವರ ಪ್ರತಿ ಕೃತಿಯಲ್ಲೂ ನಮ್ಮನ್ನು ಚಿಂತನೆಗೆ ಹಚ್ಚುವ ಕೆಲ ಸಾಲುಗಳಿವೆ. ಅವುಗಳನ್ನು ಮೆಲುಕು ಹಾಕುತ್ತಾ ಇರಬೇಕು.ಕೆಲ ಮೂಲಗಳಿಂದ ಸಂಗ್ರಹಿಸಿದ ಅಂತಹ ಸಾರಂಶಯುಕ್ತ ಸಾಲುಗಳನ್ನು ಒಂದೆಡೆ ತರುವ ಪ್ರಯತ್ನ ಮಾಡಿರುವೆ...


ಮನುಜ ಮತ ವಿಶ್ವ ಪಥ ಪುಸ್ತಕದಲ್ಲಿ ಬರುವ 

"ಪಾಶ್ಚಾತ್ಯರಲ್ಲಿ ಅನೇಕರು, ವಿಶ್ವವಿದ್ಯಾನಿಲಯಗಳ ಮೆಟ್ಟಿಲನ್ನು ಕೂಡ ಹತ್ತದೇ ಇರುವವರು, ಎಷ್ಟೋಜನ ವಿಜ್ಞಾನದಲ್ಲಿ ದೊಡ್ಡ ಆವಿಷ್ಕಾರಗಳನ್ನು ಮಾಡಿದ್ದಾರೆ. ಕಾರಣ ಏನೆಂದರೆ ಅವರವರ ಭಾಷೆಗಳಲ್ಲಿ ಅವರು ಚಿಂತನೆ ನಡೆಸಿದ್ದಾರೆ" ಎಂಬುದು ನಮ್ಮ ಭಾಷೆಯ ಮಹತ್ವ ಸಾರುತ್ತವೆ. 

ಇತ್ತೀಚಿನ ದಿನಗಳಲ್ಲಿ ಮುಗಿಯದ ಭಾಷಾ ಸಂಘರ್ಷಗಳನ್ನು ಗಮನಿಸಿದಾಗ  ಕುವೆಂಪುರವರ ಮನುಜಮತ ವಿಶ್ವ ಪಥ ಪುಸ್ತಕದ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ಅವರೇ ಹೇಳುವಂತೆ

" ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ.

ಆದರ್ಶಗಳ ಬಗ್ಗೆ ತಮ್ಮ ಅಣ್ಣನ ನೆನಪು ಪುಸ್ತಕದ ಮಾತು ಎಲ್ಲರೂ ನೆನೆಯಲೇಬೇಕು.

"ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು".

ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಪುಸ್ತಕದಲ್ಲಿ ಅವರು ಅಂದು ಹೇಳಿದ ಮಾತುಗಳು ಇಂದಿನ ಸಮಾಜ ‌ನೋಡಿಯೇ ಹೇಳಿದಂತಿದೆ.

"ಮತಭಾವನೆ ಪ್ರಚೋದಿಸಿರುವ ಜಾತಿಭೇದ ಬುದ್ಧಿ, ಮತ್ತು ಚುನಾವಣೆ ಅನುಸರಿಸುತ್ತಿರುವ ಕುಟೀಲ ಕುನೀತಿ. ಈ ಎರಡು ಜನಕ ಅನಿಷ್ಟಗಳನ್ನೂ ನೀವು ತೊಲಗಿಸಿದರೆ ಉಳಿದ ಎಲ್ಲ ಜನ್ಯ ಅನಿಷ್ಟಗಳನ್ನೂ ಬಹುಬೇಗನೆ ತೊಲಗಿಸಲು ನೀವು  ಖಂಡಿತವಾಗಿಯೂ ಸಮರ್ಥರಾಗುತ್ತೀರಿ". ಹೌದಲ್ಲವೇ ಎಷ್ಟೊಂದು ಸತ್ಯ.

