ನೀನೇ ಶಿಲ್ಪಿ
ಸಾಧಿಸುವ ಮನಸ್ಸು
ಇದ್ದರೂ ಎಲ್ಲೆಲ್ಲೋ
ಓಡುವುದು ಮನವೆಂಬ ಕಪಿ|
ಮನಸು ಮಾಡಿ
ಮುಂದಡಿ ಇಡು
ಜಯ ನಿನ್ನದೇ
ಏಕೆಂದರೆ ನಿನ್ನೇಳ್ಗೆಗೆ ನೀನೇ ಶಿಲ್ಪಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ನೀನೇ ಶಿಲ್ಪಿ
ಸಾಧಿಸುವ ಮನಸ್ಸು
ಇದ್ದರೂ ಎಲ್ಲೆಲ್ಲೋ
ಓಡುವುದು ಮನವೆಂಬ ಕಪಿ|
ಮನಸು ಮಾಡಿ
ಮುಂದಡಿ ಇಡು
ಜಯ ನಿನ್ನದೇ
ಏಕೆಂದರೆ ನಿನ್ನೇಳ್ಗೆಗೆ ನೀನೇ ಶಿಲ್ಪಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಉದ್ಯೋಗ ಸಂಸಾರ ಸಮತೋಲನ ಬೇಕು.
"ಉದ್ಯೋಗಂ ಮಾನವ ಲಕ್ಷಣಂ "ಜೀವನಕ್ಕೆ ಒಂದು ವೃತ್ತಿ ಮಾಡಲೇಬೇಕು .ಯಾವುದೇ ಕಾರ್ಯವಿರಲಿ ಅದನ್ನು ಇಷ್ಟ ಪಟ್ಟು ಮಾಡಬೇಕು . ಕಾಯಕವೇ ಕೈಲಾಸ ಎಂಬ ತತ್ವ ಪಾಲಿಸಿ ಕೆಲಸ ಮಾಡಬೇಕು ಅದೇ ಸಂಧರ್ಭದಲ್ಲಿ ನಮ್ಮ ಕುಟುಂಬಕ್ಕೂ ನಮ್ಮ ಸಮಯ ಮೀಸಲಿಡಲೇಬೇಕು. ವೃತ್ತಿ ಮತ್ತು ಕುಟುಂಬದ ನಡುವೆ ನಾವು ಸಮತೋಲನವನ್ನು ಕಾಪಾಡಿಕೊಳ್ಳಲೇ ಬೇಕು. ಏಕೆಂದರೆ ಈ ಎರಡರಲ್ಲಿ ಯಾವುದೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ. ಎರಡು ಕಣ್ಣುಗಳಲ್ಲಿ ಯಾವುದು ಹೆಚ್ಚು ಎಂದು ಕೇಳಿದರೆ ಹೇಗೆ.
ಜಾಣ್ಮೆಯಿಂದ ನಾವು ವೃತ್ತಿ ಮತ್ತು ಸಂಸಾರ ವನ್ನು ನಿಭಾಯಿಸಬೇಕು .
ಕೆಲವೊಮ್ಮೆ ನಾವು ಅತಿಯಾದ ಆಸೆಯಿಂದ ನಮ್ಮ ಕುಟುಂಬ ನಿರ್ವಹಣೆ ಮಾಡಲು ಮತ್ತು ಜೀವನಮಟ್ಟ ಸುಧಾರಿಸಲು ಓಟಿ ಮಾಡುತ್ತಾ ಕಾಯಕದಲ್ಲಿ ಮುಳುಗಿದರೆ ನಮ್ಮ ಕುಟುಂಬಕ್ಕೆ ಕ್ವಾಲಿಟಿ ಟೈಮ್ ಕೊಡಲು ಅಸಾಧ್ಯ.
