*ಇಂದಿನ ಸಿಂಹ ದ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
08 ಜನವರಿ 2022
07 ಜನವರಿ 2022
ಮಾಲು .ಹನಿಗವನ
ವಿದೇಶಿ ಮಾಲುಗಳ ಕೊಳ್ಳಲು
ಕ್ರೆಡಿಟ್ ಕಾರ್ಡ್ಗಳನ್ನು ಉಜ್ಜುತ್ತಾ
ಆಗಾಗ್ಗೆ ಭೇಟಿ ನೀಡುತ್ತಿದ್ದ ಅವನು
ಆ ಮಾಲು ಈ ಮಾಲು|
ದುಬಾರಿ ಬೆಲೆಯ ಮಾಲುಗಳ
ಕೊಂಡ ಪರಿಣಾಮವಾಗಿ ಈ
ಕೈ ಬರಿದಾಗಿ ದೇಶಿಯತೆಗೆ ಮಾರುಹೋಗಿ ಕುಳಿತಿದ್ದಾನೆ
ತಲೆಯಮೇಲೆ ಹಾಕಿಕೊಂಡು ಟವಾಲು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಗುಂಡಿಗೆ .ಹನಿಗವನ
ಗುಂಡಿಗೆ .ಹನಿ
ಆಸ್ಪತ್ರೆಯವನು ಭಕ್ತಿಯಿಂದ
ಪೂಜೆ ಮಾಡಿದ ರಸ್ತೆ ಗುಂಡಿಗೆ|
ಗುಂಡಿಯಲ್ಲಿ ಬಿದ್ದು ನರಳಾಡಿ ಆಸ್ಪತ್ರೆ ಸೇರಿ
ಡಿಸ್ಚಾರ್ಜ್ ಆಗುವಾಗ ನೋಡಿ ಬಿಲ್
ನಿಂತು ಹೋಯಿತು ಅವನ ಗುಂಡಿಗೆ||
ಸಿಹಿಜೀವಿ
ನೆನಪಾದ ದಾಸಜ್ಜ .ಆತ್ಮಕಥೆ ೨೧
ನೆನಪಾದ ದಾಸಜ್ಜ .ಆತ್ಮಕಥೆ ೨೧
ನಾನು ಚಿಕ್ಕವನಿದ್ದಾಗ ನಮ್ಮ ತಂದೆಯವರ ತಂದೆ ಅಂದರೆ ನಮ್ಮ ತಾತ ದಾಸಜ್ಜ ಆ
ಅದಾಗಲೇ ತೊಂಭತ್ತಕ್ಕೂ ಹೆಚ್ಚು ವಯಸ್ಸಾಗಿ ಬೆನ್ನು ಬಾಗಿ ಮುಖ ಸುಕ್ಕುಗಟ್ಟಿ ಕೈಗೊಂದು ಕೋಲು ಬಂದಿತ್ತು.ಆದರೂ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಿದ್ದರು . ಅವರ ಶಿಸ್ತುಬದ್ದ ಜೀವನ ನನಗೆ ಇಂದಿಗೂ ಆದರ್ಶ ಬೆಳಗಿನ ಅವಧಿಯಲ್ಲಿ ನಿತ್ಯಕರ್ಮ ಮುಗಿಸಿ ದೇವರ ಪೂಜೆ ಮಾಡಿ ಮನೆಯಿಂದ ಹೊರಬಂದು ಸೂರ್ಯನ ಕಡೆ ಮುಖಮಾಡಿ ಐದಾರು ನಿಮಿಷಗಳ ಕಾಲ ಸೂರ್ಯನಿಗೆ ನಮಸ್ಕಾರ ಮಾಡುತ್ತಿದ್ದರು.
ಒಮ್ಮೆ ಅವರ ಎಡ ಕಾಲಿನ ಮೀನ ಖಂಡದಲ್ಲಿ ಬಿಳಿಯ ಹುಳುಗಳು ಕೀವಾದ ಗಾಯದಿಂದ ಹೊರಬರುವುದನ್ನು ಕಂಡು ನಾನು ಇದೆಂತಹ ಭಯಾನಕ ಕಾಯಿಲೆ ಎಂದು ನನಗೆ ಭಯದೊಂದಿಗೆ ಬೇಸರವಾಯಿತು.ಆದರೆ ನಮ್ಮ ತಾತ ಏನೂ ಆಗಿಲ್ಲ ಎಂಬಂತೆ ತಂಗಟೆ ಗಿಡದ ಹೂವಿನ ಔಷದಿ ಮಾಡಿಕೊಂಡು ಅವರೇ ಕಟ್ಟಿಕೊಂಡು ಮಾಮೂಲಿಯಾಗಿ ಕೆಲಸ ಮಾಡುತ್ತಿದ್ದರು.
ಅದಾಗಿ ನಾಲ್ಕು ವರ್ಷದ ನಂತರ ದಾಸಜ್ಜ ಭಗವಂತನಲ್ಲಿ ಲೀನವಾದರು .
ವಾರದ ಹಿಂದೆ ನನ್ನ ಎಡಗಾಲಿನ ಮೀನ ಖಂಡದ ಬಳಿ ಒಂದು ರಕ್ತದ ಗುಳ್ಳೆಯಾಗಿ ಬಹುವಾಗಿ ನೋವು ಕಾಡಿತು .ಯಾವ್ಯಾವುದೋ ಮುಲಾಮು, ಮಾತ್ರೆ ತೆಗೆದುಕೊಂಡರೂ ಅಸದಳ ನೋವು ನನ್ನ ಕಾಡಿತು ಆಗ ಯಾಕೋ ದಾಸಜ್ಜ ನೆನಪಾದರು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