ಕೊಳಲು ಕವನ ಸಂಕಲನದ ನೇಗಿಲಯೋಗಿ ಕವಿತೆ ನೀಡುವ ಸಂದೇಶ ಅನನ್ಯ

"ಯಾರೂ ಅರಿಯದ ನೇಗಿಲ ಯೋಗಿಯೆ

ಲೋಕಕೆ ಅನ್ನವನೀಯುವನು

ಹೆಸರನು ಬಯಸದೆ ಅತಿಸುಖಕೆಳಸದೆ

ದುಡಿವನು ಗೌರವಕಾಶಿಸದೆ

ನೇಗಿಲಕುಳದೊಳಗಡಗಿದೆ ಕರ್ಮ

ನೇಗಿಲ ಮೇಲಿಯೆ ನಿಂತಿದೆ ಧರ್ಮ" 


ನಮ್ಮ ಅನ್ನದಾತನ ಮಹತ್ವವನ್ನು ನಾವು ಇನ್ನಾದರೂ ಮನಗಾಣಬೇಕಿದೆ.

ಇನ್ನೂ ಕುವೆಂಪುರವರ ಸಂದೇಶಗಳನ್ನು ನೋಡುವುದಾದರೆ

"ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು 

ನೀ ಮೆಟ್ಟುವ ನೆಲ-ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ" ಎನ್ನುತ್ತಾ ನಾಡು ನುಡಿಯ ಬಗ್ಗೆ ತಿಳಿಹೇಳಿದ್ದಾರೆ.

ಸಂಕುಚಿತ ಬುದ್ದಿ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೋ ಎನ್ನುತ್ತಾ

ಓ ನನ್ನ ಚೇತನ

ಆಗು ನೀ ಅನಿಕೇತನ  ಎಂದರು ನಮ್ಮ ರಸ ಋಷಿ.


ಹೀಗೆ ಕುವೆಂಪುರವರ ವಿಚಾರಗಳನ್ನು ಹೇಳುತ್ತಾ ಹೋದರೆ ಕೊನೆಯೆಂಬುದಿಲ್ಲ  ವಿಶ್ವ ಮಾನವ ದಿನದ ಅಂಗವಾಗಿ ಇವೆಲ್ಲವೂ ನೆನಪಾದವು. ಕುವೆಂಪುರವರ ಸಾಹಿತ್ಯ ಓದೋಣ ,ಓದಿಸೋಣ, ಅವರ ಬಗ್ಗೆ ಅವರ ಕೃತಿಗಳ ಬಗ್ಗೆ ಚರ್ಚಿಸೋಣ.ಚಿಂತನಮಂಥನ ಮಾಡೋಣ. ರಸ ಋಷಿಯ  ಸಂದೇಶಗಳಲ್ಲಿ ಕೆಲವನ್ನಾದರೂ ನಾವು ಅಳವಡಿಕೊಂಡರೆ ನಾವು ವಿಶ್ವಮಾನವರಾಗುವುದರಲ್ಲಿ  ಸಂದೇಹವಿಲ್ಲ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529.


28 ಡಿಸೆಂಬರ್ 2022

ಆರಿಲ್ಲ ಶಾಯಿ...


ಪ್ರಿಯೆ ಹೀಗೇಕೆ ಮಾಡಿದೆ? ಇನ್ನೂ ಆರಿಲ್ಲ ನೀ  ಬರೆದ ಪ್ರೇಮ ಪತ್ರದ ಶಾಯಿ| ಇನ್ನೊಬ್ಬನ ಮದುವೆಯಾಗಿ  ಆಗುವಿಯಲ್ಲ ಅವನ ಮಗುವಿನ ತಾಯಿ || ಸಿಹಿಜೀವಿ ಸಿ ಜಿ ವೆಂಕಟೇಶ್ವರ ...

27 ಡಿಸೆಂಬರ್ 2022

ಮಹಾನ್ ಪತ್ತೇದಾರ.....ಹನಿಗವನ

 


ಮಹಾನ್ ಪತ್ತೇದಾರ..


ನಾನು ಮಾಡಿದ ಅನೀತಿ ,ಅಕ್ರಮ

ಯಾರಿಗೂ ಗೊತ್ತಾಗಿಲ್ಲ ಎಂದು

ಮನದಲೇ  ಬಡಬಡಿಸಬೇಡ 

ನಾನೊಬ್ಬ ಮಹಾನ್ ನಟ, ಮೋಸಗಾರ, ಚತುರ ನಾಟಕಕಾರ |

ನಿನ್ನೆಲ್ಲಾ ಆಟೋಟೋಪ ನೋಡುತ

ಮೇಲೆ ಕೂತಿರುವ ಮಹಾನ್ ಪತ್ತೇದಾರ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


What I did was wrong, illegal

 That no one knows

 Don't beat yourself up

 I am a great actor, a trickster, a clever dramatist

 See you all autotopa

 The great detective sitting above ||


 sweet creature

 CG Venkateswara.