ಶ್ರದ್ಧೆಯಿಂದ ಕೆಲಸ ಮಾಡಿದರೆ
ನಿಜವಾಗಿಯೂ ದೈವವೇ
ನಾವು ಮಾಡುವ ಕಾಯಕ|
ಕಾಯಕವೇ ಅತಿಯಾಗಿ
ದಿನವೂ ಮನೆಗೆ ಲೇಟಾಗಿ
ಬಂದರೆ ಮಡದಿ ಬೈಯ್ಯಬಹುದು
ಆಗೋದಿಲ್ಲ ನನಗೆ ಕಾಯಾಕ ||
ಕೆಲವು ಮೆಟ್ರೋ ನಗರಗಳಲ್ಲಿ ತಂದೆಯು ಮಕ್ಕಳು ನಿದ್ರೆಯಿಂದ ಏಳುವ ಮೊದಲೇ ತಮ್ಮ ಕೆಲಸಕ್ಕೆ ತೆರಳಿದರೆ ಅವರು ಮನೆಗೆ ಬರುವಾಗ ತಡರಾತ್ರಿ ಮಕ್ಕಳು ನಿದ್ರೆಗೆ ಜಾರಿರುತ್ತಾರೆ. ಇದು ಕುಟುಂಬದ ಪ್ರೀತಿ ಮತ್ತು ಸಾಮರಸ್ಯಕ್ಕೆ ಪ್ರತಿಕೂಲವಾದ ಪರಿಣಾಮ ಉಂಟಾಗಬಹುದು. ಇತ್ತೀಚಿನ ದಿನಗಳಲ್ಲಿ ಸಿಂಗಲ್ ಪೇರೆಂಟಿಂಗ್ ಮದರ್ ಸಹ ಒಂದು ಟ್ರೆಂಡ್ ಆಗಿದೆ .ಜೀವನಕ್ಕಾಗಿ ತಾಯಿಯು ಕೆಲಸಕ್ಕೆ ಹೋಗಿ ಮನೆಗೆ ಬರುವುದು ತಡವಾದರೆ ಮಕ್ಕಳು ಒಂಟಿಯಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ .ಕೆಲವೊಮ್ಮೆ ಇಂತಹ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿ ಕ್ರಮೇಣವಾಗಿ ಸೈಬರ್ ಅಪರಾದ ಪ್ರಕರಣಗಳಲ್ಲಿ ಬಲಿ ಪಶುವಾದ ಉದಾಹರಣೆಗಳೂ ಇವೆ.
ಸಮತೋಲನ ಕಾಯ್ದುಕೊಳ್ಳಬೇಕು
ವೃತ್ತಿ ಮತ್ತು ಕುಟುಂಬದ ನಡುವೆ
ಅವು ಒಂದೇ ನಾಣ್ಯದ ಎರಡು ಮುಖಗಳು|
ಸ್ವಲ್ಪ ಯಾವುದಾದರೂ ಹೆಚ್ಚು ಕಡಿಮೆ
ಆದರೆ ಉತ್ತರ ದಕ್ಷಿಣಕ್ಕೆ ತಿರುಗಬಹುದು
ನಮ್ಮ ಮುಖಗಳು||
ಆದ್ದರಿಂದ ನಮಗೆ ಗೌರವಯುತವಾಗಿ ಜೀವಿಸಲು ಒಂದು ಉದ್ಯೋಗ ಅಗತ್ಯ .ಅದೇ ಜೀವನವಾಗಿ ಅದು ನಮ್ಮ ಸಂಸಾರದ ಮೇಲೆ ದುಷ್ಪರಿಣಾಮ ಬೀರಬಾರದು.
ಕೆಲವರು ವರ್ಕೋಹಾಲಿಕ್
ಅವರು ಕೆಲಸ ಮಾಡಲು
ಶುರುಮಾಡಿದರೆ ಪರಿವೇ ಇರೊಲ್ಲ
ಗಂಟೆ, ದಿನ ,ವಾರ|
ಇಂಥವರು ಮನೆ ಸೇರದಿದ್ದಾಗ
ಅವರ ಮಕ್ಕಳು ಹೆಂಡತಿ
ಖಾರವಾಗಿ ಕೇಳಬಹುದು ಯಾಕ್ರೀ
ಬೇಕು ನಿಮಗೆ ಸಂಸಾರ??
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಗರ್ಲ್ ಪ್ರೆಂಡ್ ಮತ್ತು ಹೆಂಡತಿ
ಹನಿಗವನ
ಗರ್ಲ್ ಪ್ರೆಂಡ್ ಜೊತೆಗೆ
ಅವನು ಸುತ್ತುವಾಗ ಅವಳದೇ
ಹೆಚ್ಚು ಮಾತು ಇವನು ಕೇಳುಗ
ಮದುವೆಯಾದ ಈಗ ಮೂಕ|
ಕ್ರಮೇಣವಾಗಿ ಅವನಿಗೆ
ಅನುಭವದಿಂದ ಅರಿವಾಯಿತು
ಗರ್ಲ್ ಪ್ರೆಂಡ್ ಮತ್ತು ಹೆಂಡತಿ
ಒಂದೇ ನಾಣ್ಯದ ಎರಡು ಮುಖ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನಾವು ಸಾಮಾನ್ಯ ಮಾನವರು ನಾವು ಭಾವನಾ ಜೀವಿಗಳು ಅಂತೆಯೇ ನೋವು ನಲಿವು ನಮ್ಮ ಜೀವನದಲ್ಲಿ ನಾವು ಅನುಭವಿಸುತ್ತಲೇ ಇರುವೆವು .ಜೀವನದಿ ಬೇವು ಬೆಲ್ಲ ಎರಡೂ ಉಂಟು ಆದರೆ ನಾವು ಬಹುತೇಕರು ಬೆಲ್ಲವ ಮಾತ್ರ ಸವಿದು ಬೇವು ಬೇಡವೇ ಬೇಡ ಎಂಬ ಮನಸ್ಥಿತಿಯನ್ನು ಹೊಂದಿದ್ದೇವೆ.ಇದರ ಮುಂದುವರಿದ ಭಾಗವಾಗಿ ನಮಗೇನಾದರೂ ಕಷ್ಟಗಳು ಎದುರಾದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ.ಇನ್ನೂ ಇದೇ ಸ್ಥಿತಿ ಮುಂದುವರೆದರೆ ಖಿನ್ನತೆಗೆ ಜಾರುವ ಸಾದ್ಯತೆಯೂ ಇದೆ .
