23 ಡಿಸೆಂಬರ್ 2021

ಕೃಷ್ಣವರ್ಣೆ.


 *ಸಿಹಿಜೀವಿಯ ಹನಿ*


ಕೃಷ್ಣವರ್ಣೆ ಎಂದು ಜರಿದು

ದೂರತಳ್ಳಿ ಶ್ವೇತವರ್ಣವೇ ಶ್ರೇಷ್ಟ

ಎಂದು ಮರುಳಾಗದಿರು ನೋಡಿ

ಥಳುಕು ಬಳುಕು|

ಕಲ್ಲಿದ್ದಲಿನಿಂದಲೂ ಪಡೆಯಬಹದು

ಸರ್ವರ ಬೆಳಗುವ ಬೆಳಕು||


*ಸಿಹಿಜೀವಿ*

ಪ್ರಯತ್ನ ಜಾರಿಯಲ್ಲಿರಲಿ .


 



ಎಟುಕದ ದ್ರಾಕ್ಷಿ ಹುಳಿಯೆಂದು ಪಲಾಯನ ಮಾಡುವವರು ನಾವು . ಕೆಲವೊಮ್ಮೆ ಇದು ನಮ್ಮ ಮಾನಸಿಕ ಆರೋಗ್ಯದ ಡಿಪೆನ್ಸ್ ಮೆಕಾನಿಸಮ್ ತರ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಸಿಗದ ವಸ್ತುಗಳ ಕುರಿತು ಚಿಂತಿಸುತ್ತಾ ಚಿತೆಯೇರುವ ಪರಿಸ್ಥಿತಿ ಬರುತ್ತದೆ. A bird in a hand is greater than two bird in a bush ಎಂಬಂತೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳ ಮತ್ತು ಸೌಕರ್ಯಗಳನ್ನು ಎಂಜಾಯ್ ಮಾಡೋಣ.

ಹಾಗಾದರೆ ಉನ್ನತವಾದ ಗುರಿಗಳೇ  ಬೇಡವೆ? ನಮಗೆ ಸಿಗದಿರುವ ವಸ್ತುಗಳ ಪಡೆಯಲು ಯಾವಾಗಲೂ ಪಲಾಯನ ಮಾಡಿದರೆ ನಾವು ಸಾಧಿಸುವುದು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಉನ್ನತ ಗುರಿ ಖಂಡಿತವಾಗಿಯೂ ತಪ್ಪಲ್ಲ ಅದನ್ನು ತಲುಪುವ ದಾರಿಯಲ್ಲಿ ಅಡೆ ತಡೆ ಬಂದಾಗ ವಿಚಲಿರಾಗದೇ ಸಿಂಹಾವಲೋಕನ ಮಾಡಿಕೊಂಡು ಮುನ್ನೆಡೆಯೋಣ.

 ನಂತರ ಮುಂದೆ ನಮ್ಮ ಗುರಿ ಸಾಧಿಸಲು ಪ್ರಯತ್ನ ಜಾರಿಯಲ್ಲಿ ಇಟ್ಟಿರೋಣ.



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು

22 ಡಿಸೆಂಬರ್ 2021

ಡಿಸೆಂಬರ್ ತಿಂಗಳು.


 

ಸ್ವಲ್ಪವೂ ಕರುಣೆ ಬೇಡವೇ?
ಸಾಮಾನ್ಯ ಜನರ ಮೇಲೆ,
ಮಹಿಳೆ ,ಮಕ್ಕಳು ಎಂಬುದನ್ನು
ನೋಡಬಾರದೇ? ಪಾಪ...
ಒಡೆದು ಹೋಗಿವೆ
ಮುಖ ,ಕೈಕಾಲು ತುಟಿಗಳು|
ಇಷ್ಟೆಲ್ಲಾ ಅವಾಂತರಕ್ಕೆ
ಕಾರಣರಾದವರ ಬಗ್ಗೆ  ನೆನೆದರೆ
ಮೈಯೆಲ್ಲಾ ಉರಿಯುತ್ತದೆ .
ನಿಮಗೂ ಗೊತ್ತು ಈ ದೌರ್ಜನ್ಯಕ್ಕೆ
ಕಾರಣರಾದವರಾರೆಂದು ಇನ್ಯಾರು?
ಅದೇ ಚಳಿಯಾದ ಡಿಸೆಂಬರ್ ತಿಂಗಳು !!

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ಕಲಾವಿದ .ಹನಿಗವನ


 



*ಕಲಾವಿದ*


ನಮ್ಮ ಜೀವನದಿ ಹೀಗೆ

ಆಗಬೇಕೆಂದು ನಿರ್ಧರಿಸಿ

ಕೆಲವೊಂದು ನಲುಗಿಸುವನು

ಕಷ್ಟಗಳ ಕೊಟ್ಟು ,ಮತ್ತೆ ಕೆಲವೊಮ್ಮೆ

ಮಲಗಿಸುವನು ಹಾಡಿ ಲಾಲಿಪದ|

ನಾವೇ ನಟನಾ ಚತುರರೆಂದು 

ತಿಳಿದ ಮೂರ್ಖರು, ಆದರೆ 

ನಿಜವೇ ಬೇರೆ ಅವನೇ ಕಲಾವಿದ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