*ತಟ್ಟೆ ,ಹೊಟ್ಟೆ*
ಅವನು ಗೊಣಗಿದ
ನನಗೆ ಇತ್ತೀಚಿಗೆ ಯಾಕೋ
ಜಾಸ್ತಿಯಾಗುತ್ತಿದೆ ಹೊಟ್ಟೆ |
ಅವಳು ಉತ್ತರಿಸಿದಳು
ಹೌದು ಈಗೀಗ ಕೊಂಚವೂ
ಕಡಿಮೆಯಾಗಿಲ್ಲ ನಿಮ್ಮ ತಟ್ಟೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ತಟ್ಟೆ ,ಹೊಟ್ಟೆ*
ಅವನು ಗೊಣಗಿದ
ನನಗೆ ಇತ್ತೀಚಿಗೆ ಯಾಕೋ
ಜಾಸ್ತಿಯಾಗುತ್ತಿದೆ ಹೊಟ್ಟೆ |
ಅವಳು ಉತ್ತರಿಸಿದಳು
ಹೌದು ಈಗೀಗ ಕೊಂಚವೂ
ಕಡಿಮೆಯಾಗಿಲ್ಲ ನಿಮ್ಮ ತಟ್ಟೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಹನಿ .ಹನಿ ಹಳ್ಳ
ಪರ ತೋಟದಲ್ಲಿ
ಪರಾಗ ಹೀರಲು ಹೊರಟ
ಚಿಟ್ಟೆಗಳು ಹೇಳಿದವು
ಈ "ಹನಿ "ಗೆ ಯಾವುದೂ ಸಮವಿಲ್ಲ |
ಕ್ರಮೇಣ ಬ್ಲಾಕ್ ಮೇಲ್ ಗೆ ಇಳಿದ
ಪುಷ್ಪ ಖೆಡ್ಡಾ ತೊಡುತ್ತಾ ಹೇಳಿತು
"ಹನಿ ಹನಿ " ಕೂಡಿದರೆ" ಹಳ್ಳ " ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನ್ಯಾನೋ ಕಥೆ ೫೦
ಪೆಟ್ರೋಲ್ ಖಾಲಿಯಾಗಿತ್ತು!
"ಅಂಕಲ್ ನಮ್ಮ ಅಪ್ಪ ಅಮ್ಮ ದುಡಿಯಾಕ ಬೆಂಗಳೂರ್ ಗೆ ಹೋಗ್ಯಾರ ಮುಂದ್ಲುವಾರ ಬತ್ತಾರೆ" ಎಂದು ಆಸೆ ಗಣ್ಣಿನಿಂದ ಹೇಳಿದ ನಾಲ್ಕು ವರ್ಷದ ಬಾಲಕನ ಮಾತು ಕೇಳಿ ನೆರೆದಿದ್ದವರಿಗೆ ಮೌನ ತಬ್ಬಿದ ಅನುಭವ. "ನಿನ್ನ ಅಪ್ಪ ಅಮ್ಮ ಆದಷ್ಟು ಬೇಗ ಬರಲಿ" ಎಂದು ಮಗುವಿಗೆ ಸಮಾಧಾನ ಹೇಳಿ ತಿಥಿ ಊಟ ಮಾಡಿ ಮನೆಯಿಂದ ಹೊರಬಂದ ರವಿಗೆ ಒಂದು ಹಳೆಯ ನ್ಯೂಸ್ ಪೇಪರ್ ಕಾಲಿಗೆ ತಡಕಿತು .ದಪ್ಪ ಅಕ್ಷರಗಳು ಅವನ ಕಣ್ಣಿಗೆ ಬಿದ್ದವು" ರಸ್ತೆ ಅಪಘಾತದಲ್ಲಿ ದಂಪತಿ ಸಾವು ಮಗು ಅನಾಥ" .ಭಾರವಾದ ಮನಸ್ಸಿನಿಂದ ರವಿ ಬೈಕ್ ಸ್ಟಾರ್ಟ್ ಮಾಡಿ ರಸ್ತೆಯಲ್ಲಿ ಸಾಗುವಾಗ ಬೈಕ್ ಇಂಜಿನ್ ಆಫ್ ಆಯ್ತು .ಟ್ಯಾಂಕ್ ಬೀಗ ತೆಗೆದು ನೋಡಿದ ಪೆಟ್ರೋಲ್ ಖಾಲಿಯಾಗಿತ್ತು!
ಸಿಹಿಜೀವಿ
ಸಿ ಜಿ ವೆಂಕಟೇಶ್ವರ