ಇಂತಹ ಸಮಯದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಕುರಿತು ಚಿಂತಿಸದೇ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ. ಈ ಸಂಧರ್ಭದಲ್ಲಿ ನಮ್ಮ ಹಿರಿಯರು ಚಿಂತಕರು ಹೇಳಿದ ಪ್ರೇರಣೆಯ ಮಾತುಗಳನ್ನು ನೆನದು ಮುಂದೆ ಸಾಗೋಣ. ನಕಾರಾತ್ಮಕವಾಗಿ ಯೋಚಿಸದೇ ಸಕಾರಾತ್ಮಕವಾಗಿ ಯೋಚಿಸುವ ಗುಣಗಳನ್ನು ಬೆಳೆಸಿಕೊಳ್ಳೋಣ.ಸೂರ್ಯ ಚಂದ್ರರಿಗೂ ಗ್ರಹಣ ಹಿಡಿಯುವುದು ಆದರೆ ಅದು ಕ್ಷಣಿಕ ಮೋಡಗಳು ಹೆಚ್ಚು ಕಾಲ ಸೂರ್ಯನ ಮುಚ್ಚಲು ಸಾದ್ಯವಿಲ್ಲ. ಅಂತೆಯೇ ನಮಗೊದಗಿದ ತೊಂದರೆಗಳು, ಸಮಸ್ಯೆಗಳೂ ಕೂಡಾ ನಮ್ಮ ಪ್ರಯತ್ನ ಮತ್ತು ಭಗವಂತನ ಕೃಪೆಯಿಂದ ಖಂಡಿತವಾಗಿಯೂ ಬಗೆಹರಿಯುತ್ತವೆ. ರಾತ್ರಿ ಕಳೆದ ಮೇಲೆ ಹಗಲು ಬಂದೇ ಬರುವುದು .ಆದ್ದರಿಂದ ಕಷ್ಟಗಳನ್ನು ದಿಟ್ಟವಾಗಿ ಎದುರಿಸೋಣ . ನೋವು ನಲಿವು. ಕಷ್ಟ ಸುಖಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು ಅವುಗಳನ್ನು ಸ್ತಿತಪ್ರಜ್ಞರಂತೆ ಸ್ವೀಕರಿಸೋಣ.
ಇದಕ್ಕೆ ಪೂರಕವಾಗಿ ನನ್ನ ಒಂದು ಗಜಲ್ ನಿಮಗಾಗಿ
ಗಜಲ್
ಕುಟ್ಟಿ ಪುಡಿಮಾಡು ಕಷ್ಟಗಳೆಂಬ ಹೆಬ್ಬಂಡೆಗಳ ಗೆಲ್ಲುವೆ ನೀನು
ಬಿದ್ದವನೆಂದು ಕೊರಗದಿರು ಮುಂದೆ ಎದ್ದೇಳುವೆ ನೀನು
ಅವಮಾನ ಅಪಮಾನಗಳೆ ಸಾಧನೆಗಳ ಮೆಟ್ಟಿಲು
ದಾರಿಯಿಲ್ಲವೆಂದು ಮರುಗದಿರು ದೊರೆಯಾಗುವೆ ನೀನು
ಸಂತೆಯಲಿ ನಿಂತು ಸದ್ದಿಗಂಜತ ಕಳವಳಪಡಬೇಡ
ಸಂತನಾಗಲು ಸಹಿಸುವುದ ಕಲಿ ಯೋಗಿಯಾಗುವೆ ನೀನು
ಕಳೆದು ಕೊಳ್ಳಲು ನೀನೇನು ತಂದಿಲ್ಲ ಇಲ್ಲಿ
ಕಳೆದಲ್ಲೇ ಹುಡುಕು ಮುಕ್ತಿ ಹೊಂದುವೆ ನೀನು
ಮುಳ್ಳುಗಳು ನಡುವೆಯೂ ನಗುವುದು ಗುಲಾಬಿ
ಕಷ್ಟದಲೂ ನಗುವುದ ಕಲಿ ಸಿಹಿಜೀವಿಯಾಗುವೆ ನೀನು
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು